ದೇವರ ಸೃಷ್ಟಿಯಲ್ಲಿ ಹೆಣ್ಣು ಅದ್ಭುತ ಸೃಷ್ಟಿ. ಹೆಣ್ಣಿನಿಂದಲೆ ಜಗತ್ತು ಎಂದರೆ ತಪ್ಪಾಗಲಾರದು. ತನಗಿಂತ ಪರರಿಗಾಗಿ ಬದುಕುವ ಹೆಣ್ಣನ್ನು ಗಂಡಸರು ಅನುಮಾನಿಸಿ, ಕಷ್ಟ ಕೊಟ್ಟು ಅವಳ ಜೀವನವನ್ನು ಹಾಳು ಮಾಡುತ್ತಾರೆ. ಹೆಣ್ಣಿನೊಂದಿಗೆ ಗಂಡಸರು ವರ್ತಿಸುವ ರೀತಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಈ ಜಗತ್ತಿನಲ್ಲಿ ಸೃಷ್ಟಿಯಾದ ಪ್ರತಿಯೊಂದು ಜೀವಿಯೂ ಶ್ರೇಷ್ಟವೆ. ಒಂದೊಂದು ಜೀವಿಯ ಹಿಂದೆಯೂ ಈ ಜಗತ್ತಿಗೆ ಉಪಯೋಗ ಇದೆ. ಅದರಲ್ಲೂ ಹೆಣ್ಣು ಜನ್ಮ ಬಹಳ ಪವಿತ್ರವಾದದ್ದು. ಹೆಣ್ಣನ್ನು ದೇವತೆ ಎನ್ನುತ್ತಾರೆ, ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ ತನ್ನ ಜೀವನವನ್ನೆ ಪರರಿಗಾಗಿ ಮುಡಿಪಾಗಿಡುವ ಆಕೆಯ ಜನ್ಮ ಬಹಳ ಶ್ರೇಷ್ಠವಾದದ್ದು. ಒಂದು ವೇಳೆ ಈ ಭೂಮಿಯಲ್ಲಿ ಹೆಣ್ಣು ಇಲ್ಲದೆ ಹೋದರೆ ಈ ಜಗತ್ತು ನಾಶವಾಗುತ್ತಿತ್ತು. ಈ ಭೂಮಿಯನ್ನು ಕೂಡ ಹೆಣ್ಣಿಗೆ ಹೋಲಿಸಲಾಗುತ್ತದೆ, ಭೂಮಿಯನ್ನು ತಾಯಿಯಂತೆ ಪೂಜಿಸುತ್ತೇವೆ. ಅದೇ ರೀತಿ ನಮ್ಮ ದೇಶವನ್ನು ಭಾರತ ಮಾತೆ ಎನ್ನುತ್ತೇವೆ, ನಮ್ಮ ದೇಶವೂ ತಾಯಿಯೆ ಅಂದರೆ ನಾವು ಜೀವಿಸಿರುವುದು ಹೆಣ್ಣಿನಿಂದ.
ಪುರಾಣದಲ್ಲಿ ಎಲ್ಲಿ ಹೆಣ್ಣನ್ನು ಪೂಜಿಸಲಾಗುತ್ತದೆಯೊ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಸಮಾಜದಲ್ಲಿ ಕೆಲವು ಕೆಟ್ಟ ಗಂಡಸರು ಹೆಣ್ಣನ್ನು ನೀಚವಾಗಿ ಕಾಣುತ್ತಾರೆ. ತಮ್ಮ ತೃಷೆಗಾಗಿ ಹೆಣ್ಣುಮಕ್ಕಳನ್ನು ಕೆಟ್ಟದಾಗಿ ನೋಡಿ ಅತ್ಯಾಚಾರ ಮಾಡಿ ಆಕೆಯ ಜೀವನವನ್ನೆ ಹಾಳು ಮಾಡುತ್ತಾರೆ. ಆಕೆಯೂ ಒಂದು ಜೀವ, ಆಕೆಗೂ ಬದುಕುವ ಹಕ್ಕಿದೆ ಎನ್ನುವುದನ್ನು ಮರೆತು ಕಾಮಾಂಧರಾಗಿ ಆಕೆಯೊಂದಿಗೆ ರಾಕ್ಷಸರಂತೆ ನಡೆದುಕೊಳ್ಳುತ್ತಾರೆ. ಹೆಣ್ಣಿನೊಂದಿಗೆ ಹೆಚ್ಚಿನ ಗಂಡಸರು ಮುಖ ನೋಡಿ ಮಾತನಾಡುವುದಿಲ್ಲ ಬದಲಾಗಿ ಆಕೆಯ ತುಂಬಿದ ಎದೆ ನೋಡುತ್ತಾ ಮಾತನಾಡುತ್ತಾರೆ ಇದರಿಂದ ಹೆಣ್ಣಿಗೆ ಇರಿಸು ಮುರಿಸಾಗುವಂತೆ ಮಾಡುತ್ತಾರೆ. ದೇವರು ಹೆಣ್ಣಿನ ದೇಹವನ್ನು ಅಂದವಾಗಿ ಸೃಷ್ಟಿಸಿದ್ದಾನೆ ಆಕೆಯ ದೇಹ ನೋಡಲು ಆಕರ್ಷಿತವಾಗಿರುತ್ತದೆ.
ಆಕೆಯ ಎದೆ ಕೂಡ ದೇಹದ ಒಂದು ಅಂಗ ಎನ್ನುವುದನ್ನು ತಿಳಿಯದೆ ಕೆಲವು ಕೆಟ್ಟ ಪುರುಷರು ಆಕೆಯ ಎದೆಯನ್ನು ಗುರಾಯಿಸುತ್ತಾರೆ. ಹೆಣ್ಣಿನ ಎದೆ ಮುಟ್ಟಲು ಹೊಂಚು ಹಾಕುತ್ತಿರುತ್ತಾರೆ. ಎಲ್ಲಾದರೂ ಗುಂಪಲ್ಲಿ ಹೋಗುವಾಗ, ಜನ ಸಂದಣಿ ಜಾತ್ರೆಯಂತಹ ಸಮಯದಲ್ಲಿ ಕೆಲವು ಗಂಡಸರು ಬೇಕು ಬೇಕಂತಲೆ ಹೆಣ್ಣಿನ ಎದೆ ಮುಟ್ಟಿಕೊಂಡು ಹೋಗುತ್ತಾರೆ. ಗಂಡಸರು ತಾನು ತನ್ನ ತಾಯಿಯ ಅದೆ ಎದೆಯಿಂದ ಹಾಲು ಕುಡಿದು ಬಂದು ಬದುಕಿದ್ದೇನೆ ಎನ್ನುವುದನ್ನು ಮರೆತು ಬಿಡುತ್ತಾರೆ.
ಅದಕ್ಕಾಗಿ ಹೆಣ್ಣು ಈಗ ಯಾರನ್ನು ನಂಬುವುದಿಲ್ಲ ಎಲ್ಲರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಾಳೆ. ಹೆಣ್ಣಿನ ಅಂಗವನ್ನು ಕೆಟ್ಟದಾಗಿ ನೋಡುವ ಬದಲು ಆಕೆಗೆ ಗೌರವ ಕೊಟ್ಟರೆ, ರಸ್ತೆಯಲ್ಲಿ ಓಡಾಡುವ ಹೆಣ್ಣು ಮಕ್ಕಳನ್ನು ಅಕ್ಕ ತಂಗಿಯಂತೆ ನೋಡಿದರೆ ನಿಜಕ್ಕೂ ಆತ ಮಹಾನ್ ವ್ಯಕ್ತಿ ಎನಿಸಿಕೊಳ್ಳುತ್ತಾನೆ ಅಲ್ಲದೆ ಅಂತಹ ಗಂಡಸರನ್ನು ಹೆಣ್ಣು ಗೌರವಿಸುತ್ತಾಳೆ. ಇನ್ನಾದರೂ ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡುವುದನ್ನು ಬಿಟ್ಟು ಹೆಣ್ಣಿನಲ್ಲಿ ತಾಯಿಯನ್ನು ನೋಡಿ.