ನಕಾರಾತ್ಮಕ ಶಕ್ತಿಯು ಮನುಷ್ಯನ ಬೆಳವಣಿಗೆ ಅವನು ಮಾಡುವ ಕೆಲಸ, ಗುಣ-ನಡತೆ, ವರ್ತನೆ ಮತ್ತು ಯೋಚಿಸುವ ರೀತಿಯ ಮೇಲೆ ಅವಲಂಬಿಸಿರುತ್ತದೆ. ನಕಾರಾತ್ಮಕ ಆಲೋಚನೆಗಳು ಮನುಷ್ಯನ ಬೆಳವಣಿಗೆಯನ್ನು ತಡೆಯುತ್ತವೆ. ಒಬ್ಬ ಮನುಷ್ಯನ ಆಲೋಚನೆಗಳಲ್ಲಿ ನಕಾರಾತ್ಮಕ ಯೋಚನೆಗಳೇ ಹೆಚ್ಚಾದರೆ ಆತನಿಗೆ ಸ್ನೇಹಿತರು ಇರುವುದಿಲ್ಲ. ಮನುಷ್ಯನ ಸಂಬಂಧಗಳಲ್ಲಿ ಅನುಮಾನಗಳನ್ನು ಉಂಟುಮಾಡಬಹುದು. ಆದ್ದರಿಂದ ನಾವು ಇಲ್ಲಿ ಪ್ರತಿಯೊಬ್ಬ ಮನುಷ್ಯನು ತನ್ನ ಮನಸ್ಸಿನಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮನುಷ್ಯನ ಮನಸ್ಸು ಯಾವುದರ ಬಗ್ಗೆ ಯೋಚಿಸಬಾರದು ಎಂದು ಕೇಳುತ್ತದೆಯೇ ಅದನ್ನೇ ಹೆಚ್ಚಾಗಿ ಯೋಚಿಸುವುದು ಕ್ರಿಯಾ ಶಕ್ತಿಯಾಗಿದೆ. ಮನುಷ್ಯನ ಮನಸ್ಸಿನ ಬಲವಂತವಾಗಿ ಏನನ್ನು ಮಾಡಲು ಸಾಧ್ಯವವಿಲ್ಲ. ಹೀಗಾಗಿ ನಕಾರಾತ್ಮಕ ಗುಣಗಳನ್ನು ತೆಗೆದು ಹಾಕುತ್ತೇನೆ ಎಂಬ ಯೋಚನೆ ಮಾಡಬಾರದು. ಅದೇ ಯೋಜನೆಯು ಹೆಚ್ಚು ನಕಾರಾತ್ಮಕ ಯೋಜನೆಗಳನ್ನು ಸೃಷ್ಟಿಸುತ್ತದೆ. ಯಾವುದೇ ಒಬ್ಬ ಮನುಷ್ಯನು ಯಾವುದು ಸಕಾರಾತ್ಮಕ ಯಾವುದು ನಕಾರಾತ್ಮಕ ಎಂದು ಯೋಚಿಸಿ ಹೊರಹಾಕುವ ಪ್ರಯತ್ನಕ್ಕಿಂತ ಮನಸ್ಸು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಸ್ವಲ್ಪ ಗಮನ ಕೊಟ್ಟರೆ ಮನಸ್ಸನ್ನು ಹತೋಟಿಗೆ ತೆಗೆದುಕೊಳ್ಳಲು ಸುಲಭವಾಗುತ್ತದೆ.
ಕಣ್ಣನ್ನು ಮುಚ್ಚಿ ದೀರ್ಘ ಉಸಿರು ತೆಗೆದುಕೊಂಡು ಮನುಷ್ಯನ ಜೀವಂತಿಕೆಯ ಮೇಲೆ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ಆಗ ಮನುಷ್ಯ ಮತ್ತು ಅವನ ಆಲೋಚನೆಯ ನಡುವೆ ಅಂತರವಿರುವುದನ್ನು ಗಮನಿಸಬಹುದಾಗಿದೆ. ಶಾರೀರಿಕ ಮತ್ತು ಮಾನಸಿಕ ಪ್ರಕ್ರಿಯೆಗಳ ನಡುವಿನ ಅಂತರ ಗೊತ್ತಾದರೆ ಅದೇ ಮನುಷ್ಯನ ನರಳಾಟವನ್ನು ಕೊನೆಗೊಳಿಸುತ್ತದೆ. ಏಕೆಂದರೆ ಮನುಷ್ಯರು ಶಾರೀರಿಕ ಮತ್ತು ಮಾನಸಿಕ ನರಳಾಟಗಳನ್ನು ಅನುಭವಿಸುತ್ತಾರೆ. ಪ್ರತಿಯೊಬ್ಬರೂ ಈ ಕೆಲಸ ಮಾಡುವುದರಿಂದ ನಕಾರಾತ್ಮಕತೆ ಮತ್ತು ಸಕಾರಾತ್ಮಕತೆಯ ಪರಿಪೂರ್ಣತೆಯು ಅರ್ಥವಾಗುತ್ತದೆ.
ಯಾರೊಬ್ಬರೂ ಕೂಡ ನಕಾರಾತ್ಮಕ ಯೋಜನೆಗಳನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತೇನೆ ಎನ್ನುವ ಯೋಚನೆ ಮಾಡುವುದು ಸಾಧ್ಯವಿಲ್ಲದ ವಿಚಾರವಾಗಿದೆ. ನಕಾರಾತ್ಮಕ ಶಕ್ತಿಗಳ ಯೋಚನೆಗಳು ಉದ್ಭವವಾದಾಗ ಶಾಂತವಾಗಿ ಕುಳಿತು ಜೀವನದ ಪ್ರಕ್ರಿಯೆಗಳ ಕುರಿತು ಅಂದರೆ ಹೃದಯದ ಬಡಿತ, ಉಸಿರಾಟ, ಅಥವಾ ಜೀವಂತವಾಗಿರುವ ಸಂವೇದನೆ ಇದರಲ್ಲಿ ಯಾವುದು ಆಯಾ ವ್ಯಕ್ತಿಗೆ ಜೀವಂತಿಕೆಯ ನಿರ್ದೇಶನ ಮಾಡುತ್ತದೆಯೋ ಅದರ ಕಡೆ ಗಮನ ಕೊಟ್ಟಾಗ ನಿಧಾನವಾಗಿ ನಾವು ಮಾಡಿಕೊಂಡಿರುವ ಶಾರೀರಿಕ ಅಥವಾ ಮಾನಸಿಕ ಗೊಂದಲವನ್ನು ಅದು ತೋರಿಸುತ್ತದೆ. ತಪ್ಪಿನ ಸರಿಯಾದ ಪರಿಕಲ್ಪನೆಯಾದಾಗ ಅದನ್ನು ಸರಿಪಡಿಸಿಕೊಳ್ಳಲು ಅಥವಾ ನಕಾರಾತ್ಮಕ ಶಕ್ತಿಗಳನ್ನು ಹೊರಹಾಕಲು ಬೇರೆ ಮಾರ್ಗಗಳ ಅವಶ್ಯಕತೆ ಇರುವುದಿಲ್ಲ.