ಒಬ್ಬ ರೈತ ಕಾರನ್ನು ಖರೀದಿಸುವುದಕ್ಕಾಗಿ ಶೋರೂಮ್ ಗೆ ಹೋಗುತ್ತಾನೆ ಅಲ್ಲಿರುವಂತಹ ಮಾರಾಟಗಾರರು ರೈತನನ್ನ ನೋಡಿ ಆತನಿಗೆ ಬೈದು ಅವಮಾನವನ್ನು ಮಾಡುತ್ತಾರೆ ನಂತರ ಆ ರೈತ ಏನು ಮಾಡುತ್ತಾನೆ ಎಂಬ ಕಥೆ ನಿಜವಾಗಿಯೂ ಎಲ್ಲರಿಗೂ ಇಷ್ಟವಾಗುವಂತದ್ದು ಹಾಗಾದರೆ ಆ ರೈತ ಮಾಡಿರುವ ಕೆಲಸವಾದರೂ ಏನು ಎಂಬುದರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ತಮಿಳುನಾಡಿನ ಮೂಲದ ಒಬ್ಬ ವ್ಯಕ್ತಿ ಆತನ ಹೆಸರು ಸಂಜೀವನ್ ಆತ ಒಬ್ಬ ಶ್ರೀಮಂತ ರೈತ ಎಂದು ಹೇಳಬಹುದು ಆತ ಒಮ್ಮೆ ಕೆಲಸದ ಮೇಲೆ ಇಂಗ್ಲೆಂಡ್ಗೆ ಹೋಗುತ್ತಾನೆ ಇಂಗ್ಲೆಂಡಿಗೆ ಹೋದರು ಕೂಡ ತನ್ನ ಆಚಾರ-ವಿಚಾರಗಳನ್ನು ಎಂದಿಗೂ ಮರೆಯುವುದಿಲ್ಲ. ತಾನು ಧರಿಸುವಂತಹ ಬಟ್ಟೆ ಪಂಚೆ ಅಂಗಿ ವೇಷಭೂಷಣವನ್ನು ಬೇರೆ ದೇಶಕ್ಕೆ ಹೋದರೂ ಕೂಡ ಅವರು ಬದಲಿಸಿಕೊಳ್ಳುವುದಿಲ್ಲ. ಇದನ್ನು ನೋಡಿದಂತಹ ಅಲ್ಲಿನ ಜನರು ಇವರನ್ನು ಆಡಿಕೊಳ್ಳುತ್ತಿದ್ದರು ಹಂಗಿಸುತ್ತಿದ್ದರು ಆದರೂ ಕೂಡ ಅಂತಹ ಜನಗಳ ಬಗ್ಗೆ ಇವರು ಯೋಚನೆಯನ್ನು ಮಾಡುತ್ತಿರಲಿಲ್ಲ.
ಒಮ್ಮೆ ಇವರು ಕಾರ್ ಶೋರೂಮ್ ಎದುರುಗಡೆ ಹೋಗುತ್ತಿರುತ್ತಾರೆ ಶೋ ರೂಮ್ ನಲ್ಲಿ ಇರುವಂತಹ ಕಾರುಗಳನ್ನು ನೋಡಿ ಇವರಿಗೆ ಆಸೆಯಾಗುತ್ತದೆ ನಾನು ಕೂಡ ಯಾವುದಾದರೂ ಒಂದು ಕಾರನ್ನು ಖರೀದಿಸಬೇಕು ಎಂದು. ತಕ್ಷಣ ಹಿಂದುಮುಂದು ಯೋಚಿಸದೆ ಶೋರೂಮ್ ಎದುರುಗಡೆ ಹೋಗುತ್ತಾರೆ.
ಆಗ ಅಲ್ಲಿನ ಕಾವಲುಗಾರ ಇವರನ್ನು ತಡೆಯುತ್ತಾರೆ ನೀನು ಯಾಕೆ ಇಲ್ಲಿಗೆ ಬಂದಿದ್ದೀಯಾ ನೀನು ತೆಗೆದುಕೊಳ್ಳುವಂತಹ ವಸ್ತು ಯಾವುದು ಇಲ್ಲ ಮುಂದೆ ಹೋಗು ಅಲ್ಲಿ ಸಿಗುತ್ತವೆ ಎಂದು ಹೇಳುತ್ತಾರೆ. ಆದರೆ ಸಂಜೀವನ್ ಅವರು ನಾನು ಕಾರು ಖರೀದಿಸುವುದಕ್ಕೆ ಬಂದಿದ್ದೇನೆ ದಯವಿಟ್ಟು ನನ್ನನ್ನು ಒಳಗೆ ಬಿಡಿ ಎಂದು ಹೇಳುತ್ತಾರೆ ಆಗ ಕಾವಲುಗಾರ ಅವರನ್ನ ಮೇಲಿಂದ ಕೆಳಗಿನವರೆಗೂ ನೋಡುತ್ತಾರೆ ನೀನು ಒಳಗೆ ಹೋದರೆ ಮಾರಾಟಗಾರರು ನಿನಗೆ ಬಯ್ಯುತ್ತಾರೆ
ಆಗ ನೀನು ಹಿಂತಿರುಗಿ ಬರುತ್ತಿ ಎಂದು ಒಳಗಡೆ ಕಳಿಸುತ್ತಾರೆ. ಅದಾದ ನಂತರ ಸಂಜೀವನ್ ಅವರು ಒಳಗಡೆ ಹೋಗುತ್ತಾರೆ ಕಾರುಗಳನ್ನೆಲ್ಲಾ ನೋಡುತ್ತಾರೆ ಅದರಲ್ಲಿ ಒಂದು ಕಾರು ಇವರಿಗೆ ಇಷ್ಟವಾಗುತ್ತದೆ. ಆ ಕಾರಿನ ಬಳಿ ಹೋಗಿ ಅಲ್ಲಿನ ಒಬ್ಬ ಮಾರಾಟಗಾರರನ್ನು ಕರೆಯುತ್ತಾರೆ ಆ ಕಾರಿನ ಬೆಲೆಯನ್ನು ಕೇಳುತ್ತಾರೆ ಆದರೆ ಅಲ್ಲಿನ ಮಾರಾಟಗಾರರು ಇವರನ್ನು ನೋಡಿ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ.
ಇವರ ವೇಷಭೂಷಣವನ್ನು ನೋಡಿ ಇವರ ಬಗ್ಗೆ ಗಮನಹರಿಸುವುದಿಲ್ಲ ಬದಲಾಗಿ ಅಲ್ಲಿರುವ ಇತರ ಖರೀದಿದಾರರನ್ನು ವಿಚಾರಿಸಿಕೊಳ್ಳುತ್ತಿತ್ತಾರೆ. ಇವರು ಎಷ್ಟೇ ಕರೆದರು ಇವರ ಬಳಿ ಯಾರು ಬರದಿದ್ದಾಗ ಸಂಜೀವನ್ ಅವರು ಬೇಸರದಿಂದ ಶೋರೂಮ್ ಇಂದ ಹೊರನಡೆಯುತ್ತಾರೆ ಅಲ್ಲಿಂದ ನೇರವಾಗಿ ತಾವು ತಂಗಿದ್ದಂತಹ ರೂಮಿಗೆ ಹೋಗುತ್ತಾರೆ ಹೋಗಿ ಬೆಲೆಬಾಳುವಂತಹ ಸೂಟು ಬೂಟನ್ನು ಹಾಕಿಕೊಂಡು ಮತ್ತೆ ಅದೇ ಶೋರೂಮ್ ಗೆ ಹೋಗುತ್ತಾರೆ
ವೇಷಭೂಷಣವನ್ನು ಬದಲಿಸಿಕೊಂಡ ಹೋದವರನ್ನು ಕಾವಲುಗಾರ ಸೆಲ್ಯೂಟ್ ಹೊಡೆದು ಒಳಗೆ ಕಳಿಸಿಕೊಡುತ್ತಾನೆ. ಇವರು ಒಳ ಹೋಗುತ್ತಿದ್ದಂತೆಯೇ ಮಾರಾಟಗಾರರು ಇವರ ಬಳಿ ಬರುತ್ತಾರೆ. ಕಾರುಗಳನ್ನು ತೋರಿಸುತ್ತಾರೆ ಇವರು ಮೊದಲು ಇಷ್ಟ ಪಟ್ಟಂತಹ ಕಾರನ್ನು ತೆಗೆದುಕೊಳ್ಳುತ್ತಾರೆ ಆದರೆ ಅಲ್ಲಿರುವ ಯಾರಿಗೂ ಇವರು ಮೊದಲು ಒಂದು ಸಾರಿ ಬಂದ ವ್ಯಕ್ತಿ ಎಂಬುದು ತಿಳಿಯುವುದಿಲ್ಲ. ಇವರ ದೊಡ್ಡ ಶ್ರೀಮಂತ ವ್ಯಕ್ತಿ ಎನ್ನುವ ರೀತಿಯಲ್ಲಿ ಅವರನ್ನು ಸತ್ಕರಿಸುತ್ತಾರೆ.
ಸಂಜೀವನ್ ಅವರು ನಾಲ್ಕು ಕೋಟಿ ರೂಪಾಯಿ ಬೆಲೆಯನ್ನು ಕೊಟ್ಟು ಆ ಕಾರನ್ನು ಖರೀದಿಸಿ ಅದನ್ನು ಇಂಗ್ಲೆಂಡ್ ನಿಂದ ತಮಿಳುನಾಡಿಗೆ ತರಿಸಿಕೊಳ್ಳುತ್ತಾರೆ. ತಮಿಳುನಾಡಿಗೆ ಬಂದನಂತರ ಸಂಜೀವನ್ ಅವರು ಕಾರಿನಲ್ಲಿ ಕಸವನ್ನು ಸಾಗಣೆ ಮಾಡುತ್ತಾರೆ ಜನರಿಗೆ ಸಂಜೀವನ್ ಅವರು ಇಷ್ಟು ದುಬಾರಿ ಕಾರನ್ನು ಯಾಕೆ ಈ ರೀತಿಯಾಗಿ ಬಳಸುತ್ತಿದ್ದಾರೆ ಎಂಬ ಗೊಂದಲ ಉಂಟಾಗುತ್ತದೆ. ಸಂಜೀವನ್ ಅವರಿಗೆ ಬುದ್ಧಿ ಮಾತನ್ನು ಹೇಳುತ್ತಾರೆ ಯಾಕೆ ಹೀಗೆ ಮಾಡುತ್ತಿದ್ದೀರಿ ವಿದೇಶದಿಂದ ತರಿಸಿಕೊಂಡು ಇರುವಂತಹ ಕಾರನ್ನು ಈ ರೀತಿಯಾಗಿ ಯಾಕೆ ಬಳಸಿಕೊಳ್ಳುತ್ತಿದ್ದಿರಿ ಎಂದು ಕೇಳುತ್ತಾರೆ.
ಆಗಲೂ ಕೂಡ ಜನಗಳ ಮಾತನ್ನು ಇವರು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆ ಕೊನೆಗೆ ಅದು ಶೋರೂಮ್ ನ ಮಾಲೀಕನಿಗೂ ಕೂಡ ತಲುಪುತ್ತದೆ. ನಂತರ ಆ ಕಂಪನಿಯ ಕಾರನ್ನೂ ಖರೀದಿ ಮಾಡುವವರ ಸಂಖ್ಯೆ ಕೂಡ ತುಂಬಾ ಕಡಿಮೆಯಾಗುತ್ತದೆ. ಆ ಕಂಪನಿಯ ಮಾಲೀಕರು ಸಂಜೀವನ್ ಅವರನ್ನು ಮತ್ತೆ ಇಂಗ್ಲೆಂಡಿಗೆ ಕರೆಸಿಕೊಳ್ಳುತ್ತಾರೆ.
ಸಂಜೀವನ್ ಅವರು ಕೂಡ ಅದೇ ಪಂಚೆ ಶರ್ಟ್ ನಲ್ಲಿ ಮತ್ತೆ ಶೋರೂಮ್ ಗೆ ಹೋಗುತ್ತಾರೆ ಆಗ ಕಂಪನಿಯ ಮಾಲೀಕರು ಅವರನ್ನು ಕೂಡಿಸಿಕೊಂಡು ಮಾತನಾಡುತ್ತಾರೆ ಯಾಕೆ ಕಾರನ್ನು ಕಸವನ್ನು ಸಾಗಿಸುವುದಕ್ಕೆ ಬಳಸುತ್ತಿದ್ದೀರಿ ನಿಮಗೆ ಬೇಡ ಎಂದಾದರೆ ನಮಗೆ ಹಿಂತಿರುಗಿಸಿ ನೀವು ಕೊಟ್ಟಿರುವ ಬೆಲೆಗಿಂತ ಹೆಚ್ಚಿನ ಹಣವನ್ನು ನಾವು ನಿಮಗೆ ಕೊಡುತ್ತೇವೆ ದಯವಿಟ್ಟು ಈ ರೀತಿಯಾಗಿ ಕಸ ಸಾಗಾಣಿಕೆಯನ್ನು ಮಾಡಬೇಡಿ ಎಂದು ತುಂಬಾ ಕೇಳಿಕೊಳ್ಳುತ್ತಾರೆ ಆಗ ಸಂಜೀವನ್ ಅವರು ಒಂದೇ ಒಂದು ಮಾತನ್ನು ಹೇಳುತ್ತಾರೆ ನಾನು ಮೊದಲಿಗೆ ಇದೇ ವೇಷಭೂಷಣದಲ್ಲಿ ಇಲ್ಲಿಗೆ ಬಂದಾಗ ನಿಮ್ಮ ಮಾರಾಟಗಾರರು ನನ್ನನ್ನು ಬೈದು ಅವಮಾನ ಮಾಡಿದ್ದರು ನಿಮಗೆ ಆ ಕಾರನ್ನು ಕೊಂಡುಕೊಳ್ಳುವ ಅರ್ಹತೆ ಇಲ್ಲ ಎಂದು ಹೊರಗೆ ಕಳಿಸಿದರು ಆದರೆ ಇಂದು ಅದೇ ವ್ಯಕ್ತಿಯನ್ನು ನೀವು ಕರೆಸಿಕೊಂಡು ಮಾತನಾಡುತ್ತಿದ್ದೀರಿ ಎಂದು ಮಾಲೀಕರಿಗೆ ಹೇಳುತ್ತಾರೆ. ಅವರಿಗೆ ಇದು ಸರಿಯಾಗಿ ಅರ್ಥವಾಗುತ್ತದೆ ನಂತರ ಆ ಕಂಪನಿಯ ಮಾಲೀಕರು ನಿಮಗೆ ಬೈದು ಅವಮಾನ ಮಾಡಿದವರು ಯಾರು ಹೇಳಿ ಎಂದು ಅಲ್ಲಿರುವ ಎಲ್ಲಾ ಮಾರಾಟಗಾರರನ್ನು ಕರೆದು ಒಂದು ಸಭೆಯನ್ನು ಕರೆಯುತ್ತಾರೆ.
ಆಗ ಮಾರಾಟಗಾರರು ಬಂದು ಇವರ ಬಳಿ ಕ್ಷಮೆ ಕೇಳುತ್ತಾರೆ ಆಗ ಸಂಜೀವನ್ ಅವರು ಒಂದು ಮಾತನ್ನು ಹೇಳುತ್ತಾರೆ ಈ ಪಂಚೆ ಮತ್ತು ಅಂಗಿಗೆ ನಮ್ಮ ದೇಶದಲ್ಲಿ ತುಂಬಾ ಗೌರವ ಇದೆ ಹಾಗಾಗಿ ನನಗೆ ಕೋಪಬಂತು ಅದಕ್ಕಾಗಿ ನಾನು ಈ ರೀತಿಯಾಗಿ ಮಾಡಿದೆ ಇನ್ನು ಮುಂದೆ ಆ ರೀತಿಯಾಗಿ ಮಾಡುವುದಿಲ್ಲ ಆದರೆ ನಮ್ಮ ದೇಶದಿಂದ ಯಾರೇ ಬಂದರೂ ಅವರಿಗೆ ಮರ್ಯಾದೆ ಕೊಟ್ಟು ಅವರನ್ನ ಮಾತಾಡಿಸಿ. ಅವರ ವೇಷ ಭೂಷಣದಿಂದ ನಿಮಗೆ ಅವರ ವ್ಯಕ್ತಿತ್ವ ತಿಳಿಯುವುದಿಲ್ಲ ಅವರನ್ನು ಮಾತನಾಡಿಸಿದಾಗಲೆ ನಿಮಗೆ ಅವರ ವ್ಯಕ್ತಿತ್ವ ತಿಳಿಯುವುದು ಅವರ ಘನತೆ ಏನು ಎಂಬುದು ಅರ್ಥವಾಗುವುದು ಎಂದು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಹೇಳುತ್ತಾರೆ ನಂತರ ಅವರೆಲ್ಲರೂ ಇವರಿಗೆ ಕ್ಷಮೆಯನ್ನು ಕೇಳುತ್ತಾರೆ ನಂತರ ಅವರನ್ನು ತಮಿಳುನಾಡಿಗೆ ವಾಪಸ್ ಕಳಿಸಿಕೊಡುತ್ತಾರೆ. ತನ್ನ ದೇಶದ ಆಚಾರ-ವಿಚಾರಗಳನ್ನು ಬೇರೆ ದೇಶಗಳಿಗೆ ಹೋದಾಗ ಮರೆಯದೆ ಅದನ್ನ ಗೌರವಿಸುವವನೇ ನಿಜವಾದ ದೇಶಭಕ್ತ ಎಂದು ಹೇಳಬಹುದು ಈ ರೀತಿಯಾಗಿ ತನಗೆ ಅವಮಾನ ಮಾಡಿದವರಿಗೆ ಸರಿಯಾದ ರೀತಿಯಲ್ಲಿ ತಿರುಗೇಟು ಕೊಟ್ಟಂತಹ ಸಂಜೀನ್ ಅವರು ಒಬ್ಬ ಮಾದರಿ ವ್ಯಕ್ತಿಯಾಗಿದ್ದಾರೆ.