ತೋಟಗಾರಿಕಾ ಇಲಾಖೆಯಿಂದ ಒಟ್ಟೂ ಖಾಲಿ ಇರುವಂತಹ 4319 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ಅರ್ಜಿಆಹ್ವಾನ ಮಾಡಲಾಗಿದೆ. ತೋಟಗಾರಿಕೆ ನಿರ್ದೇಶನಾಲಯ ಇವರು ಹೊರಡಿಸಿದ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಹುದ್ದೆಗಳ ವಿವರ ವೇತನ ಮುಂತಾದವುಗಳ ಬಗ್ಗೆ ನೋಡುವುದಾದರೆ ಮೊದಲಿಗೆ, ಫಸ್ಟ್ ಡಿವಿಷನ್ ಅಸಿಸ್ಟೆಂಟ್ ಹುದ್ದೆ. ಈ ಹುದ್ದೆಯಲ್ಲಿ ಒಟ್ಟೂ ಎರಡುನೂರಾ ತೊಂಭತ್ತೆರಡು ಹುದ್ದೆಗಳು ಖಾಲಿ ಇರುತ್ತವೆ. ಇವರಿಗೆ ಪ್ರತೀ ತಿಂಗಳು ನೀಡುವ ವೇತನ 27,650 ರೂಪಾಯಿ ಇಂದ 52,650 ರೂಪಾಯಿ ಪ್ರತೀ ತಿಂಗಳು ವೇತನ ನೀಡಲಾಗುವುದು.
ಎರಡನೆಯದಾಗಿ ಹಾಲ್ಟಿಕಲ್ಚರ್ ಅಸಿಸ್ಟೆಂಟ್ ಹುದ್ದೆ. ಈ ಹುದ್ದೆಯಲ್ಲಿ ಒಟ್ಟೂ 806 ಹುದ್ದೆಗಳು ಹುದ್ದೆಗಳು ಖಾಲಿ ಇರುತ್ತವೆ. ಇವರಿಗೆ ಪ್ರತೀ ತಿಂಗಳು ನೀಡುವ ವೇತನ 23,000 ರೂಪಾಯಿ ಇಂದ 47,000 ರೂಪಾಯಿ ವರೆಗೆ ಪ್ರತೀ ತಿಂಗಳು ವೇತನ ನೀಡಲಾಗುವುದು. ವಿದ್ಯಾರ್ಹತೆ PUC ಆಗಿರಬೇಕು.
ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ ಹುದ್ದೆ. ಈ ಹುದ್ದೆಯಲ್ಲಿ ಒಟ್ಟೂ 21,000 ದಿಂದ 42,000 ರೂಪಾಯಿ ವರೆಗೆ ಪ್ರತೀ ತಿಂಗಳು ವೇತನ ನೀಡಲಾಗುವುದು. ಒಟ್ಟೂ ಖಾಲಿ ಇರುವ ಹುದ್ದೆಗಳ 269 ಹುದ್ದೆಗಳಾಗಿವೆ. ಡ್ರೈವರ್. ಇವರಿಗೂ ಸಹ 21,000 ದಿಂದ 42,000 ರೂಪಾಯಿ ವರೆಗೆ ಪ್ರತೀ ತಿಂಗಳು ವೇತನ ನೀಡಲಾಗುವುದು. ಹತ್ತನೆಯರಗತಿ ಪಾಸ್ ಆಗಿರಬೇಕು ಹಾಗೂ ಭಾರೀ ವಾಹನಗಳ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
ಲ್ಯಾಬ್ ಅಸಿಸ್ಟೆಂಟ್ ಹುದ್ದೆ. ಇಲ್ಲಿ ಒಟ್ಟೂ ಹದಿಮೂರು ಹುದ್ದೆಗಳು ಖಾಲಿ ಇದ್ದು, ವಿದ್ಯಾರ್ಹತೆ PUC ಆಗಿರಬೇಕು. ಪ್ಯೂನ್, ಗಾರ್ಡ್ ಮತ್ತು ವಾಚ್ಮೆನ್ ಹುದ್ದೆಗಳು. ಈ ಮೂರೂ ಹುದ್ದೆಗಳಿಗೂ ವಿದ್ಯಾರ್ಹತೆ ಹತ್ತನೆತರಗತೀ ಪಾಸ್ ಆಗಿರಬೇಕು. ಇನ್ನೂ ವೇತನ ಎಷ್ಟು ಎಂದು ನೋಡುವುದಾದರೆ, ಪ್ರತೀ ತಿಂಗಳು ಹದಿನೇಳು ಸಾವಿರದಿಂದ ಇಪ್ಪತ್ತೆಂಟು ಸಾವಿರದವರೆಗೆ ವೇತನ ನೀಡಲಾಗುವುದು.
ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಅರ್ಜಿ ಸಲ್ಲಿಕೆ ಆರಂಭ ಆಗಲಿದೆ. ಕರ್ನಾಟಕ ಲೋಕಸೇವಾ ಆಯೋಗ KPSC ಇವರ ಕಡೆಯಿಂದ ವಾರ್ಡನ್ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಬಾಕಿ ಇರುವಂತಹ ಆರುಸಾವಿರ ಹುದ್ದೆಗಳ ನೇಮಕಾತಿ ಪೂರ್ಣಗೊಳಿಸುವ ಸಲುವಾಗಿ ಅರ್ಜಿ ಆಹ್ವಾನ ಮಾಡಲಾಗಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕೋರೋನ ಸಾಂಕ್ರಾಮಿಕ ರೋಗದ ನಡುವೆಯೂ ಸಹ ಸುಮಾರು ನಾಲ್ಕು ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದ್ದು ಈಗ ಉಳಿದಿರುವ ಬಾಕಿ ಆರುಸಾವೀರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಬಾಕಿ ಇರುವಂತಹ ನೇಮಕಾತಿ ಹುದ್ದೆಗಳು ಹಾಗೂ ಖಾಲಿ ಇರುವ ಹುದ್ದೆಗಳ ಸಂಖ್ಯೆಗಳನ್ನು ನೋಡುವುದಾದರೆ, ಮೋಟಾರು ವಾಹನ ನಿರೀಕ್ಷಕರ ಹುದ್ದೆ 150 ಹುದ್ದೆಗಳು ಇವೆ. ವಸತಿ ಶಾಲೆ ಶಿಕ್ಷಕರು ಹುದ್ದೆ 826 ಹುದ್ದೆಗಳು ಖಾಲಿ ಇವೆ. ಬಿಸಿಎಂ ಹಾಸ್ಟೆಲ್ ವಾರ್ಡನ್ ಹುದ್ದೆಗಳು 422 ಹುದ್ದೆಗಳು ಖಾಲಿ ಇರುತ್ತವೆ. ಫಿಟ್ಟರ್, ಮೆಕ್ಯಾನಿಕ್ ಹುದ್ದೆಗಳು 769 ಹುದ್ದೆಗಳು ಖಾಲಿ ಇರುತ್ತವೆ. FDA ಮತ್ತು SDA 2,300 ಹುದ್ದೆಗಳು ಖಾಲಿ ಇರುತ್ತವೆ. ಸಹಾಯಕ ಎಂಜಿನಿಯರ್ 668 ಹುದ್ದೆಗಳು ಹಾಗೂ ಕಿರಿಯ ಎಂಜಿನಿಯರ್ 330 ಹುದ್ದೆಗಳು ಖಾಲಿ ಇರುತ್ತವೆ.
ಈ ಎಲ್ಲಾ ಹುದ್ದೆಗಳೂ ಸಹ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಅರ್ಜಿ ಆಹ್ವಾನ ಮಾಡಲಾಗುತ್ತದೆ. ಇದರಿಂದ ರಾಜ್ಯದಲ್ಲಿ ಬೇರೆ ಬೇರೆ ಹಂತಗಳಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.