ದೇವರಮನೆ ಕಾಲಭೈರವೇಶ್ವರ ದೇವಾಲಯ ಎಲ್ಲಿದೆ ಹಾಗೂ ಅದರ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಭೂಲೋಕದ ಸ್ವರ್ಗ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯು ಪ್ರಕೃತಿ ಸೌಂದರ್ಯದಿಂದ ವರ್ಷದ 365 ದಿನಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಜಿಲ್ಲೆಯು ಧಾರ್ಮಿಕ ಕ್ಷೇತ್ರದಲ್ಲೂ ಪ್ರಸಿದ್ದಿ ಪಡೆದಿದೆ. ಕೆಲವು ದೇವಸ್ಥಾನಗಳು ಎಲೆಮರೆಯ ಕಾಯಿಯಂತಿದೆ ಅವುಗಳಲ್ಲಿ ದೇವರಮನೆ ದೇವಾಲಯ ಒಂದಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಕಳಸದ ಮಾರ್ಗವಾಗಿ 20 ಕಿ.ಮೀ ದೂರದಲ್ಲಿ ದೇವರಮನೆ ಕ್ಷೇತ್ರ ಸಿಗುತ್ತದೆ. ಇಲ್ಲಿ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿ ಕಾಲಭೈರವೇಶ್ವರನ ದೇವಾಲಯವಿದೆ.
ದೇವರಮನೆಯಲ್ಲಿ ದೇವರೆ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ಒಮ್ಮೆ ಪರಶಿವನು ತನ್ನ ವಾಹನವಾದ ನಂದಿಯನ್ನು ಭೂಲೋಕಕ್ಕೆ ಕಳುಹಿಸಿ ಅಲ್ಲಿನ ಜನರು ಸುಖವಾಗಿದ್ದಾರೊ ಇಲ್ಲವೋ ಎಂದು ನೋಡಿಕೊಂಡು ಬರುವಂತೆ ಹೇಳುತ್ತಾರೆ. ನಂದಿ ಭೂಲೋಕಕ್ಕೆ ಬಂದಾಗ ಹಸಿವು, ಕ್ಷಾಮದಿಂದ ಜನರು ನರಳುತ್ತಿರುತ್ತಾರೆ. ಇದನ್ನು ನೋಡಿದ ನಂದಿ ಶಿವನ ಹತ್ತಿರ ಜನರು ಸುಖವಾಗಿದ್ದಾರೆ ಎಂದು ಸುಳ್ಳು ಹೇಳುತ್ತಾನೆ. ನಂತರ ಸತ್ಯ ತಿಳಿದ ಶಿವನು ನಂದಿ ಮಾಡಿದ ತಪ್ಪಿಗೆ ಭೂಲೋಕದಲ್ಲಿ ಜನರಿಗೆ ಉಳುಮೆ ಕಾರ್ಯದಲ್ಲಿ ಸಹಾಯ ಮಾಡುವಂತೆ ಆಜ್ಞೆ ನೀಡುತ್ತಾನೆ. ಅದರಂತೆ ನಂದಿ ಭೂಲೋಕಕ್ಕೆ ಬರುತ್ತಾನೆ ಅವನ ಹಿಂದೆಯೇ ಶಿವನು ಭೂಲೋಕಕ್ಕೆ ಬಂದು ದೇವರಮನೆಯಲ್ಲಿ ಕಾಲಭೈರವನಾಗಿ ನೆಲೆಸುತ್ತಾನೆ. ಈ ಕಾರಣದಿಂದ ಜನರು ತಾವು ಬೆಳೆದ ಹೊಸ ಫಸಲನ್ನು ವರ್ಷಕ್ಕೊಮ್ಮೆ ಈ ದೇವಾಲಯಕ್ಕೆ ತಂದು ನೈವೇದ್ಯ ರೂಪದಲ್ಲಿ ಕೊಡುತ್ತಾರೆ.
ಈ ದೇವಾಲಯವನ್ನು ಕಟ್ಟಿರುವ ಬಗ್ಗೆ ಪುರಾವೆ ದೊರೆತಿಲ್ಲ ಕೆಲವರ ಪ್ರಕಾರ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದೆ. ಈ ದೇವಾಲಯದ ಎದುರಿಗೆ ಒಂದು ಸರೋವರವಿದೆ ಅಲ್ಲಿಯ ನೀರನ್ನು ದೇವರ ಪೂಜೆಗೆ ಬಳಸಲಾಗುತ್ತದೆ. ಈ ದೇವಾಲಯದ ಹಿಂಭಾಗದಲ್ಲಿ ದೇವರಮನೆ ಗುಡ್ಡವಿದೆ. ಈ ಗುಡ್ಡ ಸಮುದ್ರ ಮಟ್ಟದಿಂದ 2,000 ಅಡಿ ಎತ್ತರವಿದೆ. ಈ ಗುಡ್ಡದ ಮೇಲೆ ನಿಂತು ಪ್ರಕೃತಿ ಸೊಬಗನ್ನು ಸವಿಯಬಹುದು. ಈ ಗುಡ್ಡದಲ್ಲಿ ಧಾರವಾಹಿ ಹಾಗೂ ಸಿನಿಮಾಗಳ ಶೂಟಿಂಗ್ ನಡೆಯುತ್ತದೆ. ಬೆಂಗಳೂರು, ಹಾಸನ, ಮೈಸೂರು, ಚಿಕ್ಕಮಗಳೂರು, ಮಂಗಳೂರಿನಿಂದ ಮೂಡಿಗೆರೆಗೆ ನಿಯಮಿತ ಬಸ್ ವ್ಯವಸ್ಥೆಯಿದೆ.ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466