5 ಎಕರೆ ಭೂಮಿಯಲ್ಲಿ ಒಂದು ಅಂಗುಲ ಜಾಗವನ್ನು ಹಾಳು ಮಾಡದೆ ಹಲವಾರು ರೀತಿಯ ಬೆಳೆಗಳನ್ನು ಬೆಳೆದು ಭೂಮಿಯನ್ನು ಸದುಪಯೋಗಪಡಿಸಿಕೊಂಡ ಕೊಪ್ಪಳದ ಸಮಗ್ರ ಕೃಷಿ ರೈತ ಹೂ ಬಸಪ್ಪನವರ ಯಶಸ್ಸಿನ ಕಥೆಯನ್ನು ನಾವು ಇಲ್ಲಿ ತಿಳಿಯೋಣ.
ಇವರು ಐದು ಎಕರೆಯ ಜಾಗದಲ್ಲಿ ಹೇರಳವಾಗಿ ಹಲವಾರು ಬೆಳೆಗಳನ್ನ ಬೆಳೆದಿದ್ದಾರೆ ಇವರು ಎರೆಹುಳುಗಳ ಗೊಬ್ಬರವನ್ನು ಕೂಡ ಉತ್ಪಾದಿಸುತ್ತಾರೆ ಒಂದು ಹಿಡಿ ಮಣ್ಣಿನಲ್ಲಿ ಸುಮಾರು ಎರಡು ನೂರು ಹುಳಗಳನ್ನ ಇವರು ಪೋಷಿಸುತ್ತಿದ್ದಾರೆ. ಎರೆಹುಳು ಗೊಬ್ಬರವನ್ನು ತಾವಾಗಿಯೇ ತಯಾರಿಸಿಕೊಳ್ಳಬಹುದು ಹಾಗೆ ಪ್ರತಿಯೊಬ್ಬ ರೈತನು ಸ್ವಯಂ ಪ್ರೇರಿತ ನಾಗಬೇಕು ಎಂದು ಇವರು ರೈತರನ್ನು ಹುರಿದುಂಬಿಸುವ ಕಾರ್ಯವನ್ನು ಮಾಡುತ್ತಾರೆ
ಭೂಮಿ ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡರೆ ಆಕೆ ಯಾವತ್ತೂ ರೈತನ ಕೈಬಿಡುವುದಿಲ್ಲ ಎಂಬುದು ಇವರ ಹೇಳಿಕೆಯಾಗಿದೆ ಹಾಗೆ ಪ್ರತಿಯೊಬ್ಬ ವ್ಯಕ್ತಿಯು ಸ್ವಾವಲಂಬಿಯಾಗಬೇಕು ಯಾರಾದರೂ ಒಬ್ಬ ಉತ್ತಮ ವ್ಯಕ್ತಿಗಳ ಸಲಹೆಗಳನ್ನು ತಿರಸ್ಕಾರ ಮಾಡದೆ ಅವುಗಳನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಂಡು ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಹೊಂದಿದ್ದರೆ ರೈತನ ಜೀವನ ಆನಂದಮಯವಾಗಿರುತ್ತದೆ.
ರೈತ ದೇಶದ ಬೆನ್ನೆಲುಬು ರೈತ ನಿಲ್ಲದೆ ಯಾವ ವ್ಯಕ್ತಿಯು ಬದುಕಲಾರ ಇಡೀ ಸೃಷ್ಟಿಗೆ ಅನ್ನ ನೀಡುವತ ಇದೇ ರೈತ ಇಂತಹ ಒಂದು ಉತ್ತಮ ರೈತ ಎಂದು ಹೆಸರುವಾಸಿಯಾದ ಬಸಪ್ಪನವರು ಇವರ ಐದು ಎಕರೆ ಜಾಗದಲ್ಲಿ ಹಲವಾರು ವಿಧದ ಗಿಡಗಳನ್ನು ಬೆಳೆಸಿದ್ದಾರೆ ಕುಂಬಳ ಬಳ್ಳಿ ಗಲಾಟೆ ಹೂವು ಕನಕಾಂಬರ ಅಶ್ವಮೇಧ ಗಿಡ (ಒಂದು ರೀತಿಯ ಗಿಡಮೂಲಿಕೆ )ಮತ್ತು ಪ್ಯಾಶನ್ ಫ್ರುಟ್ಸ್ ಪಲಾವು ಎಲೆ, ಟೊಮೆಟೊ ಹಾಗೆ ಇನ್ನಿತರ ತರಕಾರಿಗಳು ನಿಂಬೆ ಹುಲ್ಲು ಮೆಕ್ಕೆಜೋಳ ಇನ್ನೂ ಅನೇಕ ವಿಧದ ಬೆಳೆಗಳನ್ನು ಇವರು ಬೆಳೆದಿದ್ದು ಇವರಿಗೆ ಅವಶ್ಯಕತೆ ಇರುವ ಬೆಳೆಯನ್ನು ಮಾರುಕಟ್ಟೆಯಿಂದ ತರುವ ಅವಶ್ಯಕತೆಯೇ ಇವರಿಗೆ ಇರುವುದಿಲ್ಲ.
ಹಾಗೆಯೇ ಇವರು ಬಿಳಿಗಿರಿಯ ಬೆಳಿರಾಜಗಿರಿಯ ಬೀಜವನ್ನ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ ಇವರು ಕೊಪ್ಪಳದಲ್ಲಿ ನಡೆಯುವ ಕೃಷಿಮೇಳ ಅಥವಾ ಇನ್ನಿತರ ರೈತ ಸಂಬಂಧಿ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡುತ್ತಾರೆ ಇವರ ಐದು ಎಕರೆ ಜಾಗದಲ್ಲಿ ಒಂದು ಸಣ್ಣ ಜಾಗವು ಕೂಡ ಕಾಲಿ ಇಲ್ಲ ಯಾವುದಾದರೂ ಒಂದು ಗಿಡವನ್ನ ಅಥವಾ ಬಳ್ಳಿಯನ್ನು ಇವರು ಬೆಳೆಸಿದ್ದಾರೆ ಅವುಗಳ ಮಧ್ಯೆ ಸಂಚಾರ ಮಾಡುವಾಗಲೂ ಸಹ ಇವರು ಅವುಗಳಿಗೆ ನೋವಾಗಬಹುದೇನೋ ಎಂಬಂತೆ ಕಾಳಜಿ ವಹಿಸುತ್ತಾರೆ ಹಾಗೆಯೇ ಇವರು ಯಾವ ನೈಸರ್ಗಿಕ ಸಂಪನ್ಮೂಲವನ್ನು ಸಹ ಹಾಳು ಮಾಡು ಮಾಡುವುದಿಲ್ಲ ಎಲ್ಲವನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುತ್ತಾರೆ.
ಇದೇ ರೀತಿಯಾಗಿ ಇವರು ಹಸುವಿನ ಗಂಜಲ ಮಜ್ಜಿಗೆ ಮತ್ತು ಬೆಲ್ಲವನ್ನು ಮಿಶ್ರಣ ಮಾಡಿ ಒಂದು ರೀತಿಯ ದಿವ್ಯ ಔಷಧಿಯನ್ನು ಗಿಡಗಳಿಗೆ ಉಣಿಸುತ್ತಾರೆ ಅದು ಗಿಡಗಳಿಗೆ ತಮ್ಮ ಪೌಷ್ಟಿಕಾಂಶವನ್ನು ಒದಗಿಸುವುದರ ಜೊತೆಗೆ ಫಲಿತಾಂಶವನ್ನು ತುಂಬಾ ಚೆನ್ನಾಗಿ ನೀಡುತ್ತದೆ ಹೀಗೆ ಇವರು ಮಾಡಿರುವ ಈ ಎಲ್ಲಾ ಕಾರ್ಯಗಳು ಪ್ರತಿಯೊಬ್ಬ ರೈತನಿಗೂ ಸ್ಪೂರ್ತಿ ಆಗಬೇಕಿದೆ ರೈತ ತಾನು ಸ್ವಾವಲಂಬಿಯಾಗಿ ಬದುಕಬೇಕಿದೆ. Video Credit for kalamadhyama youtube
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.