ಇತ್ತೀಚಿನ ದಿನಗಳಲ್ಲಿ ರಕ್ತಹೀನತೆ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಅದರಲ್ಲೂ ಗರ್ಭಿಣಿ ಸ್ತ್ರೀಯರಿಗೆ ರಕ್ತದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ನಾವಿಂದು ದೇಹದಲ್ಲಿ ರಕ್ತಹೀನತೆ ಹೋಗಲಾಡಿಸುವುದಕ್ಕೆ ಯಾವ ಕ್ರಮವನ್ನು ಅನುಸರಿಸಬೇಕು ಎಂಬುದರ ಕುರಿತಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ. ರಕ್ತ ಹೀನತೆ ಸಮಸ್ಯೆಯಿಂದ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಹಾಗಾಗಿ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದಕ್ಕೆ ನಾವು ಕೆಲವೊಂದಿಷ್ಟು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ನಾವು ನಮ್ಮ ಮನೆಯಲ್ಲಿ ದೊರೆಯುವ ಅಥವಾ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಸಿಗುವ ಹಣ್ಣು ತರಕಾರಿಗಳನ್ನು ಬಳಸಿಕೊಳ್ಳುವ ಮೂಲಕ ಸುಲಭವಾಗಿ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು.
ಹಾಗಾದರೆ ಯಾವ ಯಾವ ಆಹಾರ ಪದಾರ್ಥಗಳ ಸೇವನೆಯಿಂದ ನಮ್ಮ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ ಎಂಬುದನ್ನು ನೋಡುವುದಾದರೆ ಎಲ್ಲರಿಗೂ ತಿಳಿದಿರುವ ಹಾಗೆ ಕ್ಯಾರೆಟ್ ಬೀಟ್ರೂಟ್ ದಾಳಿಂಬೆ ಕಿತ್ತಳೆ ಇವುಗಳ ಸೇವನೆಯನ್ನು ಮಾಡುವುದರಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ ಹಾಗಾಗಿ ದಿನದಲ್ಲಿ ಒಂದು ಬಾರಿಯಾದರೂ ಇವುಗಳಲ್ಲಿ ಯಾವುದಾದರೂ ಒಂದನ್ನು ಜ್ಯೂಸನ್ನು ಮಾಡಿ ಕುಡಿಯಬೇಕು ಅಥವಾ ಹಸಿಯಾಗಿ ಸೇವಿಸಬಹುದು ಅಥವಾ ನಿಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸಬಹುದು. ಇವೆಲ್ಲವುಗಳಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು ಇದು ರಕ್ತವನ್ನು ಹೆಚ್ಚಿಸುವುದಕ್ಕೆ ಸಹಾಯಮಾಡುತ್ತದೆ. ನಂತರ ಮೂಸಂಬಿ ಹಣ್ಣನ್ನು ಸೇವಿಸುವುದರಿಂದಲೂ ಕೂಡ ರಕ್ತದ ಅಂಶ ಹೆಚ್ಚುತ್ತದೆ. ಪ್ರತಿದಿನ ಒಂದು ಮುಸುಂಬಿ ಹಣ್ಣನ್ನು ಸೇವನೆ ಮಾಡುವುದರಿಂದ ಬೇಗನೆ ರಕ್ತದ ಉತ್ಪತ್ತಿ ಆಗುತ್ತದೆ.
ಜೊತೆಗೆ ಪ್ರತಿ ದಿನ ದ್ರಾಕ್ಷಿ ನಿಂಬೆ ಹಣ್ಣಿನ ಜ್ಯೂಸ್ ಗಳನ್ನು ಮಾಡಿ ಕುಡಿಯಬೇಕು ಜೊತೆಗೆ ಎರಡೆರಡು ಬೆಟ್ಟದ ನೆಲ್ಲಿಕಾಯಿಯನ್ನು ತಿನ್ನುವುದರಿಂದಲೂ ಕೂಡ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಇದರ ಜೊತೆಗೆ ಸ್ಟ್ರಾಬೆರಿಯನ್ನು ತಿನ್ನಬೇಕು ಇನ್ನು ನೀವು ಸಕ್ಕರೆಯನ್ನು ಬಳಸುತ್ತಿದೆ ಅದರ ಉಪಯೋಗವನ್ನು ಬಿಟ್ಟು ಅದರ ಬದಲಿಗೆ ಬೆಲ್ಲವನ್ನು ಉಪಯೋಗಿಸಬೇಕು ಬೆಲ್ಲದ ಸೇವನೆ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ದೇಹಕ್ಕೆ ದೊರೆಯುತ್ತದೆ ಇದರಿಂದ ರಕ್ತ ಪ್ರಮಾಣ ಹೆಚ್ಚಾಗುತ್ತದೆ. ಯಾರಿಗೆ ಗೋಧಿ ಹುಲ್ಲು ದೊರೆಯುತ್ತದೆ ಅಂಥವರು ಅದರ ಹುಲ್ಲಿನ ರಸವನ್ನು ಮಾಡಿ ಕುಡಿಯುವುದರಿಂದ ತುಂಬಾ ಬೇಗನೆ ರಕ್ತದ ಉತ್ಪತ್ತಿ ಆಗುತ್ತದೆ. ರಕ್ತಹೀನತೆ ಇರುವವರು ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು ಪ್ರತಿದಿನ ಸೇಬು ಹಣ್ಣಿನ ಜ್ಯೂಸನ್ನು ಕುಡಿಯಬೇಕು.
ಆಲೂಗಡ್ಡೆಯನ್ನು ಸೇವನೆ ಮಾಡುವುದರಿಂದ ರಕ್ತದ ಪ್ರಮಾಣ ಹೆಚ್ಚಾಗುತ್ತದೆ ಆದರೆ ಗರ್ಭಿಣಿ ಸ್ತ್ರೀಯರು ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ವಾರದಲ್ಲಿ ಎರಡರಿಂದ ಮೂರು ದಿನ ಪಪ್ಪಾಯ ಹಣ್ಣಿನ ಸೇವನೆ ಮಾಡಬೇಕು ಪೇರಲೆ ಹಣ್ಣು ತಿನ್ನಬೇಕು ಟೊಮೆಟೋ ಹಣ್ಣನ್ನು ಸೇವಿಸಬೇಕು. ರಕ್ತ ಕಡಿಮೆ ಇರುವಂತವರು ಟೊಮೆಟೋ ಹಣ್ಣಿನ ಜ್ಯೂಸ್ ಟೊಮೆಟೊ ಸೂಪ್ ಟೊಮೆಟೊ ಸಾಂಬಾರ್ ಮಾಡಿ ಬಳಸಬೇಕು
ಟೊಮೆಟೊವನ್ನೂ ಸೇವಿಸುವುದರಿಂದಲೂ ಕೂಡ ದೇಹದಲ್ಲಿ ಬೇಗ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ರಕ್ತ ಕಡಿಮೆ ಇರುವವರು ಪ್ರತಿದಿನ ಎರಡೆರಡು ಬಾಳೆಹಣ್ಣುಗಳನ್ನು ಸೇವಿಸಬೇಕು ಗೋಧಿ ಹಿಟ್ಟಿನ ಆಹಾರ ಪದಾರ್ಥವನ್ನು ಮಾಡಿ ಸೇವಿಸಿಬೇಕು. ಪಾಲೀಸ್ ಮಾಡಿಸದೆ ಇರುವ ಅಕ್ಕಿಯನ್ನು ಸೇವನೆ ಮಾಡಬೇಕು. ಜೊತೆಗೆ ಬೀನ್ಸನ್ನು ಆಗಾಗ ಸೇವನೆ ಮಾಡಬೇಕು ಜೊತೆಗೆ ಪ್ರತಿದಿನ ಹಾಲಿನ ಜೊತೆ ಬೆಲ್ಲ ಅಥವಾ ಜೇನುತುಪ್ಪವನ್ನು ಸೇರಿಸಿ ಕುಡಿಯಬೇಕು.
ಈ ಮೇಲೆ ತಿಳಿಸಿರುವ ಆಹಾರ ಕ್ರಮಗಳನ್ನು ಅನುಸರಿಸುವುದರಿಂದ ಒಂದರಿಂದ ಎರಡು ತಿಂಗಳಲ್ಲಿ ರಕ್ತಹೀನ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಕುಂಬಳಕಾಯಿಯನ್ನು ಬಳಸುವುದರಿಂದಲೂ ಕೂಡ ರಕ್ತ ಹೆಚ್ಚಾಗುತ್ತದೆ ಎಲ್ಲ ರೀತಿಯ ಹಸಿರು ಎಲೆ-ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು. ಮಾಂಸಾಹಾರಿ ಗಳಾಗಿದ್ದರೆ ಪ್ರತಿದಿನ ಒಂದು ಮೊಟ್ಟೆಯನ್ನು ಸೇರಿಸಬೇಕು ಲಿವರ್ ಮತ್ತು ಮೀನನ್ನು ಸೇವಿಸಬೇಕು. ಇನ್ನು ಮೊಳಕೆ ಬಂದಿರುವಂತಹ ಕಾಳುಗಳನ್ನು ಸೇವನೆ ಮಾಡುವುದರಿಂದ ತುಂಬಾ ಒಳ್ಳೆಯ ಪರಿಣಾಮವನ್ನು ಕಂಡುಕೊಳ್ಳಬಹುದು.
ಗರ್ಭಿಣಿ ಸ್ತ್ರೀಯರಿಗೆ ರಕ್ತ ಕಡಿಮೆ ಇದ್ದಲ್ಲಿ ಅವರು ಮನೆಯಲ್ಲಿಯೇ ರಕ್ತವನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ಯಾವ ಕ್ರಮವನ್ನು ಅನುಸರಿಸಬೇಕು ಎಂದರೆ ಮೂರು ಬಾದಾಮಿ ಮೂರು ಒಣ ಕರ್ಜೂರ ಮೂರು ಅಂಜೂರ ಇಪ್ಪತ್ತೈದರಿಂದ ಮೂವತ್ತು ಒಣದ್ರಾಕ್ಷಿಯನ್ನು ತೆಗೆದುಕೊಂಡು ಇದನ್ನು ಒಂದು ಗ್ಲಾಸ್ ನೀರಿನಲ್ಲಿ ನೆನೆಹಾಕಬೇಕು ಬೆಳಿಗ್ಗೆ ಅದನ್ನು ಸೇವಿಸಬೇಕು ನಂತರ ಅದರ ನೀರನ್ನು ಸಹ ಕುಡಿಯಬೇಕು.
ಬಾದಾಮಿಯ ಸಿಪ್ಪೆಯನ್ನು ತೆಗೆದು ಸೇವಿಸುವುದು ಒಳ್ಳೆಯದು. ಪ್ರತಿದಿನ ಬೆಳಿಗ್ಗೆ ಈ ರೀತಿಯಾಗಿ ಮಾಡಬೇಕು ಇದನ್ನ ತಿಂದು ಒಂದು ಗಂಟೆಯವರೆಗೆ ಬೇರೆ ಯಾವುದೇ ಆಹಾರ ಪದಾರ್ಥವನ್ನು ಕುಡಿಯುವುದಾಗಲಿ ತಿನ್ನುವುದಾಗಲಿ ಮಾಡಬಾರದು. ಮುಂದಿನದಾಗಿ ಎರಡರಿಂದ ಮೂರು ಅಂಜೂರವನ್ನು ತೆಗೆದುಕೊಂಡು ಅದನ್ನು ಅರ್ಧ ಗ್ಲಾಸ್ ಹಾಲಿನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಬೇಕು ನಂತರ ಅದಕ್ಕೆ ಬೆಲ್ಲ ಅಥವಾ ಜೇನುತುಪ್ಪವನ್ನು ಸೇರಿಸಿ ಸೇವನೆ ಮಾಡುವುದರಿಂದಲೂ ಕೂಡ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ.
ಕಬ್ಬಿನಹಾಲಿಗೆ ಲಿಂಬು ಮತ್ತು ಶುಂಠಿಯನ್ನು ಸೇರಿಸಿ ಕುಡಿಯುವುದರಿಂದಲೂ ಕೂಡ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಮುಂದಿನ ದಾಗಿ ಎರಡು ಚಮಚ ಕಪ್ಪುಎಳ್ಳನ್ನು ತೆಗೆದುಕೊಂಡು ಅದನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು ನಂತರ ಅದನ್ನ ಹಾಗೆಯೆ ಸೇವಿಸಬಹುದು ಅಥವಾ ಮಿಕ್ಸಿಯಲ್ಲಿ ರುಬ್ಬಿಕೊಂಡು ಅದಕ್ಕೆ ಬೆಲ್ಲ ಅಥವಾ ಜೇನುತುಪ್ಪವನ್ನು ಸೇರಿಸಿ ಕುಡಿಯಬಹುದು.
ಇದನ್ನು ದಿನದಲ್ಲಿ ಎರಡು ಸಾರಿ ಮಾಡಬೇಕು ಈ ರೀತಿ ನೀವು ಮಾಡುವುದರಿಂದ ಒಂದು ತಿಂಗಳಿನಲ್ಲಿ ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣ ಉತ್ತಮ ರೀತಿಯಲ್ಲಿ ಏರಿಕೆಯಾಗುತ್ತದೆ. ಈ ರೀತಿಯಾಗಿ ನೀವು ಮನೆಯಲ್ಲಿಯೇ ಸುಲಭವಾಗಿ ಆರೋಗ್ಯಕರವಾಗಿ ರಕ್ತದ ಪ್ರಮಾಣವನ್ನು ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಿಕೊಂಡು ಆರೋಗ್ಯದಿಂದ ಇರಬಹುದು.
ನೀವು ಕೂಡ ರಕ್ತ ಹೀನತೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಾವು ಮೇಲೆ ತಿಳಿಸಿರುವಂತಹಹ ಆಹಾರ ಪದಾರ್ಥಗಳನ್ನು ಬಳಸುವುದರಿಂದ ಆದಷ್ಟು ಬೇಗನೆ ನೀವು ರಕ್ತ ಹೀನತೆ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.