WhatsApp Group Join Now
Telegram Group Join Now

ಕಾರ್ಮಿಕ ಕಾರ್ಡ್ ಅಥವಾ ಲೇಬರ್ ಕಾರ್ಡ್ ಅನ್ನು ಹೊಂದಿರುವವರಿಗೆ ನಾವಿಂದು ಸಿಹಿ ಸುದ್ದಿಯನ್ನು ತಿಳಿಸಿಕೊಡುತ್ತಿದ್ದೇವೆ ಅದೇನೆಂದರೆ ಕಾರ್ಮಿಕ ಕಾರ್ಡ ಅಥವಾ ಲೇಬರ್ ಕಾರ್ಡನ್ನು ಹೊಂದಿರುವವರಿಗೆ ಪ್ರತಿ ತಿಂಗಳೂ ಮೂರುಸಾವಿರ ರೂಪಾಯಿ ನಿಮ್ಮ ಖಾತೆಗೆ ಬರುತ್ತದೆ.ಅದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿ ಕೊಡುತ್ತೇವೆ. ಅದಕ್ಕೂ ಮೊದಲು ನೀವೇನಾದರೂ ಕಾರ್ಮಿಕ ಕಾರ್ಡನ್ನು ಮಾಡಿಸಿಕೊಳ್ಳದಿದ್ದರೆ ಕಾರ್ಮಿಕ ಕಾರ್ಡನ್ನು ಮಾಡಿಸಿಕೊಳ್ಳುವುದಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ ನೀವು ನಿಮ್ಮ ಕಾರ್ಮಿಕ ಕಾರ್ಡನ್ನು ಮಾಡಿಕೊಳ್ಳಬಹುದಾಗಿದೆ. ಕಾರ್ಮಿಕ ಕಾರ್ಡ್ ಇರುವವರು ಮನೆಯಲ್ಲಿಯೇ ಕುಳಿತು ಸುಲಭವಾಗಿ ಹೇಗೆ ಹಣವನ್ನು ಪಡೆದು ಕೊಳ್ಳಬಹುದು ಅದಕ್ಕೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬುದನ್ನು ಈಗ ತಿಳಿದುಕೊಳ್ಳೋಣ.

ಕಾರ್ಮಿಕ ಕಾರ್ಡನ್ನು ಹೊಂದಿರುವವರು ಮೊದಲಿಗೆ ಸೇವಾ ಸಿಂದು ಸರ್ವಿಸ್ ಪ್ಲಸ್ ಓಪನ್ ಮಾಡಿಕೊಳ್ಳಬೇಕು. ನೀವು ಸೇವ ಸಿಂದುವಿನಲ್ಲಿ ರಿಜಿಸ್ಟ್ರೇಷನ್ ಅನ್ನ ಮಾಡಿಕೊಂಡಿರಬೇಕು.ನಂತರ ಅಲ್ಲಿ ಎಡಗಡೆ ಅಪ್ಲೈ ಫಾರ್ ಸರ್ವಿಸ್ ಅಂತ ಇರುತ್ತದೆ ಅದರ ಕೆಳಗಡೆ ವಿವ್ ಅಲ್ ಅವೆಲೇಬಲ್ ಸರ್ವಿಸ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು ಕ್ಲಿಕ್ ಮಾಡಿದಾಗ ನಿಮಗೆ ಸರ್ಚ್ ಬಾಕ್ಸ್ ಕಾಣಿಸುತ್ತದೆ ಅಲ್ಲಿ ನೀವು ಲೇಬರ್ ಅಂತ ಟೈಪ್ ಮಾಡಬೇಕು. ಲೇಬರ್ ಅಂತ ನೀವು ಟೈಪ್ ಮಾಡಿದ ತಕ್ಷಣ ಅಲ್ಲಿ ನಿಮಗೆ ಒಂದಿಷ್ಟು ಆಪ್ಷನ್ ಕಾಣಿಸುತ್ತದೆ ಅಲ್ಲಿ ನೀವು ಆರನೇ ಕಾಲಂನಲ್ಲಿ ಅಪ್ಲಿಕೇಶನ್ ಫಾರ್ ಪೆನ್ ಶನ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ನಿವೃತ್ತಿವೇತನ ಅಥವಾ ಪಿಂಚಣಿ ಅರ್ಜಿ ಎಂಬುದು ಕಾಣಿಸಿಕೊಳ್ಳುತ್ತದೆ. ಈ ಒಂದು ಪೆನ್ಷನ್ ಅರ್ಜಿಯನ್ನು ಯಾವ ರೀತಿಯಾಗಿ ತುಂಬಬೇಕು ಎಂಬುದನ್ನು ನಾವಿಗ ನಿಮಗೆ ತಿಳಿಸಿಕೊಡುತ್ತೇವೆ.

ಮೊದಲಿಗೆ ಅರ್ಜಿದಾರರ ವಿವರವನ್ನು ಕೇಳುತ್ತದೆ ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಬೇಕು ಆಗ ಅದು ಐ ಅಗ್ರಿ ಎನ್ನುವ ಕನ್ಫರ್ಮೇಶನ್ ಅನ್ನು ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಆಗ ಆಟೋಮೆಟಿಕ್ ಆಗಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ನಿಮ್ಮ ಹೆಸರು ನಿಮ್ಮ ಹುಟ್ಟಿದ ದಿನಾಂಕ ನಿಮ್ಮ ವಿಳಾಸ ನಿಮ್ಮ ವಯಸ್ಸು ಅಲ್ಲಿ ಬರುತ್ತದೆ ಅಲ್ಲಿ ಬಂದಂತಹ ಮಾಹಿತಿಗಳು ಸರಿ ಇಲ್ಲದಿದ್ದಲ್ಲಿ ನೀವು ಕೆಳಗಡೆ ಎಸ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಸರಿಯಾದ ಮಾಹಿತಿಯನ್ನು ಹಾಕಬಹುದು ಅಥವಾ ಮಾಹಿತಿ ಸರಿ ಇದ್ದರೆ ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರನ್ನು ನಮೂದಿಸಬೇಕು. ನಂತರ ಅದು ಪಲಾನುಭವಿಯ ನೋಂದಣಿ ಸಂಖ್ಯೆಯನ್ನು ಕೇಳುತ್ತದೆ ನೀವು ನಿಮ್ಮ ಕಾರ್ಮಿಕ ಕಾರ್ಡಿನ ರಿಜಿಸ್ಟ್ರೇಷನ್ ಸಂಖ್ಯೆಯನ್ನು ಹಾಕಬೇಕಾಗುತ್ತದೆ. ನಂತರ ಅದು ಫಲಾನುಭವಿಯ ನೋಂದಣಿ ದಿನಾಂಕವನ್ನು ಕೇಳುತ್ತದೆ ನೀವು ಕಾರ್ಮಿಕರ ಕಾರ್ಡನ್ನು ಮಾಡಿಸಿರುವ ದಿನಾಂಕವನ್ನು ನಮೂದಿಸಬೇಕು. ಆಗ ಆಟೋಮೆಟಿಕ್ ಆಗಿ ನೀವು ಕಾರ್ಮಿಕ ಕಾರ್ಡನ್ನು ಮಾಡಿಸುವಾಗ ನಿಮಗೆ ಎಷ್ಟು ವಯಸ್ಸಾಗಿತ್ತು ಎಂಬುದು ಕಾಣಿಸುತ್ತದೆ ಜೊತೆಗೆ ನಿಮಗೆ ಯಾವಾಗ ಅರವತ್ತು ವರ್ಷ ಆಗುತ್ತದೆ ಎಂಬುದು ಕೂಡ ಕಾಣಿಸುತ್ತದೆ.

ನಂತರ ಅಲ್ಲಿ ಕೆಳಗಡೆ ನೀವು ಸರ್ಕಾರದ ಇತರ ಇಲಾಖೆಗಳಿಂದ ಪಿಂಚಣಿ ಪಡೆಯುತ್ತಿದ್ದೀರೆ ಎಂದು ಕೇಳುತ್ತದೆ ನೀವು ಪಿಂಚಣಿಯನ್ನು ಪಡೆಯುತ್ತಿದ್ದರೆ ಎಸ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು ಪಿಂಚಣಿಯನ್ನು ಪಡೆಯುತ್ತಿಲ್ಲ ಎಂದಾದರೆ ನೋ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಕಾರ್ಮಿಕ ಕಾರ್ಡನ್ನು ಮಾಡಿಸಿ ಎಷ್ಟು ವರ್ಷವಾಯಿತು ಎಂಬುದು ಅಟೋಮ್ಯಾಟಿಕ್ ಆಗಿ ಕಾಣಿಸುತ್ತದೆ ಜೊತೆಗೆ ನಿಮ್ಮ ರಿಜಿಸ್ಟ್ರೇಷನ್ ಯಾವಾಗ ಕೊನೆಯಾಗುತ್ತದೆ ಎಂಬುದರ ದಿನಾಂಕ ಕಾಣಿಸುತ್ತದೆ. ನಂತರ ಅದರ ಕೆಳಗೆ ನೀವು ನಿಮ್ಮ ರಾಜ್ಯ ಯಾವುದು ಜಿಲ್ಲೆ ತಾಲೂಕು ನಿಮ್ಮ ಗ್ರಾಮ ಪಂಚಾಯಿತಿ ಮತ್ತು ನಿಮ್ಮ ಗ್ರಾಮ ಅಥವಾ ವಾರ್ಡನ ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಲ್ಲಿ ನಿಮ್ಮ ಬ್ಯಾಂಕ್ ಡೀಟೇಲ್ಸ್ ಅನ್ನು ಕೇಳುತ್ತದೆ ನಿಮ್ಮ ಬ್ಯಾಂಕ್ ಯಾವುದು ಯಾವ ಊರಿನಲ್ಲಿದೆ ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆ ಮತ್ತು ಐಎಫ್ಎಸ್ಸಿ ಕೋಡ್ ಅನ್ನು ಅಡ್ರೆಸ್ಸ್ ಅನ್ನು ಹಾಕಬೇಕು ಇದಾದ ನಂತರ ಡಿಕ್ಲರೇಷನ್ ಕೇಳುತ್ತದೆ ಆಗ ಅಗ್ರಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ನಂತರ ಕೆಳಗಡೆ ಒಂದು ಕ್ಯಾಪ್ಚಾ ಕೋಡ್ ಇರುತ್ತದೆ ಅದನ್ನು ನಮೂದಿಸಿ ಸುಬ್ಮಿಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಕೊಟ್ಟಿರುವ ಮಾಹಿತಿ ಅಲ್ಲಿ ಕಾಣಿಸುತ್ತದೆ ಮಾಹಿತಿ ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ಒಂದು ಸಾರಿ ಪರಿಶೀಲಿಸಿಕೊಳ್ಳಬೇಕು ಎಲ್ಲ ಮಾಹಿತಿ ಸರಿ ಇದ್ದರೆ ನಾವು ಮುಂದಿನ ಹಂತಕ್ಕೆ ಹೋಗಬೇಕಾಗುತ್ತದೆ ಅಥವಾ ಏನಾದರೂ ಎಡಿಟ್ ಮಾಡುವುದಿದ್ದರೆ ಎಡಿಟ್ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ಮಾಹಿತಿ ಸರಿ ಇದ್ದಲ್ಲಿ ಅಟ್ಯಾಚ ಅನೆಕ್ಸ್ಚರ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.

ಇಲ್ಲಿ ನೀವು ಕೆಲವೊಂದು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಯಾವೆಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಎಂಬುದನ್ನು ನೋಡುವುದಾದರೆ ಮೊದಲಿಗೆ ನೀವು ನಿಮ್ಮ ಬ್ಯಾಂಕ್ ಪಾಸ್ ಬುಕ್ ಅನ್ನು ಅಪ್ಲೋಡ್ ಮಾಡಬೇಕಾಗುತ್ತದೆ ನಂತರ ನಿಮ್ಮ ಪಾಸ್ಪೋರ್ಟ್ ಅಳತೆಯ ಒಂದು ಫೋಟೋ ಜೊತೆಗೆ ನಿಮ್ಮ ಎಂಪ್ಲಾಯಿ ಸರ್ಟಿಫಿಕೇಟ್ ಅಂದರೆ ನೀವು ಕಾರ್ಮಿಕ ಕಾರ್ಡನ್ನು ಮಾಡುವ ಸಂದರ್ಭದಲ್ಲಿ ಎಂಪ್ಲಾಯಿ ಸರ್ಟಿಫಿಕೇಟನ್ನು ಮಾಡಿಕೊಳ್ಳಬೇಕಾಗುತ್ತದೆ ಅದನ್ನು ಇಲ್ಲಿ ಅಪ್ಲೋಡ್ ಮಾಡಬೇಕು. ನಂತರ ವಾಸಸ್ಥಳ ಪ್ರಮಾಣ ಪತ್ರವನ್ನು ಜೊತೆಗೆ ರೇಷನ್ ಕಾರ್ಡ್ ಅನ್ನು ಅಪ್ಲೋಡ್ ಮಾಡಬೇಕು ಜೊತೆಗೆ ನಿಮ್ಮ ಲೇಬರ್ ಕಾರ್ಡ್ ಅಥವಾ ಕಾರ್ಮಿಕ ಕಾರ್ಡನ್ನು ಕೂಡ ಅಪ್ಲೋಡ್ ಮಾಡಬೇಕಾಗುತ್ತದೆ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಸೇವ್ ಅನೆಕ್ಸ್ಚರ್ ಅಂತ ಕಾಣಿಸುತ್ತದೆ ಅದರಲ್ಲಿ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಇಸೈನ್ ಇನ್ ಆಂಡ್ ಸಬ್ಮಿಟ್ ಎನ್ನುವುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮುಂದೆ ಒಂದು ಲೆಟರ್ ಕಾಣಿಸುತ್ತದೆ ಅದರಲ್ಲಿ ಅಗ್ರಿ ಎನ್ನುವುದರ ಮೇಲೆ ಸೆಲೆಕ್ಟ್ ಮಾಡಿ ಓಟಿಪಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ನಂತರ ನೀವು ಅಲ್ಲಿ ಮುಂದೆ ನಿಮ್ಮ ಆಧಾರ ನಂಬರ್ ಅನ್ನು ಕೇಳುತ್ತದೆ ಅದನ್ನು ಹಾಕಿ ನೀವು ಒಟಿಪಿಯನ್ನು ಪಡೆದುಕೊಳ್ಳಬಹುದು ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಆ ಓಟಿಪಿ ಯನ್ನು ಹಾಕಿ ವೆರಿಫೈ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮಗೆ ಅಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಒಂದು ಐವತ್ತು ರುಪಾಯಿ ಒಳಗಡೆ ಶುಲ್ಕವನ್ನು ಕೇಳುತ್ತದೆ ಅದನ್ನು ನೀವು ಪೇ ಮಾಡಬೇಕು. ಪೇಮೆಂಟ ಮಾಡಿದ ನಂತರ ಅರ್ಜಿ ಸಲ್ಲಿಸುವ ಪ್ರೊಸ್ಸೆಸ್ ಮುಗಿಯುತ್ತದೆ.

ನೀವು ಅರ್ಜಿ ಸಲ್ಲಿಸುವ ಪ್ರೊಸ್ಸೆಸ್ ಮುಗಿದ ಮೇಲೆ ಅದರ ಒಂದು ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಬೇಕು ಇಲ್ಲಿ ಬಹು ಮುಖ್ಯವಾಗಿ ಗಮನಿಸಬೇಕಾದ ವಿಷಯವೇನೆಂದರೆ ಕಾರ್ಮಿಕ ಕಾರ್ಡನ್ನು ಹೊಂದಿರುವ ಅರವತ್ತು ವರ್ಷ ಮೇಲ್ಪಟ್ಟವರಿಗೆ ಮಾತ್ರ ಇದರ ಪೆನ್ಷನ್ ಸಿಗುತ್ತದೆ ಅರವತ್ತು ವರ್ಷ ತುಂಬಿದ ನಂತರವೇ ಪ್ರತಿತಿಂಗಳು ನಿಮ್ಮ ಖಾತೆಗೆ ಮೂರು ಸಾವಿರ ಹಣ ಜಮಾ ಆಗುತ್ತದೆ. ನಿಮ್ಮ ಅರ್ಜಿ ಸಲ್ಲಿಸಿದ ಪ್ರಿಂಟನ್ನು ತೆಗೆದುಕೊಂಡಿರಬೇಕು ಏಕೆಂದರೆ ನೀವು ಸೇವಾ ಸಿಂಧುವಿನಲ್ಲಿ ಮತ್ತೆ ಲಾಗಿನ್ ಆಗಿ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಏನಾಗಿದೆ ಎಂದು ತಿಳಿದುಕೊಳ್ಳಬಹುದು. ನೋಡಿದಿರಲ್ಲ ಸ್ನೇಹಿತರೆ ನೀವು ಕೂಡ ಕಾರ್ಮಿಕ ಕಾರ್ಡ್ ಹೊಂದಿದ್ದರೆ ಸುಲಭವಾಗಿಯೇ ಕುಳಿತಲ್ಲಿಯೇ ಕಾರ್ಮಿಕ ಕಾರ್ಡ್ ಪೆನ್ಷನ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿಯನ್ನು ಪಡೆಯಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ಇತರರಿಗೂ ಇದರಮಾಹಿತಿಯನ್ನು ತಿಳಿಸಿ ನೀವು ಇದರ ಪ್ರಯೋಜನವನ್ನು ಪಡೆದುಕೊಳ್ಳಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: