WhatsApp Group Join Now
Telegram Group Join Now

ನಮ್ಮೆಲ್ಲರ ಅಚ್ಚು ಮೆಚ್ಚಿನ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆ ಚಿತ್ರವಾದ ಜೇಮ್ಸ್ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ, ಕುತೂಹಲ ಮೂಡಿಸಿರುವ ಸಿನಿಮಾ ಆಗಿದೆ. ಅವರ ಜನ್ಮ ದಿನದಂದೇ ಮಾರ್ಚ್ 17 ರಂದು ರಾಜ್ಯ ಹೊರರಾಜ್ಯ ದಷ್ಟೇ ಅಲ್ಲದೆ ಹೊರ ದೇಶದಲ್ಲೂ ಬಿಡುಗಡೆ ಆಗಿ ಅಭರಿಸುತ್ತಿದೆ.

ಸುಮಾರು 4500 ಚಿತ್ರ ಮಂದಿರದಲ್ಲಿ ಬಿಡುಗಡೆ ಆಗಿದ್ದು ಲಕ್ಷಾಂತರ ಅಭಿಮಾನಿಗಳು ಸಿನಿಮಾ ನೋಡಲು ರಾತ್ರಿ ಪೂರ ಕ್ಯೂ ಅಲ್ಲಿ ನಿಂತು ಪುನೀತ ಅವ್ರ ನಟನೆಯನ್ನು ಕಣ್ಣು ತುಂಬಿಕೊಂಡರು. ಅವ್ರ ನಟನೆ ನೋಡಿದ ಎಲ್ಲರೂ ನಿಜವಾಗಿಯೂ ಪುನೀತ್ ಅವರು ನಮ್ಮ ಬಿಟ್ಟು ಹೋಗಿಲ್ಲ ಇಲ್ಲೇ ಇನ್ನೂ ಜೀವಂತವಾಗಿ ಇದ್ದಾರೆ ಎನ್ನುವಷ್ಟು ಚಿತ್ರಣ ಸಹಜವಾಗಿ ಮೂಡಿ ಬಂದಿದ್ದು ಜೇಮ್ಸ್ ಸಿನಿಮಾ ಅಲ್ಲಿ ಪುನೀತ ಅವರ ಪಾತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಒಬ್ಬ ಸೆಕ್ಯೂರಿಟಿ ಏಜೆನ್ಸಿ ಒನ್ ಆರ್ಮಿ ಮ್ಯಾನ್ ಶೋ ಅನ್ನೋ ಹಾಗೆ ಪುನೀತ್ ಅವ್ರು ಸಂತೋಷ್ ಹೆಸರಿನ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಜೇಮ್ಸ್​’ ಸಿನಿಮಾದಲ್ಲಿ ಎರಡು ಶೇಡ್​ನಲ್ಲಿ ಪುನೀತ್ ​ಮಿಂಚಿದ್ದಾರೆ. ಸಿನಿಮಾ ಆರಂಭದಲ್ಲಿ ಅವರ ಎಂಟ್ರಿ ಥ್ರಿಲ್​ ನೀಡುತ್ತದೆ. ಕಾರ್​ ಚೇಸಿಂಗ್​ ದೃಶ್ಯಗಳು ಪ್ರೇಕ್ಷಕನ ಮೈಯಲ್ಲಿ ಪವರ್​ ಹರಿಸುತ್ತದೆ. . ವೈರಿಗಳನ್ನು ರಕ್ಷಣೆ ಮಾಡಿ, ಆ ಬಳಿಕ ಅವರಿಗೆ ದುಸ್ವಪ್ನವಾಗಿ ಕಾಡುವ ಮೇಜರ್​ ಸಂತೋಷ್​ ಆಗಿ ಪುನೀತ್​ ಗಮನ ಸೆಳೆಯುತ್ತಾರೆ. ಫೈಟಿಂಗ್​ ದೃಶ್ಯಗಳಲ್ಲಿ ಪುನೀತ್ ಹಾಕಿದ ಶ್ರಮ ಎದ್ದು ಕಾಣುತ್ತದೆ​. ಪೂರ್ಣಗೊಳ್ಳದೆ ಇರುವ ಕೆಲ ದೃಶ್ಯಗಳಿಗೆ ಕತ್ತರಿ ಹಾಕದೆ, ಅದನ್ನು ಬೇರೆ ರೀತಿಯಲ್ಲಿ ತೋರಿಸುವ ಚಾಕಚಕ್ಯತೆಯನ್ನು ನಿರ್ದೇಶಕ ಚೇತನ್​ ಕುಮಾರ್ ಮಾಡಿದ್ದಾರೆ. ಪರದೆಯಮೇಲೆ ಪುನೀತ್​ ಅವರನ್ನು ಕಣ್ತುಂಬಿಕೊಳ್ಳುವ ಅಭಿಮಾನಿಗಳಿಗೆ ಅಪ್ಪು​ ಇಲ್ಲ ಎಂಬ ನೋವು ಪ್ರತಿ ದೃಶ್ಯದಲ್ಲೂ ಕಾಡದೆ ಇರದು.

ಈ ಚಿತ್ರದ ನಿರ್ದೇಶರು ಚೇತನ್ ಕುಮಾರ್ ಅವರು ರಾಜ್ಯದ ಜನತೆಗೆ ಗೆಳೆಯ‌ ಪುನೀತ್ ಅವರ ಪರವಾಗಿ ಅಭಿಮಾನಿಗಳಿಗೆ ಕೃತಜನತೆ ಸಲ್ಲಿಸುವುದರ ಜೊತೆಗೆ ಅವರು ಒಂದು ಮನವಿಯನ್ನು ಕೂಡ ಮಾಡಿದ್ದಾರೆ ಅದೇನು ಅಂಥ ನೋಡೋಣ ಬನ್ನಿ. ಎಲ್ಲ ಚಿತ್ರರಂಗದ ಮಾಲೀಕರಿಗೆ, ವಿತರಕರಿಗೆ ಹಾಗೂ ಪ್ರದರ್ಶಕರಿಗೆ ತುಂಬು ಹೃದಯ ಧನ್ಯವಾದಗಳನ್ನು ಅರ್ಪಿಸುತ್ತಾ ನಿಮ್ಮೆಲ್ಲರ ಸಹಕಾರದೊಂದಿಗೆ ಜೇಮ್ಸ್ ಚಿತ್ರವು ವಾರದ ಮೊದಲೇ ರಾಜ್ಯಾದ್ಯಂತ ಭರ್ಜರಿ ಹಿಟ್ ಆಗಿದ್ದು ಹೀಗೇನೇ 2 ನೆ ವಾರವೂ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದರು. ಕಾರಣವೆಂದರೆ ರಾಜ್ಯದಲ್ಲಿ ಪರಭಾಷಾ ಚಿತ್ರ ಹಾವಳಿ ಜಾಸ್ತಿ ಆಗಿದ್ದು ಹಲವಾರು ಅಭಿಮಾನಿಗಳು ಚೇತನ್ ಅವರಿಗೆ ಕರೆ ಮಾಡಿ ದಯವಿಟ್ಟು ಅತ್ಯದ್ಬುತ ಪ್ರದರ್ಶನ ಇದ್ದರೂ ಕೂಡ ಹಲವಾರು ಚಿತ್ರ ಮಂದಿರದಲ್ಲಿ ಸಿನಿಮಾ ತೆಗಿತಾ ಇದಾರೆ ಎಂದು ಹೇಳಿದ್ದಾರೆ.

ದಯವಿಟ್ಟು ಇದು ಅಪ್ಪು ಅವರ ಕೊನೆಯ ಚಿತ್ರ ಇನ್ನೂ ಹಲವಾರು ಅಭಿಮಾನಿಗಳು ನೋಡಲು ಭಾಕಿ ಇದೆ. ಈ ಸಿನಿಮಾ ಒಂದು ಭಾವನಾತ್ಮಕ ಮೂವೀ ಆಗಿದ್ದು ದಯವಿಟ್ಟು ಚಿತ್ರ ಮಂದಿರದಿಂದ ತೆಗೆಯದೆ ಚಿತ್ರ ನೋಡಲು ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದರು. ಆದಷ್ಟು ಕನ್ನಡ ಚಿತ್ರವನ್ನು ಚಿತ್ರ ಮಂದಿರದಲ್ಲೇ ನೋಡಿ ಕನ್ನಡ ಉಳಿಸಿ ಬೆಳೆಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅವರ ಮನವಿಗೆ ಸ್ಪಂದಿಸುತ್ತಾರ ಎಂದು ಕಾದು ನೋಡಬೇಕಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: