ಮನೆಯಲ್ಲಿ ಇರುವ ಮಹಿಳೆಯರು ಅಥವಾ ಹೆಣ್ಣುಮಕ್ಕಳು ಕೆಲವು ಸಣ್ಣ ಸಣ್ಣ ತಪ್ಪುಗಳನ್ನು ಮಾಡುತ್ತಾರೆ ಇದರಿಂದ ಆರ್ಥಿಕ ವಿಷಯದಲ್ಲಿ, ಆರೋಗ್ಯದಲ್ಲಿ ಹೀಗೆ ಮನೆಯಲ್ಲಿ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಚಾಣಕ್ಯ ನೀತಿಯ ಪ್ರಕಾರ ಮಹಿಳೆಯರು ಅಥವಾ ಹೆಣ್ಣುಮಕ್ಕಳು ಯಾವ ತಪ್ಪುಗಳನ್ನು ಮಾಡಬಾರದು ಎಂದು ಈ ಲೇಖನದಲ್ಲಿ ನೋಡೋಣ.
ಮನೆಯಲ್ಲಿರುವ ಹೆಂಗಸರು ಕೆಲವು ತಪ್ಪು ಮಾಡುವುದರಿಂದ ಕಷ್ಟ ಅನುಭವಿಸಬೇಕಾಗುತ್ತದೆ. ಚಾಣಕ್ಯ ನೀತಿಯ ಪ್ರಕಾರ ಮಹಿಳೆಯರು ಕೆಲವು ತಪ್ಪುಗಳನ್ನು ಮಾಡಬಾರದು. ಕೆಲವು ಹೆಣ್ಣುಮಕ್ಕಳಿಗೆ ಅಥವಾ ಮಹಿಳೆಯರಿಗೆ ಕುಳಿತುಕೊಂಡು ಊಟ ಮಾಡುವಾಗ ಕಾಲು ಅಲ್ಲಾಡಿಸುವ ರೂಢಿ ಇರುತ್ತದೆ ಆದರೆ ಹೆಣ್ಣುಮಕ್ಕಳು ಅಥವಾ ಮಹಿಳೆಯರು ಈ ರೂಢಿಯನ್ನು ಮುಂದುವರೆಸಬಾರದು. ಮನೆಯಲ್ಲಿರುವ ಪೊರಕೆಯನ್ನು ಹೆಣ್ಣುಮಕ್ಕಳು ಅಥವಾ ಮಹಿಳೆಯರು ತುಳಿಯುವುದಾಗಲಿ ಒದೆಯುವುದಾಗಲಿ ಅಥವಾ ಅದಕ್ಕೆ ಗೌರವ ಸೂಚಿಸಿದಂತೆ ಇರುವುದು ಮಾಡಬಾರದು ಇದರಿಂದ ಲಕ್ಷ್ಮೀ ಮನೆಗೆ ಬರುವುದಿಲ್ಲ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.
ಕೆಲವು ಮಹಿಳೆಯರು ರಾತ್ರಿ ಮಲಗುವಾಗ ತೊಳೆಯುವ ಪಾತ್ರೆಗಳನ್ನು ಹಾಗೆಯೆ ಇಟ್ಟು ಮಲಗುತ್ತಾರೆ ಹೀಗೆ ಮಾಡಬಾರದು ಇದರಿಂದ ಸಾಕಷ್ಟು ಕಷ್ಟ ಅನುಭವಿಸುತ್ತಾರೆ. ಮನೆಯಲ್ಲಿ ಅಡುಗೆ ಮನೆಯೂ ದೇವರ ಕೋಣೆಯಂತೆ ಅಡುಗೆ ಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು ಆ ಬಗ್ಗೆ ಹೆಣ್ಣುಮಕ್ಕಳು ಗಮನ ಹರಿಸಬೇಕು. ಮನೆಯ ಮುಖ್ಯ ದ್ವಾರ ಅಥವಾ ಯಾವುದೆ ದ್ವಾರದ ಬಾಗಿಲನ್ನು ಕಾಲಿನಿಂದ ತೆರೆಯುವುದಾಗಲಿ, ಮುಚ್ಚುವುದಾಗಲಿ ಮಾಡಬಾರದು ಹೀಗೆ ಮಾಡಿದರೆ ಲಕ್ಷ್ಮೀ ದೇವಿಗೆ ಅವಮಾನ ಮಾಡಿದಂತಾಗುತ್ತದೆ. ಬಾಗಿಲುಗಳನ್ನು ಕೈಯಿಂದಲೆ ತೆಗೆಯಬೇಕು ಮತ್ತು ಮುಚ್ಚಬೇಕು ಇದರಿಂದ ಯಾವುದೆ ತೊಂದರೆ ಆಗುವುದಿಲ್ಲ. ಸೂರ್ಯೋದಯದ ನಂತರ ಮನೆಯಲ್ಲಿ ಕಸ ಗುಡಿಸುವುದು, ನೆಲ ವರೆಸುವುದು ಮಾಡಬಾರದು ಇದರಿಂದ ಕಷ್ಟ ಪಡಬೇಕಾಗುತ್ತದೆ.
ಮನೆಯಲ್ಲಿ ಇರುವ ಹೆಣ್ಣುಮಕ್ಕಳು ಅಥವಾ ಮಹಿಳೆಯರು ಬಹಳ ತಡವಾಗಿ ಏಳಬಾರದು ತಡವಾಗಿ ಏಳುವುದರಿಂದ ದಿನವೆಲ್ಲಾ ಸೊಂಬೇರಿಯಾಗಿ ಕಳೆಯಬೇಕಾಗುತ್ತದೆ. ಪ್ರತಿಯೊಂದು ಮನೆಯಲ್ಲೂ ಪ್ರತಿದಿನ ದೀಪ ಹಚ್ಚಬೇಕು. ಮನೆಯಲ್ಲಿ ಇರುವ ಮಹಿಳೆಯರು ಅಥವಾ ಹೆಣ್ಣುಮಕ್ಕಳು ದೀಪ ಹಚ್ಚದೆ ಇರಬಾರದು. ದೀಪ ಹಚ್ಚದೆ ಇರುವ ಮನೆಯಲ್ಲಿ ಕಷ್ಟ ಕಟ್ಟಿಟ್ಟಬುತ್ತಿ. ಮನೆಯಲ್ಲಿ ಇರುವ ಮಹಿಳೆಯರು ಅಥವಾ ಹೆಣ್ಣುಮಕ್ಕಳು ಹಣೆಗೆ ಕುಂಕುಮ ಅಥವಾ ಸ್ಟಿಕ್ಕರ್ ಇಟ್ಟುಕೊಳ್ಳಬೇಕು. ಈಗಿನ ದಿನಗಳಲ್ಲಿ ಕುಂಕುಮ ಇಟ್ಟುಕೊಳ್ಳದೆ ಇರುವುದು ಫ್ಯಾಷನ್ ಆಗಿದೆ. ಮಹಿಳೆಯರು ಕುಂಕುಮ ಇಟ್ಟುಕೊಳ್ಳದೆ ಇರುವುದು ಅವರ ಗಂಡನಿಗೆ ಶ್ರೇಯಸ್ಸಲ್ಲ. ಹೆಣ್ಣುಮಕ್ಕಳು ಈ ಎಲ್ಲ ವಿಷಯದ ಬಗ್ಗೆ ಕಾಳಜಿ ವಹಿಸಬೇಕು, ಈ ತಪ್ಪುಗಳನ್ನು ಮತ್ತೆ ಮಾಡಬಾರದು ಎಂದು ಚಾಣಕ್ಯ ನೀತಿಯಲ್ಲಿ ವಿವರಿಸಲಾಗಿದೆ. ಈ ತಪ್ಪುಗಳನ್ನು ಮಾಡಿದರೆ ಕಷ್ಟ ಅನುಭವಿಸಲು ಸಿದ್ಧರಿರಬೇಕು. ಈ ಮಾಹಿತಿಯನ್ನು ನೀವು ಪಾಲಿಸಿ, ನಿಮ್ಮ ಸ್ನೇಹಿತರಿಗೂ ತಿಳಿಸಿ.