ಎಲ್ಲರಿಗೂ ಶಿಕ್ಷಣ ಮುಗಿಸಿ ಜೀವನದಲ್ಲಿ ಸಂಪಾದನೆ ಮಾಡುವ ಆಸೆ ಇರುತ್ತದೆ ಆದರೆ ಕಲಿತ ಶಿಕ್ಷಣಕ್ಕೆ ಸರಿಯಾಗಿ ಉದ್ಯೋಗ ಸಿಗುವುದಿಲ್ಲ. ಇನ್ನು ಕೆಲವರಿಗೆ ಸರ್ಕಾರಿ ಕೆಲಸ ಮಾಡುವ ಆಸಕ್ತಿ ಇರುತ್ತದೆ ಅಂಥವರಿಗೆ ಬೆಂಗಳೂರು ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಬೆಂಗಳೂರು ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಾರಂಭದಲ್ಲಿ ಮೂವತ್ತು ಸಾವಿರ ರೂಪಾಯಿವರೆಗೆ ಸಂಬಳ ಸಿಗುತ್ತದೆ. ನಂತರ ಸರ್ವಿಸ್ ಆದಂತೆ 1,50,000 ರೂಪಾಯಿವರೆಗೂ ಸಂಬಳ ಸಿಗುತ್ತದೆ. ಬೆಂಗಳೂರು ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 16, 2021 ರಿಂದ ಪ್ರಾರಂಭವಾಗಿದ್ದು ಜನವರಿ 17, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಬೆಂಗಳೂರು ಮೆಟ್ರೋದಲ್ಲಿ ಬೇಸಿಕ್ ಇಂಟರ್ವ್ಯೂ ಮೂಲಕ ಆಯ್ಕೆ ಮಾಡಲಾಗುತ್ತದೆ ಯಾವುದೆ ಎಕ್ಸಾಮ್ ಇರುವುದಿಲ್ಲ. 58 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೆ ರೀತಿಯ ಫೀಸ್ ತುಂಬುವುದಿಲ್ಲ. ಅಧಿಕೃತ ಯುನಿವರ್ಸಿಟಿ ಅಥವಾ ಕಾಲೇಜಿನಿಂದ ಡಿಪ್ಲೊಮಾ ಓದಿರಬೇಕು. ಚೀಪ್ ಇಂಜಿನೀಯರ್, ಡೆಪ್ಯೂಟಿ ಚೀಪ್ ಇಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನೀಯರ್, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ಅಸಿಸ್ಟಂಟ್ ಇಂಜಿನಿಯರ್, ಸೆಕ್ಷನ್ ಇಂಜಿನಿಯರ್, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ (ಸರ್ವೆ), ಅಸಿಸ್ಟಂಟ್ ಇಂಜಿನಿಯರ್ (ಸರ್ವೆ), ಜ್ಯೂನಿಯರ್ ಇಂಜಿನಿಯರ್ಸ್ ಈ ಎಲ್ಲ ಹುದ್ದೆಗಳು ಖಾಲಿ ಇದ್ದು ಒಟ್ಟು ಒಂದು ನೂರ ಇಪ್ಪತ್ತೈದು ಹುದ್ದೆಗಳು ಬೆಂಗಳೂರು ಮೆಟ್ರೊದಲ್ಲಿ ಖಾಲಿ ಇದೆ.
ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಕೊರೋನ ವೈರಸ್ ಮತ್ತೆ ಹರಡುತ್ತಿದ್ದು ಲಾಕ್ ಡೌನ್ ಮಾಡುವ ಸಾಧ್ಯತೆಗಳಿದ್ದು ಜಾಬ್ ಹುಡುಕುವವರಿಗೆ ಓದಿಗೆ ತಕ್ಕ ಸರಿಯಾದ ಜಾಬ್ ಸಿಗುವುದಿಲ್ಲ. ಅರ್ಹತೆ ಹೊಂದಿದ ಅಭ್ಯರ್ಥಿಗಳು ಬೆಂಗಳೂರು ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸುವುದರಿಂದ ಜಾಬ್ ಭದ್ರತೆ ಉತ್ತಮ ಸಂಬಳ ಲಭ್ಯವಾಗಿ ಜೀವನದಲ್ಲಿ ಸೆಟ್ಲ್ ಆಗಬಹುದು. ಈ ಮಾಹಿತಿ ಉಪಯುಕ್ತವಾಗಿದ್ದು, ನಿರುದ್ಯೋಗ ಯುವಕ, ಯುವತಿಯರಿಗೆ ತಿಳಿಸಿ.