ನಮ್ಮ ದೇಶ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಭಯೋತ್ಪಾದನೆ, ಭ್ರಷ್ಟಾಚಾರ, ಬಡತನ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ ಅವುಗಳಲ್ಲಿ ನಿರುದ್ಯೋಗವು ಒಂದು ಪ್ರಮುಖ ಸಮಸ್ಯೆಯಾಗಿದೆ. ಕರ್ನಾಟಕ ರಾಜ್ಯ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಖಾಲಿ ಇರುವ ಹುದ್ದೆಗಳು ಯಾವುವು, ಅರ್ಜಿ ಸಲ್ಲಿಸುವುದು ಹೇಗೆ, ಅರ್ಹತೆಯ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (RDPR) ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕೇಂದ್ರ ಕಛೇರಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ / ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ವಿದ್ಯಾರ್ಹತೆ ಪಿಯುಸಿ / ಪದವಿ / ಸ್ನಾತಕೋತ್ತರ ಪದವಿಯನ್ನು ನಿಗದಿಪಡಿಸಿದ ವಿಭಾಗಗಳಲ್ಲಿ ಪಡೆದಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ 45 ವರ್ಷ ವಯಸ್ಸು ಮೀರಿರಬಾರದು. ಹುದ್ದೆಗಳು 03 ಜೆ.ಜೆ.ಎಮ್ ಸಮಾಲೋಚಕರು, 01 ಐ.ಟಿ.ಸಮಾಲೋಚಕರು, 01 ಡಬ್ಲ್ಯೂ.ಕ್ಯೂ.ಎಮ್.ಎಸ್ ಸಮಾಲೋಚಕರು, 03 ಡಬ್ಲ್ಯೂ.ಕ್ಯೂ.ಎಮ್.ಎಸ್ ಸಮಾಲೋಚಕರು, 01 ಡಬ್ಲ್ಯೂ.ಕ್ಯೂ.ಎಮ್.ಎಸ್ ಐಏಮ್ಐಎಸ್ ಸಮಾಲೋಚಕರು ಬೇಕಾಗಿದ್ದಾರೆ.
ವೃತ್ತ ಕಛೇರಿ – ಜಲ ಜೀವನ ಮಿಷನ್ ಹುದ್ದೆಗಳಿಗೆ ಕರೆಯಲಾಗಿದೆ ಅವುಗಳೆಂದರೆ 04 ಹಿರಿಯ ಸಮಾಲೋಚಕರು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ – ಜಲ ಜೀವನ ಮಿಷನ್ ಹುದ್ದೆಗಳಿಗೆ ಕರೆಯಲಾಗಿದೆ ಯಾವುವೆಂದರೆ 02 ಜಿಲ್ಲಾ ಯೋಜನಾ ವ್ಯವಸ್ಥಾಪಕ, 05 ಜಿಲ್ಲಾ ಎಮ್ಐಎಸ್ ಸಮಾಲೋಚಕರು, 32 ನೀರಿನ ಮಾದರಿಗಳ ಸಂಗ್ರಹಕೋಶದ ಉಸ್ತುವಾರಿ, 80 ಸೂಕ್ಷ್ಮಾಣುಜೀವಿ ಶಾಸ್ತ್ರಜ್ಞ, 04 ಹಿರಿಯ ವಿಶ್ಲೇಷಣೆಗಾರ, 06 ಕಿರಿಯ ವಿಶ್ಲೇಷಣೆಗಾರ. ಜಿಲ್ಲಾ ಪಂಚಾಯಿತಿ ಕಛೇರಿ – ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹುದ್ದೆಗಳನ್ನು ಕರೆಯಲಾಗಿದೆ ಅವು ಯಾವುವೆಂದರೆ 01 ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು, 01 ಜಿಲ್ಲಾ ಎಮ್ಐಎಸ್ ಸಮಾಲೋಚಕರು, 01ಜಿಲ್ಲಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕರು. ಈ ಎಲ್ಲ ಹುದ್ದೆಗಳನ್ನು 1 ವರ್ಷದ ಅವಧಿಗೆ ಗುತ್ತಿಗೆ ಅಥವಾ ಹೊರಗುತ್ತಿಗೆಯ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ನಂತರ ಕಾಲಕಾಲಕ್ಕೆ ಅವರ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ರೂ15,000 ದಿಂದ 1,50,000 ವರೆಗೆ ಮಾಸಿಕ ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಫೀಶಿಯಲ್ ವೆಬ್‌ಸೈಟ್‌ನಲ್ಲಿ ನೀಡಲಾದ ನಿಗದಿತ ಅರ್ಜಿ ನಮೂನೆಗಳನ್ನು ಹುದ್ದೆಗಳಿಗೆ ಅನುಗುಣವಾಗಿ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಸಲ್ಲಿಸಬೇಕಾದ ವಿಳಾಸ ಹೀಗಿದೆ ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2ನೇ ಮಹಡಿ, ಕೆ.ಹೆಚ್.ಬಿ ಕಟ್ಟಡ, ಕಾವೇರಿ ಭವನ, ಕೆ.ಜಿ.ರಸ್ತೆ, ಬೆಂಗಳೂರು – 5600009. 28-04-2021 ರ ಸಂಜೆ-5-30 ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವೇಳೆ ‘ನಾನು ಈ ಹುದ್ದೆಗೆ ಯಾವ ರೀತಿ ಸೂಕ್ತನಾಗಿದ್ದೇನೆ’ ಎಂದು ಒಂದು ಪುಟದಲ್ಲಿ 100 ಅಕ್ಷರಗಳಿಗೆ ಮೀರದಂತೆ ಬರೆದಿರಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಉದ್ಯೋಗ ಪಡೆದುಕೊಳ್ಳಿ.