WhatsApp Group Join Now
Telegram Group Join Now

ನಾವಿಂದು ನಿಮಗೆ ಹಳ್ಳಿಗಳಲ್ಲಿ ಮಾಡಬಹುದಾದ ಉದ್ಯಮಗಳ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಈ ಉದ್ಯಮಗಳಿಂದ ನೀವು ಲಕ್ಷಗಟ್ಟಲೆ ಲಾಭವನ್ನು ಗಳಿಸಬಹುದು. ಹಾಗಾದರೆ ಆ ಉದ್ಯಮಗಳು ಯಾವುದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ. ಮೊದಲನೆಯದಾಗಿ ವೆಜಿಟೇಬಲ್ ಫಾರ್ಮಿಂಗ್ ಹಳ್ಳಿಯಲ್ಲಿ ಇರುವವರಿಗೆ ವ್ಯವಸಾಯದಲ್ಲಿ ಒಳ್ಳೆಯ ಅನುಭವ ಇರುತ್ತದೆ ತುಂಬಾ ಜನರು ವರ್ಷಕ್ಕೆ ಬೆಳೆಯುವ ಬೆಳೆಯನ್ನು ವ್ಯವಸಾಯ ಮಾಡಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹೀಗೆ ಮಾಡದೆ ಒಂದು ಅಥವಾ ಎರಡು ಎಕರೆಯಲ್ಲಿ ತರಕಾರಿಗಳನ್ನು ಬೆಳೆದು ನಿಮ್ಮ ಹಳ್ಳಿಯ ಹತ್ತಿರದಲ್ಲಿರುವ ಸಿಟಿ ಗಳಿಗೆ ಹೋಗಿ ಮಾರುಕಟ್ಟೆಯಲ್ಲಿ ಇರುವವರಿಗೆ ಹೋಲ್ಸೇಲ್ ದರದಲ್ಲಿ ಮಾರಾಟ ಮಾಡಿ ಒಳ್ಳೆಯ ಆದಾಯವನ್ನು ಪಡೆಯಬಹುದು.

ಈ ಉದ್ಯಮದಲ್ಲಿ ನೀವು ಎಲ್ಲಾ ರೀತಿಯ ತರಕಾರಿಗಳನ್ನು ಬೆಳೆದು ಅವುಗಳನ್ನು ಮಾರುಕಟ್ಟೆಗೆ ಪೂರೈಕೆ ಮಾಡಬೇಕು ಅಥವಾ ನಿಮ್ಮದೇ ಆದಂತಹ ಒಂದು ಚಿಕ್ಕ ಅಂಗಡಿಯನ್ನು ತೆರೆದು ಅಲ್ಲಿ ಮಾರಾಟ ಮಾಡಬಹುದು. ಈ ರೀತಿಯಾಗಿ ಮಾಡುವುದರಿಂದ ನೀವು ಉತ್ತಮವಾದಂತಹ ಲಾಭವನ್ನು ಪಡೆಯಬಹುದು. ಎರಡನೆಯದಾಗಿ ಕೋಳಿ ಫಾರ್ಮ್ ಇದರಿಂದಲೂ ಕೂಡ ಉತ್ತಮವಾದಂತಹ ಆದಾಯವನ್ನು ಪಡೆಯಬಹುದು. ಇದಕ್ಕಾಗಿ ಒಂದು ಶೆಡ್ಡನ್ನು ನಿರ್ಮಿಸಿ ಅದರಲ್ಲಿ ನಾಟಿಕೋಳಿ ಮತ್ತು ಅವುಗಳ ಜೊತೆ ಫಾರಂ ಕೋಳಿಗಳನ್ನು ಸಹ ಸಾಕಬೇಕು

ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳು ಮರಿಗಳನ್ನು ಒದಗಿಸುತ್ತವೆ ನೀವು ಅವುಗಳನ್ನು ತೆಗೆದುಕೊಂಡು ಬೆಳೆಸಿ ಅವುಗಳನ್ನು ಮಾರಾಟ ಮಾಡಬೇಕು. ಶೆಡ್ ಗಳನ್ನು ನಿರ್ಮಿಸಿ ಕೋಳಿ ಮರಿಗಳನ್ನು ಬೆಳೆಸುವುದು ನಿಮ್ಮ ಕೆಲಸ ಕಂಪನಿಯವರು ಮರಿಗಳನ್ನು ಒದಗಿಸುತ್ತಾರೆ ಮತ್ತು ಅವರೇ ಬೆಳೆದ ಕೋಳಿಗಳನ್ನು ಖರೀದಿ ಮಾಡುತ್ತಾರೆ. ಆದರೆ ಕೋಳಿ ಫಾರಂ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಂಡು ಇದನ್ನು ನಡೆಸಬೇಕು.

ಕೋಳಿ ಫಾರಂ ನಡೆಸಿದಾಗ ನೀವು ಉತ್ತಮವಾದ ಆದಾಯವನ್ನು ಪಡೆಯಬಹುದು ಆದರೆ ಸರಿಯಾದ ಮಾಹಿತಿಯನ್ನು ತಿಳಿದುಕೊಂಡಿರಬೇಕು ಕೋಳಿಗಳಿಗೆ ಆಗಾಗ ರೋಗಗಳು ಬರಬಹುದು ಅಂತಹ ಸಮಯದಲ್ಲಿ ಅವುಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಅವುಗಳಿಗೆ ಸರಿಯಾದ ಸಮಯದಲ್ಲಿ ಔಷಧಿಗಳನ್ನು ನೀಡಬೇಕು ಚಿಕನ್ ಗೆ ಯಾವಾಗಲೂ ಬೇಡಿಕೆ ಕಡಿಮೆಯಾಗುವುದಿಲ್ಲ ಹಾಗಾಗಿ ಇದರಿಂದ ಉತ್ತಮವಾದಂತಹ ಆದಾಯವನ್ನು ನೀವು ಪಡೆಯಬಹುದು.

ಮೂರನೇದಾಗಿ ಹಸು ಸಾಕಾಣಿಕೆ ಹಸುಗಳಿಗಾಗಿ ಒಂದು ಶೆಡ್ಡನ್ನು ನಿರ್ಮಿಸಿ ನೀವು ಹೈನುಗಾರಿಕೆಯನ್ನು ಮಾಡಬಹುದು. ಹಾಲು ಪ್ರತಿದಿನ ಎಲ್ಲರಿಗೂ ಬೇಕಾಗುವಂತಹ ಅತ್ಯವಶ್ಯಕ ವಸ್ತುವಾಗಿದೆ ಅದರಿಂದ ನೀವು ಹಸುಗಳ ಸಾಕಾಣಿಕೆಯನ್ನು ಮಾಡುವುದರಿಂದ ಹಾಲಿನ ವ್ಯಾಪಾರವನ್ನು ಮಾಡಿ ಉತ್ತಮವಾದಂತಹ ಆದಾಯವನ್ನು ಗಳಿಸಬಹುದು. ಆದರೆ ಡೈರಿ ಫಾರ್ಮಿಂಗ್ ಮಾಡುವುದಿದ್ದರೆ ನೀವು ತುಂಬಾ ಜಾಗರೂಕತೆಯಿಂದ ಇದನ್ನ ಪ್ರಾರಂಭಿಸಬೇಕು ಪ್ರತಿದಿನ ಹಸುಗಳನ್ನ ಚೆನ್ನಾಗಿ ನೋಡಿಕೊಂಡು ಅವುಗಳಿಗೆ ಒಳ್ಳೆಯ ಆಹಾರವನ್ನು ಕೊಡಬೇಕು.

ನಾಲ್ಕನೆಯದಾಗಿ ಮೊದಲ ಸಾಕಾಣಿಕೆ ಮೊಲ ಸಾಕಾಣಿಕೆಯನ್ನು ಮಾಡುವ ಮೂಲಕ ನೀವು ಉತ್ತಮವಾದಂತಹ ಆದಾಯವನ್ನು ಗಳಿಸಬಹುದು. ಪಟ್ಟಣಗಳಲ್ಲಿ ಮೊಲ ಸಾಕಾಣಿಕೆ ಕುರಿತು ತರಬೇತಿಯನ್ನು ನೀಡುವುದಕ್ಕೆ ಒಂದಿಷ್ಟು ತರಬೇತಿ ಕೇಂದ್ರಗಳಿವೆ ಎರಡು ಅಥವಾ ಮೂರು ತಿಂಗಳ ತರಬೇತಿಯನ್ನು ಪಡೆದುಕೊಂಡು ಮೊಲಗಳನ್ನು ಹೇಗೆ ಸಾಕಾಣಿಕೆ ಮಾಡಬಹುದು ಎಂಬುದರ ಕುರಿತಾದ ಜ್ಞಾನವನ್ನು ಪಡೆಯಬಹುದು ಪ್ರಾರಂಭದಲ್ಲಿ ಕಡಿಮೆ ಮೊಲಗಳನ್ನು ಸಾಕಿ ಅವುಗಳಿಗೆ ಬೇಕಾದ ಆಹಾರವನ್ನು ಒದಗಿಸಬೇಕು

ನಂತರ ಇವುಗಳನ್ನು ಮಾರಾಟ ಮಾಡುವುದರ ಮೂಲಕ ಇವುಗಳಿಂದಲೂ ಕೂಡ ಉತ್ತಮವಾದಂತಹ ಆದಾಯವನ್ನು ಗಳಿಸಬಹುದು. ಈ ರೀತಿಯಾಗಿ ನಾವು ಮೇಲೆ ತಿಳಿಸಿರುವ ಯಾವುದೇ ಉದ್ಯಮವನ್ನು ನೀವು ಪ್ರಾರಂಭಿಸಿದರು ಅದರಿಂದ ಉತ್ತಮವಾದಂತಹ ಲಾಭವನ್ನು ಗಳಿಸಬಹುದು. ಆದರೆ ಉದ್ಯಮವನ್ನು ಪ್ರಾರಂಭಿಸುವುದಕ್ಕೆ ಮೊದಲು ನೀವು ಯಾವ ಉದ್ಯಮವನ್ನು ಪ್ರಾರಂಭಿಸುತ್ತಿರಿ ಅದರ ಕುರಿತಾದ ಸಂಪೂರ್ಣ ಜ್ಞಾನ ತರಬೇತಿಯನ್ನು ಪಡೆದುಕೊಳ್ಳಬೇಕು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: