ಲಾಭದಾಯಕ ಹೈನುಗಾರಿಕೆಯಲ್ಲಿ ಗುಣಮಟ್ಟದ ಹಾಲು ಉತ್ಪಾದನೆ” ಹಾಲಿನಿಂದ ದುಡ್ಡು ಲಾಭ ಎಂದು ಹೇಳಲಾಗದು, ಉಪ ಉತ್ಪನ್ನಗಳ ಮೂಲಕ ಲಾಭವನ್ನಾಗಿ ಪರಿವರ್ತಿಸಬೇಕು. ಅಥವಾ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಹಾಲು ಲಾಭ ಆಗಬಹುದು. ಆದಾಯ ದೃಷ್ಟಿಯಿಂದ ಜೆರ್ಸಿ, ಎಚ್,ಎಫ್ ಹಸು ಸಾಕಣೆ ಸಾಮಾನ್ಯ, ಜೆರ್ಸಿ ಹಾಲು ಹೆಚ್ಚಿನ ಕೊಬ್ಬಿನ ಅಂಶದಿಂದ ಕೂಡಿರುತ್ತದೆ. ಎಚ್,ಎಫ್ ಹಾಲು ಕೊಬ್ಬಿನಂಶ ಕಡಿಮೆ ಇರುತ್ತದೆ
ಹಾಗಾಗಿ ಡಿಗ್ರಿ ಬರುವುದಿಲ್ಲ ಎಂಬ ಸಮಸ್ಯೆ ಸಾಮಾನ್ಯವಾಗಿದೆ, 2.5 ಲೀ, ಹಾಲಿನ ಉತ್ಪಾದನೆ ಸರಾಸರಿ 1 ಕೆ ಜಿ ಸಮತೋಲನ ಪೌಷ್ಟಿಕ ಪಶು ಆಹಾರ ನೀಡಬೇಕು. ಸಿದ್ಧ ಪಶು ಆಹಾರಗಳು ಲವಣಾಂಶಗಳನ್ನು ನೀಡುವುದಾದರೆ ಖರ್ಚು ಹೆಚ್ಚಾಗಬಹುದು, ಸ್ವತಃ ತಯಾರಿಸಿ ಮಾಡುವುದಾದರೆ ಒಂದು ಕೆ ಜಿ ಯಲ್ಲಿ 0.4 ಕೆ ಜಿ ಹಿಂಡಿ, ಉಳಿದ 0.5 ಕೆಜಿ ಅಕ್ಕಿ ನುಚ್ಚು, ಎಲೆಬೂಸ, ರವೆಬೂಸ, ಹತ್ತಿ ಬೀಜ, ಕಡಲೆ ಹೊಟ್ಟು, ಕಾಲುಗಳ ಪುಡಿ, ಉಪ್ಪಿನ ಅಂಶ ಇತ್ಯಾದಿ ಸೇರಿಸಿ ಕೊಡಬಹುದು. ಅವಕಾಶ ಇದ್ದವರು ಹಸಿರು ಹುಲ್ಲು ಬೆಳೆಸಿ ಕೊಡಬೇಕು. ಹಸಿರು ಹುಲ್ಲು ಒಂದೇ ಹಾಲಿನ ಉತ್ಪಾದನೆ ಮಾಡುವುದಿಲ್ಲ, ನಾರಿನ ಅಂಶ ಇರುವ ಒಣ ಹುಲ್ಲು ಕೂಡ ಕೊಡಬೇಕು.
ನಮ್ಮಲ್ಲಿರುವ ಸಂಪನ್ಮೂಲ ಬಳಸಿ ಪಶು ಆಹಾರದ ಜೊತೆಗೆ ತಪ್ಪದೇ ಲವಣಾಂಶ, ಖನಿಜಾಂಶ ನೀಡಿದಾಗ ಗುಣಮಟ್ಟದ ಹಾಲಿನ ಉತ್ಪಾದನೆ ಸಾಧ್ಯವಾಗುತ್ತದೆ. ಹಸು ನೋಡಿಕೊಳ್ಳುವವರು ಕೊಟ್ಟಿಗೆ ಶುಚಿತ್ವ, ಹಸುವಿನ ಹಾಲು ಕರೆಯುವಾಗ ಕೆಚ್ಚಲನ್ನು ಶುಚಿತ್ವ ಮಾಡಿ ಹಾಲು ಕರೆಯುವುದರಿಂದ ಕೆಚ್ಚಲು ಬಾವು ತಡೆಗಟ್ಟಬಹುದು. ಕಾಲುಬಾಯಿ, ಜ್ವರ, ಗಳತಿ ರೋಗ, ಚಪ್ಪ ರೋಗ, ಇತ್ಯಾದಿ ಮಾರಕ ರೋಗಗಳಿಗೆ ವರ್ಷಕ್ಕೆ ಎರಡು ಬಾರಿ ಲಸಿಕೆ ಹಾಕಿಸುವುದರ ಮೂಲಕ ಮುನ್ನೆಚ್ಚರಿಕೆ ವಹಿಸಬೇಕು.
ಯಾವಾಗಲೂ ಹಟ್ಟಿ ಮಾಡುವಾಗ ಎತ್ತರದ ಸ್ಥಳದಲ್ಲಿ ನಿರ್ಮಾಣ ಮಾಡಬೇಕು. ಸರಳ ರಚನೆ ಇದ್ದಷ್ಟು ಮಿತವ್ಯಯ, ಹಸುಗಳಿಗೆ ಗಾಳಿ ಬೆಳಕು ಬೀಳುವಂತೆ ಇರಬೇಕು. ಶೆಡ್ ನಿರ್ಮಿಸಲು ಹೆಚ್ಚು ಖರ್ಚು ಮಾಡಬಾರದು. ಎತ್ತರ ಸ್ಥಳದಲ್ಲಿ ಶೆಡ್ ಮಾಡಿದರೆ ಪ್ರತಿ ದಿನ ಶೆಡ್ ತೊಳೆಯುವಾಗ ಸಿಗುವ ನೀರು ತೋಟಕ್ಕೆ ಅಥಾವ ಬೆಳೆಗೆ ಹರಿಸಲು ಅನುಕೂಲಕರವಾಗಿರುತ್ತದೆ. ಶೆಡ್ ಅನ್ನು ದಿನಕ್ಕೆ ಮೂರು ಬಾರಿ ತೊಳೆದು ಸ್ವಚ್ಛ ಮಾಡಬೇಕು. ಆಗ ನೊಣಗಳು ಕಡಿಮೆಯಾಗುತ್ತದೆ ಹಸುಗಳ ಕಾಲ ಬುಡಕ್ಕೆ ಕೌ ಮ್ಯಾಟ್ ಹಾಕುವುದರಿಂದ ಹಸುಗಳ ವಿಶ್ರಾಂತಿಗೆ ಅನುಕೂಲವಾಗಿರುತ್ತದೆ.
ಹೈನುಗಾರಿಕೆ ಎಂದರೆ ಅದು ಸಣ್ಣ ವಿಷಯವಲ್ಲ ಒಂದು ಹಸು ದಿನಕ್ಕೆ ಸುಮಾರು 50 ಕಿಲೋ ದಷ್ಟು ಹಸಿರು ಮೇವನ್ನು ತಿಂದು ಮತ್ತೆ 12 ಗಂಟೆಗಳಲ್ಲಿ ಅದನ್ನು ಗೊಬ್ಬರ ಮಾಡಿಕೊಡುತ್ತದೆ. ಹಸುವಿನ ಸಗಣಿ ಒಂದು ಸಮತೋಲನ ಗೊಬ್ಬರ ಆಗುತ್ತದೆ, ಕಾರಣ ಹೊಲದಲ್ಲಿ ಬೆಳೆದ ಹುಲ್ಲು ಹಾಗೂ ಅವುಗಳಿಗೆ ಹಾಕಿದ ಪಶು ಆಹಾರ ಪುನರ್ ಬಳಕೆ ಆಗಿ ಅದು ಪೋಷಕಾಂಶ ಸಮೃದ್ಧವಾಗಿರುತ್ತದೆ.