ಮಿಥುನ ರಾಶಿ ಯುಗಾದಿ ವರ್ಷ ಭವಿಷ್ಯ

0

ಮಿಥುನ ರಾಶಿ ಯುಗಾದಿ ವರ್ಷ ಭವಿಷ್ಯ 2023-24 ಶ್ರೀ ಶೋಭಕೃತ ನಾಮ ಸಂವತ್ಸರದ ಯುಗಾದಿ ಹಬ್ಬ ಮಿಥುನ ರಾಶಿಯವರಿಗೆ ಯಾವ ರೀತಿ ಇರಲಿದೆ ಎಂಬುದನ್ನ ಈ ಲೇಖನದಲ್ಲಿ ತಿಳಿಯೋಣ

ಮಿಥುನ ರಾಶಿಯವರಿಗೆ ಆದಾಯ 2 ಇದ್ದರೆ ವ್ಯಯ 11 ಇರುತ್ತದೆ. ವಿಪರೀತ ಖರ್ಚಾಗುವಂತಹ ವರ್ಷ ಎಂದೇ ಹೇಳಬಹುದು ಆರೋಗ್ಯ ಸೊನ್ನೆ ಅನಾರೋಗ್ಯ 6 ವಿಪರೀತ ಅನಾರೋಗ್ಯ ಕಾಡುತ್ತದೆ. ಒಂದಷ್ಟು ಕಷ್ಟಗಳು ಉಂಟಾಗುವಂತಹ ಸಾಧ್ಯತೆಗಳು ಈ ಒಂದು ವರ್ಷ ಉಂಟಾಗುತ್ತದೆ ಸುಖ 6 ಇದ್ದರೆ ದುಃಖ 3 ಇರುತ್ತದೆ. ಆದಾಯದಲ್ಲಿ ನಿಮಗೆ ಉತ್ತಮವಾಗಿ ಇರುವುದಿಲ್ಲ.

22-4-2023ಕ್ಕೆ ಗುರು ಮೇಷ ರಾಶಿಗೆ ಪ್ರದೇಶ ಮಾಡುವುದರ ಮೂಲಕ ನಿಮಗೆ ತುಂಬಾ ದೊಡ್ಡ ಮಟ್ಟದ ಬದಲಾವಣೆಯನ್ನು ಕೊಡುತ್ತದೆ ಏಪ್ರಿಲ್ 22 ರಿಂದ ಅಕ್ಟೋಬರ್ 30ನೇ ತಾರೀಖಿನವರೆಗೂ ಅತ್ಯದ್ಭುತವಾದಂತಹ ಯೋಗ ಇಲ್ಲಿ ಕೂಡಿ ಬರಲಿದೆ. ಜನವರಿ 17ನೇ ತಾರೀಕು ಮಿಥುನ ರಾಶಿಯವರಿಗೆ ಅಷ್ಟಮ್ಮ ಶನಿ ಪೀಡೆಯು ಕಳಿದಿದೆ. ಗುರು ರಾಹು ಚಂಡಾಳ ಯೋಗದಿಂದ ನಿಮಗೆ ಹಣದ ಆಗಮನಗಳು ಉಂಟಾಗುತ್ತದೆ.

ಸರ್ವತ್ರ ವಿಜಯ ಅಂದರೆ ತುಂಬಾ ದೊಡ್ಡ ಮಟ್ಟದ ವಿಜಯಗಳು ಪ್ರಾಪ್ತಿಯಾಗುತ್ತದೆ ದೊಡ್ಡ ಮಟ್ಟದ ಯಶಸ್ಸು ಪ್ರಾಪ್ತಿಯಾಗುತ್ತದೆ. ಶತ್ರುಗಳೆಲ್ಲ ನಿಮಗೆ ಮಿತ್ರರಾಗುವಂತಹ ಸಾಧ್ಯತೆ ಇದೆ ತುಂಬಾ ಶುಭಫಲಗಳನ್ನು ನೀವು ಅನುಭವಿಸುತ್ತೀರಿ ಹೊರದೇಶಗಳಿಗೆ ಪ್ರಯಾಣವನ್ನು ಬೆಳೆಸುತ್ತೀರಿ ತೇಜಸ್ಸು ವೃದ್ಧಿಯಾಗುತ್ತದೆ, ಹಣ ವೃದ್ಧಿಯಾಗುತ್ತದೆ ಆದಾಯ ವೃದ್ಧಿಯಾಗುತ್ತದೆ ಎಲ್ಲವೂ ಸಹ ಚೆನ್ನಾಗಿ ಆಗುತ್ತದೆ.

ಇದೇ ರೀತಿಯಾಗಿ ಗಮನಿಸಬೇಕಾದ ಅಂಶ ಎಂದರೆ 2023 ಜನವರಿ 17ನೇ ತಾರೀಖಿನಿಂದ ನಿಮಗೆ ಅಷ್ಟಮ ಶನಿಯ ಪೀಡೆಯು ನಿವೃತ್ತಿಯಾಗಿದೆ ತುಂಬಾ ಶುಭವಲ್ಲದೆ ಇದ್ದರೂ ಸಹ ಒಂದಷ್ಟು ಶುಭ ಅಂದರೆ ಕೃಷಿಕರಿಗೆ, ಹೈನುಗಾರಿಕೆ, ಪಶು ಸಂಗೋಪನೆ ಮಾಡುವವರಿಗೆ ಒಂದಷ್ಟು ಶುಭಫಲಗಳನ್ನು ಕೊಡುತ್ತದೆ ಶನಿಯ ಪೀಡೆಯು ಕಡಿಮೆಯಾಗಿ ಶನಿಯ ಶುಭ ಪರಿವರ್ತನೆಯನ್ನು ನೀವು ಅನುಭವಿಸುತ್ತೀರಿ.

ಅಕ್ಟೋಬರ್ 30 ನೇ ತಾರೀಖಿನವರೆಗೂ ಸಹ ಮಿಥುನ ರಾಶಿಯವರಿಗೆ ರಾಹು ಸಂಚಾರ ಮಾಡುತ್ತಾನೆ ಅದಾದ ನಂತರದಲ್ಲಿ 10ನೇ ಮನೆಗೆ ಮೀನ ರಾಶಿಗೆ ಪ್ರವೇಶ ಮಾಡಿತ್ತಾನೆ. ಮೇ ಇಂದ ಆಗಸ್ಟ್ ವರೆಗೂ ಆರು ತಿಂಗಳುಗಳ ಕಾಲ ತುಂಬಾ ಶುಭ ಫಲಗಳನ್ನು ಕೊಡುತ್ತದೆ. ರಾಹು ಮತ್ತು ಗುರು ನಿಮಗೆ ಈ ಒಂದು ಸಮಯದಲ್ಲಿ ಅತ್ಯದ್ಭುತವಾದಂತಹ ಫಲಗಳನ್ನು ಕೊಡುತ್ತಾರೆ. ಕೇತು ನಿಮ್ಮನ್ನು ಸ್ವಲ್ಪ ಕೆಡಿಸಲು ಪ್ರಯತ್ನ ಪಟ್ಟರು ಸಹ ರಾಹು ನಿಮ್ಮನ್ನು ಕಾಪಾಡುತ್ತಾನೆ.

ಕೇತುವಿನಿಂದ ಒಂದು ಕೋರ್ಟ್, ಕಚೇರಿ ಕೆಲಸಗಳಿದ್ದರೆ ನಿಧಾನವಾಗುತ್ತದೆ ಸರ್ಕಾರಿ ಕೆಲಸಗಳಿಗೆ ಸಂಬಂಧಪಟ್ಟ ಹಾಗೆ ಹಿಂದೆಟು ಆಗಬಹುದು. ಅತ್ಯದ್ಭುತ ವಾದಂತಹ ಜೀವನದ ಸಂಗಾತಿಯನ್ನು ಪಡೆದುಕೊಳ್ಳುವ ವರ್ಷ ಇದಾಗಿರುತ್ತದೆ ಗುರುವಿನ ಸಂಪೂರ್ಣ ಅನುಗ್ರಹವು ನಿಮ್ಮ ಮೇಲೆ ಇರುವುದರಿಂದ ಪ್ರೇಮ ವಿವಾಹಕ್ಕೆ ಯಾವುದೇ ರೀತಿಯಾದಂತಹ ಅಡ್ಡಿಯಾಗುವುದಿಲ್ಲ ಪ್ರೀತಿಸಿ ಮದುವೆ ಆಗುವವರಿಗೆ ಇದು ಉತ್ತಮ ಸಮಯ ಎಂದು ಹೇಳಬಹುದು.

Leave A Reply

Your email address will not be published.

error: Content is protected !!
Footer code: