ವ್ಯಾಪಾರ ಮಾಡಬೇಕು ಎಂಬುದು ಎಂಥವರ ಕಣ್ಣಲ್ಲೂ ಸ್ವತಂತ್ರ ಚಿಂತನೆಯಂತೆ ಕಾಣುತ್ತದೆ. ಜೊತೆಗೆ ಯಶೋಗಾಥೆಗಳನ್ನು ಕೇಳಿ ರೂಢಿ ಇರುತ್ತದೆ. ಆದ್ದರಿಂದ ಬಿಸನೆಸ್ ಯಾವುದು ಅದರ ಕಷ್ಟಗಳು ಏನು ಎಂಬುದನ್ನು ವಾಸ್ತವ ನೆಲೆಗಟ್ಟಿನಲ್ಲಿ ಆಲೋಚಿಸುವುದನ್ನೇ ಬಿಟ್ಟು ಲಾಭವನ್ನು ಲೆಕ್ಕ ಹಾಕುವುದರಲ್ಲಿ ಆಗಿಬಿಡುತ್ತೇವೆ. ಯಾವುದೇ ಒಂದು ವ್ಯಾಪಾರವನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋದರೆ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ. ಚಪ್ಪಲಿ ತಯಾರಿಸುವ ಬಿಸನೆಸ್ ಅನ್ನು ಮಾಡುವುದರಿಂದ ದಿನಕ್ಕೆ 3000ರೂ ಲಾಭಗಳನ್ನು ಗಳಿಸಬಹುದಾಗಿದೆ. ಆದ್ದರಿಂದ ನಾವಿಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಯಾವುದೇ ವ್ಯಾಪಾರ ಶುರು ಮಾಡುವ ಮುನ್ನ ಅದರ ಭವಿಷ್ಯ ಎಷ್ಟು ಕಾಲ ಇರಬಹುದು ಎಂಬುದನ್ನು ಯೋಚಿಸಬೇಕು. ದೊಡ್ಡ ಮಟ್ಟದ ಬಂಡವಾಳ ಹಾಕಿ ಅದಕ್ಕಾಗಿಯೇ ಸಾಲ ತಂದವರು ಚಿಂತಿಸುವಂತಾಗಬಾರದು. ಆದ್ದರಿಂದ ಶುರು ಮಾಡಬೇಕು ಅಂದುಕೊಂಡ ಬಿಸನೆಸ್ ಎಷ್ಟು ಸಮಯ ಮಾರ್ಕೆಟ್ ನಲ್ಲಿ ಬೇಡಿಕೆಯಲ್ಲಿ ಇರುತ್ತದೆ ಎಂಬುದನ್ನು ಮುಂಚಿತವಾಗಿ ತೀರ್ಮಾನಿಸಬೇಕಾಗುತ್ತದೆ. ಚಪ್ಪಲಿ ಪ್ರತಿಯೊಬ್ಬ ಮನುಷ್ಯನಿಗೂ ಪ್ರತಿಯೊಂದು ದಿನದ ಕೆಲಸಗಳಿಗೂ ಅನಿವಾರ್ಯತೆ ಇರುತ್ತದೆ. ಪ್ರತಿಯೊಬ್ಬರೂ ಅದನ್ನು ಉಪಯೋಗಿಸುತ್ತಾರೆ.
ಚಪ್ಪಲಿ ವ್ಯಾಪಾರವನ್ನು ಪ್ರಾರಂಭಿಸಬೇಕು ಎಂದುಕೊಂಡವರು ಮನೆಯಲ್ಲಿಯೇ ಈ ವ್ಯಾಪಾರವನ್ನು ಮಾಡಬಹುದಾಗಿದೆ. ಇದಕ್ಕೆ ಕಡಿಮೆ ಬಂಡವಾಳ ಸಾಕಾಗುತ್ತದೆ. ಚಪ್ಪಲಿಯನ್ನು ತಯಾರಿಸಬೇಕು ಎಂದುಕೊಂಡವರು ಮೊದಲನೆಯದಾಗಿ ಚಪ್ಪಲಿ ತಯಾರಿಸುವ ಸಲುವಾಗಿ ಸೋಲ್ ಕಟಿಂಗ್ ಮಾಡುವ ಮಷೀನ್ ಅನ್ನು ಖರೀದಿ ಮಾಡಬೇಕಾಗುತ್ತದೆ. ಈ ಮಷೀನ್ ಗೆ 13 ಸಾವಿರ ರೂಪಾಯಿಗಳು ಇರುತ್ತದೆ. ಚಪ್ಪಲಿಗಳ ಅಳತೆ ಮಾಡುವ ಅಳವಡಿಕೆಯನ್ನು ಖರೀದಿಸಬೇಕು. ಇದಕ್ಕೆ ಸುಮಾರು ಐದರಿಂದ ಆರು ಸಾವಿರ ರೂಪಾಯಿಗಳು ಖರ್ಚಾಗುತ್ತದೆ. ಚಪ್ಪಲಿಯನ್ನು ತಯಾರಿಸಲು ಹವಾಯಿ ರಬ್ಬರ್ ಶೀಟನ್ನು ಖರೀದಿಸಬೇಕಾಗುತ್ತದೆ. ಈ ಶೀಟಿಗೆ ಎರಡು ನೂರು ರೂಪಾಯಿ ಆರಂಭಿಕ ಮೊತ್ತವಿರುತ್ತದೆ.
ಚಪ್ಪಲಿ ತಯಾರಿಸಲು ಸ್ಟ್ರಾಪ್ ಬೇಕಾಗುತ್ತದೆ. ಇದಕ್ಕೆ ಹತ್ತರಿಂದ ಹನ್ನೆರಡು ರೂಪಾಯಿಗಳು ಇರುತ್ತದೆ. ಕಚ್ಚಾವಸ್ತುಗಳ ಖರ್ಚು ಪೂರ್ತಿಯಾಗಿ ಸೋಲ್ ಹಾಗೂ ಸ್ಟ್ರೈಫ್ ಸೇರಿ 25 ರಿಂದ 26 ರೂ ಗಳವರೆಗೆ ಖರ್ಚಾಗುತ್ತದೆ. ಒಂದು ದಿನಕ್ಕೆ 100 ಜೋಡಿಯನ್ನು ತಯಾರಿಸಬಹುದಾಗಿದೆ. ತಯಾರಿಕಾ ವೆಚ್ಚ ಜೋಡಿಗೆ 23 ರೂಪಾಯಿಯಾದರೆ ನೂರು ಜೋಡಿಗೆ 2300 ರೂ ಆಗುತ್ತದೆ. ಹೀಗಾಗಿ ಒಂದೊಂದು ಜೋಡಿ ಚಪ್ಪಲಿಯನ್ನು 60 ರೂಪಾಯಿಗಳಿಗೆ ವ್ಯಾಪಾರ ಮಾಡಿದರೆ 100 ಜೋಡಿಗೆ 6000 ರೂ ದೊರಕುತ್ತದೆ. ಲೇಬರ್ ಹಾಗೂ ಮಾರಾಟದ ಖರ್ಚು 700 ರೂ ಆದರೂ ಸಹ ದಿನಕ್ಕೆ ಮೂರು ಸಾವಿರ ರೂಪಾಯಿಗಳನ್ನು ಲಾಭವಾಗಿ ಪಡೆದುಕೊಳ್ಳಬಹುದು. ಹೀಗೆ ಪ್ರತಿಯೊಬ್ಬರೂ ವ್ಯಾಪಾರದ ಮಾರ್ಗವನ್ನು ಕಂಡುಕೊಂಡರೆ ತಮ್ಮ ಜೀವನದಲ್ಲಿ ಹೆಸರನ್ನು ಹಾಗೂ ಹಣವನ್ನು ಸಂಪಾದಿಸಬಹುದಾಗಿದೆ.