ಟಾಟಾ ಮೋಟಾರ್ಸ್ ಎರಡು ಸಾವಿರದ ಇಪ್ಪತ್ತೈದನೇ ವರ್ಷದೊಳಗೆ ಸುಮಾರು ಹತ್ತು ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಿ ಮಾರುಕಟ್ಟೆಗೆ ತರುವ ಯೋಜನೆಯ ಬಗ್ಗೆ ಮಾಹಿತಿ ಕೊಟ್ಟಿದ್ದರು. ಆ ಪಟ್ಟಿಯಲ್ಲಿರುವ ಒಂದು ವಿಶೇಷ ವಾಹನದ ಬಗ್ಗೆ ನಾವಿಂದು ಮಾಹಿತಿಯನ್ನು ತಿಳಿದುಕೊಳ್ಳೋಣ. ಟಾಟಾ ಮೋಟಾರ್ಸ್ ನ ಟಾಟಾ ನೆಕ್ಸ್ನನೇವಿ ಇಂದಿನ ಎಲೆಕ್ಟ್ರಿಕ್ ವಾಹನದಲ್ಲಿ ಒಂದು ಉತ್ತಮ ಕೊಡುಗೆ ಎಂದು ಹೇಳಬಹುದು.ಅದೇ ಸಂಸ್ಥೆಯಿಂದ ಈ ವರ್ಷದ ಎರಡನೇ ಭಾಗದಲ್ಲಿ ಅಂದರೆ ಎರಡು ಸಾವಿರದ ಇಪ್ಪತ್ತೆರಡರ ಒಳಗೆ ಟಾಟಾ ಅಲ್ಟ್ರೋಜ್ ವಿ ಬಿಡುಗಡೆ ಆಗುವ ಮಾಹಿತಿಗಳು ಹೊರ ಬಂದಿವೆ.
ಈಗಾಗಲೇ ಟಾಟಾ ಅಲ್ಟ್ರೋಜ್ ಪೆಟ್ರೋಲ್ ವರ್ಷನ್ ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದೆ.ಅದೇ ರೀತಿ ಇದರ ಎಲೆಕ್ಟ್ರಿಕ್ ವರ್ಷನ್ ಆದ ಅಲ್ಟ್ರೋಜ್ ವಿ ಬರಬಹುದು ಎಂಬ ಅಭಿಪ್ರಾಯವಿದೆ. ಟಾಟಾ ನೆಕ್ಸೋನ್ ಮಾರುಕಟ್ಟೆಯಲ್ಲಿ ಉನ್ನತಿ ಪಡೆಯಲು ಮುಖ್ಯ ಕಾರಣ ಅದರಲ್ಲಿ ಬಳಸಿದಂತಹ ಜೀಫ್ಟ್ರನ್ ತಂತ್ರಜ್ಞಾನ. ಜೀಫ್ಟ್ರನ್ ತಂತ್ರಜ್ಞಾನ ಎತ್ತರದ ಪ್ರದೇಶಗಳಲ್ಲಿ ಏರುಗಳನ್ನು ಎರುವುದಕ್ಕೆ ಬಳಸಲಾಗಿದೆ.
ಅಲ್ಟ್ರೋಜ್ ವಿಯ ವಿಶೇಷತೆಯ ಬಗ್ಗೆ ನೋಡುವುದಾದರೆ ಗಂಟೆಗೆ ನೂರಾಇಪ್ಪತ್ತು ಕಿಲೋಮೀಟರುಗಳ ಟಾಪ್ ಸ್ಪೀಡ್ ಹಾಗೂ ತೊಂಬತ್ನಾಲ್ಕು.ಏಳು ಕಿಲೋ ವ್ಯಾಟ್ ಬಿಪ್ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೋನಸ್ ಮೋಟಾರ್ಸ್ ಹೊಂದಿದೆ.
ಈ ವಾಹನವನ್ನು ಡಿಜಿಟಲ್ ಇನ್ಸ್ಟ್ರುಮೆಂಟ ಸ್ಟ್ರಕ್ಚರ್ ಏರ್ ಕಂಡೀಷನ್ ಕನೆಕ್ಟೆಡ್ ಅಪ್ಲಿಕೇಶನ್ ಹಾಗೂ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಗಳೊಡನೆ ತಯಾರಿಸ ಬಹುದು ಎಂಬ ಅನಿಸಿಕೆ ಇದೆ. ಇನ್ನು ಇದರ ಬೆಲೆಯ ವಿಚಾರಕ್ಕೆ ಬಂದರೆ ಮುನ್ನೂರು ಕಿಲೋ ಮೀಟರ್ ವೇರಿಯೆಂಟ್ ಅಂದರೆ ಬೆಸ್ ವೇರಿಯೆಂಟ್ ಹನ್ನೆರಡು ಲಕ್ಷಕ್ಕೆ ಹಾಗೂ ಐದುನೂರು ಕಿಲೋ ಮೀಟರ್ ರೇಂಜ್ ಕೊಡುವಂತಹ ಕಾರನ್ನು ಹದಿನೈದು ಲಕ್ಷದವರೆಗೆ ಮಾರಾಟ ಮಾಡಬಹುದು.
ಈ ರೀತಿಯಾದ ಒಂದು ಉತ್ತಮ ಗುಣಮಟ್ಟದ ವಾಹನ ಟಾಟಾ ಮೋಟಾರ್ಸ್ ಕಡೆಯಿಂದ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಈ ಮಾಹಿತಿಯನ್ನು ನಿವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.