ನಮ್ಮ ದೇಶದಲ್ಲಿ ಅನೇಕ ವಿಧವಾದ ಹಬ್ಬಗಳನ್ನು ಸಡಗರದಿಂದ ಆಚರಿಸಲಾಗುತ್ತದೆ ಅವುಗಳಲ್ಲಿ ಮಕರ ಸಂಕ್ರಾಂತಿ ಹಬ್ಬವು ಸೂರ್ಯದೇವನ ಆರಾಧನೆಯನ್ನು ಮಾಡಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಸೂರ್ಯದೇವನು ಉತ್ತರಾಯಣದ ಕಡೆ ತನ್ನ ಸಂಚಾರವನ್ನು ಆರಂಭಿಸುತ್ತಾನೆ. ಈ ದಿನದಿಂದ ವಾತಾವರಣದಲ್ಲಿ ತಂಪು ಕಡಿಮೆಯಾಗಿ ಬಿಸಿಲು ಹೆಚ್ಚಾಗಲು ಪ್ರಾರಂಭವಾಗುತ್ತದೆ. ಮಕರ ಸಂಕ್ರಾಂತಿಯ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ ಈ ದಿನ ಸ್ನಾನ ದಾನ ಪೂಜೆಗೆ ವಿಶೇಷ ಮಹತ್ವವಿದೆ. ಪ್ರತಿಯೊಬ್ಬರೂ ಕೂಡ ತಮ್ಮ ಮನೆಯಲ್ಲಿ ಅತ್ಯಂತ ಸಡಗರದಿಂದ ಎಳ್ಳು ಬೆಲ್ಲವನ್ನು ಹಂಚುವುದರೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ.
ಈ ವರ್ಷ ಕರೋನಾದ ನಡುವೆಯೂ ಎಲ್ಲರೂ ಕೂಡ ಸಡಗರದಿಂದ ಸಂಕ್ರಾಂತಿಯನ್ನು ಆಚರಿಸಿಕೊಂಡಿದ್ದಾರೆ. ಅದರಲ್ಲಿಯೂ ಕನ್ನಡ ಸಿನಿಮಾರಂಗದ ತಾರೆಯರು ತಾವು ಆಚರಿಸಿಕೊಂಡಿರುವ ಸಂಕ್ರಾಂತಿ ಹಬ್ಬದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದೇ ರೀತಿಯಾಗಿ ಕನ್ನಡ ಸಿನಿಮಾರಂಗದ ನಟಿ ರಾಧಿಕಾ ಪಂಡಿತ್ ಅವರ ಸಹೋದರ ಗೌರಂಗ್ ಪಂಡಿತ್ ಅವರ ಮನೆಯಲ್ಲಿಯೂ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ. ಗೌರಂಗ್ ಪಂಡಿತ್ ಅವರು ತಮ್ಮ ಮಕ್ಕಳೊಂದಿಗೆ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಿಕೊಂಡಿರುವ ಅಂತಹ ಫೋಟೋ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ಅವರ ಸಹೋದರ ಗೌರಂಗ್ ಪಂಡಿತ್ ಅವರ ಮನೆಯಲ್ಲಿ ಎಲ್ಲಾ ಹಬ್ಬವನ್ನು ತುಂಬಾ ಸಡಗರದಿಂದ ತಮ್ಮ ಮಕ್ಕಳೊಂದಿಗೆ ಆಚರಿಸುತ್ತಾರೆ ಅದೇ ರೀತಿ ಸಂಕ್ರಾಂತಿ ಹಬ್ಬವನ್ನು ಕೂಡ ಸಾಂಸ್ಕೃತಿಕವಾಗಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡಿದ್ದಾರೆ. ಗೌರಂಗ್ ಅವರಿಗೆ ಇಬ್ಬರು ಮಕ್ಕಳು ಮಗಳು ರಿಯಾ ಮತ್ತು ಮಗ ಆರವ್ ಪಂಡಿತ್. ರಿಯಾ ಮತ್ತು ಆರವ್ ಪಂಡಿತ್ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಸಂಭ್ರಮಿಸುವ ಮುದ್ದಾದ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಜನರ ಮೆಚ್ಚುಗೆಯನ್ನು ಗಳಿಸುತ್ತಿವೆ ರಿಯಾ ಮತ್ತು ಆರವ್ ಸಾಂಪ್ರದಾಯಿಕ ಉಡುಗೆಯಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದರು. ಒಟ್ಟಾರೆಯಾಗಿ ಕರೋನಾ ನಡುವೆಯು ಜನರು ಸಡಗರದಿಂದ ಸಂಕ್ರಾಂತಿಯನ್ನು ಆಚರಿಸಿದ್ದಾರೆ. ಈ ಸಂಕ್ರಾಂತಿ ಎಲ್ಲರ ಬಾಳಿನಲ್ಲಿ ಸುಖ-ಸಮೃದ್ಧಿಯನ್ನು ಉಂಟು ಮಾಡಲಿ ಎಂದು ನಾವು ಕೇಳಿಕೊಳ್ಳೋಣ.