ಇಂದಿನ ದಿನಗಳಲ್ಲಿ ಮನೆಯಲ್ಲಿದ್ದು ಜಮೀನಿನಲ್ಲಿ ಕೆಲಸ ಮಾಡುವವರು ಕಡಿಮೆ ಆದ್ದರಿಂದ ಕಾರ್ಮಿಕರ ಕೊರತೆಯ ಸಮಸ್ಯೆ ಕಾಡುತ್ತಿದೆ. ಕಾರ್ಕಳದ ಜೋಕಿಮ್ ಅವರು ಕಾರ್ಮಿಕರ ಕೊರತೆ ಸಮಸ್ಯೆಯನ್ನು ನಿವಾರಿಸಲು ಮನೆಯಲ್ಲಿ ರೈತಮಿತ್ರ ಆಟೋವನ್ನು ತಯಾರಿಸಿದರು. ರೈತಮಿತ್ರ ಆಟೋ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಕೃಷಿ ಕೆಲಸ ಮಾಡಲು ಸಾಕಷ್ಟು ಸಂಖ್ಯೆಯ ಕೆಲಸಗಾರರು ಬೇಕಾಗುತ್ತದೆ ಆದರೆ ಈಗ ಎಲ್ಲ ಕಡೆ ಕೃಷಿ ಕೆಲಸ ಮಾಡಲು ಕೆಲಸಗಾರರ ಕೊರತೆ ರೈತರ ಬಹುದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಕಾರ್ಕಳದ ನಿಟ್ಟೆಯ ಜೋಕಿಂ ಮಿನೇಜಸ್ ಎಂಬ ವ್ಯಕ್ತಿಯೊಬ್ಬರು ಅತಿ ಕಡಿಮೆ ಬೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಸಹಾಯ ಆಗುವಂತೆ ರೈತಮಿತ್ರ ಆಟೋವನ್ನು ತಯಾರಿಸಿದ್ದಾರೆ. ಈ ಆಟೋವನ್ನು ಅವರು ತಯಾರಿಸಲು 12,000ರೂಪಾಯಿ ವೆಚ್ಚ ಮಾಡಿದ್ದಾರೆ. ಮನೆಯ ಕೃಷಿ ಚಟುವಟಿಕೆಗಳನ್ನು ಮಾಡಲು ಆಟೋ ಅವರಿಗೆ ಬಹಳ ಸಹಾಯಕಾರಿಯಾಗಿದೆ.
ಅವರು ತಮ್ಮ ಸುತ್ತಮುತ್ತಲಿನ ಗ್ಯಾರೇಜ್, ಗುಜರಿ ಅಂಗಡಿಗಳಲ್ಲಿ ಸಿಕ್ಕಂತಹ ಬಿಡಿಭಾಗಗಳನ್ನು ಸಂಗ್ರಹಿಸಿ ಅವುಗಳನ್ನು ಜೋಡಿಸಿ ಆಟೋ ತಯಾರಿಸಿದ್ದಾರೆ. ಈ ಆಟೋದಲ್ಲಿ ಕಡಿಮೆ ಜನರನ್ನು ಬಳಸಿಕೊಂಡು ಹೆಚ್ಚು ಸಾಮಾನುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದು. ಆಟೋ ಸಹಾಯದಿಂದ ಮನೆಯಿಂದ ತೋಟಕ್ಕೆ ತೋಟದಿಂದ ಮನೆಗೆ ತೆಂಗಿನಕಾಯಿ, ಅಡಿಕೆ, ಭತ್ತ, ಗೊಬ್ಬರ, ಮಣ್ಣುಗಳನ್ನು ಸಾಗಿಸಲು ಉಪಯೋಗಿಸಬಹುದಾಗಿದೆ. ಈ ಆಟೋವನ್ನು ಬಳಸುವುದರಿಂದ ಕಾರ್ಮಿಕ ಕೊರತೆಯ ಸಮಸ್ಯೆಯನ್ನು ನಿವಾರಿಸಬಹುದು ಎಂದು ಜೋಕಿಮ್ ಅವರು ಹೇಳಿದ್ದಾರೆ.
ರೈತರು ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಅವುಗಳಲ್ಲಿ ಕಾರ್ಮಿಕರ ಸಮಸ್ಯೆ ಕೂಡ ಒಂದು ಪ್ರಮುಖ ಸಮಸ್ಯೆಯಾಗಿದ್ದು ಈ ರೀತಿಯ ಸಂಶೋಧನೆಗಳಿಂದ ರೈತರ ಸಮಸ್ಯೆ ತಕ್ಕಮಟ್ಟಿಗೆ ಸುಧಾರಣೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ರೈತರ ಸಮಸ್ಯೆಯು ನಿವಾರಣೆಯಾದರೆ ಬೆಳೆಯ ಉತ್ಪಾದನೆ ಹೆಚ್ಚಾಗುತ್ತದೆ. ಜೋಕಿಮ್ ಅವರ ಕೆಲಸವನ್ನು ಮೆಚ್ಚಲೆ ಬೇಕಾಗಿದೆ. ಇಂತಹ ಆಟೋವನ್ನು ರೈತರು ಖರೀದಿಸುವುದರಿಂದ ಅನುಕೂಲವಾಗುತ್ತದೆ. ಜೋಕಿಮ್ ಅವರು ಇನ್ನೂ ಹೆಚ್ಚಿನ ಸಂಶೋಧನೆಯನ್ನು ಮಾಡಲಿ ಎಂದು ಆಶಿಸೋಣ.