ಸಾಮಾನ್ಯವಾಗಿ ಮನೆಯಲ್ಲಿ ಮಕ್ಕಳು ಹುಟ್ಟಿದಾಗ ಕಪ್ಪು ಬೊಟ್ಟನ್ನು ಇಡುತ್ತಾರೆ. ಹಾಗೆಯೇ ಕಪ್ಪು ದಾರವನ್ನು ಮಕ್ಕಳಿಗೆ ಕಟ್ಟುತ್ತಾರೆ. ಅಂದರೆ ಮಕ್ಕಳ ಎರಡೂ ಕೈಗಳಿಗೆ ಕಟ್ಟುತ್ತಾರೆ. ಮಕ್ಕಳ ಎರಡೂ ಕಾಲುಗಳಿಗೆ ಕಟ್ಟುತ್ತಾರೆ. ಹಾಗೆಯೇ ಇದರ ಜೊತೆಗೆ ದೃಷ್ಟಿಯನ್ನು ತೆಗೆಯುತ್ತಾರೆ. ಆದರೆ ಈಗ ಈ ರೂಢಿಗಳು ಕಡಿಮೆಯಾಗುತ್ತಿದೆ. ಕಾರಣ ಅತಿಯಾದ ಆಧುನಿಕತೆಗೆ ನಾವು ಸಾಗುತ್ತಿರುವ ಜೀವನ. ದೊಡ್ಡವರು ಹೇಳಿಕೊಟ್ಟು ಹೋದ ಎಷ್ಟೋ ರೂಢಿಗಳು ನಮ್ಮಿಂದ ದೂರವಾಗುತ್ತಿವೆ. ಆದರೆ ನಾವು ಇಲ್ಲಿ ಕಪ್ಪುದಾರವನ್ನು ಕಟ್ಟುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕಪ್ಪುಬಣ್ಣವು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ಗುಣವನ್ನು ಹೊಂದಿದೆ. ಆದ್ದರಿಂದ ಕೆಟ್ಟಶಕ್ತಿಗಳಿಂದ ಮುಕ್ತಿ ಪಡೆಯಲು ಕಪ್ಪು ಬಣ್ಣದ ಬಟ್ಟೆ ಮತ್ತು ದಾರವನ್ನು ಬಳಸಲಾಗುತ್ತದೆ. ಹಾಗೆಯೇ ಹುಡುಗಿಯರು ಹಣೆಗೆ ಕಪ್ಪು ಬೊಟ್ಟನ್ನು ಸಹ ಇಡುತ್ತಾರೆ. ಕಪ್ಪುದಾರ ಅತಿಯಾದ ಶಕ್ತಿಯನ್ನು ಹೊಂದಿದೆ. ಇದು ತುಂಬಾ ಪ್ರಭಾವಶಾಲಿ ಆಗಿದೆ. ಹಾಗೆಯೇ ಅಷ್ಟೇ ಲಾಭದಾಯಕ ಆಗಿದೆ. ಮನೆಯಲ್ಲಿ ಅನಾವಶ್ಯಕ ಜಗಳ ಮತ್ತು ಮನಸ್ತಾಪಗಳು ಉಂಟಾಗುತ್ತಿದ್ದರೆ ಶನಿದೇವರ ಗುಡಿಗೆ ಹೋಗಿ ಶನಿವಾರ ಒಂದು ಮೀಟರ್ ದಾರವನ್ನು ತೆಗೆದುಕೊಳ್ಳಬೇಕು.
ಅದರಲ್ಲಿ 108 ಗಂಟುಗಳನ್ನು ಕಟ್ಟಬೇಕು. ಹತ್ತಿರದಲ್ಲಿ ಶನಿ ದೇವಸ್ಥಾನ ಇಲ್ಲದಿದ್ದಲ್ಲಿ ಮನೆಯಲ್ಲಿ ಓಂ ಶನೈಶ್ವರಾಯ ನಮಃ ಎಂದು ಗಂಟನ್ನು ಹಾಕಬೇಕು. ನಂತರ ಮನೆಯ ಮುಖ್ಯ ಬಾಗಿಲಿಗೆ ಕಟ್ಟಬೇಕು. ಇದರಿಂದ ಯಾವುದೇ ದುಷ್ಟ ಶಕ್ತಿಗಳ ಆಗಮನ ಮನೆಯ ಒಳಗೆ ಆಗುವುದಿಲ್ಲ. ಹಾಗೆಯೇ ಮನೆಯಲ್ಲಿ ಉಪಾಯ ಎಂದರೆ ಮನೆಯಲ್ಲಿ ಯಾವುದಾದರೂ ಸದಸ್ಯರ ಆರೋಗ್ಯ ಏರುಪೇರು ಆದರೆ ಅಥವಾ ಪದೇ ಪದೇ ಆರೋಗ್ಯದಲ್ಲಿ ತೊಂದರೆ ಆಗುತ್ತಿದ್ದರೆ ಅಥವಾ ಬೇರೆ ರೀತಿಯಲ್ಲಿ ಯಾವುದಾದರೂ ತೊಂದರೆಗಳನ್ನು ಎದುರಿಸುವ ಸ್ಥಿತಿ ಬರುತ್ತಿದ್ದರೆ ಆಗ ಕಪ್ಪುದಾರವನ್ನು ತೆಗೆದುಕೊಂಡು ಶನಿ ದೇವರ ದೇವಸ್ಥಾನಕ್ಕೆ ಹೋಗಬೇಕು. ಅಲ್ಲಿ ಸಿಂಧೂರವನ್ನು ಹಚ್ಚಿ ತಂದು ಇಟ್ಟುಕೊಳ್ಳಬೇಕು.
ಹಾಗೆಯೇ ಎರಡನೇ ದಿನ ಸ್ವಚ್ಛವಾಗಿ ಸದಸ್ಯರ ಕಾಲಿಗೆ ಕಟ್ಟಬೇಕು. ಇದರಿಂದ ಅವರ ಅಕ್ಕ ಪಕ್ಕದಲ್ಲಿ ಇರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇನ್ನೊಬ್ಬರ ಕೆಟ್ಟ ದೃಷ್ಟಿ ಅವರಿಗೆ ಬೀಳುವುದಿಲ್ಲ. ಹಾಗೆಯೇ ಗರ್ಭಿಣಿಯರಿಗೆ ಸ್ವಲ್ಪ ಬೇಗವಾಗಿ ಕೆಟ್ಟ ದೃಷ್ಟಿಗಳು ಬೀಳುತ್ತವೆ. ಇದರಿಂದ ಹೊಟ್ಟೆಯಲ್ಲಿ ಇರುವ ಮಗುವಿನ ಮೇಲೆ ಅಡ್ಡ ಪರಿಣಾಮಗಳು ಉಂಟಾಗಬಹುದು. ಕಪ್ಪು ದಾರವನ್ನು ತೆಗೆದುಕೊಂಡು ಅವರ ತಲೆಯ ಮೇಲೆ ಮೂರು ಬಾರಿ ತಿರುಗಿಸಬೇಕು. ನಂತರದಲ್ಲಿ ಈ ದಾರವನ್ನು ಅರಳಿ ಮರದ ಹತ್ತಿರ ವಿಸರ್ಜಿಸಬೇಕು. ಇಲ್ಲವಾದಲ್ಲಿ ಯಾವುದಾದರೂ ನದಿಯಲ್ಲಿ ಸಹ ವಿಸರ್ಜಿಸಬಹುದು. ಮಗು ಹುಟ್ಟುವ ತನಕವೂ ಹೀಗೆ ಮಾಡಬಹುದು.