ನಾವಿಂದು ನಿಮಗೆ ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಎಸ್ ಡಿ ಎ, ಎಫ್ ಡಿ ಎ, ಡ್ರೈವರ್ ಮತ್ತು ಫ್ಯೂನ್ ಹುದ್ದೆಗಳ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಇಲಾಖೆಯಲ್ಲಿ ಸಾವಿರದ ಒಂದು ನೂರಾ ನಲವತ್ತು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಪಿಯುಸಿ ಡಿಗ್ರಿಯನ್ನು ಪಾಸ್ ಮಾಡಿರುವವರು ಅರ್ಜಿಯನ್ನು ಸಲ್ಲಿಸುವುದಕ್ಕೆ ಅವಕಾಶವಿರುತ್ತದೆ. ಈ ಹುದ್ದೆಗಳ ಕುರಿತಂತೆ ಇಲಾಖೆಯವರು ತಿಳಿಸಿರುವ ನೋಟಿಫಿಕೇಶನ್ ನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ಮೊದಲಿಗೆ ಪ್ಯೂನ್ ಹುದ್ದೆಗಳ ಬಗ್ಗೆ ತಿಳಿದುಕೊಳ್ಳೋಣ ಇಲ್ಲಿ ಪ್ಯೂನ್ ವಾಚ್ ಮ್ಯಾನ್ ಐಸ್ ಮಜ್ದೂರ್ ಮತ್ತು ಕ್ಲೀನರ್ ಹುದ್ದೆಗಳು ಇರುತ್ತವೆ. ಇವರಿಗೆ ಹದಿನೇಳು ಸಾವಿರ ಮಾಸಿಕ ವೇತನ ಇರುತ್ತದೆ ಈ ವಿಭಾಗದಲ್ಲಿ ನೂರಾ ಎಂಬತ್ತೆಳು ಹುದ್ದೆಗಳು ಖಾಲಿ ಇರುತ್ತವೆ. ಈ ಒಂದು ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸಾಗಿರಬೇಕು ಮತ್ತು ಕನ್ನಡವನ್ನು ಸ್ಪಷ್ಟವಾಗಿ ಓದುವುದಕ್ಕೆ ಮತ್ತು ಮಾತನಾಡುವುದಕ್ಕೆ ಬರಬೇಕು. ಮುಂದಿನ ಹುದ್ದೆ ಕುಕ್ ಅಡುಗೆ ಮಾಡುವವರು ಇವರಿಗೆ ಹದಿನೆಂಟು ಸಾವಿರ ವೇತನ ಇರುತ್ತದೆ. ಇಲ್ಲಿ ಎರಡು ಹುದ್ದೆಗಳು ಇರುತ್ತವೆ ಈ ಒಂದು ಹುದ್ದೆಗೂ ಕೂಡ ಹತ್ತನೇ ತರಗತಿ ಪಾಸಾಗಿರಬೇಕು ಮತ್ತು ಕನ್ನಡವನ್ನು ಸ್ಪಷ್ಟವಾಗಿ ಓದುವುದಕ್ಕೆ ಮಾತನಾಡುವುದಕ್ಕೆ ಬರಬೇಕು. ಜೊತೆಗೆ ಮಾಂಸಾಹಾರ ಅಡುಗೆಯನ್ನು ಕೂಡ ಮಾಡುವುದಕ್ಕೆ ಬರಬೇಕು.
ಮುಂದಿನ ಹುದ್ದೆ ಫಿಶರೀಸ್ ಫೀಲ್ಡ್ ಮ್ಯಾನ್ ಈ ವಿಭಾಗದಲ್ಲಿ ನಾಲ್ಕು ನೂರಾ ಎಪ್ಪತ್ತೈದು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗೂ ಕೂಡ ಹತ್ತನೇ ತರಗತಿ ಪಾಸಾಗಿರಬೇಕು ಮತ್ತು ಕನ್ನಡವನ್ನು ಓದುವುದಕ್ಕೆ ಮಾತನಾಡುವುದಕ್ಕೆ ಬರಬೇಕು. ಈ ಹುದ್ದೆಗೆ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆ ಮಾಡುವುದರ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ. ಇವರಿಗೆ ಹದಿನೆಂಟು ಸಾವಿರದ ಆರನೂರು ಬೇಸಿಕ್ ಸಂಬಳ ಇರುತ್ತದೆ. ಮುಂದಿನ ಹುದ್ದೆ ಡ್ರೈವರ್ ಹುದ್ದೆ ಇಲ್ಲಿ ಒಟ್ಟು ನಲವತ್ತೊಂದು ಹುದ್ದೆಗಳು ಖಾಲಿ ಇವೆ ಇಲ್ಲಿ ಅರ್ಧದಷ್ಟು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಾರೆ ಅಂದರೆ ಇಪ್ಪತ್ತು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಹುದ್ದೆಗೆ ಎಸೆಸೆಲ್ಸಿ ಪಾಸಾಗಿರಬೇಕು ಜೊತೆಗೆ ಡ್ರೈವಿಂಗ್ ಲೈಸೆನ್ಸ್ ಅನ್ನ ಹೊಂದಿರಬೇಕು ಇವರಿಗೆ ವೇತನ ಇಪ್ಪತ್ತೊಂದು ಸಾವಿರದ ನಾಲ್ಕುನೂರು ರೂಪಾಯಿ ಇರುತ್ತದೆ.
ಮುಂದಿನ ಹುದ್ದೆ ಡಾಟಾ ಎಂಟ್ರಿ ಅಸಿಸ್ಟೆಂಟ್ ಇಲ್ಲಿ ನಲವತ್ತೆಂಟು ಹುದ್ದೆಗಳು ಖಾಲಿ ಇವೆ ನಲವತ್ತೆಂಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗೆ ಪಿಯುಸಿ ನಂತರದಲ್ಲಿ ಸ್ಟೆನೋಗ್ರಾಫರ್ ಅಥವಾ ಟೈಪಿಸ್ಟ್ ಮಾಡಿರುವ ಸರ್ಟಿಫಿಕೇಟ್ ಬೇಕಾಗುತ್ತದೆ. ಇವರಿಗೆ ಇಪ್ಪತ್ತೊಂದು ಸಾವಿರದ ನಾಲ್ಕು ನೂರು ರೂಪಾಯಿ ವೇತನ ಇರುತ್ತದೆ. ಮುಂದಿನ ಹುದ್ದೆ ದ್ವಿತೀಯ ದರ್ಜೆ ಸಹಾಯಕರು ಇಲ್ಲಿ ತೊಂಬತ್ಮುರು ಹುದ್ದೆಗಳಿದ್ದು ಪಿಯುಸಿ ಪಾಸಾಗಿರಬೇಕು ಇವರಿಗೆ ಬೇಸಿಕ್ ವೇತನ ಇಪ್ಪತ್ತೊಂದು ಸಾವಿರದ ನಾಲ್ಕು ನೂರು ರೂಪಾಯಿಂದ ಇರುತ್ತದೆ. ಮುಂದಿನದಾಗಿ ಪ್ರಥಮ ದರ್ಜೆ ಸಹಾಯಕ ಹುದ್ದೆ ಈ ವಿಭಾಗದಲ್ಲಿ ತೊಂಬತೈದು ಹುದ್ದೆಗಳು ಖಾಲಿ ಇದ್ದು ಇಲ್ಲಿ ಶೇಕಡಾ ನಲವತ್ತರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಂದರೆ ಮೂವತ್ತೈದರಿಂದ ನಲವತ್ತು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ಒಂದು ಹುದ್ದೆಗೆ ಪದವಿ ಪಡೆದಿರುವವರು ಅರ್ಜಿಯನ್ನು ಸಲ್ಲಿಸುವುದಕ್ಕೆ ಅವಕಾಶ ಇರುತ್ತದೆ ಅವರಿಗೆ ಬೇಸಿಕ್ ವೇತನ ಇಪ್ಪತ್ತೇಳು ಸಾವಿರದ ಆರುನೂರು ರೂಪಾಯಿಂದ ಇರುತ್ತದೆ. ಮುಂದಿನ ಹುದ್ದೆ ರೆಫ್ರಿಜರೇಷನ್ ಮೆಕ್ಯಾನಿಕ್ ಅಥವಾ ಪಂಪ್ ಆಪರೇಟರ್ ಹುದ್ದೆ ಇರುತ್ತದೆ ಇಲ್ಲಿ ಆರು ಹುದ್ದೆಗಳು ಖಾಲಿ ಇದ್ದು ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕ್ ಅಥವಾ ರೆಫ್ರಿಜರೇಷನ್ ಅಥವಾ ಏರ್ ಕಂಡೀಷನ್ ವಿಭಾಗದಲ್ಲಿ ಡಿಪ್ಲೊಮಾ ಮಾಡಿರುವವರು ಅರ್ಜಿಯನ್ನು ಸಲ್ಲಿಸುವುದಕ್ಕೆ ಅರ್ಹರಾಗಿರುತ್ತಾರೆ. ಇವರಿಗೆ ಬೇಸಿಕ್ ವೇತನ ಮೂವತ್ಮೂರು ಸಾವಿರ ರೂಪಾಯಿ ಇರುತ್ತದೆ. ಮುಂದಿನ ಹುದ್ದೆ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಫಿಶರೀಸ್ ಇದರಲ್ಲಿ ನೂರಾ ಎಂಬ ತ್ತೆಂಟು ಹುದ್ದೆಗಳು ಖಾಲಿ ಇದ್ದು ಇಲ್ಲಿ ಶೇಕಡ ತೊಂಬತ್ತರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತದೆ.
ಈ ಒಂದು ಹುದ್ದೆಗೆ ಬಿ ಎಫ್ ಎಸ್ ಸಿ ಪದವಿಯನ್ನು ಪಡೆದಿರುವವರು ಅರ್ಜಿಯನ್ನು ಸಲ್ಲಿಸುವುದಕ್ಕೆ ಅರ್ಹರಾಗುತ್ತಾರೆ. ಇವರಿಗೆ ನಲವತ್ತು ಸಾವಿರ ಬೇಸಿಕ್ ವೇತನ ಇರುತ್ತದೆ ಇದಿಷ್ಟು ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಗೆಜೆಟೆಡ್ ನೋಟಿಫಿಕೇಶನ್ ನಲ್ಲಿ ಇರುವಂತಹ ಮಾಹಿತಿಯಾಗಿದೆ ಇನ್ನು ಎರಡು ಮೂರು ತಿಂಗಳುಗಳಲ್ಲಿ ಇದರ ಕುರಿತಾದ ನೋಟಿಫಿಕೇಶನ್ ಹೊರಡಿಸುವ ಸಾಧ್ಯತೆ ಇರುತ್ತದೆ ಹಾಗಾಗಿ ನೀವು ಮುಂದಿನ ದಿನಗಳಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ತಯಾರಿಯನ್ನು ಮಾಡಿಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.