ಭಾರತೀಯ ಜೀವವಿಮಾ ನಿಗಮವು ಭಾರತದಲ್ಲಿನ ಅತ್ಯಂತ ದೊಡ್ಡ ಜೀವವಿಮಾ ಕಂಪನಿ ಆಗಿದೆ. ದೇಶದ ಅತಿ ದೊಡ್ಡ ಹೂಡಿಕೆದಾರನೂ ಆಗಿದೆ. ಅದು ಸಂಪೂರ್ಣವಾಗಿ ಭಾರತ ಸರ್ಕಾರದ ಅಧೀನವಾಗಿದೆ. ಅದು ಭಾರತ ಸರ್ಕಾರದ ವೆಚ್ಚಗಳ ಪೈಕಿ ಸುಮಾರು ಶೇಕಡಾ 28.6ರಷ್ಟು ವೆಚ್ಚಗಳನ್ನು ಒದಗಿಸುತ್ತದೆ. ಅದು 8 ಟ್ರಿಲಿಯನ್ ರೂಪಾಯಿಗಳಷ್ಟು ಬೆಲೆಯ ಸ್ವತ್ತನ್ನು ಹೊಂದಿದೆಯೆಂದು ಅಂದಾಜಿಸಲಾಗಿದೆ. ಭಾರತೀಯ ಜೀವ ವಿಮಾ ನಿಗಮವು ಮುಂಬೈಯಲ್ಲಿ ಕೇಂದ್ರ ಕಾರ್ಯಾಲಯವುಳ್ಳ ಭಾರತೀಯ ಸರ್ಕಾರಿ ಸ್ವಾಮ್ಯದ ವಿಮೆ ಗುಂಪು ಮತ್ತು ಬಂಡವಾಳ ಕಂಪನಿಯಾಗಿದೆ. ಈ ಕಂಪನಿಯಲ್ಲಿ ಅಸೋಸಿಯೇಟ್ಸ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸುತ್ತಿದ್ದಾರೆ. ಆದ್ದರಿಂದ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಭಾರತದ ಸಂಸತ್ತು 1956 ರಲ್ಲಿ ಭಾರತದ ಜೀವ ವಿಮಾ ಆಕ್ಟ್ ನ್ನು ಅಂಗಿಕರಿಸಿ ಖಾಸಗಿ ವಿಮಾ ಉದ್ಯಮವನ್ನು ರಾಷ್ಟ್ರೀಕೃತಗೊಳಿಸಿತು. ಭಾರತದಲ್ಲಿ ಭಾರತೀಯ ಜೀವ ವಿಮಾ ನಿಗಮ ಸ್ಥಾಪಿಸಲಾಯಿತು. 245 ಕ್ಕೂ ಹೆಚ್ಚು ವಿಮಾ ಕಂಪನಿಗಳು ಮತ್ತು ಪ್ರಾವಿಡೆಂಟ್ ಸಂಘಗಳನ್ನು ರಾಷ್ಟ್ರ ಸ್ವಾಮ್ಯದ ಜೀವ ವಿಮಾ ನಿಗಮ ರಚಿಸಲು ವಿಲೀನಗೊಳಿಸಲಾಯಿತು. ಈ ಭಾರತೀಯ ಜೀವ ವಿಮಾ ನಿಗಮವು ವಿವಿಧ ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್ ಪ್ರಕಟಿಸಿದೆ. ಎಲ್ಐಸಿ ಹೌಸ್ ಫೈನಾನ್ಸಿಂಗ್ ಲಿಮಿಟೆಡ್ ನೇಮಕಾತಿಯು ಅಸೋಸಿಯೇಟ್ಸ್ ಹುದ್ದೆಗಳಿಗೆ ಅರ್ಜಿಯನ್ನು ಪಡೆಯುತ್ತಿದ್ದಾರೆ.
ಈ ಹುದ್ದೆಯಲ್ಲಿ ಒಟ್ಟು ಆರು ಅಭ್ಯರ್ಥಿಗಳಿಗಾಗಿ ಅರ್ಜಿಯನ್ನು ಆಹ್ವಾನಿಸುತ್ತಿದ್ದಾರೆ. ಈ ಹುದ್ದೆಯಲ್ಲಿ ಉದ್ಯೋಗ ಮಾಡುವ ಸ್ಥಳವೆಂದರೆ ಬೆಂಗಳೂರು, ದೆಹಲಿ, ಕೊಲ್ಕತ್ತಾ, ಗೋಪಾಲ್, ಮುಂಬೈ ಆಗಿದೆ. ಇದಕ್ಕೆ ಬೇಕಾಗಿರುವ ವಿದ್ಯಾರ್ಹತೆ ಎಂದರೆ ಸೋಶಿಯಲ್ ವರ್ಕ್ ಅಥವಾ ರೂರಲ್ ಡೆವಲಪ್ಮೆಂಟ್ ಸ್ನಾತಕೋತ್ತರ ಪದವಿಯನ್ನು ಶೇಕಡಾ 55 ರಷ್ಟು ಪಡೆದು ಉತ್ತೀರ್ಣರಾದವರು ಆಗಿರಬೇಕಾಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸ ಬಯಸುವವರ ವಯೋಮಿತಿಯು 1-1-2021ಕ್ಕೆ ಇದ್ದಂತೆ 23 ವರ್ಷ ಮೇಲ್ಪಟ್ಟವರಾಗಿರಬೇಕು ಹಾಗೂ ಗರಿಷ್ಠ 30 ವರ್ಷದ ವರೆಗಿನ ವಯೋಮಿತಿ ಯಾಗಿರುತ್ತದೆ.
ಅರ್ಜಿಗೆ ಆಯ್ಕೆ ವಿಧಾನವು ಆನ್ಲೈನ್ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಪ್ರಾಜೆಕ್ಟ್ ಲೈಫ್ ಸೈಕಲ್ ಮ್ಯಾನೇಜ್ಮೆಂಟ್, ಮಾನಿಟರಿಂಗ್ ಮತ್ತು ವ್ಯಾಲ್ಯೂಯೇಷನ್ ಪ್ರಾಜೆಕ್ಟ್, ಸಿಎಸ್ಆರ್ ಫೌಂಡೇಶನ್ ಮತ್ತು ಆರ್ಗನೈಸೇಷನ್ ನಲ್ಲಿ ಕನಿಷ್ಠ 1 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಈ ಅರ್ಜಿಯನ್ನು ಸಲ್ಲಿಸಲು 24-5-2021 ಪ್ರಾರಂಭದ ದಿನಾಂಕವಾಗಿದ್ದು,07-06-2021 ರ ವರೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ.