ನಾವಿಂದು ನಿಮಗೆ ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯಲ್ಲಿ ನಡೆಯುತ್ತಿರುವ ನೇಮಕಾತಿಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಚಾಲಕ ಹುದ್ದೆಗಳು ನೇಮಕಾತಿ ನಡೆಯುತ್ತಿದ್ದು ಉದ್ಯೋಗ ಸ್ಥಳ ಬೆಂಗಳೂರು ಆಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಜನವರಿ ಮುವತ್ತೊಂದರೊಳಗಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಹತ್ತನೇ ತರಗತಿ ಪಾಸ್ ಆಗಿರುವವರು ಕೂಡ ಅರ್ಜಿಯನ್ನು ಸಲ್ಲಿಸಬಹುದು.
ಈ ಕುರಿತು ಕೇಂದ್ರ ಜಲಸಂಪನ್ಮೂಲ ಇಲಾಖೆ ಹೊರಡಿಸಿರುವ ನೋಟಿಸಿನಲ್ಲಿ ಯಾವ ಮಾಹಿತಿ ಇದೆ ಎಂಬುದನ್ನು ನೋಡುವುದಾದರೆ ಖಾಲಿ ಇರುವ ಉದ್ಯೋಗ ಸ್ಟಾಪ್ ಕಾರ್ ಡ್ರೈವರ್ ಇಲ್ಲಿ ಒಟ್ಟು ಇಪ್ಪತ್ನಾಲ್ಕು ಹುದ್ದೆಗಳು ಖಾಲಿ ಇವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ಹತ್ತೊಂಬತ್ತು ಸಾವಿರದಿಂದ ಅರವತ್ಮುರು ಸಾವಿರದವರೆಗೆ ಇರುತ್ತದೆ. ಇನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ವಯೋಮಿತಿಯನ್ನು ಹೊಂದಿರಬೇಕು ಎಂದರೆ ಅರ್ಜಿ ಸಲ್ಲಿಸುವುದಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ ಹದಿನೆಂಟು ವರ್ಷ ವಯಸ್ಸಾಗಿರಬೇಕು ಗರಿಷ್ಠ ಇಪ್ಪತ್ತೇಳು ವರ್ಷಗಳು ನಡೆಯುತ್ತದೆ ಇದು ಯುಆರ್ ಅಭ್ಯರ್ಥಿಗಳಿಗೆ. ಇನ್ನು ಒಬಿಸಿ ಕೆಟಗರಿಯಲ್ಲಿ ಮುವತ್ತು ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಎಸ್ಸಿಎಸ್ಟಿ ಕೆಟಗರಿಯ ಮೂವತ್ತೆರಡು ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂಬುದನ್ನು ನೋಡುವುದಾದರೆ ಅಭ್ಯರ್ಥಿಗಳು ಹತ್ತನೇ ತರಗತಿ ಪಾಸಾಗಿರಬೇಕು ಜೊತೆಗೆ ಹೆವಿ ಡ್ರೈವಿಂಗ್ ಲೈಸೆನ್ಸ್ ಇರಬೇಕು ಜೊತೆಗೆ ಮೂರು ವರ್ಷ ವಾಹನ ಚಲಾಯಿಸಿದ ಅನುಭವ ಪ್ರಮಾಣಪತ್ರವನ್ನು ಹೊಂದಿರಬೇಕು. ಜೊತೆಗೆ ಮೋಟಾರ್ ವೆಹಿಕಲ್ ಗಳಿಗೆ ಸಂಬಂಧಿಸಿದಂತೆ ಸಣ್ಣಪುಟ್ಟ ಮೆಕ್ಯಾನಿಕ್ ರಿಪೇರಿ ಜ್ಞಾನ ತಿಳಿದಿರಬೇಕು. ಜೊತೆಗೆ ಹಿಂದಿ ಮತ್ತು ಇಂಗ್ಲೀಷನ್ನು ಓದುವುದಕ್ಕೆ ಬರೆಯುವುದಕ್ಕೆ ಬರಬೇಕು. ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಜನವರಿ ಮೂವತ್ತೊಂದು ಎರಡು ಸಾವಿರದ ಇಪ್ಪತ್ತೆರಡರ ಒಳಗಾಗಿ ತಮ್ಮ ಅರ್ಜಿಯನ್ನು ಆಫ್ ಲೈನ್ ಮೂಲಕ ಸಲ್ಲಿಸಬೇಕು.
ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದನ್ನು ನೋಡುವುದಾದರೆ ಕೇಂದ್ರ ಜಲಸಂಪನ್ಮೂಲ ಇಲಾಖೆಯ ನೇಮಕಾತಿಗೆ ಸಂಬಂಧಿಸಿದ ನೋಟಿಫಿಕೇಶನ್ ಹೊರಡಿಸಲಾಗಿದೆ ಅದರಲ್ಲಿ ಅರ್ಜಿಯನ್ನು ಸಹ ನೀಡಲಾಗಿದೆ ಆ ಅರ್ಜಿಯ ಪ್ರಿಂಟನ್ನು ತೆಗೆದುಕೊಂಡು ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ತುಂಬಬೇಕು. ಜೊತೆಗೆ ಅಲ್ಲಿ ಕೇಳಲಾಗಿರುವ ದಾಖಲೆಗಳೊಂದಿಗೆ ನಿಮ್ಮ ಅರ್ಜಿಯನ್ನು ರೀಜನಲ್ ಡೈರೆಕ್ಟರ್, ಸಿ ಜಿ ಡಬ್ಲ್ಯೂ ಬಿ, ಎಸ್ ಡಬ್ಲ್ಯೂ ಆರ್, ಭೂಜಾಲ್ ಭವನ್, ಟ್ವೆಂಟಿ ಸೆವೆಂತ್ ಮೇನ್, ಸೆವೆಂತ್ ಕ್ರಾಸ್, ಎಚ್ಎಸ್ಆರ್ ಲೇಔಟ್, ಸೆಕ್ಟರ್ 1, ಬೆಂಗಳೂರು – 560102 ಈ ವಿಳಾಸಕ್ಕೆ ಕಳುಹಿಸಬೇಕು. ಸಮಯ ಕಡಿಮೆ ಇರುವುದರಿಂದ ಸ್ಪೀಡ್ ಪೋಸ್ಟ್ ಮಾಡುವುದು ಉತ್ತಮ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಅವರಿಗೆ ಡ್ರೈವಿಂಗ್ ಟೆಸ್ಟ್ ನಡೆಸುತ್ತಾರೆ. ಮತ್ತೆ ಅಲ್ಲಿ ನೀವು ಎಸೆಸೆಲ್ಸಿಯಲ್ಲಿ ತೆಗೆದುಕೊಂಡ ಅಂಕಗಳ ಆಧಾರದ ಮೇಲೆ ಮತ್ತು ಡ್ರೈವಿಂಗ್ ಟೆಸ್ಟ್ ನಲ್ಲಿ ತೆಗೆದುಕೊಂಡ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುತ್ತಾರೆ. ನೀವು ಕೂಡ ಜಲಸಂಪನ್ಮೂಲ ಇಲಾಖೆಯ ಚಾಲಕ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತಿಯನ್ನು ಅರ್ಹತೆಯನ್ನು ಹೊಂದಿದ್ದರೆ ಈ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.