ಸರಳವಾಗಿ ನುಡಿದು ನುಡಿದಂತೆ ಸರಳವಾಗಿ ಇರುವ ಸರಳ ಸಂತ ಎಂದು ಕರೆಸಿಕೊಂಡ ಸಿದ್ದೇಶ್ವರ ಸ್ವಾಮೀಜಿಯವರು ಅದೆಷ್ಟೋ ಜನರ ಜೀವನದ ಮೇಲೆ ಸ್ಫೂರ್ತಿ ಚೆಲ್ಲಿ ಜೀವನವನ್ನು ಸದ್ಗತಿಗೆ ಅಥವಾ ಒಳ್ಳೆಯ ಮಾರ್ಗದ ಕಡೆಗೆ ಪ್ರಯಾಣ ಬೆಳೆಸಲು ನಿರ್ದೇಶಕರಾಗಿದ್ದರು ವಿಜಯಪುರದ ಜ್ಞಾನ ಯೋಗಶ್ರಮದ ಸಿದ್ದೇಶ್ವರ ಸ್ವಾಮೀಜಿಯವರು ತಮ್ಮ ಪ್ರವಚನ ಮೂಲಕ ಜೀವನದ ಸತ್ಯದ ಅರಿವನ್ನು ಮೂಡಿಸಿದ್ದಾರೆ ಸಾದಾ ಸೀದಾ ಬಿಳಿಯ ಬಟ್ಟೆಯನ್ನು ತೊಟ್ಟು ಸರಳತೆಯ ಜೀವನವನ್ನು ಮಾಡಿದ್ದಾರೆ.
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ತಮ್ಮ ಪ್ರವಚನದ ಉಪನ್ಯಾಸಗಳು ಅಂಕಣಗಳು ಮತ್ತು ಕೃತಿಗಳ ಮೂಲಕ ಅಸಂಖ್ಯಾತ ಜನರಿಗೆ ಸಾಂತ್ವನ ಹೇಳಿದ್ದಾರೆ ದೇಶ ಕಂಡ ಎರಡನೆಯ ವಿವೇಕಾನಂದ ಎಂದು ಪ್ರಸಿದ್ದಿ ಪಡೆದಿದ್ದಾರೆ ಸಿದ್ದೇಶ್ವರ ಸ್ವಾಮೀಜಿಯವರು ಪ್ರಪಂಚದಾದ್ಯಂತ ಆಧ್ಯಾತ್ಮಿಕ ಪ್ರವಚನವನ್ನು ನೀಡಿದ್ದಾರೆ ಸಿದ್ದೇಶ್ವರ ಸ್ವಾಮೀಜಿಯವರು ಬದುಕುವುದು ಹೇಗೆ ಹಾಗೂ ನಾವು ಹೇಗೆ ಬದುಕಬೇಕು ಎಂಬುವುದನ್ನು ತಮ್ಮ ಪ್ರವಚನದ ಮೂಲಕ ಲಕ್ಷಾಂತರ ಜನರಿಗೆ ಅರಿವನ್ನು ಮೂಡಿಸಿದ್ದಾರೆ. ನಾವು ಈ ಲೇಖನದ ಮೂಲಕ ಸಿದ್ದೇಶ್ವರ ಸ್ವಾಮೀಜಿಯವರು ಹೇಳಿದ ಹಾಗೆ ಬೆಳ್ಳಿಗೆ ಎಷ್ಟು ಹೊತ್ತಿಗೆ ಎಳಬೇಕು ಹಾಗೆಯೇ ಎದ್ದ ಮೇಲೆ ಮಾಡುವ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳೋಣ.
ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆ ಎದ್ದು ಕೂಡಲೇ ಸಣ್ಣ ವಸ್ತು ನೆನಪಾಗುತ್ತದೆ ಹೊರತು ದೊಡ್ಡ ವಸ್ತು ಅಲ್ಲ ಬೆಳ್ಳಿಗೆ ಎಷ್ಟು ಹೊತ್ತಿಗೆ ಏಳಬೇಕು ಹಾಗೆಯೇ ಬೆಳಿಗ್ಗೆ ಎದ್ದು ಮಾಡಬೇಕಾದ ಕರ್ತವ್ಯ ಎನು ಎಂಬುದು ಎಲ್ಲರು ಮರೆತು ಹೋಗಿದ್ದೇವೆ ಬೆಳಿಗ್ಗೆ ಎದ್ದ ಕೂಡಲೇ ಮನೆಯಲ್ಲಿ ಇರುವ ನಾಯಿ ನೆನಪು ಆಗುತ್ತದೆಯೇ ವಿನಹಃ ನಾವು ಬೆಳಿಗ್ಗೆ ಎದ್ದು ಮಾಡಬೇಕಾದ ಕೆಲಸ ನೆನಪಾಗುವುದು ಇಲ್ಲ ಕೋಳಿ ಕೂಗುವ ಮುನ್ನ ಬೆಳ್ಳಿಗೆ ಎಳಬೇಕು ಎಂದು ಸರ್ವಜ್ಞ ಹೇಳಿದ್ದಾನೆ
ಹಿಂದಿನ ಕಾಲದಲ್ಲಿ ಕೋಳಿ ಕೂಗಿದರೆ ಕೇಳಿಸಿವಷ್ಟು ಜಗತ್ತು ಶಾಂತ ವಿತ್ತು ಈಗ ದಿನಗಳಲ್ಲಿ ಗದ್ದಲ ಹೆಚ್ಚಾಗಿ ಯಾರು ಕೂಗಿದರು ಕೇಳಿದಷ್ಟು ಪ್ರಪಂಚ ಬದಲಾಗಿದೆ .ಸಿದ್ದೇಶ್ವರ ಸ್ವಾಮಿಗಳು ಸೂರ್ಯ ಪ್ರಕಾಶ ಆಗುವುದಕ್ಕೂ ಮುಂಚೆ ಬೆಳಿಗ್ಗೆ ಎದ್ದೇಳಬೇಕು ಎಂದು ಹೇಳುತ್ತಾರೆ ಹಾಗೆಯೇ ಸೂರ್ಯ ಬರುವುದಕ್ಕೂ ಮುಂಚೆ ಎದ್ದು ಒಂದು ಕ್ಷಣ ದೇವರನ್ನು ನೆನೆಯಬೇಕು ಇಂತಹ ಭೂಮಂಡಲವನ್ನು ನೀಡಿದ ದೇವರ ಮೇಲೆ ದಯೆ ಇರಬೇಕು ಹಾಗೆಯೇ ಒಂದಿಷ್ಟು ಆಯಸ್ಸು ಕೊಟ್ಟಿರುವ ದೇವರ ಬಗ್ಗೆ ದಯೆ ಇರಬೇಕು ಇಂತಹ ಪ್ರಪಂಚಕ್ಕೆ ನಮ್ಮನ್ನು ತಂದು ನೆಲೆಸಿದ ದೇವರನ್ನು ನೆನೆಯುವುದು ಪವಿತ್ರ ಕೆಲಸವಾಗಿದೆ
ದೇವರನ್ನು ಸ್ಮರಣೆ ಮಾಡಿದ ನಂತರ ದೇಶದಲ್ಲಿ ಬದುಕಿ ಬಾಳಿದ ಸಂತರು ಮಹಾತ್ಮರನ್ನು ಸ್ಮರಿಸಬೇಕು ಎಂದು ಸಿದ್ದೇಶ್ವರ ಸ್ವಾಮೀಜಿಯವರು ತಿಳಿಸಿದ್ದಾರೆ ಮಹಾತ್ಮರ ಮಾತುಗಳಲ್ಲಿ ಸತ್ಯ ಕೂಡಿಕೊಂಡು ಇರುತ್ತದೆ ಹಾಗೆಯೇ ಸಮಾಧಾನ ಕೂಡಿ ಕೊಂಡಿರುತ್ತದೆ ಸಾಧು ಸಂತರ ಹಿತ ನುಡಿಗಳನ್ನು ಬೆಳಿಗ್ಗೆ ನೆನೆಪು ಮಾಡಿಕೊಳ್ಳಬೇಕು ಎಂದು ಸಿದ್ದೇಶ್ವರ ಸ್ವಾಮೀಜಿಯವರು ಹೇಳಿದ್ದಾರೆ ಹೀಗೆ ಸಿದ್ದೇಶ್ವರ ಸ್ವಾಮೀಜಿಯವರು ಬೆಳಿಗ್ಗೆ ಪ್ರತಿಯೊಬ್ಬರೂ ಮಾಡಬೇಕಾದ ಕರ್ತವ್ಯವನ್ನು ಜನರಲ್ಲಿ ಅರಿವು ಮೂಡಿಸಿದ್ದಾರೆ .