ಶಿವನ ಭಕ್ತರು ಈ ಶ್ರಾವಣ ಮಾಸದಲ್ಲಿ ಹೀಗೆ ಮಾಡಿದ್ರೆ ಎಲ್ಲ ಕಷ್ಟಗಳಿಂದ ಪಾರಾಗಬಹುದು

0

ಆಷಾಡ ಮಾಸ ಮುಗಿದು ಶ್ರಾವಣ ಮಾಸ ಬಂತೆಂದರೆ ಹೊಸದಾಗಿ ಮದುವೆ ಆದವರು ತವರಿನ ಮನೆಯಿಂದ ಗಂಡನ ಮನೆಗೆ ಹೋಗಿ ಗಂಡನ ಜೊತೆ ಬಾಳ್ವೆ ಮಾಡಲು ಮನಸ್ಸು ಹಾತೊರೆಯುತ್ತದೆ . ಇನ್ನೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸವನ್ನು ಹಬ್ಬಗಳ ಆಚರಣೆ ತಿಂಗಳು ಎಂದೇ ಹೇಳಬಹುದು ಈ ಮಾಸದಲ್ಲಿ ಒಂದೇ ರೇಖೆಯಲ್ಲಿ ಬರುವ 17 ರೇಖೆಯಲ್ಲಿ ಬರುವ ನಕ್ಷತ್ರಗಳು ಮಂಗಳಕರ ಮಳೆ ಹೊಯ್ದು ಧರೆಯು ಜನರಿಗೆ ಉನ್ನತ ಫಲವನ್ನು ನೀಡುವುದು ಈ ತಿಂಗಳಲ್ಲಿ ಸಿರಿ ಸಂಪತ್ತಿಗಾಗಿ ವರ ಮಹಾಲಕ್ಷ್ಮಿ ಪೂಜಾ ವೃತವನ್ನು ಶುಕ್ರವಾರ ಪೂಜಿಸುತ್ತ ಸಕಲ ಸಂಕಷ್ಟಗಳಿಗೆ ಮುಕ್ತಗೊಳಿಸಿ ಸಮೃದ್ಧಿ ನೀಡಲು ಶ್ರೀ ಸತ್ಯ ನಾರಾಯಣ ಪೂಜಾ ವ್ರತ ಮಂಗಳ ಗೌರಿ ವ್ರತ ನಾಗರ ಪಂಚಮಿ ಹಾಗೂ ಸಹೋದರ ಹಾಗೂ ಸಹೋದರಿಯ ಬಂದುತ್ವವನ್ನು ಇನ್ನೂ ಹೆಚ್ಚು ಬೆಳೆಸಲು ತಮ್ಮ ಸಹೋದರಿಗೆ ರಕ್ಷೆಯನ್ನು ಕಟ್ಟುವ ಹಬ್ಬವೇ ರಕ್ಷಾ ಬಂದನ ಇವಲ್ಲೇವು ಈ ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬ.

ಇಂದಿನ ಲೇಖನದಲ್ಲಿ ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಬಹಳ ಮುಖ್ಯ ಹಾಗೂ ಬಹು ರಾಮಕಥೆ ಪ್ರಾಮುಖ್ಯತೆ ಹೊಂದಿದೆ ಈ ವರ್ಷ ಶ್ರಾವಣ ಮಾಸ ಶುಭ ಸೋಮವಾರ ಐದು ವಾರ ಬಂದಿದ್ದೇ ಹಾಗೂ ಶಿವನ ಆಶೀರ್ವಾದ ಯಾರಿಗೆಲ್ಲಾ ಇದೆ ಹಾಗೂ ಹೇಗೆ ಪೂಜಾ ವಿಧಾನವನ್ನು ನಡೆಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ

ಶಿವನ ಭಕ್ತರು ಶಿವನನ್ನು ಒಲಿಸಿಕೊಳ್ಳಲು ನಾನಾ ರೀತಿಯ ಪೂಜಾ ಕೈಂಕರ್ಯವನ್ನು ಹಮ್ಮಿಕೊಂಡು ಹೃದಯ ಪೂರ್ವಕವಾಗಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ ಈ ಮಾಸದಲ್ಲಿ ಶಿವನು ನಿದ್ರೆಗೆ ಜಾರಿ ತನ್ನ ಕಾರ್ಯವನ್ನು ರುದ್ರನಿಗೆ ನೀಡಿರುವ ಎಂಬ ನಂಬಿಕೆ ಇದೆ ಹಾಗಾಗಿ ಜುಲೈ 18 ಶ್ರಾವಣ ಮಾಸದ ಮೊದಲ ಸೋಮವಾರ ಆಗಿದ್ದು ಕರ್ನಾಟಕ ಬಿಹಾರ ಒರಿಸ್ಸಾ ಮತ್ತು ಬಂಗಳ ಮುಂತಾದ ರಾಜ್ಯದಲ್ಲಿ ಶ್ರಾವಣ ಮೊದಲ ಸೋಮವಾರ ನಾಗ ಪಂಚಮಿ ಎಂದು ಆಚರಿಸುತ್ತಾರೆ

ಎರಡನೇ ಶ್ರಾವಣ ಸೋಮವಾರ ಜುಲೈ 25 ರಂದು ಪ್ರದೋಷ ಉಪವಾಸ ಹಾಗೂ ಪೂಜೆ ಆಚರಿಸಿದ್ದಲಿ ಅಮಠ ಯೋಗ ಸರ್ವರ್ಥ ಸಿದ್ದಿ ಯೋಗ ಮತ್ತು ದ್ರುವ ಯೋಗ ಬರುತ್ತದೆ ಇದು ಶಿವನ ಭಕ್ತರಿಗೆ ತನ್ನ ದೇವನನ್ನು ಒಲಿಸಿಕೊಳ್ಳಲು ಉತ್ತಮ ಅವಕಾಶ

ಆಗಸ್ಟ್ 1 ಶ್ರಾವಣ ಮೂರನೇ ಸೋಮವಾರ ಬಂದಿದ್ದು ಈ ದಿನವೂ ವರದ ಚತುರ್ಥವನ್ನು ಆಚರಿಸಲಾಗುತ್ತಿದ್ದು ಶಿವನ ಆರಾಧನೆ ಜೊತೆಗೆ ಗಣೇಶನ ಪೂಜೆ ಹಾಗೂ ಉಪವಾಸ ಇದ್ದು ಈ ದಿನವೂ ರವಿಯೋಗ ರೂಪುಗೊಳ್ಳಲಿದೆ ಇದು ಶಿವ ಭಕ್ತರಿಗೆ ತುಂಬಾನೇ ಒಳ್ಳೆಯದು ಹಾಗೂ ಶಿವ ಹಾಗೂ ಗಣೇಶನ ಕೃಪೆಗೆ ಪಾತ್ರರಾಗುತ್ತಾರೆ

ಇನ್ನು ನಾಲ್ಕನೆಯ ಸೋಮವಾರ ಆಗಸ್ಟ್ 8 ರಂದು ಬರುವುದು ಅಂದು ಪೂರ್ಣಿಮಾ ಉಪವಾಸ ಹಾಗೂ ಪವಿತ್ರ ಏಕಾದಶಿಯನ್ನು ಆಚರಿಸಲಾಗುವ ದಿನ ಅಂದು ನೀವು ಉಪವಾಸ ಆಚರಿಸಿದರೆ ಶಿವ ಹಾಗೂ ವಿಷ್ಣುವಿನ ಆಶೀರ್ವಾದ ನಿಮ್ಮ ಮೇಲೆ ಇರುವುದು ಹಾಗೂ ಇನ್ನೂ ಹಲವಾರು ಒಳ್ಳೆಯ ದಿನ ನಿಮ್ಮದು ಆಗಿರುವುದು

ಹಾಗೂ ಕಟ್ಟಕಡೆಯ ಸೋಮವಾರ ಆಗಸ್ಟ್ 15 ರಂದು ಬರುವುದು ಅಂದು ಭಾಹುಲ ಚತುರ್ಥಿ ಆಗಿದ್ದು ಶಿವನ ಜೊತೆಗೆ ಗಣೇಶನ ಉಪವಾಸ ಇದ್ದರೆ ಅವರ ಆಶೀರ್ವಾದ ನಿಮ್ಮ ಮೇಲೆ ಇದ್ದು ಆ ದಿನವೂ ಅತ್ಯಂತ ಮಂಗಳಕರ ದಿನ ಆಗಿದೆ ಆದರೆ ಕೆಲವೊಬ್ಬರು ಪೂರ್ಣಿಮೆ ಇಂದ ಪೂರ್ಣಿಮೆ ಶ್ರಾವಣ ಸೋಮವಾರ ಆಚರಿಸುವವರು ಕೊನೆಯ ಸೋಮವಾರ ಆಗಸ್ಟ್ 8 ರಂದು ಬರುವುದು. ಆದರೆ ಉಪವಾಸ ಆಚರಿಸದೆ ಬರೀ ಪೂಜೆ ಮಾಡುವರಿಗೆ ಐದು ಸೋಮವಾರ ಬರುವುದು ಇವಿಷ್ಟು ಈ ವರ್ಷ ಶ್ರಾವಣ ಮಾಸದಲ್ಲಿ ಬರುವ ಶುಭ ಸೋಮವಾರ ಬಗ್ಗೆ ಮಾಹಿತಿ ಶಿವನ ಭಕ್ತಾದಿಗಳು ಪೂಜಿಸಿ ಶಿವನ ಆಶೀರ್ವಾದ ಪಡೆಯಿರಿ.

Leave A Reply

Your email address will not be published.

error: Content is protected !!