ಪ್ರತಿಯೊಂದು ಮನುಷ್ಯನ ಜೀವನಕ್ಕೆ ಅವನದೇ ಆದ ದುಡಿಮೆಯು ಅವಶ್ಯವಾಗಿರುತ್ತದೆ. ಅದಕ್ಕಾಗಿ ಜೀವನದಲ್ಲಿ ಅನೇಕ ಅವಕಾಶಗಳು ದೊರಕುತ್ತದೆ. ಈಗಿನ ದಿನಮಾನದಲ್ಲಿ ವ್ಯಕ್ತಿಗಳಿಗೆ ಅನೇಕ ಉದ್ಯೋಗ ಅವಕಾಶಗಳು ಇವೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಹಾಗೂ ವೈಯಕ್ತಿಕ ಉದ್ಯಮಗಳು ಅನೇಕ ಜನರಿಗೆ ಉದ್ಯೋಗವನ್ನು ನೀಡುತ್ತಿದೆ. ಉದ್ಯೋಗಗಳು ವ್ಯಕ್ತಿಯ ಜೀವನವನ್ನು ನಿಲ್ಲಿಸುವಲ್ಲಿ ಮುಖ್ಯಪಾತ್ರವನ್ನು ವಹಿಸುತ್ತದೆ. ಆದ್ದರಿಂದ ನಾವಿಲ್ಲಿ ಬ್ಯಾಂಕ್ ನೋಟ್ ಮುದ್ರಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಈ ಹುದ್ದೆಗಳಿಗೆ ಐಟಿಐ, ಡಿಪ್ಲೋಮಾ, ಡಿಗ್ರಿ ಯಾವುದರಲ್ಲಿ ಒಂದು ಅರ್ಹತೆ ಇದ್ದರೂ ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಬೆಂಗಳೂರಿನಲ್ಲಿಯೇ ಲಿಖಿತ ಪರೀಕ್ಷೆಯ ಸಹ ಇರುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಲು ಜೂನ್ 11 ಕೊನೆಯ ದಿನವಾಗಿರುತ್ತದೆ. ಇದರಲ್ಲಿ ವೆಲ್ಫೇರ್ ಆಫೀಸರ್ ಹುದ್ದೆಯನ್ನು ಕರೆದಿದ್ದಾರೆ. ಇದಕ್ಕೆ ಡಿಗ್ರಿ ಪಾಸ್ ಆಗಿರಬೇಕಾಗುತ್ತದೆ. ಇವರಿಗೆ 21 ಸಾವಿರ ರೂ ಬೇಸಿಕ್ ವೇತನ ಇರುತ್ತದೆ. ಅಂದರೆ 60000ರೂವರೆಗೆ ಹೋಗುತ್ತದೆ. ಇವರಿಗೆ ವಯಸ್ಸಿನ ಮಿತಿ 30ವರ್ಷ ಇರುತ್ತದೆ. ಸುಪ್ರವೈಸರ್ ಇನ್ಫ್ಯಾಕ್ಟ್ ಎನ್ನುವ ಹುದ್ದೆಗೆ ಡಿಪ್ಲೋಮಾ ಮುಗಿದಿರಬೇಕು. ಇವರಿಗೆ 27 ಸಾವಿರ ರೂ ಬೇಸಿಕ್ ಅಂದರೆ 55 ಸಾವಿರ ರೂ ವರೆಗೆ ಗ್ರಾಸ್ ಮೊತ್ತ ದೊರಕುತ್ತದೆ.
ಇನ್ನೊಂದು ಹುದ್ದೆ ಸೂಪರ್ವೈಸರ್ ಇನ್ ಇನ್ಫಾರ್ಮೇಶನ್ ಟೆಕ್ನಾಲಜಿ ಎಂಬ ಹುದ್ದೆಗೆ ಡಿಪ್ಲೋಮಾ ಪಾಸಾಗಿರಬೇಕು. ಇದಕ್ಕೂ 30 ವರ್ಷ ವಯೋಮಿತಿ ಇರುತ್ತದೆ. ಇನ್ನೊಂದು ಜೂನಿಯರ್ ಆಫೀಸ್ ಅಸಿಸ್ಟೆಂಟ್ ಎಂಬ ಹುದ್ದೆಯನ್ನು ಕರೆದಿದ್ದಾರೆ. ಈ ಹುದ್ದೆಯು ಡಿಗ್ರಿ ಪಾಸದವರಿಗೆ ಆಗಿರುತ್ತದೆ.ಇದಕ್ಕೆ 21000ರೂ ಬೇಸಿಕ್ ಇರುತ್ತದೆ. ಗ್ರಾಸ್ ಮೊತ್ತ 40000 ರೂ ಆಗಿರುತ್ತದೆ. ಇದಕ್ಕೆ ಅಪ್ಪರ್ ಏಜ್ ನ ಮಿತಿ 28 ವರ್ಷವಾಗಿರುತ್ತದೆ. ಜೂನಿಯರ್ ಟೆಕ್ನಿಷಿಯನ್ ಇನ್ ಫ್ಯಾಕ್ಟರಿ, ಜೂನಿಯರ್ ಟೆಕ್ನಿಷಿಯನ್ ಎಲೆಕ್ಟ್ರಿಕ್ ಹಾಗೂ ಜೂನಿಯರ್ ಟೆಕ್ನಿಷಿಯನ್ ಇನ್ ಮೆಕ್ಯಾನಿಕಲ್ ಎಂಬ ಹುದ್ದೆಯನ್ನು ಕರೆದಿದ್ದಾರೆ. ಇವು ಐಟಿ ಪೋಸ್ಟ್ ಗಳಾಗಿರುತ್ತವೆ. ಇದಕ್ಕೆ ವಯಸ್ಸಿನ ಮಿತಿ 25 ವರ್ಷವಾಗಿರುತ್ತದೆ.
ಈ ಹುದ್ದೆಗಳಿಗೆ ವೇತನ 18000 ದಿಂದ ಇರುತ್ತದೆ. ಅಂದರೆ 35 ಸಾವಿರದವರೆಗೆ ದೊರಕುತ್ತದೆ. ಇದಕ್ಕೆ ಅಪ್ಲಿಕೇಶನ್ ಹಾಕಲು 12-5-2021 ರಿಂದ ಪ್ರಾರಂಭವಾಗಿದೆ. ಇದರ ಪರೀಕ್ಷೆಯು ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ನಡೆಯುತ್ತದೆ. ಇದರ ಪರೀಕ್ಷೆಯ ಮೊತ್ತ ಜನರಲ್ ಕೆಟಗರಿ ಯವರಿಗೆ 600ರೂ ಇದೆ. ಎಸ್ಸಿ ಎಸ್ಟಿಯವರಿಗೆ 200ರೂ ಇರುತ್ತದೆ. ಇದರ ಎಕ್ಸಾಮ್ ನ ಸಿಲೆಬಸ್ ನೋಡುವುದಾದರೆ ಜನರಲ್ ಅವೇರ್ನೆಸ್ 40 ಮಾರ್ಕ್ಸ್, ಇಂಗ್ಲಿಷ್ ಲ್ಯಾಂಗ್ವೇಜ್ 40 ಮಾರ್ಕ್ಸ್, ಲಾಜಿಕಲ್ ರೀಸನಿಂಗ್ 40 ಮಾರ್ಕ್ಸ್ ಹಾಗೂ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ 40 ಮಾರ್ಕ್ಸ್, 860 ಮಾರ್ಕ್ಸನ ಪರೀಕ್ಷೆ ನಡೆಯುತ್ತದೆ. ಇದಕ್ಕೆ 2 ಗಂಟೆ ಸಮಯ ನಿಗದಿ ಮಾಡಿರುತ್ತಾರೆ. ಈ ಪರೀಕ್ಷೆಯಲ್ಲಿ 55% ಅಂಕವನ್ನು ಪಡೆಯಬೇಕಾಗುತ್ತದೆ. ಹೀಗೆ ಅತಿ ಹೆಚ್ಚು ಸ್ಕೋರ್ ಮಾಡಿ ರಾಂಕಿಂಗ್ ಪಡೆದಲ್ಲಿ ಉದ್ಯೋಗ ದೊರಕುತ್ತದೆ.