ವೃದ್ಧ ಜೀವಗಳನ್ನು ಕಾಪಾಡುವ ಅನಾಥಾಶ್ರಮ ರಕ್ಷಿಸುವ ರಾಜಕುಮಾರನಾಗಿ ನಟ ಪುನೀತ್ ನಟನೆಗೆ ಮಾತ್ರವೇ ಸೀಮಿತವಾಗಲಿಲ್ಲ. ನಿಜ ಜೀವನದಲ್ಲಿ ಪುನೀತ್ ರಾಜ್ ಕುಮಾರ್ ರಾಜಕುಮಾರನಾಗಿಯೇ ಮೆರೆದರು. ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವೃದ್ಧರ ಮತ್ತು ಅನಾಥರ ಪೋಷಣೆ ಜತೆಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಧಾರೆ ಎರೆದಿದ್ದರು. ತಾನು ಸಮಾಜಕ್ಕೆ ಈ ಕೊಡುಗೆ ಕೊಟ್ಟಿದ್ದೇನೆ ಎಂದು ಎಲ್ಲೂ ಬಹಿರಂಗಪಡಿಸದೇ ಸಮಾಜ ಸೇವೆ ಮಾಡುತ್ತಿದ್ದರು.
ಅದೇ ರೀತಿ ತಾನು ಎಡಗೈಯಲ್ಲಿ ಮಾಡಿದ ದಾನ ಬಲಗೈ ಗೆ ತಿಳಿಯಬಾರದು ಎನ್ನುವ ಹಾಗೆ ತಾನು ಮಾಡುವ ದಾನ ಇನ್ನೊಬ್ಬರಿಗೆ ತಿಳಿಯಬಾರದು ಎನ್ನುವ ಉದ್ದೇಶಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಸಲಿಗೆ ಹೆಲ್ಮೆಟ್ ಹಾಕಿಕೊಂಡು ಬಂದು ಆ ಶಾಲಾ ಮಕ್ಕಳ ಫೀಜ್ ಕಟ್ಟುತ್ತಿದ್ದರು. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನಟ ಪುನೀತ್ ರಾಜ್ ಕುಮಾರ್ ಇನ್ನಿಲ್ಲ. ಆದರೆ, ಪುನೀತ್ ವೃದ್ಧರಿಗೆ ಅನಾಥಶಾಶ್ರಮಗಳಿಗೆ ಹಾಗೂ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ದೊಡ್ಡ ಕೊಡುಗೆ ನೀಡಿದ್ದರು. ಪುನೀತ್ ರಾಜ್ ಕುಮಾರ್ ಅಗಲಿ ತಿಂಗಳು ಮೇಲಾದರೂ ಕೂಡ ಅವರು ಮಾಡಿದಂತಹ ಸಮಾಜ ಸೇವೆಗಳು, ಅವರು ನೀಡಿದಂತಹ ಸಹಾಯಹಸ್ತ ಸಹಾಯ ಪಡೆದವರಿಂದ,ಹಾಗೆ ಇನ್ನೂ ಅವರ ಆಪ್ತವಲಯದವರಿಂದ ಕೆಲವು ಮಾಹಿತಿಗಳು ಹೊರಗಡೆ ಬರುತ್ತಲೇ ಇವೆ. ಪುನೀತ್ ರಾಜ್ ಕುಮಾರ್ ನಟನೆ ಮಾಡಿದ್ದ ರಾಜಕುಮಾರ ಸಿನಿಮಾ ಹಿಟ್ ಆಗಿತ್ತು. ಹೆತ್ತವರನ್ನು ಪ್ರೀತಿಸಬೇಕು.
ವೃದ್ಧಾಶ್ರಮಗಳಗೆ ಕಳಿಸಬಾರದು ಎಂಬ ಸಂದೇಶ ಸಾರುವ ಪುನೀತ್ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ, ಪುನೀತ್ ಹೀರೋಹಿಸಂ ಕೇವಲ ತೆರೆಯ ಮೇಲಿನ ನಟನೆಗೆ ಸೀಮಿತ ಮಾಡಿಕೊಂಡಿರಲಿಲ್ಲ. ಬದಲಿಗೆ ನಿಜ ಜೀವನದಲ್ಲಿಯೂ ರಾಜಕುಮಾರನಾಗಿ ಅನೇಕ ಅನಾಥ ಮಕ್ಕಳನ್ನು ಪೋಷಣೆ ಮಾಡುತ್ತಿದ್ದರು. ಅನೇಕ ವೃದ್ಧಾಶ್ರಮಗಳನ್ನು , ಗೋ ಶಾಲೆಗಳನ್ನು ಪೋಷಣೆ ಮಾಡುತ್ತಿದ್ದರು. ಎಲ್ಲಿಯೂ ನಾನು ಸಮಾಜ ಸೇವಕ ಎಂದು ಬಿಂಬಿಸಿಕೊಂಡಿರಲಿಲ್ಲ.ಈ ಮೂಲಕ ದೊಡ್ಡಮನೆಯ ದೊಡ್ಡತನ ಮೆರೆದಿದ್ದರು. ಪುನೀತ್ ಪೋಷಣೆ ಮಾಡುತ್ತಿದ್ದ ಅನಾಥಾಶ್ರಮಗಳೇ ಇದೀಗ ಅನಾಥ ಆಗಿವೆ.
ಪುನೀತ್ ಅವರು ಇಷ್ಟು ಬೇಗನೆ ದೂರ ಆಗುತ್ತಾರೆಂದು ಯಾರು ಅಂದುಕೊಂಡಿರಲಿಲ್ಲ ಅಪ್ಪು ಅಗಲಿಕೆ ಯಾರಿಗೂ ಕೂಡ ಅರಗಿಸಿಕೊಳ್ಳಲಾಗುತ್ತಿಲ್ಲ. ಅಪ್ಪು ಅವರ ಪ್ರೀತಿ ಸ್ನೇಹ ಎಲ್ಲರೊಟ್ಟಿಗಿನ ಅವರ ಬಾಂಧವ್ಯ ನಿಜ ಅವ್ರಿಲ್ಲದ ಈಗಿನ ಜೀವನ ನೆನೆಸಿದರೆ ನೋವಾಗುತ್ತದೆ.ಹಾಗೆ ಅವರು ಮಾಡಿದಂತಹ ಸಹಾಯ ಸಮಾಜಮುಖಿ ಕೆಲಸ ಕಾರ್ಯಗಳು, ಈಗೀಗ ಹೆಚ್ಚು ಹೊರಗಡೆಗೆ ಬರುತ್ತಿವೆ.
ಪಬ್ಲಿಕ್ ಟಿವಿ ರಂಗಣ್ಣ ಅವರು ಇತ್ತೀಚಿಗೆ ಬಿಗ್ ಬುಲೆಟಿನ್ ಎಂಬ ಅವರದೇ ಕಾರ್ಯಕ್ರಮದಲ್ಲಿ ಅಪ್ಪು ಮಾಡಿದ ಆ ಸಹಾಯವನ್ನು ಬಿಚ್ಚಿಟ್ಟಿದ್ದರು. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬರುವ ಒಂದು ಏರಿಯಾದ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡಿದಂಥ ಹಣದ ವಿಚಾರ. ಬಡವರ ಮಕ್ಕಳು ಶಾಲೆಗೆ ಬರುವುದೇ ಹೆಚ್ಚು, ಅಂತಹದರಲ್ಲಿ ಅವರಿಗೆ ಶಾಲೆ ಪೀಸ್ ತುಂಬಲು ಹೆಚ್ಚು ಕಷ್ಟವಾಗುತ್ತಿತ್ತಂತೆ. ಆ ಶಾಲಾ ಮಕ್ಕಳ ವಿಷಯವನ್ನ ಯಾರೋ ಪುನೀತ್ ಅವರಿಗೆ ಮುಟ್ಟಿಸಿದ್ದರಂತೆ.
ಆಗ ಯಾರಿಗೂ ತಿಳಿಯದಂತೆ ಹೆಲ್ಮೆಟ್ ಹಾಕಿಕೊಂಡು ಒಬ್ಬರೇ ಬಂದು, ಆ 300ರಿಂದ ನಾಲ್ಕುನೂರು ಮಕ್ಕಳ ವರ್ಷದ ಶಾಲಾ ಫೀಜನ್ನು ತುಂಬಿ ಹೋಗುತ್ತಿದ್ದರಂತೆ. ಹಾಗೆ ಯಾರಿಗೂ ಅವರು ಮಾಡಿದಂತ ಸಹಾಯ ಹೇಳದಿರುವಂತೆ ತಾಕೀತು ಮಾಡಿ ಸಹಾಯ ಮಾಡಿದ್ದರಂತೆ.
ಆ ಶಾಲೆಯ ಮಕ್ಕಳ ಫೀಜ್ ಕಟ್ಟೋದು ಹೀಗೆ ಮೂರು ವರ್ಷದಿಂದ ನಡೆದುಕೊಂಡು ಬಂದಿದೆ. ವರ್ಷಕ್ಕೆ 15ರಿಂದ 20 ಲಕ್ಷ ಹಣವನ್ನು ಬೆಂಗಳೂರು ಮಹಾನಗರಪಾಲಿಕೆಯಲ್ಲಿ ಬರುವ ಆ ಶಾಲೆ ಮಕ್ಕಳ ಫೀಸನ್ನು ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಇದೆಲ್ಲ ನೋಡಿದರೆ ನಟ ಪುನೀತ್ ಅವರು ಎಷ್ಟು ಸಹಾಯ ಮಾಡಿರಬಹುದು, ಅವರು ಆ ದೇವರಿಗೆ ಅದು ಎಷ್ಟು ಇಷ್ಟ ಆಗಿರಬಹುದು, ನೀನು ಎಲ್ಲರಿಗೂ ಈಗ ದೇವರೆ ಆಗುತ್ತಿಯ ಎಂದು ಅವರನ್ನು ತನ್ನತ್ತ ಮೇಲಕ್ಕೆ ಕರೆದುಕೊಂಡು ಬಿಟ್ಟನೋ ಗೊತ್ತಾಗ್ತಿಲ್ಲ.
ಪುನೀತ್ ಅವರು ಮಾಡಿದಂತಹ ಪ್ರತಿಯೊಂದು ಕೆಲಸ ಎಲ್ಲರಿಗೂ ಆದರ್ಶದ ರೀತಿ ಸ್ಫೂರ್ತಿಯಾಗಬೇಕು. ಪುನೀತ್ ರಾಜ್ ಕುಮಾರ್ ಸುಮಾರು 26 ಕ್ಕಿಂತಲೂ ಹೆಚ್ಚು ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮಗಳನ್ನು ಪೋಷಣೆ ಮಾಡುತ್ತಿದ್ದರು. ಮಾತ್ರವಲ್ಲದೇ ಸುಮಾರು 45 ಕ್ಕೂ ಹೆಚ್ಚು ಹೆಚ್ಚು ಶಾಲಾ ಮಕ್ಕಳನ್ನು ಓದಿಸುತ್ತಿದ್ದರು. ಮಿಗಿಲಾಗಿ ಶಕ್ತಿಧಾಮ ಮೂಲಕ ಸಾವಿರಾರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಪುನೀತ್ ಮಾಡಿರುವ ಸೇವೆ, ಮೆರೆರೆಯುತ್ತಿದ್ದ ಹೃದಯ ಶ್ರೀಮಂತಿಕೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷಯ ವೈರಲ್ ಆಗಿದೆ. ರಾಜಕುಮಾರ ಸಿನಿಮಾದಿಂದ ಪಡೆದ ಸಂಭಾವನೆಯ ಒಂದು ಭಾಗವನ್ನು ವೃದ್ಧಾಶ್ರಮಗಳಿಗೆ ವಿನಿಯೋಗಿಸಿದ್ದರು ಎನ್ನಲಾಗಿದೆ. ಹಾಗೆ ಯಾವ ಸ್ವಾರ್ಥವಿಲ್ಲದೆ ಅವರು ಮಾಡುತ್ತಿದ್ದ ಅವರ ಕೆಲಸ ಕಾರ್ಯಗಳು ಎಲ್ಲರೂ ಕೂಡ ಮೈಗೂಡಿಸಿಕೊಳ್ಳಬೇಕು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಪುನೀತ್ ಅವರಂತೆಯೇ ನಾವೆಲ್ಲರೂ ಬದುಕೋಣ.