ಸಿಹಿ ಕಹಿ ಚಂದ್ರು ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಚಂದ್ರು ಅವರು ಸಿನಿಮಾಗಳಲ್ಲಿ ಸಹ ನಟಿಸಿ ಜನರ ಅಭಿಮಾನವನ್ನು ಗಳಿಸಿದ್ದಾರೆ. ಚಂದ್ರು ಅವರ ಕುಟುಂಬದವರ ಬಗ್ಗೆ ಕೆಲವು ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಸಿಹಿ ಕಹಿ ಚಂದ್ರು ಅವರು 1976 ರಲ್ಲಿ ದೂರದರ್ಶನದಲ್ಲಿ ಪ್ರಾರಂಭವಾದ ಸಿಹಿ ಕಹಿ ಎಂಬ ಧಾರಾವಾಹಿಯ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರು. ಪ್ರತಿ ಶುಕ್ರವಾರ ಸಂಜೆ ಪ್ರಸಾರವಾಗುತ್ತಿದ್ದ ಈ ಧಾರವಾಹಿಯಲ್ಲಿ ಸಿಹಿ ಕಹಿ ಗೀತಾ ಹಾಗೂ ಸಿಹಿ ಕಹಿ ಚಂದ್ರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಮೂಲತಃ ದಾವಣಗೆರೆಯವರಾದ ಚಂದ್ರಶೇಖರ್ ಅವರಿಗೆ ಸಿಹಿ ಕಹಿ ಎಂಬ ಹೆಸರು ಬಂದಿದ್ದು ಈ ಧಾರಾವಾಹಿಯಿಂದಲೆ.
ಪ್ರೇಕ್ಷಕರಿಗೆ ಸಿಹಿ ಕಹಿ ಧಾರಾವಾಹಿಯಲ್ಲಿ ನಟಿಸಿದ ಚಂದ್ರಶೇಖರ್ ಹಾಗೂ ಗೀತಾ ಜೋಡಿ ಬಹಳ ಇಷ್ಟವಾಯಿತು. ಇವರು ನವೆಂಬರ್ 9,1990 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಮೊದಲ ಮಗಳು ಹಿತಾ ಚಂದ್ರಶೇಖರ್ ಹಾಗೂ ಎರಡನೇ ಮಗಳು ಖುಷಿ ಚಂದ್ರಶೇಖರ್. ಹಿತಾ ಚಂದ್ರಶೇಖರ್ 2019 ರಲ್ಲಿ ನಟ ಕಿರಣ್ ಜೊತೆ ಮದುವೆಯಾದರು. ಸಿಹಿ ಕಹಿ ಚಂದ್ರಶೇಖರ್ ಅವರ ಪಾಪ ಪಾಂಡು ಹಾಗೂ ಸಿಲ್ಲಿ ಲಲ್ಲಿ ಧಾರವಾಹಿಯ ಉತ್ತಮ ಅಭಿರುಚಿಯ ಹಾಸ್ಯ ಈಗಲೂ ಪ್ರಸಿದ್ಧವಾಗಿದೆ. ಸಿಹಿ ಕಹಿ ಚಂದ್ರು ಅವರು ನಡೆಸಿಕೊಟ್ಟ ಅಡುಗೆ ಕಾರ್ಯಕ್ರಮ ಬೊಂಬಾಟ್ ಭೋಜನ ಅದ್ಭುತವಾಗಿ ಯಶಸ್ವಿಯಾಗಿದೆ. ಗಣೇಶನ ಮದುವೆ, ಗೋಲ್ ಮಾಲ್ ರಾಧಾಕೃಷ್ಣ, ಬೆಳ್ಳಿಯಪ್ಪ ಬಂಗಾರಪ್ಪ, ಗೌರಿ ಗಣೇಶ ಹೀಗೆ ಮೊದಲಾದ ಚಿತ್ರಗಳಲ್ಲಿ ಸಿಹಿ ಕಹಿ ಚಂದ್ರು ಅವರು ನಟಿಸಿ ಜನ ಮನ ಗೆದ್ದಿದ್ದಾರೆ. ಸಿಹಿ ಕಹಿ ಚಂದ್ರು ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರೂಪಕನಾಗಿ ಮಿಂಚಿದ್ದಾರೆ.
ಸಿಹಿ ಕಹಿ ಚಂದ್ರು ಅವರು ಅನೇಕ ಸಿನಿಮಾಗಳಲ್ಲಿ ಕಾಮೇಡಿಯನ್ ಆಗಿ, ಪೋಷಕ ನಟನಾಗಿ ನಟಿಸಿದ್ದಾರೆ. ಹಲವು ಧಾರಾವಾಹಿಗಳಲ್ಲಿ ಸಹ ಸಿಹಿ ಕಹಿ ಚಂದ್ರು ಅವರು ನಟಿಸಿದ್ದಾರೆ. ಸಿಹಿ ಕಹಿ ಪ್ರೊಡಕ್ಷನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಮೂಲಕ ಪಾಪ ಪಾಂಡುನಂತಹ ಹಾಸ್ಯ ಭರಿತ ಧಾರಾವಾಹಿಯನ್ನು ತರುವ ಮೂಲಕ ಜನರಿಗೆ ಮನೋರಂಜನೆ ಒದಗಿಸಿದ್ದಾರೆ. ಗೀತಾ ಅವರು ಅನೇಕ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದಾರೆ
ಜೊತೆಗೆ ಅನೇಕ ಕಲಾವಿದರಿಗೆ ಧ್ವನಿ ನೀಡಿದ್ದಾರೆ ಅವರು ಡಬ್ಬಿಂಗ್ ಕಲಾವಿದೆ. ಹಿತಾ ಚಂದ್ರಶೇಖರ್ ಅವರು ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಇದರಿಂದ ಕರ್ನಾಟಕದ ಜನತೆಗೆ ಪರಿಚಿತರು. ಖುಷಿ ಚಂದ್ರಶೇಖರ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ವಿಡಿಯೊ ಮೂಲಕ ಜನತೆಗೆ ಮೇಕಪ್, ಫೋಟೊ ಶೂಟ್ ಬಗ್ಗೆ ಅರಿವು ಮೂಡಿಸುತ್ತಾರೆ. ಒಟ್ಟಾರೆಯಾಗಿ ಸಂತೋಷವಾಗಿರುವ ಸಿಹಿ ಕಹಿ ಚಂದ್ರು ಅವರ ಕುಟುಂಬದವರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.