ಆಧಾರ್ ಮತ್ತು ಪ್ಯಾನ್ ಕಾರ್ಡಿನಂತೆ ರೇಶನ್ ಕಾರ್ಡ್ ಸಹ ದೇಶದ ನಾಗರಿಕತೆಗೆ ಒಂದು ಪ್ರಮುಖ ಗುರುತಿನ ಚೀಟಿಯಾಗಿದೆ ಈ ಕಾರ್ಡಿನ ಸಹಾಯದಿಂದ ಸಾರ್ವಜನಿಕರಿಗೆ ಪಡಿತರ ಸಿಗುತ್ತದೆ ಸರ್ಕಾರದ ಸೌಲಭ್ಯಗಳು ಸಿಗುತ್ತವೆ. ಸರ್ಕಾರವು ಒನ್ ನೇಶನ್ ಒನ್ ರೇಶನ್ ಸಹ ಘೋಷಣೆ ಮಾಡಿದೆ ಇವತ್ತು ನಾವು ನಿಮಗೆ ತಿಳಿಸುವ ವಿಷಯ ಏನೆಂದರೆ ಬಿಪಿಎಲ್ ರೇಶನ್ ಕಾರ್ಡ್ ಎಪಿಎಲ್ ರೇಶನ್ ಕಾರ್ಡ್ ಮತ್ತು ಅಂತ್ಯೋದಯ ರೇಶನ್ ಕಾರ್ಡ್ ಇದ್ದವರಿಗೆ ರಾಜ್ಯ ಸರ್ಕಾರ ದಿಂದ ಒಂದು ದೊಡ್ಡ ಅಚ್ಚರಿ ವಿಷಯವಿದೆ ಅದು ಏನೆಂಬುದನ್ನು ತಿಳಿದುಕೊಳ್ಳೋಣ.
ಬಿಪಿಎಲ್ ಎಪಿಎಲ್ ಮತ್ತು ಅಂತ್ಯೋದಯ ರೇಶನ್ ಕಾರ್ಡ್ ಇವುಗಳಲ್ಲಿ ಹೆಸರು ಇರುವ ಸದಸ್ಯರು ಆಗಸ್ಟ್ ಹತ್ತರ ಒಳಗಾಗಿ ಆಧಾರ್ ದೃಢೀಕರಣ ಮಾಡಿಸಿಕೊಳ್ಳಬೇಕು ಅಂದರೆ ಇ ಕೆವೈಸಿ ಅಂದರೆ ಬೆರಳಚ್ಚು ಮಾಡಿಸಿಕೊಳ್ಳಬೇಕು ಇಕೆವೈಸಿ ಮಾಡಿಸಿಕೊಳ್ಳದಿದ್ದರೆ ಆಗಸ್ಟ್ ನಿಂದ ಪಡಿತರ ಕೊಡದಿರಲು ಮತ್ತು ಅಂತಹ ರೇಶನ್ ಕಾರ್ಡ್ ನ್ನು ರದ್ದುಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹಾಗಾದರೆ ಈ ಇಕೆವೈಸಿ ಯನ್ನು ಎಲ್ಲಿ ಮಾಡಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ. ಪಡಿತರಚೀಟಿಯಲ್ಲಿರುವ ಎಲ್ಲ ಸದಸ್ಯರು ಈ ಇಕೆವೈಸಿಯನ್ನು ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು ನಿಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇದುವರೆಗೂ ಇಕೆವೈಸಿ ಮಾಡಿಸದೆ ಇರುವ ಪಡೀತರಚಿಟಿದಾರರು ಕುಟುಂಬದ ಸದಸ್ಯರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಲ್ಲಿಗ್ಗೆ ಏಳು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ಉಚಿತವಾಗಿ ಇಕೆವೈಸಿ ಮಾಡಿಸಲು ಆದೇಶವನ್ನು ಹೊರಡಿಸಲಾಗಿದೆ. ಇಕೆವೈಸಿಯನ್ನುಮಾಡಿಸದೆ ಇರುವ ಪಡಿತರಚಿತಟಿದಾರರಿಗೆ ಮುಂದಿನತಿಂಗಳಿಂದ ಪಡಿತರ ಸ್ಥಗಿತಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಚ್ಚರಿಕೆ ಸೂಚನೆನೀಡಿದೆ.
ನೋಡಿದಿರಲ್ಲ ಸ್ನೇಹಿತರೆ ಇನ್ನು ಯಾರು ಯಾರು ಇಕೆವೈಸಿ ಮಾಡಿಕೊಳ್ಳದಿದ್ದರೆ ತಕ್ಷಣ ನಿಮ್ಮ ನ್ಯಾಯಬೆಲೆ ಅಂಗಡಿಗೆ ಹೋಗಿ ಇಕೆವೈಸಿಯನ್ನು ಮಾಡಿಸಿಕೊಂಡು ನಿಮ್ಮ ಪಡಿತರಚಿಟಿಗೆ ಬರುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಈ ಮಾಹಿತಿಯನ್ನು ನಿಮ್ಮ ಅಕ್ಕ ಪಕ್ಕದವರಿಗು ತಿಳಿಸಿರಿ.