ಪೂಜೆ ಮಾಡುವಾಗ ಅತ್ತರೆ ಏನಾಗುತ್ತೆ ನೋಡಿ..

0

ನಮ್ಮ ಸುತ್ತಮುತ್ತ ಶುಭ ಹಾಗೂ ಅಶುಭ ಸೂಚನೆಗಳು ನಮಗೆ ಕಾಣಿಸುತ್ತಿರುತ್ತದೆ. ಎಲ್ಲಕ್ಕೂ ಮಿಗಿಲಾದ ಭಗವಂತನ ಪೂಜೆ ಅಥವಾ ಧ್ಯಾನ ಮಾಡುವಾಗ ಕೆಲವು ಶುಭ ಸಂಕೇತಗಳು ಸೂಚಿಸುತ್ತವೆ. ಪೂಜೆ ಮಾಡುವಾಗ ಕಣ್ಣಿನಲ್ಲಿ ನೀರು ಬರುವುದು, ಹಚ್ಚಿದ ದೀಪ ಇದ್ದಕ್ಕಿದ್ದಂತೆ ಪ್ರಜ್ವಲಗೊಳ್ಳುವುದು ಇಂತಹ ಸಂಕೇತಗಳು ಕಾಣಿಸಿಕೊಂಡರೆ ಅದರ ಅರ್ಥವೇನು ಎಂಬುದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.

ಪ್ರಾಚೀನ ಗ್ರಂಥಗಳ ಪ್ರಕಾರ ಈ ಬ್ರಹ್ಮಾಂಡ ಖಾಲಿಯಾಗಿತ್ತು, ಎಲ್ಲಾ ಕಡೆ ಕೇವಲ ಅಂಧಕಾರ ತುಂಬಿತ್ತು. ಕೆಲವು ವರ್ಷಗಳ ನಂತರ ಅಚಾನಕ್ಕಾಗಿ ಒಂದು ಶಿವಲಿಂಗ ಪ್ರತ್ಯಕ್ಷವಾಗುತ್ತದೆ ಆಗಿನಿಂದ ಈ ಬ್ರಹ್ಮಾಂಡ ಸಂಪೂರ್ಣವಾಗಿ ಶಕ್ತಿಯಿಂದ ಪ್ರಜ್ವಲಗೊಳ್ಳುತ್ತದೆ. ಶಿವಲಿಂಗ ಉದ್ಭವವಾದ ನಂತರ ಬ್ರಹ್ಮಾಂಡದಲ್ಲಿ ಗಾಳಿ, ನೀರು, ಬೆಳಕು ಹೀಗೆ ಒಂದೊಂದು ವಸ್ತುಗಳು ಹುಟ್ಟಿಕೊಳ್ಳುತ್ತದೆ ಹೀಗಾಗಿ ಬ್ರಹ್ಮಾಂಡದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಭಗವಂತ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಶಿವನೆ ಈ ಬ್ರಹ್ಮಾಂಡದ ಆದಿ ಹಾಗೂ ಅಂತ್ಯನಾಗಿದ್ದಾನೆ. ಧ್ಯಾನಮಗ್ನನಾಗಿ ದೇವರ ಪೂಜೆ ಮಾಡುವಾಗ ದೇವರ ಜೊತೆ ನಮ್ಮ ಆತ್ಮ ಹಾಗೂ ಹೃದಯದ ಸಂಪರ್ಕವಾಗುತ್ತದೆ. ಪೂಜೆ ಮಾಡುವಾಗ ನಮ್ಮ ಮನಸ್ಸು ಬೇರೆ ಕಡೆ ಇದ್ದರೆ ಪೂಜೆಗೆ ಯಾವ ಅರ್ಥವೂ ಇರುವುದಿಲ್ಲ.

ಭಗವಂತ ಸರ್ವವ್ಯಾಪಿ ಆಗಿದ್ದಾನೆ ಭೂಮಿಯ ಮೇಲಿರುವ ಜೀವಂತ ಮತ್ತು ನಿರ್ಜೀವ ವಸ್ತುಗಳಲ್ಲೂ ನೆಲೆಸಿದ್ದಾನೆ. ನಮ್ಮ ಅಂತರಾತ್ಮ ದೇವರೊಂದಿಗೆ ಸಂಪರ್ಕ ಮಾಡಿದಾಗ ಕೆಲವೊಂದು ಸಂಕೇತಗಳನ್ನು ನೀಡುತ್ತಾನೆ. ಈ ಸಂಕೇತಗಳು ಸಹಜವಾಗಿರುತ್ತವೆ ಆದರೆ ಅಪರಿಮಿತವಾಗಿರುತ್ತವೆ. ಶಿವನ ಸಂಕೇತಗಳನ್ನು ನಾವು ಅರ್ಥಮಾಡಿಕೊಳ್ಳಲು ವಿಫಲರಾಗುತ್ತೇವೆ ಮತ್ತು ನಿರ್ಲಕ್ಷಿಸುತ್ತೇವೆ. ಭಗವಂತ ಪ್ರತಿಯೊಬ್ಬರ ಆತ್ಮದ ಜೊತೆ, ಜೀವದ ಜೊತೆ ಸಂಪರ್ಕ ಬೆಳೆಸುತ್ತಾನೆ.

ನಾವು ಧ್ಯಾನ, ಪೂಜೆ ಮಾಡುವಾಗ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ ಈ ಕಾರಣದಿಂದಲೆ ಪೂಜೆ ಮಾಡುವಾಗ, ಧ್ಯಾನ ಮಾಡುವಾಗ ನಮ್ಮ ಮನಸ್ಸಿನಲ್ಲಿ, ಮುಖದಲ್ಲಿ ಪ್ರಸನ್ನತೆ ಉಂಟಾಗುತ್ತದೆ, ಎಂತಹ ದುಃಖದಲ್ಲಿದ್ದರೂ ಚೈತನ್ಯ ಮೂಡುತ್ತದೆ. ಕೆಲವೊಮ್ಮೆ ವಿದ್ಯಾರ್ಥಿಗಳು ಓದುವಾಗ ಅಥವಾ ತಾಯಿ ಸರಸ್ವತಿ ದೇವಿಯನ್ನು ನೆನಸಿಕೊಂಡರೆ ಇದ್ದಕ್ಕಿದ್ದಂತೆ ಕಣ್ಣಿನಲ್ಲಿ ನೀರು ಬರುತ್ತದೆ ಹಾಗೂ ಅವರಲ್ಲಿ ಹೊಸದೊಂದು ಚೈತನ್ಯ ಶಕ್ತಿ ಮೂಡುತ್ತದೆ ಅಲ್ಲದೆ ಜೀವನವನ್ನೆ ಬದಲಾಯಿಸುವ ದಿಕ್ಕು ತೋರಿಸುತ್ತದೆ. ವಿದ್ಯಾರ್ಥಿಯ ಮೇಲೆ ದೇವಿ ಕೃಪೆ ತೋರುತ್ತಿದ್ದಾಳೆ ಎಂಬುದು ಇದರ ಅರ್ಥ.

ಭಗವಂತನಿಗೆ ಸಂಬಂಧಿಸಿದ ಪ್ರವಚನಗಳನ್ನು ಕೇಳುವಾಗ ಕೆಲವೊಮ್ಮೆ ಮೈಯೆಲ್ಲ ರೋಮಾಂಚನಗೊಳ್ಳುತ್ತದೆ. ಭಗವಂತನ ಅದ್ಭುತ ಶಕ್ತಿಯನ್ನು ನೋಡುತ್ತಾ ನಮ್ಮ ಕಣ್ಣಲ್ಲಿ ನೀರು ಬರುತ್ತದೆ ಆಗ ಭಗವಂತನ ಮೇಲೆ ನಮ್ಮ ವಿಶ್ವಾಸ ಹೆಚ್ಚಾಗುತ್ತಾ ಹೋಗುತ್ತದೆ. ಧ್ಯಾನ ಮಾಡುವಾಗ, ದೇವರ ಪೂಜೆ ಮಾಡುವಾಗ ಕಣ್ಣಿನಲ್ಲಿ ತನ್ನಿಂತಾನೆ ನೀರು ಬರುವುದು ಸಹಜ ಪ್ರಕ್ರಿಯೆಯಲ್ಲ. ನಿಮ್ಮ ಪೂಜೆ ಅಥವಾ ಧ್ಯಾನ ದೇವರಿಗೆ ಮುಟ್ಟಿದೆ ಎಂದು ಅರ್ಥ. ನಿಮ್ಮ ಆತ್ಮ ಮತ್ತು ದೇವರು ಸಂಪರ್ಕದಲ್ಲಿದ್ದಾರೆ ಎಂದು ಅರ್ಥ.

ಇಂತಹ ಸಮಯದಲ್ಲಿ ನಿಮ್ಮ ಮನೋಕಾಮನೆಗಳನ್ನು ದೇವರಲ್ಲಿ ಹೇಳಿಕೊಂಡರೆ ನಿಮ್ಮ ಬೇಡಿಕೆ ಈಡೇರುತ್ತದೆ ಎಂಬುದು ಪುರಾಣಗಳಲ್ಲಿ ಹೇಳಲಾಗಿದೆ ಅಲ್ಲದೆ ಈ ಸಮಯದಲ್ಲಿ ಮಾಡಿದ ಪ್ರತಿಯೊಂದು ಪ್ರಾರ್ಥನೆಯು ಫಲ ಸಿಗುತ್ತದೆ ಎಂದು ನಂಬಲಾಗಿದೆ. ಪುರಾಣದ ಪ್ರಕಾರ ಇದು ಈಶ್ವರನನ್ನು ಬೇಡುವ ಸರ್ವೋತ್ತಮ ಕಾಲವಾಗಿದೆ. ಪೂಜೆ ಮಾಡುವಾಗ ಧ್ಯಾನ ಮಾಡುವಾಗ ನಿಮ್ಮ ಕಣ್ಣಿನಲ್ಲಿ ನೀರು ಬರುತ್ತಿದ್ದರೆ ನಿಮ್ಮ ಸುಖದುಃಖಗಳನ್ನು ಭಗವಂತನಲ್ಲಿ ಹೇಳಿಕೊಂಡಾಗ ಅವನು ನಿಮ್ಮ ಸಮಸ್ಯೆಯನ್ನು ನಿವಾರಿಸುತ್ತಾನೆ ಎಂಬ ನಂಬಿಕೆ ಇದೆ.

ಪೂಜೆ ಮಾಡುವಾಗ ಕಣ್ಣಿನಲ್ಲಿ ನೀರು ಬರುತ್ತಿದ್ದರೆ ನಿಮ್ಮ ಆತ್ಮದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಸಕಾರಾತ್ಮಕ ಶಕ್ತಿಯನ್ನು ತುಂಬುವ ಪ್ರಕ್ರಿಯೆಯಾಗಿದೆ ಅಲ್ಲದೆ ಆತ್ಮಶುದ್ಧಿ ಆಗುತ್ತಿದೆ ಎಂದು ಅರ್ಥ. ಪೂಜೆ ಮಾಡುತ್ತಿರುವಾಗ ಉರಿಯುತ್ತಿರುವ ದೀಪ ಹೆಚ್ಚು ಪ್ರಜ್ವಲವಾಗುತ್ತದೆ ಪುರಾಣಗಳ ಪ್ರಕಾರ ಅಗ್ನಿ ಪಂಚಭೂತಗಳಲ್ಲಿ ಒಂದಾಗಿದೆ. ನೀವು ಹಚ್ಚಿದ ದೀಪ ಪ್ರಜ್ವಲವಾಗಿ ಪ್ರಕಾಶಿಸಿದರೆ ಭಗವಂತನು ನೆಲೆಸಿದ್ದಾನೆ ಎಂದು ಅರ್ಥ, ನಿಮ್ಮ ಭಕ್ತಿ ನಿಮ್ಮ ಶ್ರದ್ಧೆ ಭಗವಂತನಿಗೆ ಮೆಚ್ಚುಗೆಯಾಗಿದೆ ಎಂದು ಅರ್ಥ. ಈ ಸಮಯದಲ್ಲಿ ನಮ್ಮ ಬೇಡಿಕೆಗಳನ್ನು ಭಗವಂತನ ಮುಂದೆ ಇಟ್ಟಾಗ ಅವನು ಈಡೇರಿಸುತ್ತಾನೆ. ನಾವು ಹಚ್ಚಿದ ಅಗರಬತ್ತಿಯ ಹೊಗೆ ಇದ್ದಕ್ಕಿದ್ದಂತೆ ಭಗವಂತನ ಕಡೆ ದಿಕ್ಕು ಬದಲಿಸುತ್ತದೆ ಆಗ ಭಗವಂತನು ನಿಮ್ಮ ಪೂಜೆಯನ್ನು ಮೆಚ್ಚಿಕೊಂಡಿದ್ದಾನೆ ಎಂಬುದು ಇದರ ಅರ್ಥವಾಗಿದೆ. ಪೂಜೆ ಮಾಡುವಾಗ ಭಗವಂತನಿಗೆ ಅರ್ಪಿಸಿದ ಹೂವು ನಿಮ್ಮ ಕಡೆ ಬಿದ್ದರೆ ನಿಮ್ಮ ಪೂಜೆ ಫಲ ಕೊಡುತ್ತದೆ ಎಂದು ಅರ್ಥ ಮತ್ತು ಪ್ರಸಾದದ ರೂಪದಲ್ಲಿ ನಿಮಗೆ ಹೂವನ್ನು ಕೊಟ್ಟಿದ್ದಾನೆ ಎಂದು ಅರ್ಥವಾಗಿದೆ.

ಪೂಜೆ ಮಾಡುವಾಗ ಅಥವಾ ಧ್ಯಾನ ಮಾಡುವಾಗ ನಿಮ್ಮ ಮನೆಗೆ ಹಸು ಬಂದರೆ ಶುಭ ಸಂಕೇತವಾಗಿದೆ. ಮನೆಗೆ ಬಂದ ಹಸುವಿಗೆ ಪೂಜೆ ಮಾಡಿ ಪ್ರಸಾದ ಕೊಡಬೇಕು ಹಾಗೂ ನಿಮ್ಮ ಬೇಡಿಕೆಗಳನ್ನು ಗೋಮಾತೆಯೊಂದಿಗೆ ಹಂಚಿಕೊಳ್ಳಬೇಕು ಆಗ ನಿಮ್ಮ ಬೇಡಿಕೆ ಈಡೇರುತ್ತದೆ. ಭಗವಂತನ ಆರಾಧನೆ ಮಾಡುವಾಗ, ಧ್ಯಾನ ಮಾಡುವಾಗ ಶುದ್ಧ ಮನಸ್ಸಿನಿಂದ, ನಿಷ್ಕಲ್ಮಷ ಹೃದಯದಿಂದ ಇದ್ದಾಗ ಮಾತ್ರ ಶುಭ ಸಂಕೇತಗಳು ಕಾಣಿಸಿಕೊಳ್ಳುತ್ತದೆ. ಕಾಟಾಚಾರಕ್ಕೆ ಭಗವಂತನ ಧ್ಯಾನ, ಪೂಜೆ ಮಾಡುವುದರಿಂದ ಸಮಯವೂ ವ್ಯರ್ಥ ಅಲ್ಲದೆ ಯಾವುದೆ ಪುಣ್ಯ ಫಲ ಸಿಗುವುದಿಲ್ಲ. ಶುಭ ಸಂಕೇತಗಳು ನಿಮ್ಮ ಗಮನಕ್ಕೆ ಬಂದರೆ ನಿಮ್ಮ ಪೂಜೆ, ಧ್ಯಾನ ದೇವರಿಗೆ ಮುಟ್ಟಿದೆ ಎಂದು ಅರ್ಥ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಆಧ್ಯಾತ್ಮಿಕತೆಯತ್ತ ಒಲವು ತೋರುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗೋಣ. ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!