ಸರ್ಕಾರ ಮಕ್ಕಳು ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ವಿದ್ಯಾರ್ಥಿಗಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ ಅಂತಹ ಯೋಜನೆಗಳಲ್ಲಿ ಒಂದಾದ ಫ್ರೀಶಿಪ್ ಕಾರ್ಡ್ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ವಿದ್ಯಾರ್ಥಿಗಳು ಆನ್ಲೈನಲ್ಲಿ ಫ್ರೀಶಿಪ್ ಕಾರ್ಡನ್ನು ಪಡೆಯುವುದಕ್ಕೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಜೊತೆಗೆ ಅದನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು, ಫ್ರೀಶಿಪ್ ಕಾರ್ಡ್ ನಿಂದ ವಿದ್ಯಾರ್ಥಿಗಳಿಗೆ ಯಾವೆಲ್ಲ ರೀತಿಯ ಉಪಯೋಗ ಆಗುತ್ತದೆ ಮತ್ತು ಈ ಫ್ರೀಶಿಪ್ ಕಾರ್ಡನ್ನು ಯಾವ ವಿದ್ಯಾರ್ಥಿಗಳು ಮಾಡಿಸಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ವಿದ್ಯಾರ್ಥಿಗಳು ಫ್ರೀಶಿಪ್ ಕಾರ್ಡನ್ನು ಮಾಡಿಸಿಕೊಳ್ಳುವುದರಿಂದ ಯಾವುದೇ ಒಂದು ಕಾಲೇಜಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಯಾವುದೇ ಶುಲ್ಕವನ್ನು ತುಂಬಬೇಕಾದ ಅವಶ್ಯಕತೆ ಇಲ್ಲ. ನೀವು ಈ ಫ್ರೀಶಿಪ್ ಕಾರ್ಡ್ ಅವರಿಗೆ ತೋರಿಸಿದರೆ ಅವರು ನಿಮಗೆ ಉಚಿತವಾಗಿ ಅಡ್ಮಿಷನ್ ಮಾಡಿಕೊಳ್ಳುತ್ತಾರೆ. ಹಾಗಾದರೆ ಈ ಫ್ರೀಶಿಪ್ ಕಾರ್ಡನ್ನು ಪಡೆಯುವುದಕ್ಕೆ ಆನ್ಲೈನಲ್ಲಿ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅದರ ಪ್ರತಿಯನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ವಿದ್ಯಾರ್ಥಿಗಳು ಫ್ರೀಶಿಪ್ ಕಾರ್ಡನ್ನು ಪಡೆದು ಕೊಳ್ಳುವುದಕ್ಕೆ ಮೊದಲು ಅದರ ಅಫೀಷಿಯಲ್ ವೆಬ್ಸೈಟ್ ಅನ್ನು ತೆರೆಯಬೇಕು.
ನಿಮಗೆ ಯಶಸ್ವಿ ವಿದ್ಯಾರ್ಥಿ ವೇತನವನ್ನು ನೀಡುವ ಸಂದರ್ಭದಲ್ಲಿ ಯೂಸರ್ ಐಡಿ ಮತ್ತು ಪಾಸ್ವರ್ಡ್ ಅನ್ನು ಕೊಡಲಾಗಿರುತ್ತದೆ. ಆ ಯೂಸರ್ ಐಡಿ ಪಾಸ್ವರ್ಡ್ ಅನ್ನು ಹಾಕಿ ನೀವು ಇಲ್ಲಿ ಲಾಗಿನ್ ಆಗಬೇಕು. ಆಗ ಪೇಜ್ ಓಪನ್ ಆಗುತ್ತದೆ ಒಂದು ವೇಳೆ ನೀವು ಪಾಸ್ವರ್ಡ್ ಅನ್ನು ಮರೆತಿದ್ದರೆ ಅಲ್ಲಿ ಕೆಳಗಡೆ ಫಾರ್ಗೆಟ್ ಪಾಸ್ವರ್ಡ್ ಎಂದು ಕಾಣಿಸುತ್ತದೆ. ಅಲ್ಲಿ ನೀವು ಪಾಸ್ವರ್ಡ್ ಅನ್ನು ಫಾರ್ಗೆಟ್ ಮಾಡಿ ಮತ್ತೆ ಹೊಸ ಪಾಸ್ವರ್ಡ್ ಪಡೆಯಬಹುದು.
ವಿದ್ಯಾರ್ಥಿಗಳ ಐಡಿ ಹಾಗೂ ಪಾಸ್ವರ್ಡ್ ಅನ್ನು ಹಾಕಿದನಂತರ ಅಲ್ಲಿ ನಿಮ್ಮ ಮುಂದೆ ಒಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಕೆಲವು ಆಯ್ಕೆಗಳು ಕಾಣಿಸುತ್ತವೆ ಅದರಲ್ಲಿ ಅಪ್ಲೈ ಫ್ರೀಶಿಪ್ ಕಾರ್ಡ್ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಆದರೆ ಇಲ್ಲಿ ನೀವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಮಾತ್ರ ಫ್ರೀಶಿಪ್ ಕಾರ್ಡನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಮುಂದಿನ ದಿನಗಳಲ್ಲಿ ಎಲ್ಲಾ ಕೆಟಗರಿಯ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ಸಿಗುವ ಸಾಧ್ಯತೆ ಇದೆ.
ನೀವು ಅಪ್ಲೈ ಫ್ರೀಶಿಪ್ ಕಾರ್ಡ್ ಮೇಲೆ ಕ್ಲಿಕ್ ಮಾಡಿದಾಗ ಅಲ್ಲಿ ನಿಮಗೆ ವಿದ್ಯಾರ್ಥಿ ಐಡಿ ಕಂಡುಬರುತ್ತದೆ. ಅದರ ಕೆಳಗೆ ವಿವ್ ಎನ್ನುವ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಅಲ್ಲಿ ವಿದ್ಯಾರ್ಥಿ ಮಾಹಿತಿ ಕಂಡುಬರುತ್ತದೆ. ನಿಮ್ಮ ಎಸೆಸೆಲ್ಸಿ ರಿಜಿಸ್ಟ್ರೇಷನ್ ನಂಬರ್ ಇರುತ್ತದೆ ನೀವು ಯಾವಾಗ ಎಸೆಸೆಲ್ಸಿ ಮುಗಿಸಿದ್ದೀರಿ ಎಂಬುದರ ಬಗ್ಗೆ ಮಾಹಿತಿ ಇರುತ್ತದೆ. ಜೊತೆಗೆ ನಿಮ್ಮ ಹೆಸರು ನಿಮ್ಮ ತಂದೆ ತಾಯಿಯ ಹೆಸರು ಮತ್ತು ನೀವು ಎಸೆಸೆಲ್ಸಿ ಪರೀಕ್ಷೆಯನ್ನು ಯಾವಾಗ ಪಾಸು ಮಾಡಿದ್ದೀರಿ ಎಂಬುದು ಕಂಡುಬರುತ್ತದೆ.
ನಂತರ ಅದರ ಕೆಳಗೆ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕನ್ನ ಆಯ್ಕೆ ಮಾಡಿಕೊಳ್ಳಬೇಕು ಅದರ ಕೆಳಗೆ ನಿಮ್ಮ ವಿಳಾಸವನ್ನು ಹಾಕಬೇಕು. ನಂತರ ಅಲ್ಲಿ ಕೆಳಗೆ ಅಪ್ಲೈ ಎನ್ನುವ ಆಯ್ಕೆ ಕಂಡುಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಆಗ ಡಾಟಾ ಸೇವಡ್ ಸಕ್ಸಸ್ ಫುಲಿ ಎಂದು ಕಾಣಿಸುತ್ತದೆ ಆಗ ನೀವು ಓಕೆ ಎನ್ನುವುದನ್ನು ಕ್ಲಿಕ್ ಮಾಡಬೇಕು. ನೀವು ಫ್ರೀಶಿಪ್ ಕಾರ್ಡ್ ಗೆ ಅಪ್ಲೈ ಮಾಡಿದ ತಕ್ಷಣ ಕೆಲವು ಸೆಕೆಂಡುಗಳಲ್ಲಿ ನಿಮಗೆ ಅದು ಸಿಗುತ್ತದೆ.
ಅದು ಯಾವ ರೀತಿ ಎಂದರೆ ನೀವು ಮತ್ತೆ ಮೊದಲಿನ ಪುಟಕ್ಕೆ ಹೋದಾಗ ಇದರ ಪಕ್ಕದಲ್ಲಿ ಡೌನ್ಲೋಡ್ ಫ್ರೀಶಿಪ್ ಕಾರ್ಡ್ ಎಂಬುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅಪ್ರುವಲ್ ಬಂದಿರುತ್ತದೆ. ಅಲ್ಲಿ ನೀವು ನಿಮ್ಮ ಫ್ರೀಶಿಪ್ ಕಾರ್ಡ್ ಅನ್ನು ನೋಡಬಹುದು.
ಆ ಫ್ರೀಶಿಪ್ ಕಾರ್ಡನ್ನು ಒಂದು ಪ್ರತಿಯನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ ಯಾಕೆಂದರೆ ಯಾವುದೇ ಒಂದು ಕಾಲೇಜಿಗೆ ಅಥವಾ ಯಾವುದೇ ತರಗತಿಗೆ ನೀವು ಪ್ರವೇಶವನ್ನು ಪಡೆದುಕೊಳ್ಳಬೇಕು ಎನ್ನುವ ಸಂಧರ್ಭದಲ್ಲಿ ನೀವು ಫ್ರೀಶಿಪ್ ಕಾರ್ಡ್ ನಂಬರ್ ಅಥವಾ ಫ್ರೀಶಿಪ್ ಕಾರ್ಡನ್ನು ತೋರಿಸಿದರೆ ಸಾಕು ನೀವು ಯಾವುದೇ ಶುಲ್ಕವನ್ನು ಪಾವತಿಸುವ ಅವಶ್ಯಕತೆ ಇಲ್ಲ. ಹಾಗಾಗಿ ನೀವು ನಿಮ್ಮ ಪ್ರವೇಶವನ್ನು ಸುಲಭವಾಗಿ ಉಚಿತವಾಗಿ ಮಾಡಿಕೊಳ್ಳಬಹುದು.
ಫ್ರೀಶಿಪ್ ಕಾರ್ಡಿನಲ್ಲಿ ವಿದ್ಯಾರ್ಥಿಗಳ ಹೆಸರು ವಿಳಾಸ ಅವರ ಜಾತಿ ಅವರ ಆದಾಯ ಎಲ್ಲದರ ಕುರಿತು ಮಾಹಿತಿ ಇರುತ್ತದೆ ಜೊತೆಗೆ ಅದರ ಕೆಳಗಡೆ ಈ ಫ್ರೀಶಿಪ್ ಕಾರ್ಡ್ ಅನ್ನು ಯಾವ ರೀತಿಯಾಗಿ ಬಳಸಬಹುದು ಅದರಿಂದ ಯಾವ ರೀತಿಯ ಉಪಯೋಗಗಳಿವೆ ಎಂಬುದರ ಮಾಹಿತಿ ಇರುತ್ತದೆ. ಅದರ ಕೆಳಗೆ ಎಕ್ಸ್ಪೋರ್ಟ್ ಎನ್ನುವ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಆಗ ಕೆಳಗಡೆ ನಿಮಗೆ ಫ್ರೀಶಿಪ್ ಕಾರ್ಡ್ ಪಿಡಿಎಫ್ ಡೌನ್ಲೋಡ್ ಆಗಿರುವುದು ಕಂಡುಬರುತ್ತದೆ.
ಈ ರೀತಿಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಸುಲಭವಾಗಿ ಈ ಒಂದು ಫ್ರೀಶಿಪ್ ಕಾರ್ಡನ್ನು ಪಡೆದುಕೊಳ್ಳಬಹುದು. ಇದರಿಂದ ನಿಮಗೆ ಮುಂದಿನ ಶಿಕ್ಷಣವನ್ನು ಪಡೆಯುವುದಕ್ಕೆ ತುಂಬಾ ಸಹಾಯವಾಗುತ್ತದೆ ಹಾಗಾಗಿ ನೀವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಾಗಿದ್ದಾರೆ ಈ ಕೂಡಲೇ ಶಿಪ್ ಕಾರ್ಡನ್ನು ಪಡೆದುಕೊಳ್ಳಿ.