ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ನಾವಿಂದು ಕೇಂದ್ರ ಸರ್ಕಾರದ ಕೃಷಿ ಇಲಾಖೆಯಲ್ಲಿ ನಡೆಯುತ್ತಿರುವ ನೇಮಕಾತಿಯ ಕುರಿತಾದ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ರಸಗೊಬ್ಬರ ಇಲಾಖೆಯಲ್ಲಿ ಖಾಲಿ ಇರುವ ಹಿರಿಯ ಸಲಹೆಗಾರರ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಯನ್ನು ಯಾವ ಸಮಯದಲ್ಲಿ ಮತ್ತು ಯಾವ ವಿಳಾಸಕ್ಕೆ ಕಳಿಸಬೇಕು ಮತ್ತು ಆಯ್ಕೆ ವಿಧಾನ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ರಸಗೊಬ್ಬರ ನಿಯಮಿತದಲ್ಲಿ ಹಿರಿಯ ಸಲಹೆಗಾರರ ಹನ್ನೆರಡು ಹುದ್ದೆಗಳು ಸಲಹೆಗಾರರ ಇಪ್ಪತ್ತೆಂಟು ಹುದ್ದೆಗಳು ಈ ರೀತಿಯಾಗಿ ಒಟ್ಟು ನಲವತ್ತು ಹುದ್ದೆಗಳು ಖಾಲಿ ಇದ್ದು, ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಯನ್ನು [email protected] ವಿಳಾಸಕ್ಕೆ ಸಲ್ಲಿಸಬೇಕು. ಅಭ್ಯರ್ಥಿಗಳು ತಮ್ಮಅರ್ಜಿಯನ್ನು ಯಾವ ಅವಧಿಯಲ್ಲಿ ಸಲ್ಲಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಇಪ್ಪತ್ತೈದು ನವೆಂಬರ್ ಎರಡು ಸಾವಿರದ ಇಪ್ಪತ್ತೊಂದು ಮತ್ತು ಅಭ್ಯರ್ಥಿಗಳು ಡಿಸೆಂಬರ್ ಹದಿನೈದು ಎರಡು ಸಾವಿರದ ಇಪ್ಪತ್ತೊಂದರೊಳಗಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಉದ್ಯೋಗ ಸ್ಥಳ ಭಾರತದಾದ್ಯಂತ ಇರುತ್ತದೆ. ಇನ್ನು ಹುದ್ದೆಗೆ ಅಭ್ಯರ್ಥಿಗಳನ್ನು ಯಾವ ರೀತಿಯಾಗಿ ಆಯ್ಕೆಮಾಡಿಕೊಳ್ಳಲಾಗುತ್ತದೆ ಎಂಬುದನ್ನು ನೋಡುವುದಾದರೆ
ಹಿರಿಯ ಸಲಹೆಗಾರ ಮತ್ತು ಸಲಹೆಗಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಕಿರುಪಟ್ಟಿ ತಯಾರಿಸಿ ನಂತರ ಲಿಖಿತ ಪರೀಕ್ಷೆಯನ್ನು ನಡೆಸಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನೀವು ದಾಖಲೆಗಳನ್ನು ಕಳಿಸಬೇಕಾದ ವಿಳಾಸ, ಚೀಫ್ ಮ್ಯಾನೇಜರ್, ನ್ಯಾಷನಲ್ ಫರ್ಟಿಲೈಸರ್ ಲಿಮಿಟೆಡ್ ಗೊಹಾನ ರೋಡ್ ಪಾಣಿಪತ್ ಹರಿಯಾಣ.132006.
ನೀವು ಕೂಡ ಸರ್ಕಾರಿ ಉದ್ಯೋಗವನ್ನು ಪಡೆಯುವುದಕ್ಕೆ ಇಚ್ಛೆ ಹೊಂದಿದ್ದಲ್ಲಿ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಈ ಹುದ್ದೆಯಲ್ಲಿ ಅನುಭವ ಇರುವವರು ಕೂಡ ಅರ್ಜಿಯನ್ನು ಸಲ್ಲಿಸಬಹುದು. ನೀವು ಅರ್ಜಿಯನ್ನು ಸಲ್ಲಿಸುವುದರ ಮೂಲಕವಾಗಿ ಕೇಂದ್ರ ಸರ್ಕಾರದ ಈ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ಕೂಡ ತಿಳಿಸಿರಿ ಅವರು ಕೂಡ ಉದ್ಯೋಗವನ್ನು ಪಡೆದುಕೊಳ್ಳುವುದಕ್ಕೆ ಸಹಾಯವಾಗುತ್ತದೆ.