ವಿಶ್ವ ಮಾನಸಿಕ ಆರೋಗ್ಯ ಫೆಡರೇಶನ್(ಡಬ್ಲ್ಯೂಎಫ್ ಎಂಎಚ್) ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಣೆ ಮಾಡುತ್ತಿದೆ. ಈ ದಿನದಂದು ಕರಿಯರ್ ಇಂಡಿಯಾ ಯಾವೆಲ್ಲಾ ಉದ್ಯೋಗಗಳು ನಿಮ್ಮ ನೆಮ್ಮದಿಯನ್ನು ಹಾಳು ಮಾಡುವಂತದ್ದು ಮತ್ತು ನಿಮಗೆ ಸ್ಟ್ರೆಸ್ ಉಂಟು ಮಾಡುತ್ತವೆ ಎಂದು ತಿಳಿಸುತ್ತಿದೆ.ಎಲ್ಲಿ ಅತೀ ಹೆಚ್ಚು ವೇತನ ಸಿಗುತ್ತೋ ಅಲ್ಲಿ ಡಿಪ್ರೇಶನ್ ಸೃಷ್ಟಿಮಾಡುವಷ್ಟು ಕೆಲಸ ಇದ್ದೇ ಇರುತ್ತದೆ. ಇತ್ತೀಚಿಗಿನ ಸ್ಟಡಿ ಪ್ರಕಾರ ಡಿಪ್ರೇಶನ್ ಸೃಷ್ಟಿ ಮಾಡುವ ಕೆಲವೊಂದು ಜಾಬ್ ಗಳ ಪಟ್ಟಿ ಮಾಡಲಾಗಿದೆ. ಈ ಹುದ್ದೆಗಳು ಹೈ ಲೆವಲ್ ನ ಸ್ಟ್ರೆಸ್ ಹಾಗೂ ಡಿಪ್ರೇಶನ್ ಗೆ ಕಾರಣವಾಗಿದೆ.
ಯಾರು ಕೇರ್ ಟೇಕರ್ ಪ್ರೊಫೆಶನ್ ನಲ್ಲಿ ಇರುತ್ತಾರೋ ಅವರು ಹೆಚ್ಚಿನ ಸ್ಟ್ರೆಸ್ ಹಾಗೂ ಡಿಪ್ರೇಶನ್ ಅನುಭವಿಸಿರುತ್ತಾರೆ. ಇನ್ನೂ ಹಿರಿಯ ನಾಗರಿಕನಾಗಿ ಯಾರು ಇರುತ್ತಾರೋ ಅವರು ಹೆಚ್ಚಿನ ಡಿ’ಪ್ರೇಶನ್ ಗೆ ಒಳಗಾಗುತ್ತಾರೆ. ಇಲ್ಲಿ ನೀವು ಮಾನಸಿಕ ಖಿ’ನ್ನತೆಗೆ ಒಳಗಾಗುವುದು ಮಾತ್ರವಲ್ಲದೇ ಉತ್ತಮ ಸ್ಯಾಲರಿ ಪಡೆಯುವಲ್ಲಿ ಕೂಡಾ ವಿಫಲರಾಗುತ್ತೀರಿ.ಸಮಾಜದಲ್ಲಿ ಶಿಕ್ಷಕಿ ಎಂದ್ರೆ ಗೌರವಾನಿತ್ವ ಹುದ್ದೆ. ಹಾಗೂ ಜ್ಞಾನವರ್ಧನೆಗೆ ಶಿಕ್ಷಕರ ರೋಲ್ ಪ್ರಮುಖವಾದುದು. ಹಾಗಾಗಿ ಅವರ ಹುದ್ದೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಆದ್ರೆ ಶಿಕ್ಷಕ ಹುದ್ದೆಯ ಇನ್ನೊಂದು ಮುಖ ಕೂಡಾ ನೀವು ನೋಡಬಹುದು. ಶೇಕಡಾ ೩೦ ರಷ್ಟು ಶಿಕ್ಷಕರು ಹೈ ಲೆವೆಲ್ ಡಿಪ್ರೇಶನ್ ನಿಂದ ನರಳುತ್ತಿರುತ್ತಾರೆ. ತಮ್ಮ ಹುದ್ದೆಯಿಂದ ಅವರು ಹ್ಯಾಪಿ ಯಾಗಿರುತ್ತಾರೆ ಆದ್ರೆ ಅದೇ ಹುದ್ದೆಯಿಂದ ಕ್ರಮೇಣ ಅವರು ಸ್ಟ್ರೆಸ್ ಗೆ ಒಳಗಾಗುತ್ತಾರೆಯಂತೆ.ಇಂಜಿನಿಯರ್ ಹುದ್ದೆ ಹೇಳುವಷ್ಟು ಸುಲಭದ ಕೆಲಸವಲ್ಲ. ಇಂಜಿನಿಯರ್ಸ್ ಹೇಳುವಂತೆ ಇದು ಒಂದು ಕಂಪ್ಲೀಟ್ ಡೆ’ಪ್ರೆಶನ್ ಕೆಲಸ ಹಾಗೂ ಇದರಿಂದ ಒಬ್ಬ ವ್ಯಕ್ತಿಯ ಕಂಪ್ಲೀಟ್ ಮೆಂಟಲ್ ಹೆಲ್ತ್ ಹಾಳಾಗುತ್ತದೆ. ಹೊಸ ಹೊಸ ಪ್ರಾಜೆಕ್ಟ್ ಗಳು, ಡೆಡ್ ಲೈನ್, ಕೆಲಸಗಾರರ ಸಮಸ್ಯೆ, ಟಾರ್ಗೆಟ್ ರೀಚ್ ಮಾಡಲು ಸಾಧ್ಯವಾಗದೇ ಇರುವುದು ಮುಂತಾದ ಸಮಸ್ಯೆಯಿಂದ ಇಂಜಿನೀಯರ್ಸ್ ಕೂಡಾ ಡಿ’ಪ್ರೇಶನ್ ಗೆ ಒಳಗಾಗುತ್ತಾರೆ. ಹಾಗಾಗಿ ಈ ಫೀಲ್ಡ್‌ನಲ್ಲಿ ಹೆಚ್ಚು ಮಂದಿ ಆತ್ಮಹತ್ಯೆ ಎಂತಹ ಕ್ರೂರ ಕೃತ್ಯಕ್ಕೆ ಕೈ ಹಾಕುತ್ತಾರೆ.ಸಮಾಜದಲ್ಲಿ ಅತೀ ಹೆಚ್ಚು ಪ್ರಾಮುಖ್ಯತೆ ಇರುವುದು ಸೋಶಲ್ ವರ್ಕರ್ಸ್ ಗೆ. ನಮಗೆ ಅವರ ಅಗತ್ಯವಿದ್ದಾಗ ಅವರು ಯಾವಾಗಲೂ ನಮ್ಮ ಸಹಾಯಕ್ಕೆ ಸಿದ್ಧರಿರುತ್ತಾರೆ. ಸೋಶಲ್ ವರ್ಕರ್ ಅಂದ್ರೆ ಕೇರಿಂಗ್, ಲವಿಂಗ್ ಹಾಗೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ರುಪುಗೊಳ್ಳುವಲ್ಲಿ ಅವರು ಸಹಾಯ ಮಾಡುತ್ತಾರೆ. ಇತರರಿಗೆ ಸಹಾಯ ಮಾಡುವ ಉದ್ದೇಶದಿಂದ ಹಲವಾರು ಮಂದಿ ಈ ಫೀಲ್ಡ್ ಗೆ ಎಂಟ್ರಿ ಆಗುತ್ತಾರೆ. ಆದ್ರೆ ಕೊನೆಯಲ್ಲಿ ಇವರು ತುಂಬಾ ಡಿಪ್ರೇಶನ್ ಹಾಗೂ ಸ್ಟ್ರೆಸ್ ಗೆ ಒಳಗಾಗುತ್ತಾರೆ. ಜಗತ್ತಿನಲ್ಲಿರುವ ಸಮಾಜಸೇವಕರಲ್ಲಿ ಸುಮಾರು ಶೇಕಡಾ 15 ರಷ್ಟು ಮಂದಿ ಸ್ಟ್ರೆಸ್ ಸಮಸ್ಯೆಯಿಂದ ಬಳಲುತ್ತಾರೆ.
ಧ್ಯಾನದ ಅಭ್ಯಾಸವು ಮನಸ್ಸಿನ ಎಲ್ಲ ಚಿಂತೆಗಳನ್ನು ದೂರ ಮಾಡುತ್ತದೆ. ಮಾನಸಿಕ ನೆಮ್ಮದಿಯನ್ನು ನೀಡುತ್ತದೆ.ಮಾನಸಿಕ ಆರೋಗ್ಯಕ್ಕೆ, ಮನಸ್ಸಿನ ಶಾಂತಿ-ನೆಮ್ಮದಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಇದಕ್ಕೆ ಮುಖ್ಯವಾಗಿ ಸಹಕರಿಸುವ ಯೋಗಾಭ್ಯಾಸಗಳೆಂದರೆ ಧಾರಣ ಮತ್ತು ಧ್ಯಾನ. ಧಾರಣವು ಮಾನಸಿಕ ಏಕಾಗ್ರತೆಗೆ ಬಹಳಷ್ಟು ಉಪಯುಕ್ತ. ಧ್ಯಾನವು ಮನಸ್ಸಿನ ಎಲ್ಲಆಲೋಚನೆಗಳನ್ನು ದೂರ ಮಾಡುತ್ತದೆ.ಧಾರಣ, ಧ್ಯಾನದ ಅಭ್ಯಾಸವು ಮನಸ್ಸಿನ ಎಲ್ಲ ಚಿಂತೆಗಳನ್ನು ದೂರ ಮಾಡುತ್ತದೆ. ಮಾನಸಿಕ ನೆಮ್ಮದಿಯನ್ನು ನೀಡುತ್ತದೆ.ಮನಸ್ಸಿನ ಚಂಚಲತೆಯನ್ನು ದೂರ ಮಾಡುತ್ತದೆ. ಮನಸ್ಸಿನ ಅರಿವು, ಸೂಕ್ಷ್ಮ ಸಂವೇದನೆಯನ್ನು ಸೃಷ್ಟಿಸುತ್ತದೆ. ಏಕಾಗ್ರತೆ ಮತ್ತು ಗ್ರಹಣ ಶಕ್ತಿಯನ್ನು ಹೆಚ್ಚಿಸುತ್ತದೆ. ಋುಣಾತ್ಮಕ ಭಾವನೆಗಳನ್ನು ಮನಸ್ಸಿನಿಂದ ಹೊರಹಾಕುತ್ತದೆ. ಧನಾತ್ಮಕ ಭಾವನೆಗಳ ಬೆಳವಣಿಗೆಗೆ ಸಹಾಯಕಾರಿ.ಮಾನಸಿಕ ಉದ್ವೇಗದಿಂದ ದೂರವಾಗಲು ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಿ. ದಿನದಲ್ಲಿಆಗಾಗ ವಿಶ್ರಾಂತಿ ತೆಗೆದುಕೊಳ್ಳಿ. ಸೃಜನಶೀಲ ಮತ್ತು ಮನಸ್ಸಿಗೆ ಮುದ ಮತ್ತು ತೃಪ್ತಿಯನ್ನು ನೀಡುವ ಕೆಲಸಗಳಲ್ಲಿತೊಡಗಿಕೊಳ್ಳಿ. ಪ್ರತಿಯೊಬ್ಬರನ್ನು ನಗು-ನಗುತ್ತಾ ಆತ್ಮೀಯತೆಯಿಂದ ಮಾತನಾಡಿಸಿ. ದ್ವೇ‚ಷ ಭಾವನೆಯನ್ನು ನಮ್ಮಿಂದ ತೆಗೆದು ಹಾಕಿ ಪ್ರತಿಯೊಬ್ಬರಲ್ಲೂಸ್ನೇಹ ಭಾವನೆಯನ್ನು ಹೊಂದಿ. ನಕಾರಾತ್ಮಕ ಒತ್ತಡ ಹೆಚ್ಚಾಗಿರುವ ಸಮಯದಲ್ಲಿಮಾನಸಿಕವಾಗಿ ದುರ್ಬಲರಾಗಿರುತ್ತೇವೆ. ಹಾಗಾಗಿ ಇದನ್ನು ನಿಯಂತ್ರಿಸಿ. ಕನಿಷ್ಠ 5 ನಿಮಿಷಗಳವರೆಗೆ ದೀರ್ಘವಾಗಿ ಉಸಿರಾಡಿ.