ಪವರ್ ಸ್ಟಾರ್ ಎಂದು ಕರೆಯಲ್ಪಡುವ ಪುನೀತ್ ರಾಜ್ ಕುಮಾರ್ ಅವರು ಹಲವಾರು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಹಾಗೆಯೇ ಸರಳತೆಯಿಂದ ಕೂಡಿದ ವ್ಯಕ್ತಿತ್ವ ಅವರದ್ದಾಗಿದೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂಬ ಮಾತನ್ನು ಮನದಟ್ಟು ಮಾಡಿಕೊಂಡು ಪ್ರತಿ ಸಿನಿಮಾದಲ್ಲೂ ಸಹ ಹೆಚ್ಚಿನ ಪರಿಶ್ರಮವನ್ನು ಕೈಗೊಂಡು ಹೆಚ್ಚಿನ ಸಂಖ್ಯೆಯ ಅಭಿಮಾನಿ ದೇವರುಗಳನ್ನು ಹೊಂದಿದ್ದಾರೆ .
ಪವರ್ ಸ್ಟಾರ್ ಖ್ಯಾತಿ ಪುನೀತ್ ರಾಜಕುಮಾರ ಅವರು ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡಿಸುತ್ತ ಬೆರೆಯುತ್ತಿದ್ದರು ಬಾಲ ನಟನಾಗಿ ಸಿನಿಮಾ ರಂಗವನ್ನು ಪ್ರವೇಶಿಸಿ ಎಲ್ಲರ ಅಭಿಮಾನವನ್ನು ಗಳಿಸಿದ್ದಾರೆ ಗಳಿಸುವಂತಹ ವಯಸ್ಸಿಗೆ ದಾನವನ್ನು ಮಾಡಿ ಯಾರಿಗೂ ಹೇಳಿದ ಹಾಗೆ ಹೊರಟು ಹೋಗಿದ್ದಾರೆ.ಯಾವಾಗಲೂ ಯುವಕರಿಗೆ ಪ್ರೇರಣೆಯಾಗಿದ್ದರು ಹಾಗೆಯೇ ಪ್ರೇರಣೆ ಮಾರ್ಗವನ್ನು ಅವರಿಗೆ ತೋರಿಸುತ್ತಿದ್ದರು ಕಷ್ಟವೆಂದು ಬಂದವರನ್ನು ಅವರು ಯಾವಾಗಲೂ ಕೂಡ ಕೈ ಬಿಟ್ಟಿಲ್ಲ ಏನಾದರೂ ಒಂದು ಸಹಾಯವನ್ನು ಮಾಡಿ ಕಳುಹಿಸುತ್ತಿದ್ದರು ನಾವು ಈ ಲೇಖನದ ಮೂಲಕ ಪುನೀತ್ ಅವರ ಕೆಲವು ಅನಿಸಿಕೆ ಬಗ್ಗೆ ತಿಳಿದುಕೊಳ್ಳೋಣ.
ಪುನೀತ್ ಅವರು ಹತ್ತನೆ ತರಗತಿ ಓದಿದ್ದಾರೆ ಹಾಗೆಯೇ ಹತ್ತನೆ ತರಗತಿ ಮುಗಿಸಿ ಕಂಪ್ಯೂಟರ್ ಕ್ಲಾಸ್ ಗೆ ಸೇರಿದ್ದರು ಪುನೀತ್ ಅವರು ತಾಯಿಯ ಜೊತೆಗೆ ಆಫೀಸ್ ಗೆ ಹೋಗುತಿದ್ದರು ಪುನೀತ ಅವರಿಗೆ ಚಿಕ್ಕ ವಯಸ್ಸಿನಿಂದಲೇ ಪ್ರಶಸ್ತಿ ಬಂದಿದ್ದರು ಸಹ ಅವರಿಗೆ ಸ್ಟಾರ್ ಎನ್ನುವ ಭಾವನೆಗಳು ಇರಲಿಲ್ಲ ಪುನೀತ ಅವರಿಗೆ ರಾಜಕುಮಾರ್ ಅವರ ಬಗ್ಗೆ ತುಂಬಾ ಅಭಿಮಾನ ಇತ್ತು .ಅವರು ಯಾವಾಗಲೂ ರಾಜಕುಮಾರ್ ಅವರ ಮಗನಾಗಿ ಹುಟ್ಟಿದ್ದು ಪುಣ್ಯ ಎಂದು ಯಾವಾಗಲೂ ಹೇಳುತ್ತಿದ್ದರು
ಅವರು ಸಹ ತಂದೆಗೆ ಅಭಿಮಾನಿಗಳಿದ್ದರು ಪುನೀತ ರಾಜಕುಮಾರ ಅವರು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿದ್ದಾರೆ ಪುನೀತ ಅವರು ಪ್ರಯತ್ನಕ್ಕೆ ಪ್ರತಿಫಲ ಸಿಗುತ್ತದೆ ಎಂದು ಹೇಳುತ್ತಾರೆ ಚೆನ್ನಾಗಿ ಕೆಲಸ ಮಾಡಬೇಕು ಹಾಗೆಯೇ ಚೆನ್ನಾಗಿ ಮುಂದುವರಿಯಬೇಕು ಎಂದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ.
ಮೊದಲ ಸಿನಿಮಾದಿಂದಲು ಹೆಚ್ಚಿನ ಪರಿಶ್ರಮ ಮಾಡುತಿದ್ದರು ಹಾಗೆಯೇ ಅವರು ಸಿನಿಮಾ ರಂಗದಿಂದ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ ಪ್ರತಿಯೊಂದು ಸಿನಿಮಾವನ್ನು ಚಾಲೆಂಜ್ ಆಗಿ ತೆಗೆದುಕೊಂಡು ನಟನೆ ಮಾಡುತ್ತಿದ್ದರು ಕನ್ನಡ ಚಿತ್ರರಂಗ ಮುಂದುವರಿಯಬೇಕು ಎನ್ನುವ ಆಸೆಯನ್ನು ಹೊಂದಿದ್ದ ವ್ಯಕ್ತಿತ್ವ ಅವರದ್ದು.
ಪ್ರತಿಯೊಂದು ಸಿನಿಮಾದ ನಂತರ ಒಂದೊಂದು ಮೆಸೇಜ್ ಅಥವಾ ಒಳ್ಳೆಯ ವಿಚಾರವನ್ನು ತಿಳಿದುಕೊಳ್ಳುತ್ತಾರೆ ಸಿನಿಮಾ ಮಾಡುವುದ ಕ್ಕಿಂತ ಮೊದಲು ಸಿನಿಮಾದ ಸ್ಟೋರಿ ಹೇಳಿದಾಗ ಅದನ್ನು ಮಾಡಬೇಕು ಎನ್ನುವ ಚಾಲೆಂಜ್ ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದರು ಸಿನಿಮಾ ಮಾಡಿದರೆ ಜನರ ಮನಸ್ಸಿನಲ್ಲಿ ಉಳಿಯಬೇಕು ಅಂತಹ ಸಿನಿಮಾವನ್ನು ಮಾಡುತಿದ್ದರು ಅಭಿಮಾನಿ ದೇವರು ಗಳಿಂದ ಒಳ್ಳೆಯ ಸಿನಿಮಾ ಹಾಗೂ ಒಳ್ಳೆಯ ಸಿನ್ ಎಂದು ಹೇಳುವ ಹಾಗೆ ಸಿನಿಮಾವನ್ನು ಮಾಡುತ್ತಿದ್ದರು .