ನಾವಿಂದು ನಿಮಗೆ ಗ್ರೆಚನ್ ರುಬಿನ್ ಅವರು ಬರೆದಿರುವಂತಹ ದ ಫೋರ್ ಟೆಂಡೆನ್ಸಿಸ್ ಪುಸ್ತಕದ ಸಾರಾಂಶವನ್ನು ತಿಳಿಸಿಕೊಡುತ್ತಿದ್ದೇವೆ. ಈ ಪುಸ್ತಕದ ಬರಹಗಾರರ ಪ್ರಕಾರ ಮನುಷ್ಯರಲ್ಲಿ ನಾಲ್ಕು ರೀತಿಯ ಪ್ರವೃತ್ತಿಗಳಿರುತ್ತವೆ. ಪ್ರವೃತ್ತಿ ಎಂದರೆ ಯಾವುದೇ ವ್ಯಕ್ತಿಯಲ್ಲಿನ ನಡವಳಿಕೆ ವ್ಯಕ್ತಿತ್ವ ಕಾರ್ಯವೈಕರಿ ಮತ್ತು ಮನಸ್ಥಿತಿ. ಈ ಪ್ರವೃತ್ತಿಗಳಲ್ಲಿ ಯಾವುದಾದರೂ ಒಂದು ಪ್ರವೃತ್ತಿ ನಿಮ್ಮಲ್ಲಿರಬಹುದು ಅಥವಾ ನಿಮ್ಮ ಸ್ನೇಹಿತರ ಬಳಿ ಇರಬಹುದು
ಈ ಪ್ರವೃತ್ತಿಗಳನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡರೆ ಯಾವುದೇ ವ್ಯಕ್ತಿಯ ನಡುವಳಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದು. ಅವರು ಯಾವ ರೀತಿಯ ವ್ಯಕ್ತಿ ಅವರಿಂದ ಯಾವ ರೀತಿಯ ಕೆಲಸವನ್ನು ತೆಗೆದುಕೊಳ್ಳಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ಹಾಗಾಗಿ ಆ ನಾಲ್ಕು ಪ್ರವೃತ್ತಿ ಗಳೆಂದರೆ ಎತ್ತಿ ಹಿಡಿಯುವವರು ಪ್ರಶ್ನಿಸುವವರು ಬಾಧ್ಯಸ್ಥರು ಮತ್ತು ಬಂಡಾಯಗಾರರು. ಈ ನಾಲ್ಕು ಪ್ರವೃತ್ತಿಗಳು ರಚನೆ ಯಾಗುವುದಕ್ಕೆ ಎರಡು ಪ್ರಮುಖ ಅಂಶಗಳು ಇರುತ್ತವೆ ಅವುಗಳ ಆಧಾರದ ಮೇಲೆ ಪ್ರವೃತ್ತಿಗಳು ಪ್ರಾರಂಭವಾಗುತ್ತವೆ.
ಮೊದಲು ಆ ಎರಡು ಅಂಶಗಳನ್ನು ತಿಳಿದುಕೊಳ್ಳಬೇಕು ಮೊದಲನೆಯದು ಬಾಹ್ಯ ನಿರೀಕ್ಷೆ ಜನರಿಂದ ನಿರೀಕ್ಷೆ ಮಾಡುವುದು. ಅಂದರೆ ನೀವು ಕೆಲಸ ಮಾಡುತ್ತಿರುವಲ್ಲಿನ ಮಾಲೀಕರು ನಿಮಗೆ ಈ ರೀತಿಯಾಗಿ ಕೆಲಸ ಮಾಡು ಎಂದು ಹೇಳುವಂತದ್ದು ನಿಮ್ಮ ಸ್ನೇಹಿತ ಬಯಸುವುದು ನೀವು ಆತನ ಜೊತೆ ಎಲ್ಲಿಗಾದರೂ ಹೋಗಬೇಕು ಎಂದು ಅಥವಾ ನಿಮ್ಮ ತಾಯಿ ಮಾರುಕಟ್ಟೆಗೆ ಹೋಗಿ ತರಕಾರಿಯನ್ನು ತೆಗೆದುಕೊಂಡು ಬಾ ಎಂದು ಹೇಳುವುದು ಈ ರೀತಿ ಇತರರು ನಿಮ್ಮಿಂದ ಕೆಲಸವನ್ನು ಮಾಡಿಸಿಕೊಳ್ಳುವುದಕ್ಕೆ ಅಥವಾ ಅವರ ಮಾತನ್ನು ಕೇಳುವಂತೆ ನಿರೀಕ್ಷೆ ಮಾಡುವುದು ಬಾಹ್ಯಾ ನಿರೀಕ್ಷೆಯಾಗಿದೆ.
ಎರಡನೆಯದು ಆಂತರಿಕ ನಿರೀಕ್ಷೆ ಇದು ನಿಮ್ಮಲ್ಲಿರುವ ನಿರೀಕ್ಷೆಯಾಗಿದೆ ಅಂದರೆ ನಿಮಗೆ ನೀವೇ ಈ ಕೆಲಸವನ್ನು ಮಾಡಬೇಕು ಎಂದು ನಿರೀಕ್ಷೆ ಮಾಡುವುದು. ಇಲ್ಲಿ ನಿಮಗೆ ಯಾವುದೇ ವ್ಯಕ್ತಿಗಳ ಒತ್ತಡ ಇರುವುದಿಲ್ಲ ನಿಮಗೆ ಇಷ್ಟವಿದ್ದರೆ ಆ ಕೆಲಸವನ್ನು ಮಾಡಬಹುದು ಅಥವಾ ಬಿಡಬಹುದು ಅದು ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಈ ಎರಡು ನಿರೀಕ್ಷೆಗಳ ಮೇಲೆ ರಚನೆಯಾಗುವಂತಹ ಪ್ರವೃತ್ತಿಗಳ ಬಗ್ಗೆ ತಿಳಿದುಕೊಳ್ಳೋಣ.
ಮೊದಲನೆಯದು ಎತ್ತಿಹಿಡಿಯುವವರು ಇವರು ಬಾಹ್ಯ ಮತ್ತು ಆಂತರಿಕ ನಿರೀಕ್ಷೆಯನ್ನು ಹೊಂದಿರುತ್ತಾರೆ ಇವರು ನಿಯಮಗಳನ್ನು ಪಾಲಿಸುತ್ತಾರೆ ಅವರ ಮೇಲಾಧಿಕಾರಿಗಳು ಇಂತಹ ಕೆಲಸವನ್ನು ಮಾಡು ಎಂದು ಸೂಚಿಸಿದರೆ ಏನು ಮರುಮಾತನಾಡದೆ ಅದನ್ನು ಮಾಡಿ ಮುಗಿಸುತ್ತಾರೆ. ಎತ್ತಿಹಿಡಿಯುವವರ ಬಳಿ ಏನೇ ಕೆಲಸವನ್ನ ಮಾಡಿಸಿಕೊಳ್ಳುವುದು ಕೂಡ ತುಂಬಾ ಸುಲಭ ಆದರೆ ನೀವು ಇವರಿಗೆ ಸರಿಯಾಗಿ ತಿಳಿಸಿಹೇಳಬೇಕು
ಅವರು ನಿಮಗೆ ಮರು ಪ್ರಶ್ನೆಯನ್ನು ಕೇಳುವುದಿಲ್ಲ. ಇವರಲ್ಲಿಯೂ ಕೂಡ ನಕಾರಾತ್ಮಕ ಹಾಗೂ ಸಕಾರಾತ್ಮಕ ಗುಣಗಳಿರುತ್ತವೆ. ಸಕಾರಾತ್ಮಕ ಗುಣಗಳ ಬಗ್ಗೆ ನೋಡುವುದಾದರೆ ಇವರು ಭರವಸೆ ಮತ್ತು ನಂಬಿಕಸ್ಥರಾಗಿರುತ್ತಾರೆ ಬೇರೆಯವರು ನನ್ನಿಂದ ಏನನ್ನು ನಿರೀಕ್ಷಿಸುತ್ತಿದ್ದಾರೆ ಅದನ್ನು ನಾನು ಪೂರೈಸಬೇಕು ಎನ್ನುವುದು ಇರುತ್ತದೆ. ಇವರಲ್ಲಿರುವ ನಕಾರಾತ್ಮಕ ಗುಣಗಳೆಂದರೆ ಇವರಿಗೆ ಮಾಡುವ ಕೆಲಸದ ಬಗ್ಗೆ ಸರಿಯಾದ ಮಾಹಿತಿ ಸಿಗದಿದ್ದಾಗ ಪರದಾಡುತ್ತಾರೆ. ಯಾವುದೋ ಒಂದು ನಿಯಮಕ್ಕೆ ಹೊಂದಿಕೊಂಡಿರುತ್ತದೆ ಬದಲಾವಣೆಯಾದಾಗ ಅದಕ್ಕೆ ಹೊಂದಿಕೊಳ್ಳುವುದಕ್ಕೆ ಕಷ್ಟಪಡುತ್ತಾರೆ.
ಎರಡನೆಯದಾಗಿ ಪ್ರಶ್ನೆ ಮಾಡುವವರು ಇವರು ಹೆಸರಿಗೆ ತಕ್ಕಂತೆ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ ಇವರು ತಮ್ಮ ಆಂತರಿಕ ನಿರೀಕ್ಷೆಯನ್ನು ಪೂರ್ಣಗೊಳಿಸುತ್ತಾರೆ. ಅದರ ಬಗ್ಗೆ ಯಾವುದೇ ಪ್ರಶ್ನೆಯನ್ನು ಕೇಳುವುದಿಲ್ಲ ಆದರೆ ಬಾಹ್ಯ ನಿರೀಕ್ಷೆಗಳಿಗೆ ಪ್ರಶ್ನೆಯನ್ನು ಕೇಳುತ್ತಾರೆ ಉದಾಹರಣೆಗೆ ಇವರ ತಾಯಿ ಮಾರುಕಟ್ಟೆಗೆ ಹೋಗಿ ತರಕಾರಿಯನ್ನು ತೆಗೆದುಕೊಂಡು ಬಾ ಎಂದರೆ ಏಕೆ ತರಕಾರಿಯನ್ನು ತೆಗೆದುಕೊಂಡು ಬರಬೇಕು ಎಂದು ಪ್ರಶ್ನೆ ಮಾಡುತ್ತಾರೆ. ಹೀಗೆ ಇವರಿಗೆ ಯಾರಾದರು ಏನಾದರು ಕೆಲಸ ಮಾಡು ಎಂದರೆ ಅದನ್ನು ಏಕೆ ಮಾಡಬೇಕು ಹೇಗೆ ಮಾಡಬೇಕು ಎಂಬ ಪ್ರಶ್ನೆಯನ್ನು ಕೇಳುತ್ತಾರೆ.
ಸ್ನೇಹಿತರೊಂದಿಗೆ ಮಾತನಾಡುವಾಗಲೂ ಕೂಡ ಅದು ಯಾಕೆ ಹಾಗೆ ಇದು ಯಾಕೆ ಹೀಗೆ ಎಂದು ಪ್ರಶ್ನೆ ಮಾಡುತ್ತಾರೆ. ಇಂಥವರಿಂದ ನೀವು ಕೆಲಸವನ್ನು ಮಾಡಿಸಿಕೊಳ್ಳುವಾಗ ಕೆಲಸದ ಬಗ್ಗೆ ಸಂಪೂರ್ಣವಾಗಿ ಅವರಿಗೆ ತಿಳಿ ಹೇಳಬೇಕು. ಇವರಲ್ಲಿರುವ ಸಕಾರಾತ್ಮಕ ಗುಣಗಳ ಬಗ್ಗೆ ಹೇಳುವುದಾದರೆ ಇವರು ಸಮಯಕ್ಕೆ ಬಹಳ ಮಹತ್ವವನ್ನು ಕೊಡುತ್ತಾರೆ ಅವರು ತಮ್ಮ ಕೆಲಸವನ್ನು ಬಹಳ ಶ್ರಮವಹಿಸಿ ಶ್ರದ್ಧೆಯಿಂದ ಮಾಡುತ್ತಾರೆ.
ಇವರಲ್ಲಿರುವ ನಕಾರಾತ್ಮಕವಾದ ಗುಣಗಳೆಂದರೆ ಇವರು ಪ್ರತಿಯೊಂದು ವಿಷಯವನ್ನು ಪ್ರಶ್ನೆ ಮಾಡುವುದರಿಂದ ಇವರಲ್ಲಿ ಅನಾಲಿಸಿಸ್ ಪ್ಯಾರಲಿಸಿಸ್ ಆಗುತ್ತದೆ ಅಂದರೆ ಕೆಲವು ವಿಷಯಗಳ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಇವರು ಬೇರೆಯವರಿಗೆ ಹೆಚ್ಚು ಪ್ರಶ್ನೆಯನ್ನು ಕೇಳುತ್ತಾರೆ ಆದರೆ ಬೇರೆಯವರು ಇವರಿಗೆ ಪ್ರಶ್ನೆಯನ್ನು ಕೇಳುವುದನ್ನು ಸಹಿಸುವುದಿಲ್ಲ.
ಮೂರನೆಯದಾಗಿ ಬಾಧ್ಯಸ್ಥರು ಇವರು ಆಂತರಿಕ ನಿರೀಕ್ಷೆಗಳನ್ನು ಪೂರ್ಣಗೊಳಿಸುತ್ತಾರೆ ಯಾರಾದರೂ ಏನಾದರೂ ಕೆಲಸವನ್ನು ಹೇಳಿದರೆ ಪ್ರಶ್ನೆ ಮಾಡದೆ ಅದನ್ನು ಪೂರ್ತಿ ಗೊಳಿಸುತ್ತಾರೆ ಆದರೆ ತಮ್ಮ ಆಂತರಿಕ ನಿರೀಕ್ಷೆಗಳನ್ನು ಪೂರ್ಣಗೊಳಿಸಿಕೊಳ್ಳುವುದಿಲ್ಲ ಅಂದರೆ ಅವರ ಆರೋಗ್ಯ ಫಿಟ್ನೆಸ್ ದಿನಚರಿಯ ಕೆಲವು ನಿಯಮಗಳನ್ನು ಸರಿಯಾಗಿ ಪಾಲಿಸುವುದಿಲ್ಲ. ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಇಲ್ಲ. ಆದರೆ ಬೇರೆಯವರ ನಿರ್ದೇಶನವನ್ನು ಅನುಸರಿಸುತ್ತಾರೆ ಸ್ನೇಹಿತರಿಗಾಗಿ ಆಪ್ತರಿಗಾಗಿ ಏನು ಬೇಕಾದರೂ ಮಾಡುತ್ತಾರೆ.
ಇವರಿಗೆ ತಮ್ಮ ಆಂತರಿಕ ನಿರೀಕ್ಷೆಗಳನ್ನು ಪೂರೈಸಿ ಕೊಳ್ಳುವುದಕ್ಕೆ ಬೇರೆಯವರ ಸಹಾಯ ಬೇಕಾಗಿರುತ್ತದೆ. ಇವರಲ್ಲಿರುವ ನಕರತ್ಮಕ ಗುಣಗಳೆಂದರೆ ಇವರನ್ನು ಬೇರೆಯವರು ಹೆಚ್ಚಾಗಿ ಬಳಸಿಕೊಳ್ಳುವುದರಿಂದ ಇವರಿಗೆ ಕಿರಿಕಿರಿ ಉಂಟಾಗುತ್ತದೆ ಕೆಲವೊಮ್ಮೆ ಎಲ್ಲರಿಂದ ದೂರ ಸರಿಯುತ್ತಾರೆ ಸ್ನೇಹಿತರು ಯಾರಾದರೂ ಇವರಿಗೆ ಮೋಸ ನಂಬಿಕೆ ದ್ರೋಹ ಮಾಡಿದರೆ ಹೇಳದೆ ಕೇಳದೆ ಅವರ ಸ್ನೇಹವನ್ನು ಕತ್ತರಿಸಿಕೊಳ್ಳುತ್ತಾರೆ. ಇವರಲ್ಲಿರುವ ಸಕಾರಾತ್ಮಕ ಗುಣಗಳ ಬಗ್ಗೆ ನೋಡುವುದಾದರೆ ಇವರು ತಮ್ಮ ಜೀವನಕ್ಕಿಂತ ಬೇರೆಯವರ ಜೀವನದ ಬಗ್ಗೆ ಹೆಚ್ಚು ಲಕ್ಷ್ಯ ವಹಿಸುತ್ತಾರೆ ಅದೇ ಕಾರಣಕ್ಕೆ ಇವರಿಗೆ ನಂಬಿಕೆದ್ರೋಹವಾದರೆ ಮೊಸವಾದರೆ ಪೂರ್ಣವಾಗಿ ಕುಗ್ಗಿಹೋಗುತ್ತಾರೆ.
ನಾಲ್ಕನೆಯದಾಗಿ ಬಂಡಾಯಗಾರರು ಇವರು ಒಂದು ರೀತಿಯ ಬೇರೆ ರೀತಿಯ ವ್ಯಕ್ತಿಗಳಾಗಿರುತ್ತಾರೆ ಇವರು ಆಂತರಿಕ ಹಾಗೂ ಬಾಹ್ಯ ನಿರೀಕ್ಷೆಗಳ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ ತಮಗೆ ಇಷ್ಟ ಬಂದಂತೆ ಇರುತ್ತಾರೆ ತಮಗಿಷ್ಟವಾದ ಕೆಲಸಗಳನ್ನು ಮಾಡುತ್ತಾರೆ. ಈ ರೀತಿಯ ವ್ಯಕ್ತಿಗಳು ಬೇರೆಯವರ ಕೆಳಗೆ ಕೆಲಸ ಮಾಡುವುದು ತುಂಬಾ ಕಡಿಮೆ ಬೇರೆಯವರ ನಿರ್ದೇಶನಗಳನ್ನು ಅಷ್ಟಾಗಿ ಅನುಸರಿಸುವುದಿಲ್ಲ ತಮಗಿಷ್ಟಬಂದಂತೆ ತಮ್ಮ ಜೀವನವನ್ನು ನಿರ್ವಹಿಸುವ ಧೋರಣೆಯನ್ನು ಹೊಂದಿರುತ್ತಾರೆ.
ಇವರು ತಾವು ಮಾಡುವ ಕೆಲಸದಲ್ಲಿ ಬೇರೆಯವರು ಹಸ್ತಕ್ಷೇಪ ಮಾಡುವುದನ್ನು ಇಷ್ಟಪಡುವುದಿಲ್ಲ ಇವರನ್ನು ನಿಯಂತ್ರಿಸುವುದು ಕೂಡ ತುಂಬಾ ಕಷ್ಟ ಇಂಥ ವ್ಯಕ್ತಿಗಳಿಂದ ಕೆಲಸ ಮಾಡಿಸಿಕೊಳ್ಳಬೇಕು ಎಂದರೆ ಅವರು ಯಾವುದಾದರೂ ಕೆಲಸವನ್ನು ಮಾಡುವಾಗ ಯಾವ ಮಾಹಿತಿಯನ್ನು ಕೇಳುತ್ತಾರೆ ಎಲ್ಲ ಮಾಹಿತಿಯನ್ನು ಒದಗಿಸಬೇಕು ಅದರ ಆಧಾರದ ಮೇಲೆ ಅವರು ತಮ್ಮ ಕೆಲಸವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಈ ಬಂಡಾಯಗಾರರು ತಮ್ಮ ಪ್ರೀತಿ ಪಾತ್ರರಿಗೆ ಇಷ್ಟಪಡುವವರಿಗೆ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ.
ಇವರು ಯಾವುದೇ ರೀತಿಯ ಮುಖವಾಡವನ್ನು ಧರಿಸಿರುವುದಿಲ್ಲ ತಮ್ಮ ವ್ಯಕ್ತಿತ್ವ ಹೇಗಿರುತ್ತದೆ ಅದನ್ನೇ ಪ್ರದರ್ಶನ ಮಾಡುತ್ತಾರೆ ಯಾವುದೇ ನಾಟಕೀಯ ವ್ಯಕ್ತಿತ್ವ ಅವರಲ್ಲಿರುವುದಿಲ್ಲ ಇವರಲ್ಲಿರುವ ಸಕಾರಾತ್ಮಕ ಗುಣಗಳು ಯಾವುದೆಂದರೆ ಇವರು ಯಾರನ್ನು ನಕಲಿಯಾಗಿ ಹೋಗಳುವುದಿಲ್ಲ ಸಮಾಜದಲ್ಲಿ ತಮ್ಮ ಸ್ಥಾನವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎಂಬುದು ಇವರಿಗೆ ತಿಳಿದಿರುತ್ತದೆ ಇವರು ಚಟುವಟಿಕೆಯಿಂದ ಕೂಡಿರುತ್ತಾರೆ ಜನರು ತಮ್ಮ ಬಗ್ಗೆ ಏನು ಮಾತನಾಡುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಇದರಲ್ಲಿರುವ ನಕಾರತ್ಮಕ ಗುಣಗಳು ಯಾವುದು ಎಂದರೆ ಇವರು ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದಕ್ಕೆ ಇಷ್ಟಪಡುವುದಿಲ್ಲ ಇದೇ ಕಾರಣದಿಂದ ಇವರು ಜನರಿಗೆ ತುಂಬಾ ಕಠಿಣವಾಗಿ ಇರುತ್ತಾರೆ ಬಹಳಷ್ಟು ಬಾರಿ ಇವರು ನಿಯಮಗಳನ್ನು ಅನುಸರಿಸುವುದಕ್ಕೆ ಇಷ್ಟಪಡುವುದಿಲ್ಲ. ಈ ರೀತಿಯಾಗಿ ಮನುಷ್ಯನಲ್ಲಿರುವ ನಾಲ್ಕು ಪ್ರವೃತ್ತಿ ಮತ್ತು ಗುಣಗಳಿರುತ್ತವೆ ಇದರಲ್ಲಿ ನಿಮ್ಮ ಪ್ರವೃತ್ತಿ ಯಾವ ರೀತಿಯಾಗಿದೆ ಎಂಬುದನ್ನು ಗುರುತಿಸಿಕೊಳ್ಳಿ ಜೊತೆಗೆ ಅಲ್ಲಿರುವ ನಕಾರಾತ್ಮಕ ಗುಣಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡಿ.