ಲಾಕ್ ಡೌನ್ ಸಮಯದಲ್ಲಿ ಅನೇಕರು ತಮ್ಮ ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಉದ್ಯೋಗವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಲಾಕ್ ಡೌನ್ ಸಮಯದಲ್ಲಿ ತಮ್ಮದೇ ಆದ ಸ್ವಂತ ಬಿಸಿನೆಸ್ ಪ್ರಾರಂಭಿಸಿ ಹಣ ಗಳಿಸಬಹುದು. ಹಾಗಾದರೆ ಲಾಕ್ ಡೌನ್ ಸಮಯದಲ್ಲಿ ಪ್ರಾರಂಭಿಸಬಹುದಾದ ಬಿಸಿನೆಸ್ ಯಾವುವು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಲಾಕ್ ಡೌನ್ ಸಮಯದಲ್ಲಿ ಹೊರಗಡೆ ಹೋಗುವ ಹಾಗಿರುವುದಿಲ್ಲ ಮನೆಯಲ್ಲೇ ಇರಬೇಕಾಗುತ್ತದೆ. ಮನೆಯಲ್ಲಿದ್ದುಕೊಂಡು 25 ರೀತಿಯ ಬಿಸಿನೆಸ್ ಪ್ರಾರಂಭಿಸಬಹುದು. ಮನೆಯಲ್ಲಿ ಇದ್ದು ಫಿಶ್ ಫಾರ್ಮಿಂಗ್ ಮಾಡುವ ಮೂಲಕ ನಮ್ಮದೇ ಸ್ವಂತ ಬಿಸಿನೆಸ್ ಪ್ರಾರಂಭಿಸಬಹುದು. ಫಿಷ್ ಫಾರ್ಮಿಂಗ್ ಮಾಡಲು ಹೆಚ್ಚು ಖರ್ಚು ಇರುವುದಿಲ್ಲ. ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಆನ್ಲೈನ್ ಕ್ಲಾಸ್ ಗಳು ಹೆಚ್ಚು ಪ್ರಾಮುಖ್ಯತೆ ಪಡೆದಿವೆ ಆದ್ದರಿಂದ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುವುದು, ಕೋಚಿಂಗ್ ಮಾಡುವುದರಿಂದ ಹಣ ಸಂಪಾದಿಸಬಹುದು. ಎಲ್ಲಾ ಸಮಯದಲ್ಲೂ ಇ-ಕಾಮರ್ಸ್ ಪ್ರಾಮುಖ್ಯತೆಯನ್ನು ಪಡೆದಿದೆ ಆದ್ದರಿಂದ ಲಾಕ್ ಡೌನ್ ಸಮಯದಲ್ಲಿ ಮನೆಯಲಿ ಕುಳಿತುಕೊಂಡು ಇ ಕಾಮರ್ಸ್ ಬಿಸಿನೆಸ್ ಪ್ರಾರಂಭಿಸಿ ಹಣ ಸಂಪಾದನೆ ಮಾಡಬಹುದು.
ಲಾಕ್ ಡೌನ್ ಸಮಯದಲ್ಲಿ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಇದ್ದರೆ ಗ್ರಾಫಿಕ್ ಡಿಸೈನ್ ಅಂಡ್ ಲೋಗೋ ಮೇಕಿಂಗ್ ಬಿಸಿನೆಸ್ ಪ್ರಾರಂಭಿಸಬಹುದು ಇದರಿಂದಲೂ ಹಣ ಸಂಪಾದನೆ ಮಾಡಬಹುದು. ಮನೆಯಲ್ಲಿ ಲ್ಯಾಪ್ ಟಾಪ್ ಅಥವಾ ಸ್ಮಾರ್ಟ್ ಫೋನ್ ಇದ್ದರೆ ಇನ್ಸ್ಟಾಗ್ರಾಂ ಇನ್ಫ್ಲೂಯೆನ್ಸರ್ ಆಗಿ ಕೆಲಸ ಮಾಡಬಹುದು ಹೀಗೆ ಮನೆಯಲ್ಲಿ ಕುಳಿತು ಹಣ ಸಂಪಾದನೆ ಮಾಡಬಹುದು. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿಯೇ ಬಹಳಷ್ಟು ಸಮಯ ಸಿಗುತ್ತದೆ ಆ ಸಮಯದಲ್ಲಿ ಅಕ್ವಾಪೋನಿ ಫಾರ್ಮೀಂಗ್ ಮಾಡಿ ಮಾರಾಟ ಮಾಡುವುದರಿಂದ ಹಣ ಸಂಪಾದನೆ ಮಾಡಬಹುದು. ಕಂಪ್ಯೂಟರ್ ಜ್ಞಾನ ಹೊಂದಿದ್ದರೆ ಮನೆಯಲ್ಲೇ ಕುಳಿತುಕೊಂಡು ಕಂಪ್ಯೂಟರ್ ನಲ್ಲಿ ವೆಬ್ಸೈಟ್ ಡೆವಲಪ್ಮೆಂಟ್ ಸಂಬಂಧಿಸಿ ವರ್ಕ್ ಮಾಡಬಹುದು. ಮನೆಯಲ್ಲಿಯೆ ಇದ್ದು ಹತ್ತಿರದ ಸಣ್ಣ ಜಾಗದಲ್ಲಿ ಹೈಡ್ರೋಪೋನಿಕ್ ಫಾರ್ಮಿಂಗ್ ಮಾಡುವ ಮೂಲಕ ಹಣ ಸಂಪಾದನೆ ಮಾಡಬಹುದು. ಸಾಫ್ಟವೇರ್ ಬಗ್ಗೆ ಚೆನ್ನಾಗಿ ತಿಳಿದಿರುವವರು ಮನೆಯಲ್ಲಿಯೇ ಕಂಪ್ಯೂಟರ್ ಮೂಲಕ ಆಪ್ ಡೆವಲಪ್ಮೆಂಟ್ ಮಾಡಬಹುದು. ಮನೆಯಲ್ಲಿ ಕುಳಿತುಕೊಂಡು ಕಂಪ್ಯೂಟರ್ ನಲ್ಲಿ ವೆಬ್ಸೈಟ್ ಡೆವಲಪ್ಮೆಂಟ್ ಮಾಡಬಹುದು.
ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಕುಳಿತುಕೊಂಡು ಬ್ಲಾಗ್ ರೈಟಿಂಗ್ ಮಾಡಬಹುದು. ಲಾಕ್ ಡೌನ್ ಸಮಯದಲ್ಲಿ ಬಹಳಷ್ಟು ಜನರಿಗೆ ದಿನನಿತ್ಯ ಸಾಮಗ್ರಿಗಳು ಅವಶ್ಯಕವಾಗಿರುತ್ತದೆ ಓಪನ್ ಗ್ರೋಸರಿ ಸ್ಟೋರ್ ಪ್ರಾರಂಭಿಸಿ ಆದಾಯ ಗಳಿಸಬಹುದು. ಲಾಕ್ ಡೌನ್ ಸಮಯದಲ್ಲಿ ಕೆಲವರಿಗೆ ನೀರಿನ ಅವಶ್ಯಕತೆ ಇರುತ್ತದೆ ಆದ್ದರಿಂದ ಬಿಸ್ಲೇರಿ ವಾಟರ್ ಸಪ್ಲೈ ಬಿಸಿನೆಸ್ ಪ್ರಾರಂಭಿಸುವುದರಿಂದ ಆದಾಯ ಗಳಿಸಬಹುದು. ಲಾಕ್ ಡೌನ್ ಸಮಯದಲ್ಲಿ ದೂರದ ಶಾಪ್ ಗಳಿಗೆ ಹೋಗಿ ತರಕಾರಿ ತರಲು ಜನರಿಗೆ ಸಾಧ್ಯವಾಗುವುದಿಲ್ಲ, ಈ ಸಮಯದಲ್ಲಿ ಓಪನ್ ವೆಜಿಟೇಬಲ್ ಶಾಪ್ ಇಟ್ಟುಕೊಳ್ಳುವುದರಿಂದ ಕಡಿಮೆ ಸಮಯದಲ್ಲಿ ಮಾರಾಟವಾಗುತ್ತದೆ. ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಇದ್ದರೆ ಮನೆಯಲ್ಲಿ ಕುಳಿತುಕೊಂಡು ವೆಬ್ ಹೋಸ್ಟಿಂಗ್ ಕೆಲಸವನ್ನು ಮಾಡಬಹುದು. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೆ ಕುಳಿತುಕೊಂಡು ಬೇಸರ ಬರುತ್ತದೆ ಆದ್ದರಿಂದ ಒಂದು ವಿಷಯವನ್ನು ಇಟ್ಟುಕೊಂಡು ಯುಟ್ಯೂಬ್ ಚಾನೆಲ್ ಆರಂಭಿಸುವುದರಿಂದ ಸಮಯವೂ ಸಾಗುತ್ತದೆ. ಸ್ಮಾರ್ಟಫೋನ್ ಅಥವಾ ಲ್ಯಾಪ್ ಟಾಪ್ ಇದ್ದರೆ ಸ್ಟೋರಿ ರೈಟಿಂಗ್ ಪ್ರಾರಂಭಿಸಬಹುದು.
ಮನೆಯಲ್ಲಿ ಕುಳಿತುಕೊಂಡು ಲ್ಯಾಪ್ ಟಾಪ್ ಅಥವಾ ಸ್ಮಾರ್ಟಫೋನ್ ಮೂಲಕ ಆನ್ಲೈನ್ ಡಾಟಾ ಎಂಟ್ರಿ ವರ್ಕ್ ಪ್ರಾರಂಭಿಸಬಹುದು. ಮನೆಯಲ್ಲಿ ಕುಳಿತುಕೊಂಡು ಕಂಪ್ಯೂಟರ್ ನಲ್ಲಿ ಟ್ರೇಡಿಂಗ್ ಆನ್ಲೈನ್ ಬಿಸಿನೆಸ್ ಪ್ರಾರಂಭಿಸಬಹುದು. ಮನೆಯಲ್ಲಿ ಕುಳಿತುಕೊಂಡು ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ನಲ್ಲಿ ವಿಡಿಯೋ ಎಡಿಟಿಂಗ್ ಬಿಸಿನೆಸ್ ಪ್ರಾರಂಭಿಸಬಹುದು. ಕಾರ್ಟೂನ್ ಎಂದಿಗೂ ತನ್ನದೇ ಆದ ಪ್ರಾಮುಖ್ಯತೆಯನ್ನು ಉಳಿಸಿಕೊಂಡು ಬಂದಿದೆ. ಕಂಪ್ಯೂಟರ್ ನಲ್ಲಿ ಮನೆಯಲ್ಲೇ ಕುಳಿತುಕೊಂಡು ಕಾರ್ಟೂನ್ ಮೇಕಿಂಗ್ ಬಿಸಿನೆಸ್ ಪ್ರಾರಂಭಿಸಬಹುದು. ಲಾಕ್ ಡೌನ್ ಸಮಯದಲ್ಲಿ ಎಲ್ಲರಿಗೂ ಅವಶ್ಯಕ ವಸ್ತುಗಳು ಬೇಕಾಗಿರುತ್ತದೆ ಹಾಗಾಗಿ ಡೋರ್ ಟು ಡೋರ್ ಡೆಲಿವರಿ ಸರ್ವಿಸ್ ಪ್ರಾರಂಭಿಸುವುದರಿಂದ ಆದಾಯ ಗಳಿಸಬಹುದು. ಮನೆಯ ಹತ್ತಿರದ ಖಾಲಿ ಜಾಗದಲ್ಲಿ ತರಕಾರಿಗಳನ್ನು ಬೆಳೆದು ಮಾರಾಟ ಮಾಡಬಹುದು ಇದರಿಂದ ಆದಾಯ ಗಳಿಸಬಹುದು. ಮನೆಯಲ್ಲಿ ಕುಳಿತುಕೊಂಡು ಆರ್ಟ್ ಅಂಡ್ ಕ್ರಾಫ್ಟ್ ಮಾಡಿ ಮಾರಾಟ ಮಾಡುವುದರಿಂದ ತಕ್ಕಮಟ್ಟಿಗೆ ಹಣ ಗಳಿಸಬಹುದು. ಆನ್ಲೈನ್ ಟ್ಯೂಷನ್ ಪ್ರಾರಂಭಿಸಿ ಮಕ್ಕಳಿಗೆ ಟ್ಯೂಷನ್ ಹೇಳಿಕೊಡಬಹುದು ಇದರಿಂದಲೂ ಆದಾಯ ಗಳಿಸಬಹುದು. ಇವುಗಳಲ್ಲಿ ಯಾವ ಬಿಸಿನೆಸ್ ಬೇಕಾದರೂ ಪ್ರಾರಂಭ ಮಾಡಬಹುದು ಹಾಗೂ ಇನ್ವೆಸ್ಟ್ ಮಾಡುವ ಅವಶ್ಯಕತೆ ಇರುವುದಿಲ್ಲ.