ಸೌರಮಂಡಲದಲ್ಲಿರುವ ಗ್ರಹಗಳು, ಅಂತರಿಕ್ಷಯಾನ, ಸ್ಯಾಟಲೈಟ್ ಮೂಲಕ ಭೂಮಿ ಹೇಗೆ ಕಾಣಿಸುತ್ತದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಹಾಗಾದರೆ ಸ್ಯಾಟಲೈಟ್ ಮೂಲಕ ಫೋಟೊ ತೆಗೆದಾಗ ಭೂಮಿ ಯಾವ ಯಾವ ರೀತಿಯಲ್ಲಿ ಕಾಣಿಸುತ್ತದೆ ಹಾಗೂ ಅಂತರಿಕ್ಷಯಾನದ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಒಂದು ಕಾಲದಲ್ಲಿ ನಮ್ಮ ಭೂಮಿ ಫ್ಲಾಟ್ ಆಗಿ ಡಿಸ್ಕ್ ಶೇಪ್ ನಲ್ಲಿ ಇದೆ ಎಂದು ನಂಬಿದ್ದರು ನಂತರ ಭೂಮಿ ರೌಂಡ್ ಆಗಿ ಬಾಲ್ ಶೇಪ್ ನಲ್ಲಿ ಇದೆ ಎಂದು ಹೇಳಿದರು. ವಿಜ್ಞಾನಿಗಳು ಅಂತರಿಕ್ಷಕ್ಕೆ ಅನೇಕ ಸ್ಯಾಟಲೈಟ್ ಗಳನ್ನು ಕಳುಹಿಸಿದ್ದಾರೆ. ಅವು ಭೂಮಿಯ ಬಗ್ಗೆ ಅನೇಕ ವಿಷಯಗಳನ್ನು ತಿಳಿಸುತ್ತವೆ. ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ ನಲ್ಲಿ ಗಗನಯಾನಿಗಳು ಅಂತರಿಕ್ಷ ಸಂಶೋಧನೆ ನಡೆಸುತ್ತಿದ್ದಾರೆ. ಕೆಲವು ಸ್ಯಾಟಲೈಟ್ ಗಳು ಬೇರೆ, ಬೇರೆ ಗ್ರಹಗಳ ಬಗ್ಗೆ ತಿಳಿಸುತ್ತವೆ. ಸ್ಯಾಟಲೈಟ್ ಗಳು ಭೂಮಿಯ ಫೋಟೋಗಳನ್ನು ತೆಗೆದಿವೆ. 1,17,000 ಅಡಿ ಎತ್ತರದಿಂದ ವಿಮಾನಗಳಲ್ಲಿ ಪ್ರಯಾಣ ಮಾಡುವಾಗ ಭೂಮಿ ಹೇಗೆ ಕಾಣಿಸುತ್ತದೆ ಎಂದು ಫೋಟೋಗಳಲ್ಲಿ ನೋಡಬಹುದು. ಅಂತರರಾಷ್ಟ್ರೀಯ ಸ್ಪೇಸ್ ಸ್ಟೇಷನ್ ನಿಂದ ಭೂಮಿ ಹೇಗೆ ಕಾಣುತ್ತದೆ ಎಂಬ ಫೋಟೋಗಳನ್ನು ನೋಡಬಹುದು. ಭೂಮಿಯ ಸುತ್ತ 16 ಬಾರಿ ಸ್ಯಾಟಲೈಟ್ ಸುತ್ತುತ್ತದೆ. ಸ್ಯಾಟಲೈಟ್ ತೆಗೆದಿರುವ ಫೋಟೋಗಳಲ್ಲಿ ಭೂಮಿ ತಿರುಗುವ ದೃಶ್ಯ ಕಾಣಬಹುದು. ರಾತ್ರಿ ಸಮಯದಲ್ಲಿ ಭೂಮಿ ಬೇರೆ ರೀತಿ ಸುಂದರವಾಗಿ ಕಾಣುತ್ತದೆ. ಸ್ಯಾಟಲೈಟ್ ಗಳು ಭೂಮಿಯಿಂದ 1000 ಕಿಮೀ ಇಂದ 36,000 ಕಿಮೀ ಎತ್ತರದಲ್ಲಿ ಅಂತರಿಕ್ಷದಲ್ಲಿ ಭೂಮಿಯ ಸುತ್ತ ಸುತ್ತುತ್ತವೆ. ಈ ರೀತಿ ಸುಮಾರು 6,000 ಸ್ಯಾಟಲೈಟ್ ಗಳು ಭೂಮಿಯ ಸುತ್ತ ತಿರುಗುತ್ತಿರುತ್ತವೆ. ಇವುಗಳಲ್ಲಿ 40% ಸ್ಯಾಟಲೈಟ್ ಗಳು ಮಾತ್ರ ಕೆಲಸ ಮಾಡುತ್ತಿವೆ.
ಎಲಾನ್ ಮಸ್ಕ್ ಅವರು ಪ್ರಪಂಚದ ಮೂಲೆ ಮೂಲೆ ಪ್ರದೇಶಗಳಿಗೆ ಇಂಟರ್ನೆಟ್ ಒದಗಿಸುವ ಸಲುವಾಗಿ ಅಂತರಿಕ್ಷಕ್ಕೆ 45000 ಸ್ಯಾಟಲೈಟ್ ಗಳನ್ನು ಕಳುಹಿಸುವ ಪ್ಲಾನ್ ಮಾಡುತ್ತಿದ್ದಾರೆ. ಭೂಮಿಯಿಂದ ಚಂದ್ರ ಸುಮಾರು 3,84,000ಕಿಮೀ ದೂರದಲ್ಲಿದ್ದಾನೆ. ಚಂದ್ರನ ಮೇಲೆ ಹೋಗಿ ಭೂಮಿಯ ಫೋಟೋವನ್ನು ತೆಗೆಯಲಾಗಿದೆ. ಚಂದ್ರನ ಮೇಲಿಂದ ಭೂಮಿ ಸುಂದರವಾಗಿ ಕಾಣಿಸುತ್ತದೆ. ವಿಜ್ಞಾನಿಗಳು ಮಾರ್ಸ್ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ನಾಸಾ ಕಳುಹಿಸಿದ ಲ್ಯಾಂಡರ್ ಮಾರ್ಸ್ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ರೋವರ್ ಮಾರ್ಸ್ ಮೇಲೆ ಫೋಟೊ ತೆಗೆದಿದೆ, ಮಾರ್ಸ್ ನಿಂದ ಭೂಮಿ 235.4 ಮಿಲಿಯನ್ ಕಿಮೀ ದೂರದಲ್ಲಿದೆ ಆದ್ದರಿಂದ ಅದರ ಮೇಲೆ ಫೋಟೊ ತೆಗೆಯುವುದು ಕಷ್ಟ. 2003ರಲ್ಲಿ ಮಾರ್ಸ್ ನಿಂದ ಫೋಟೊ ತೆಗೆಯಲಾಯಿತು, ಅದರಲ್ಲಿ ಭೂಮಿ ಮತ್ತು ಚಂದ್ರ ಕಾಣಿಸುತ್ತಿದ್ದಾನೆ. ಮೆರ್ಕ್ಯೂರಿ ಪ್ಲಾನೆಟ್ ಇಂದ ಭೂಮಿ ಒಂದು ನಕ್ಷತ್ರದಂತೆ ಕಾಣಿಸುತ್ತದೆ.
ಸೋಲಾರ್ ಸಿಸ್ಟಮ್ ನ ಅತಿದೊಡ್ಡ ಗ್ರಹವಾದ ಜುಪಿಟರ್ ಗ್ರಹದಿಂದ ಭೂಮಿಯ ಫೋಟೋ ತೆಗೆಯಲಾಗಿದೆ. ಭೂಮಿಯಿಂದ ಜುಪಿಟರ್ ಗ್ರಹ 881 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ಜುಪಿಟರ್ ಗ್ರಹದಿಂದ ಭೂಮಿ ಬ್ಲ್ಯೂ ಡಾಟ್ ನಂತೆ ಕಾಣಿಸುತ್ತದೆ. ಸೋಲಾರ್ ಸಿಸ್ಟಮ್ ನಲ್ಲಿ ಇರುವ ಶನಿ ಗ್ರಹ ಸುತ್ತಲಿನ ರಿಂಗ್ ನಿಂದ ಸುಂದರವಾಗಿ ಕಾಣಿಸುತ್ತದೆ. ಶನಿಗ್ರಹಕ್ಕೆ ಒಟ್ಟು 82 ಮೂನ್ಸ್ ಗಳಿವೆ. ಅವುಗಳಲ್ಲಿ 53 ಮೂನ್ಸ್ ಗಳಿಗೆ ಹೆಸರಿಟ್ಟಿದ್ದಾರೆ, ಉಳಿದ ಮೂನ್ಸ್ ಗೆ ಹೆಸರಿಡಲು ಪ್ರಯತ್ನಿಸುತ್ತಿದ್ದಾರೆ. ವೈಜರ್ವ 1 ಸ್ಪೇಸ್ ಕ್ರಾಫ್ಟ್ ಇದುವರೆಗೂ ಮಾನವ ನಿರ್ಮಿತ ಸ್ಪೇಸ್ ಕ್ರಾಫ್ಟ್ ಗಳಲ್ಲಿ ಅತ್ಯಂತ ದೂರ ಕ್ರಮಿಸಿದ ಹಾಗೂ ಇನ್ನು ಆಕ್ಟೀವ್ ಆಗಿದೆ. ಇದು ಈಗ ಭೂಮಿಯಿಂದ 22.8 ಮಿಲಿಯನ್ ಕಿಮೀ ದೂರದಲ್ಲಿದೆ. ಇದು ಸೋಲಾರ್ ಸಿಸ್ಟಮ್ ಅನ್ನು ದಾಟಿ ಹೋಗುವಾಗ ಎಲ್ಲಾ ಗ್ರಹಗಳ ಫೋಟೋಗಳನ್ನು ತೆಗೆದಿದೆ. ಈ ಸ್ಪೇಸ್ ಕ್ರಾಫ್ಟ್ ಗೆ ಸೋಲಾರ್ ಸಿಸ್ಟಮ್ ಅನ್ನು ದಾಟಿಹೋಗಲು 30,000 ವರ್ಷಗಳ ಸಮಯ ಬೇಕಾಗುತ್ತದೆ.