WhatsApp Group Join Now
Telegram Group Join Now

ನಾವು ಪ್ರತಿನಿತ್ಯ ನೂರಾರು ಮಂದಿಗಳನ್ನು ನೋಡುತ್ತಾ ಇರುತ್ತೇವೆ ಜೊತೆಗೆ ನಾವು ಕೂಡ ಹಲವು ಭಾರಿ ಸಾಕಷ್ಟು ನೋವುಗಳನ್ನು ಅನುಭವಿಸುತ್ತೇವೆ ಆ ಸಂದರ್ಭದಲ್ಲಿ ನಾವು ಆ ಭಗವಂತನಲ್ಲಿ ಕೇಳುವುದೊಂದೆ ಯಾವಾಗ್ಲೂ ಒಳ್ಳೆಯವರಿಗೆ ಯಾಕಿಷ್ಟು ನೋವು ,ಹಿಂ ಸೆ ಕೊಡ್ತೀಯ, ನಮ್ಮಿಂದ ಆಗಿರುವ ತಪ್ಪಾದರೂ ಏನು ಇದೇ ರೀತಿ ಒಮ್ಮೆ ಅರ್ಜುನ ಕೂಡ ಕೃಷ್ಣ ನಲ್ಲಿ ಪ್ರತಿಸಲ ಒಳ್ಳೆಯವರಿಗೆ ಯಾಕೆ ಕಷ್ಟ ಎದುರಾಗುತ್ತದೆ .ಕೆಟ್ಟವರು ಯಾವಾಗ್ಲೂ ಸುಖವಾಗಿ ಇರುತ್ತಾರೆ. ಯಾಕೆ ಈ ರೀತಿ ನಡೆಯುತ್ತದೆ ಎಂದು ಕೇಳುತ್ತಾನೆ.

ಇದನ್ನು ಕೇಳಿದ ಕೃಷ್ಣನು ಮುಗುಳುನಗುತ್ತ ಹೀಗೆ ಉತ್ತರಿಸುತ್ತಾನೆ ಹೇ ಪಾರ್ಥ ವಾಸ್ತವವಾಗಿ ನಾವು ಕಂಡದ್ದನ್ನು ಅಥವಾ ಕೇಳಿದನ್ನೇ ಸತ್ಯವೆಂದು ನಂಬಿ ಸತ್ಯಾಸತ್ಯತೆಯನ್ನು ವಿಮರ್ಶಿಸದೆ ಹೋಗುತ್ತೇವೆ. ಇದನ್ನು ಕೇಳಿದ ಅರ್ಜುನ ಗೊಂದಲದಿಂದ ಹೇ ಹರಿಯೇ ನೀವೆನನ್ನು ಹೇಳುತ್ತಿರುವಿರಿ ನನಗೆ ತಿಳಿಯದಾಗಿದೆ ದಯಮಾಡಿ ವಿವರಿಸಿ ಹೇಳಿ ಎಂದು ಕೇಳುತ್ತಾನೆ.ಮಂದಸ್ಮಿತವಾದ ಶ್ರೀ ಕೃಷ್ಣನು ಒಂದು ಪುಟ್ಟ ಕಥೆಯ ಮೂಲಕ ಕರ್ಮಫಲಗಳ ಬಗ್ಗೆ ಹೇಳಲು ಶುರು ಮಾಡಿದನು.

ಹಲವಾರು ವರ್ಷಗಳ ಹಿಂದೆ ಜಯಶಾಲ ಎಂಬ ನಗರದಲ್ಲಿ ಇಬ್ಬರು ವ್ಯಕ್ತಿಗಳು ಇದ್ದರು. ಒಬ್ಬ ವ್ಯಕ್ತಿ ವೃತ್ತಿಯಲ್ಲಿ ವ್ಯಾಪಾರಿ ಆಗಿದ್ದನು. ಮತ್ತೊಬ್ಬ ಕಳ್ಳನಾಗಿದ್ದನು .ವೃತ್ತಿಯಲ್ಲಿ ವ್ಯಾಪಾರಿ ಆಗಿದ್ದ ಆ ವ್ಯಕ್ತಿಯು ದಾನ ,ಧರ್ಮಗಳನ್ನು ಮಾಡುತ್ತ ಸದಾ ಕಾಲ ದೇವರ ಧ್ಯಾನದಲ್ಲಿ ಇರುತ್ತಿದ್ದನು. ಅದೇ ನಗರದಲ್ಲಿ ಇದ್ದ ಆ ಕಳ್ಳ ಬೇರೆಯವರಿಗೆ ಮೋಸ ಮಾಡುತ್ತ,ದೇವಸ್ಥಾನಗಳಲ್ಲಿ ಸಾರ್ವಜನಿಕರು ಬಿಡುತ್ತಿದ್ದ ಪಾದರಕ್ಷೆಗಳನ್ನು ಕಳುವು ಮಾಡುತ್ತಿದ್ದನು.

ಒಂದು ದಿನ ವಿಪರೀತವಾಗಿ ಮಳೆಯು ಬರಲಾರಂಭಿಸಿತು.ಆ ದೇವಸ್ಥಾನದಲ್ಲಿ ಪೂಜಾರಿಯನ್ನು ಬಿಟ್ಟು ಬೇರೆಯಾರೂ ಇರಲಿಲ್ಲ. ಇದೇ ಸರಿಯಾದ ಸುವರ್ಣಾವಕಾಶ ಎಂದು ಗರ್ಭಗುಡಿಯಲ್ಲಿ ಇದ್ದ ಹಣ ಹಾಗೂ ಒಡವೆಗಳನ್ನು ಕದ್ದು ಹೋಗಿ ಬಿಡುತ್ತಾನೆ. ಅದೇ ಸಮಯಕ್ಕೆ ದೇವರ ದರ್ಶನ ಪಡೆಯಲು ಅಲ್ಲಿಗೆ ಬಂದ ಆ ಒಳ್ಳೆಯ ವ್ಯಕ್ತಿಯನ್ನು ಕಳ್ಳ ಎಂದುಕೊಂಡು ಪೂಜಾರಿ ಅಲ್ಲಿದ್ದ ಸುತ್ತ – ಮುತ್ತ ಜನರನ್ನು ಕರೆದು ಆ ವ್ಯಕ್ತಿಗೆ ಅವಮಾನ ಮಾಡುತ್ತಾ ಇರುತ್ತಾನೆ. ಅಲ್ಲಿ ಏನ್ ನಡೆಯುತ್ತಿದೆ ಎಂದು ಅಲ್ಲಿ ಏನ್ ನಡೆಯುತ್ತಿದೆ ಎಂದು ತಿಳಿಯದೆ ,ತಾನು ಏನೂ ತಪ್ಪು ಮಾಡಿಲ್ಲ ಎಂದು ಹೇಳಿದರು ಕೇಳದೆ ನಿಂಧಿಸುತ್ತಿದ್ದವರ ಮಾತನ್ನು ಕೇಳಲು ಆಗದೆ ಅಲ್ಲಿಂದ ತಪ್ಪಿಸಿಕೊಂಡು ಹೊರಗೆ ಬಂದಾಗ ಅವನ ದುರಾದೃಷ್ಠಕೆ ವಾಹನವೊಂದು ಅವನಿಗೆ ಡಿಕ್ಕಿ ಹೊಡೆದು ಅವನ ಕೈ ಕಾಲುಗಳಿಗೆ ಹಾನಿ ಮಾಡಿ ಹೋಗುತ್ತದೆ.

ಮಾರನೇ ದಿನ ಆ ವ್ಯಾಪಾರಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಕಳ್ಳನು ಎದುರಾಗಿ ಅಹಂಕಾರದಿಂದ ತನಗೆ ಇಂದು ಬಹಳ ದುಡ್ಡು ಸಿಕ್ಕಿದೆ ಎಂದು ಬೀಗುತ್ತಾ ಹೇಳಿದ್ದನು. ಇದನ್ನು ಕೇಳಿದ ಆ ವ್ಯಾಪಾರಿಯು ಕೋಪದಿಂದ ಮನೆಗೆ ಬಂದು ಮನೆಯಲ್ಲಿದ್ದ ದೇವರ ಫೋಟೋಗಳನ್ನು ಹೊರಗೆ ತೆಗೆದು ಬಿಸಾಡಿ ದೇವರಿಗೆ ಪ್ರತಿನಿತ್ಯ ಬೈಯುತ್ತಾ ತನ್ನ ಕಾಲ ಕಳೆದು ಮರಣ ಹೊಂದಿದ್ದನು. ಅವನ ಜೊತೆಗೆ ಆ ಕಳ್ಳನು ಮರಣ ಹೊಂದಿದ್ದನು.

ಇಬ್ಬರೂ ಯಮಧರ್ಮ ರಾಜನ ಮುಂದೆ ನಿಂತಿದ್ದರು.ಆಗ ತನ್ನ ಪಕ್ಕ ನಿಂತಿದ್ದ ಕಳ್ಳನನ್ನು ಕಂಡು ಕೋಪದಿಂದ ಆ ವ್ಯಾಪಾರಿಯು ಯಮಧರ್ಮ ರಾಜನನ್ನು ನೋಡುತ್ತಾ” ನಾನು ಜೀವನದುದ್ದಕ್ಕೂ ಧರ್ಮದಿಂದ ನಡೆಯುತ್ತ ,ದಾನ ಧರ್ಮಗಳನ್ನು ಮಾಡುತ್ತ ಬಂದಿದೆ.ಆದರೂ ನನ್ಗೆ ಅವಮಾನ ,ಅಪಮಾನ ,ನಿಂಧನೆಗಳು ಎದುರಾದವು ಆದರೆ ಇಲ್ಲಿ ನಿಂತಿರುವ ಈ ಕಳ್ಳನು ಅವನ ಜೀವನದುದ್ದಕ್ಕೂ ಅಧರ್ಮದಿಂದ ಬೇರೆಯವರಿಗೆ ಮೋಸ ಮಾಡುತ್ತ ಬಂದಿದ್ದ.ಆದ್ರೆ ಇವನಿಗೆ ಹಣ ಚಿನ್ನ ಸಿಗುತ್ತಿತ್ತು.ಯಾಕೆ ಹೀಗೆ ಎಂದು ಕೇಳಿದನು.

ಆಗ ಯಮಧರ್ಮ ರಾಜನು ಮಗನೇ ನೀನು ವಾಸ್ತವವಾಗಿ ತಪ್ಪು ಕಲ್ಪನೆ ಮಾಡಿಕೊಂಡಿರುವೆ .ಅಂದು ನಿನಗೆ ಎದುರಾದ ಅಪಘಾತದಲ್ಲಿ ನೀನು ಮೃತಪಡಬೇಕಿತ್ತು. ಆದರೆ ನೀನು ಮಾಡಿದ ಒಳ್ಳೆ ಕೆಲಸ,ದಾನ ಧರ್ಮಗಳಿಂದ ನೀನು ಬದುಕುಳಿದೆ.ಇನ್ನು ಈ ದುಷ್ಟನ ಬಗ್ಗೆ ಹೇಳಬೇಕೆಂದರೆ ” ಇವನ ಜಾತಕದಲ್ಲಿ ರಾಜಯೋಗವಿತ್ತು ಆದರೆ ಇವನ್ನು ಅದನ್ನು ಅರಿಯದೆ ಅಧರ್ಮದ ಹಾದಿ ತುಳಿದು ಅಲ್ಪ ಮಟ್ಟದಲ್ಲಿ ಹಣ ಚಿನ್ನ ಸಿಗುತ್ತಿತ್ತು. ಹೀಗೆ ಶ್ರೀಕೃಷ್ಣನು ತನ್ನ ಕಥೆಯನ್ನು ಹೇಳಿ ಮುಗಿಸಿದ
ಭಗಂತನು ಯಾವ ರೂಪದಲ್ಲಿ ಬೇಕಾದರೂ ಅವರವರ ಕರ್ಮಫಲದ ಅನುಸಾರವಾಗಿ ಫಲ ಕೊಡುತ್ತಾನೆ ಎಂದು ಹೇಳುತ್ತಾನೆ. ಜೀವನದ ಕಷ್ಟ – ಸುಖಗಳ ಬಗ್ಗೆ ಹೆಚ್ಚು ಯೋಚಿಸದೆ ಎಲ್ಲವನ್ನೂ ಕರ್ಮಫಲದಾತನಿಗೆ ಬಿಟ್ಟು ಇರುವ ಜೀವನವನ್ನು ನಗುನಗುತ್ತಾ ಬದುಕೋಕೆ ಪ್ರಯತ್ನ ಮಾಡಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: