ಮಾತು ಎನ್ನುವುದು ಬೆಳ್ಳಿ ಮತ್ತು ಮೌನ ಎನ್ನುವುದು ಬಂಗಾರ ಎಂಬ ಗಾಡೆಮಾತು ಇದೆ. ಕೆಲವೊಂದು ಸಂದರ್ಭಗಳಲ್ಲಿ ಮಾತನಾಡಿದರೆ ಮಾತ್ರ ಬೆಲೆ ಇರುತ್ತದೆ. ಹಾಗೆಯೇ ಇನ್ನೂ ಕೆಲವು ಸಂದರ್ಭಗಳಲ್ಲಿ ಮೌನವಾಗಿದ್ದರೆ ಮಾತ್ರ ಬೆಲೆ ಇರುತ್ತದೆ. ಸಮಯಕ್ಕೆ ತಕ್ಕ ಹಾಗೆ ಮಾತು ಮತ್ತು ಮೌನವನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಆಚಾರ್ಯ ಚಾಣಕ್ಯ ಅವರು ಮೌನದ ಬಗ್ಗೆ ಒಂದಷ್ಟು ಮಾತುಗಳನ್ನು ಆಡಿದ್ದಾರೆ. ಆದ್ದರಿಂದ ನಾವು ಇಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮನಸ್ಸಿನ ಭಾವನೆಗಳನ್ನು ಮಾತಿನಲ್ಲಿ ವ್ಯಕ್ತಪಡಿಸಲಾಗುತ್ತದೆ. ಸೂಕ್ತ ವಿಷಯಗಳನ್ನು ತಿಳಿಯುವಾಗ ಅಂದರೆ ಮುಖ್ಯವಾದ ವಿಷಯಗಳನ್ನು ಯಾರಾದರೂ ಹೇಳುವಾಗ ಮೌನದಿಂದ ಗಮನವಿಟ್ಟು ಕೇಳಬೇಕು. ತಿಳಿಯದ ವಿಷಯವನ್ನು ತಿಳಿದಂತೆ ಮಾತನಾಡಬಾರದು. ಆದ್ದರಿಂದ ಅಂತಹ ಸಂದರ್ಭದಲ್ಲಿ ಮೌನವಾಗಿ ಇರುವುದು ಒಳಿತು. ಹಾಗೆಯೇ ಬೇರೆಯವರಿಗೆ ನೋವನ್ನುಂಟು ಮಾಡುವ ಮಾತುಗಳನ್ನು ಆಡುವ ಬದಲು ಮಾತನಾಡದೇ ಮೌನವಾಗಿ ಇರುವುದು ಒಳ್ಳೆಯದು. ಆಡುವ ಮಾತಿನಲ್ಲಿ ದಯೆ, ಪ್ರೀತಿ, ಕರುಣೆ ಇರಬೇಕು.
ಆಡಿದ ಮಾತುಗಳು ಬೇರೆಯವರಿಗೆ ನೋವು ಮಾಡುವ ಹಾಗೆ ಇರಬಾರದು. ಮಾತನಾಡಿ ನೋವು ಮಾಡುವುದಕ್ಕಿಂತ ಮೌನವಾಗಿ ಇರಬೇಕು. ಬೇರೆಯವರು ಏನನ್ನಾದರೂ ಹೇಳುವಾಗ ಸುಮ್ಮನೆ ಕೇಳಬೇಕು. ನಮ್ಮದೇ ಆದ ರೀತಿಯಲ್ಲಿ ಮಾತನಾಡುತ್ತಾ ಹೋಗಬಾರದು. ಹಾಗೆಯೇ ಗುಂಪಿನಲ್ಲಿ ಎಲ್ಲರ ಜೊತೆ ಮಾತನಾಡುವಾಗ ಸ್ವಲ್ಪ ಯೋಚಿಸಿ ಮಾತನಾಡಬೇಕು. ಏಕೆಂದರೆ ಕೆಲವರಿಗೆ ನೋವಾಗುವ ಸಾಧ್ಯತೆ ಇರುತ್ತದೆ. ಸುಳ್ಳು ಹೇಳುವ ಸಂದರ್ಭದಲ್ಲಿ ಸುಮ್ಮನಿರುವುದು ಒಳ್ಳೆಯದು.
ಏಕೆಂದರೆ ಸುಳ್ಳು ಬಿಸಿ ಕೆಂಡ ಇದ್ದಂತೆ ಇದನ್ನು ಯಾವುದೇ ಕಾರಣಕ್ಕೂ ಮುಚ್ಚಿಡಲು ಸಾಧ್ಯವಿಲ್ಲ. ಸತ್ಯದ ಬೆಳಕು ಒಂದಲ್ಲಾ ಒಂದು ದಿನ ಹೊರ ಬೀಳುತ್ತದೆ. ಮಾತುಗಳಿಂದ ಸ್ನೇಹ ಹಾಳಾಗುತ್ತದೆ ಎಂದಾದಾಗ ಮೌನವಾಗಿ ಇರುವುದು ಒಳ್ಳೆಯದು. ಏಕೆಂದರೆ ಮಾತಿನಿಂದ ಎಷ್ಟೋ ವರ್ಷಗಳ ಸ್ನೇಹಗಳು ಮುರಿದು ಹೋಗಿವೆ. ಹಾಗೆಯೇ ಪ್ರತಿಯೊಂದು ಸಂಬಂಧಗಳು ಅವಅವರ ನಂಬಿಕೆ ಮತ್ತು ವಿಶ್ವಾಸದಿಂದ ದೀರ್ಘಾವಧಿಯನಿರ್ಧಾರವನ್ನು ನಿರ್ಧರಿಸುತ್ತದೆ. ಆದ್ದರಿಂದ ಮೌನವಾಗಿತ್ತು ಕೊನೆವರೆಗೆ ಸಂಬಂಧ ಉಳಿಸಿಕೊಂಡು ಹೋಗುವುದು ಒಳಿತು.