ಕಲಿಯುಗದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬುದು ತಿಳಿಯುವುದಿಲ್ಲ ಅಲ್ಲದೆ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವೆ. ಮದುವೆಯಾಗುತ್ತೇನೆ ಎಂದು ಮೋಸ ಮಾಡುವ ಹುಡುಗಿಯ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಮುಜಾಫರ್ ನಗರದಲ್ಲಿ ಮುರ್ದಾಪುರ ಎಂಬ ಊರಿನಲ್ಲಿ ದೇವೇಂದ್ರ ಎಂಬ ವ್ಯಕ್ತಿ ವಾಸ ಮಾಡುತ್ತಿದ್ದನು. ದೇವೇಂದ್ರನಿಗೆ ಮದುವೆಯ ವಯಸ್ಸಾಗಿತ್ತು, ಮದುವೆಯಾಗಲು ಒಬ್ಬ ಒಳ್ಳೆಯ ಹುಡುಗಿಯ ಹುಡುಕಾಟದಲ್ಲಿದ್ದನು. ದೇವೇಂದ್ರ ಸಾಕಷ್ಟು ಆಸ್ತಿ ಹೊಂದಿದ ಧನಿಕ ವ್ಯಕ್ತಿ ಆದರೂ ದೇವೇಂದ್ರನಿಗೆ ಮದುವೆಯಾಗಲು ಒಳ್ಳೆಯ ಹುಡುಗಿ ಸಿಗಲಿಲ್ಲ. ದೇವೇಂದ್ರನ ಸ್ನೇಹಿತ ಸುಮಂತ್ ದೇವೇಂದ್ರನ ಬಳಿ ಒಬ್ಬ ಒಳ್ಳೆಯ ಹುಡುಗಿ ಇದ್ದಾಳೆ, ಅವಳ ಕುಟುಂಬವು ಮರ್ಯಾದಸ್ಥರ ಕುಟುಂಬ ನೀನು ಒಪ್ಪಿದರೆ ಅವಳನ್ನು ನಿನ್ನ ಜೊತೆ ಮದುವೆ ಮಾಡಿಸುತ್ತೇನೆ ಎಂದು ಹೇಳಿದನು ಇದಕ್ಕೆ ದೇವೇಂದ್ರನು ಒಪ್ಪಿದನು.
ಸುಮಂತ್ ಮದುವೆ ಮಾಡಿಸಲು ಒಂದು ಷರತ್ತು ಹಾಕಿದನು ಹುಡುಗಿ ಮನೆಯವರು ಬಹಳ ಬಡವರು ಅವರಿಗೆ ಹಣ ಖರ್ಚು ಮಾಡಿ ಮದುವೆ ಮಾಡುವ ಶಕ್ತಿ ಇಲ್ಲ ಆದ್ದರಿಂದ ನೀನೆ ಎರಡು ಲಕ್ಷ ರೂಪಾಯಿ ಹಣ ಕೊಟ್ಟು ಹುಡುಗಿಯನ್ನು ಮದುವೆಯಾಗಬೇಕು ಎಂದು ಹೇಳಿದನು. ದೇವೇಂದ್ರ ನಮ್ಮ ಬಳಿ ಸಾಕಷ್ಟು ಹಣವಿದೆ ಹುಡುಗಿ ಒಳ್ಳೆಯವಳಾದರೆ ಸಾಕು ಎಂದು ಎರಡು ಲಕ್ಷ ರೂಪಾಯಿ ಕೊಟ್ಟು ಮದುವೆಯಾಗಲು ಸಿದ್ಧನಾದ. ಸುಮಂತ್ ಹುಡುಗಿಯ ಫೋಟೋವನ್ನು ದೇವೇಂದ್ರನಿಗೆ ತೋರಿಸಿದ ದೇವೇಂದ್ರ ಹುಡುಗಿಯನ್ನು ಬಹಳ ಇಷ್ಟಪಟ್ಟನು. ವಧು ವರರ ಕಡೆಯವರು ಮದುವೆಗೆ ಬೇಕಾದ ಎಲ್ಲ ಒಡವೆ, ಬಟ್ಟೆ ಬರೆಗಳನ್ನು ಖರೀದಿಸಿದರು. ಮದುವೆಯ ದಿನ ಬಂಧು ಬಳಗದವರು ಮಂಟಪಕ್ಕೆ ಬಂದರು, ಪೂಜಾರಿ ಮದುವೆಯ ಮಂತ್ರ ಪಠಿಸಲು ಪ್ರಾರಂಭಿಸಿದರು.
ಹುಡುಗಿಯ ಕುತ್ತಿಗೆಗೆ ಹುಡುಗ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಹುಡುಗಿ ಅಡ್ಡ ಕೈ ಇಟ್ಟಳು ಏನಾಯಿತು ಎಂದು ಕೇಳಿದಾಗ ಹುಡುಗಿ ಅರ್ಜೆಂಟ್ ಆಗಿ ಬಾಥರೂಮ್ ಗೆ ಹೋಗಬೇಕು ಬಂದ ನಂತರ ತಾಳಿ ಕಟ್ಟಿಸಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ ಆಗ ದೇವೇಂದ್ರನ ತಂದೆ ತಾಳಿ ಕಟ್ಟಿಸಿಕೊಂಡು ಹೋಗು ಎಂದು ಎಷ್ಟು ಹೇಳಿದರೂ ಹುಡುಗಿ ಕೇಳದೆ ಅರ್ಜೆಂಟ್ ಅರ್ಜೆಂಟ್ ಆಗಿ ಬಾಥರೂಮ್ ಗೆ ಓಡಿ ಹೋದಳು. ಬಹಳ ಹೊತ್ತು ಕಳೆದರೂ ಹುಡುಗಿ ಬಾಥರೂಮ್ ಗೆ ಹೋದವಳು ಬರಲಿಲ್ಲ.
ಸ್ವಲ್ಪ ಸಮಯದ ನಂತರ ಹುಡುಗಿಯ ಅತ್ತೆ ಹುಡುಗಿಯನ್ನು ಕರೆದುಕೊಂಡು ಬರುತ್ತೇನೆ ಎಂದು ಹೋದರು ಅವರ ಹಿಂದೆ ಹುಡುಗಿಯ ಕಡೆ ಸಂಬಂಧಿಕರೆಲ್ಲರೂ ಮಂಟಪದಿಂದ ಇಳಿದು ಕೆಳಗೆ ಹೋದರು. ಅರ್ಧ ಗಂಟೆ, ಒಂದು ಗಂಟೆ ಕಳೆದರೂ ಹುಡುಗಿಯಾಗಲಿ, ಹುಡುಗಿಯ ಕಡೆಯವರಾಗಲಿ ಬರಲಿಲ್ಲ ಮದುವೆ ಮಾಡಿಸಲು ಬಂದಿದ್ದ ಪೂಜಾರಿ ಅಲ್ಲಿಂದ ಎಸ್ಕೇಪ್ ಆಗಿದ್ದರು. ಹುಡುಗಿ ಕಡೆಯವರು ದೇವೇಂದ್ರ ಕೊಟ್ಟ ಎರಡು ಲಕ್ಷ ರೂಪಾಯಿ ಹಾಗೂ ದೇವೇಂದ್ರನ ಮನೆಯವರು ತಮ್ಮ ಸೊಸೆಗೆಂದು ಮಾಡಿಸಿಕೊಟ್ಟ 10 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನದ ಒಡವೆಗಳನ್ನು ತೆಗೆದುಕೊಂಡು ಮದುವೆ ಮಂಟಪದಿಂದ ಓಡಿ ಹೋಗಿದ್ದರು.
ದೇವೇಂದ್ರನಿಗೆ ಇದು ಮೋಸದ ಜಾಲ ಎಂದು ತಿಳಿಯಿತು. ಆ ಹುಡುಗಿ ಹಾಗೂ ಅವಳ ಕುಟುಂಬಸ್ಥರು ನೂರು ಜನ ಹುಡುಗರಿಗೆ ಮದುವೆ ಆಗುವುದಾಗಿ ನಂಬಿಸಿ ಅವರ ಬಳಿ ಇದ್ದ ಹಣ ಹಾಗೂ ಒಡವೆಗಳನ್ನು ದೋಚಿ ಪರಾರಿಯಾಗುತ್ತಿದ್ದರು. ನಂತರ ದೇವೇಂದ್ರ ತನಗಾದ ಮೋಸದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ. ಮದುವೆ ಹೆಣ್ಣಿನ ಫೋಟೊ ಮತ್ತು ವಿಡಿಯೋಗಳನ್ನು ಪೊಲೀಸರಿಗೆ ಸಾಕ್ಷಿಯಾಗಿ ನೀಡಲಾಯಿತು ಆದರೆ ಪೊಲೀಸರಿಗೆ ಆ ಹುಡುಗಿಯನ್ನು ಹಿಡಿಯಲು ಆಗಲಿಲ್ಲ. ಇದೆ ರೀತಿ ಭಾರತದಲ್ಲಿ ದಿನನಿತ್ಯ ಅನೇಕ ಕೇಸ್ ಗಳು ದಾಖಲಾಗುತ್ತಿವೆ.
ಇಂದೋರ್ ನಲ್ಲಿ ಒಬ್ಬ ಮಹಿಳೆ ಬೇರೆ ಬೇರೆ ರಾಜ್ಯಗಳಿಗೆ ಹೋಗಿ 60 ವರ್ಷ ಮೇಲ್ಪಟ್ಟ ಗಂಡಸರನ್ನು ಟಾರ್ಗೆಟ್ ಮಾಡುತ್ತಿದ್ದಳು. ಮಾಯದ ಮಾತುಗಳನ್ನಾಡಿ ಬಲೆಗೆ ಬೀಳಿಸಿಕೊಂಡು ನಂತರ ಅವರ ಬಳಿ ಇರುವ ಒಡವೆ, ಹಣ ದೋಚಿ ಪರಾರಿಯಾಗುತ್ತಿದ್ದಳು. ಇದೀಗ ಪೊಲೀಸರು ಅವಳನ್ನು ಹಿಡಿದಿದ್ದಾರೆ. ಈ ಘಟನೆಗಳನ್ನು ನೋಡಿದ ಮೇಲೆ ಹುಡುಗ ಇರಲಿ ಹುಡುಗಿ ಇರಲಿ ಮದುವೆ ಆಗುವಾಗ ಸರಿಯಾಗಿ ತಿಳಿದುಕೊಂಡು ಆಗಬೇಕು.