WhatsApp Group Join Now
Telegram Group Join Now

ಕನ್ನಡ ಚಿತ್ರರಂಗದ ಕನಸಿನ ರಾಣಿ ನಟಿ ಮಾಲಾಶ್ರೀ ಅವರ ಪತಿ ನಿರ್ಮಾಪಕ ರಾಮು ಅವರು ಇಹಲೋಕ ತ್ಯಜಿಸಿದ್ದಾರೆ. ರಾಮು ಅವರು ತಮ್ಮ ಪ್ರೀತಿಯ ಪತ್ನಿ ಹಾಗೂ ಇಬ್ಬರು ಮುದ್ದಾದ ಮಕ್ಕಳನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ, ಅಷ್ಟೆ ಅಲ್ಲದೆ ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕರನ್ನು ಕಳೆದುಕೊಂಡ ದುಃಖ ಎಲ್ಲರಿಗೂ ಇದೆ. ಇತ್ತೀಚೆಗೆ ರಾಮು ಅವರಿಗೆ ಪತ್ನಿ ಮಾಲಾಶ್ರೀ ಅವರು ಕೊನೆಯದಾಗಿ ಹೇಳಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಾಲಾಶ್ರೀ ಅವರು ಕೊನೆಯದಾಗಿ ಹೇಳಿರುವ ಮನಕಲಕುವ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಕೆಲವು ದಿನಗಳಿಂದ ರಾಮು ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತು ನಂತರ ಅವರು ಕೊರೋನ ಟೆಸ್ಟ್ ಮಾಡಿಸಿದಾಗ ಕೊರೋನ ಪೊಸಿಟಿವ್ ರಿಪೋರ್ಟ್ ಬಂದಿತು. ನಂತರ ಎಮ್ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾಮು ಅವರು ಕೊನೆಯುಸಿರೆಳೆದಿದ್ದಾರೆ. ಎರಡು ತಿಂಗಳ ಹಿಂದೆ ಫೆಬ್ರುವರಿ 10 ರಂದು ರಾಮು ಅವರು ತಮ್ಮ ಪತ್ನಿ ಮಾಲಾಶ್ರೀ ಅವರೊಂದಿಗೆ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ ಆ ಸಮಯದಲ್ಲಿ ಮಾಲಾಶ್ರೀ ಅವರು ತಮ್ಮ ಪತಿ ರಾಮು ಅವರ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅವರು ತಮ್ಮ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಜೊತೆಗೆ ತಮ್ಮ ಕುಟುಂಬದವರೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಜೊತೆಗೆ ಮಾಲಾಶ್ರೀ ಅವರು ರಾಮು ಅವರಿಗೆ ನಮ್ಮ ಜೀವನದ ವಿಶೇಷವಾದ ಈ ದಿನದಂದು ನಾನು ನಿಮಗೆ ತಿಳಿಸಲು ಇಷ್ಟಪಡುವ ವಿಷಯವೇನೆಂದರೆ ನೀವೆ ನನ್ನ ಸರ್ವಸ್ವ, ನಾನು ನನ್ನ ಜೀವನದ ಪ್ರತಿ ಕ್ಷಣ ಬಯಸುವುದು ನಿಮ್ಮನ್ನು ಮಾತ್ರ. ನನ್ನ ಜೊತೆ ಯಾವಾಗಲೂ ಇರುವುದಕ್ಕೆ ನಿಮಗೆ ನಾನು ಧನ್ಯವಾದ ತಿಳಿಸುತ್ತೇನೆ. ನಾನು ನಿಮ್ಮನ್ನು ಅತಿ ಹೆಚ್ಚು ಪ್ರೀತಿಸುತ್ತಿರುವೆ, ನಮ್ಮ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಹೇಳಿದ್ದಾರೆ.

ಮಾಲಾಶ್ರೀ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೋಗಳು ಹಾಗೂ ಅವರ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರ ಫೋಟೊ ಮತ್ತು ಅವರ ಮಾತುಗಳನ್ನು ಕೇಳಿದ ಅಭಿಮಾನಿಗಳ ಕಣ್ಣಲ್ಲಿ ನೀರು ತುಂಬಿಕೊಂಡವು, ಆ ಮಾತುಗಳು ಜನರ ಮನಕಲಕುವಂತೆ ಮಾಡಿದೆ. ಸಾವು ಯಾರಿಗೆ, ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ರಾಮು ಹಾಗೂ ಮಾಲಾಶ್ರೀ ಅವರು ಪ್ರೀತಿಸಿ ಮದುವೆಯಾಗಿದ್ದರು ಬಹಳ ಅನ್ಯೋನ್ಯವಾಗಿ ಜೀವನ ನಡೆಸಿದ್ದಾರೆ ಆದರೆ ವಿಧಿ ಬಹುಬೇಗನೆ, ಸಣ್ಣವಯಸ್ಸಿನಲ್ಲಿ ರಾಮು ಅವರನ್ನು ಈ ಲೋಕವನ್ನು ತ್ಯಜಿಸುವಂತೆ ಮಾಡಿತು. ಅವರ ಅಂತ್ಯಸಂಸ್ಕಾರವನ್ನು ಅವರ ಮಗ ಮಾಡಿದನು. ದೇವರು ಮಾಲಾಶ್ರೀ ಹಾಗೂ ಅವರ ಕುಟುಂಬದವರಿಗೆ ದುಃಖವನ್ನು ತಡೆದುಕೊಳ್ಳಲು ಶಕ್ತಿ ಕರುಣಿಸಲಿ ಎಂದು ಬೇಡಿಕೊಳ್ಳೋಣ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: