ಜಗತ್ತಿನಲ್ಲಿ ನಡೆದಿರುವ ನಮಗೆ ಗೊತ್ತಿಲ್ಲದ ಅನೇಕ ಕುತೂಹಲಕಾರಿ ಮತ್ತು ವಾಸ್ತವ ಸಂಗತಿ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಪ್ರಪಂಚದಲ್ಲಿ ಒಂದು ರೀತಿಯ ವಿಚಿತ್ರ ಖಾಯಿಲೆ ಇದೆ. ಈ ಖಾಯಿಲೆ ಬಂದರೆ ಅಸಲು ಭಯವೇ ಆಗುವುದಿಲ್ಲ.ಅದರ ಹೆಸರು ಅರ್ಬಿತ್ ವಿತ್ ಖಾಯಿಲೆ ಇದು ತುಂಬಾ ಅಪರೂಪದ ಡಿಸಾರ್ಡರ್ ಆಗಿದೆ. ಇದು ಜಗತ್ತಿನಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ಕೇವಲ ನೂರು ಜನರಿಗೆ ಈ ಖಾಯಿಲೆ ಕಾಣಿಸಿಕೊಳ್ಳುತ್ತದೆ. ಈ ಖಾಯಿಲೆ ಬಂದರೆ ಮೆದುಳಿನಲ್ಲಿರುವ ಅಮೆಗ್ ಡೆಲ್ ನಿಧಾನವಾಗಿ ನಾಶ ಹೊಂದುತ್ತೆ. ಭಯಕ್ಕೆ ಸಂಭಂದಿಸಿದ ಅವವ್ಯಯಗಳನ್ನು ಈ ಅಮೆಗ್ ಡೆಲ್ ನಿರ್ವಹಿಸುವುದು. ಹಾಗಾಗಿ ಈ ಖಾಯಿಲೆ ಬಂದವರಿಗೆ ಯಾವ ವಿಷಯದಲ್ಲೂ ಭಯವೇ ಆಗುವುದಿಲ್ಲವಂತೆ.
ವೀರೇಂದ್ರ ಸೆಹ್ವಾಗ್ ಬಗ್ಗೆ ಯಾರಿಗೆ ಗೊತ್ತಿಲ್ಲ. ಪ್ರಸಿದ್ಧ ಕ್ರಿಕೆಟ್ ಆಟಗಾರ. ಇವರಿಗೆ 12 ವರ್ಷ ಇದ್ದಾಗ ಇವರ ತಂದೆ ಕ್ರಿಕೆಟ್ ಬಿಟ್ಟು ಬಿಡಲು ಹೇಳಿದ್ದರಂತೆ. ಆಟ ಆಡುವಾಗ ಬಿದ್ದು ಹಲ್ಲು ಮುರಿದಿದ್ದರಿಂದ ಹೀಗೆ ಹೇಳಿದ್ದಂತೆ. ಆದರೆ ಅವರ ತಾಯಿ ಪ್ರೋತ್ಸಾಹದಿಂದ ಕ್ರಿಕೆಟನ್ನು ಮುಂದುವರೆಸಿದರು. ಪ್ರಪಂಚ ವ್ಯಾಪ್ತಿಯಾಗಿ ಉಪಯೋಗಿಸುವ ವಿದ್ಯುತ್ ಶಕ್ತಿಯಲ್ಲಿ ಸರಿ ಸುಮಾರು 0.013% ಶಕ್ತಿಯನ್ನು ಗೂಗಲ್ ಕಂಪನಿ ಬಳಸಿಕೊಳ್ಳುತ್ತಿದೆ. ಈ ಶಕ್ತಿ ಒಂದು ದಿನದಲ್ಲಿ ಸುಮಾರು 2 ಲಕ್ಷ ಮನೆಗಳಿಗೆ ವಿದ್ಯುತ್ ಶಕ್ತಿ ನೀಡುವುದಕ್ಕೆ ಸಮ.
ಮನುಷ್ಯ ಬೆಳಿಗ್ಗೆಗಿಂತಲೂ ಸಂಜೆ ವೇಳೆ ತನ್ನ ಎತ್ತರದ 1ಸೆಂಟಿ ಮೀಟರ್ ಕಮ್ಮಿಯಾಗುತ್ತೆ. ಇದಕ್ಕೆ ಕಾರಣ ನಮ್ಮ ಶರೀರದ ಏರಡು ಖಂಡಗಳ ನಡುವೆ ಮೃದುವಾದ ಸ್ಪಾಂಜ್ ರೀತಿಯ ಕಾರ್ಟಿಲೆಟ್ ಎಂಬ ಪದಾರ್ಥ ಇರುತ್ತೆ. ನಾವು ಬೆಳಿಗ್ಗೆಯಿಂದ ಸಂಜೆಯವರೆಗೆ ಮಾಡುವ ಕೆಲಸದಿಂದ ಮತ್ತು ಆ ಖಂಡದ ಮೇಲೆ ಬೀಳುವ ಒತ್ತಡದಿಂದ ಆ ಕಾರ್ಟಿಲೆಟ್ ನಿಧಾನವಾಗಿ ಅಂಟಿಕೊಳ್ಳುತ್ತದೆ ಇದರಿಂದ ಸಂಜೆ ಸಮಯದಲ್ಲಿ ನಮ್ಮ ಎತ್ತರ 1 ಸೆಂಟಿ ಮೀಟರ್ ಕಮ್ಮಿ ಆಗುತ್ತೆ.
ಜಿರಾಫೆ ನಾಲಿಗೆ ಉದ್ದ 21 ಸೆಂ. ಮೀ ಇರುತ್ತೆ ಹಾಗೂ ಮನುಷ್ಯನಲ್ಲಿ ಅತ್ಯಂತ ಉದ್ದನೆಯ ನಾಲಿಗೆ ಇರುವ ವ್ಯಕ್ತಿ ನಿಕ್ ಸ್ಟೈಲ್ ಬರ್ನ್ ಆಗಿದ್ದಾರೆ. ಈತನ ನಾಲಿಗೆಯ ಉದ್ದ ಸರಿಸುಮಾರು 10.1 ಸೆಂ. ಮೀ ಅಂದರೆ 3.97 ಇಂಚಿನಿಂದ ಪ್ರಪಂಚದಲ್ಲಿ ಅತಿ ಉದ್ದದ ನಾಲಿಗೆ ಹೊಂದಿದ ವ್ಯಕ್ತಿಯಾಗಿ ಗಿನ್ನಿಸ್ ದಾಖಲೆ ಗಳಿಸಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಟ್ವಿಟರ್ ಅತ್ಯಂತ ಹೆಚ್ಚು ಬಳಕೆ ಮಾಡುವ ಆ್ಯಪ್ ಆಗಿದೆ. ಒಂದು ದಿನಕ್ಕೆ 14ಕೋಟಿ ಟ್ವಿಟ್ಸ್ ಅಪ್ಲೋಡ್ ಆಗುತ್ತವೆ. ಈ ಪದಗಳನ್ನೆಲ್ಲಾ ಒಂದು ಬುಕ್ ನಲ್ಲಿ ಬರೆಯುತ್ತಾ ಹೋದರೆ ಸುಮಾರು 10ಮಿಲಿಯನ್ ಪುಟಗಳು ಅಂದರೆ 1ಕೋಟಿ ಪುಟಗಳಿರುವ ಪುಸ್ತಕ ಆಗುತ್ತಂತೆ.
ಸ್ವಿಡೆನ್ ಸರ್ಕಾರ ಅಲ್ಲಿನ ಹೈಸ್ಕೂಲ್ ವಿದ್ಯಾರ್ಥಿಗೆ ಪ್ರತಿ ತಿಂಗಳು 570ಡಾಲರ್ ನೀಡುತ್ತೆ ಸ್ವೀಡಿಷ್ ನಿಯಮದ ಪ್ರಕಾರ 16ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ತಮ್ಮ ಹೈಸ್ಕೂಲ್ ತರಗತಿಗಳನ್ನ ಸರಿಯಾದ ವೇಳೆಗೆ ಹಾಜರಾದರೆ ಅವರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 570 ಡಾಲರ್ ನೀಡುತ್ತೆ. ಇದು ಕೇವಲ ಅಲ್ಲಿನ ಪ್ರಜೆಗಳಿಗೆ ಮಾತ್ರ ಸೀಮಿತವಾಗಿರದೆ ಬೇರೆ ದೇಶದಿಂದ ಓದಲು ಬರುವ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ.
ಹಗ್ ಮಿ ವೆಂಡಿಂಗ್ ಮಷೀನ್ ಈ ಮಷೀನ್ ಅನ್ನು ಅಪ್ಪಿಕೊಂಡರೆ ಉಚಿತ ಕೋಲಾ ಕೊಡುತ್ತೆ. ಇದನ್ನು ತಯಾರಿಸಿದ್ದು ಕೋ ಕೊ ಕೋಲಾ ಕಂಪನಿಯವರು. ಇದನ್ನು ಮೊದಲ ಬಾರಿಗೆ ಸಿಂಗಾಪುರ ನ ನ್ಯಾಷನಲ್ ಯುನಿರ್ಸಿಟಿ ಅಲ್ಲಿ ಸ್ಥಾಪಿಸಿದರು. ಈ ಪ್ರಯೋಗಕ್ಕೆ ಅವರು ಊಹಿಸಿದಕ್ಕಿಂತ ಹೆಚ್ಚಿನ ಮನ್ನಣೆ ದೊರಕಿತು.
ಪ್ರಪಂಚದಲ್ಲೇ ಉತ್ತರ ಸಿಗದ ಒಂದು ಪ್ರಶ್ನೆ ಮಹಿಳೆಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಎಂಬುದಕ್ಕೆ ಪ್ರಮುಖ ಬರಹಗಾರ ಟೆರಿಲೀ ಈ ವಿಷಯದ ಕುರಿತು 200 ಪುಟಗಳ ಪುಸ್ತಕ “ಅ ಮ್ಯಾನ್ಸ್ ಗೈಡ್ ಟು ಅಂಡರ್ಸ್ಟ್ಯಾಂಡಿಂಗ್ ವುಮೆನ್” ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಪುಸ್ತಕ ಲಕ್ಷಗಟ್ಟಲೆ ಮಾರಾಟವಾಯಿತು. ಆದರೆ ಆಶ್ಚರ್ಯವೆಂದರೆ ಈ ಪುಸ್ತಕದಲ್ಲಿರುವ ಹಾಳೆಗಳೆಲ್ಲಾ ಖಾಲಿಹಾಳೆಗಳಾಗಿತ್ತು. ಈ ಮೂಲಕ ಮಹಿಳೆಯನ್ನ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ.
ಟಿ ವಿ ಯಲ್ಲಿ ಬರುವ ಯಾವ ಜಾಹೀರಾತು ಚಿತ್ರೀಕರಣವು ಸಹ ನಿಜವಾದ ವಸ್ತುಗಳಿಂದ ಮಾಡುವುದಿಲ್ಲ ಎಲ್ಲವೂ ಆರ್ಟಿಫಿಷಿಯಲ್ ತಂತ್ರಜ್ಞಾನದ ಮೂಲಕ ಮಾಡಲಾಗಿರುತ್ತದೆ. ಎಲ್ಲವೂ ನವ ನವೀನ ತಂತ್ರಜ್ಞಾನದ ಕೈ ಚಳಕವಾಗಿದೆ.