ಒಂದು ವೇಳೆ ಸತ್ತ ವ್ಯಕ್ತಿಗಳು ಕನಸಿನಲ್ಲಿ ಕಂಡರೆ ಈ ಸಂದೇಶವನ್ನು ನಿಡ್ತಾರಂತೆ

0

ನಾವು ನಿದ್ದೆಯಲ್ಲಿ ಕಾಣುವ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ, ಕನಸುಗಳು ನೆನಪುಗಳ ಕಾಲ್ಪನಿಕ ರೂಪಗಳು ಎಂದು ಕೆಲವರು ಹೇಳುತ್ತಾರೆ, ಸುಪ್ತ ಮನಸಿನಲ್ಲಿರುವ ನೆನಪುಗಳೇ ಕನಸು ಎಂದು ಹೇಳುತ್ತಾರೆ, ನಾವು ಗಾಢ ನಿದ್ರೆಯಲ್ಲಿದ್ದಾಗ ಕನಸುಗಳು ಹೆಚ್ಚಾಗಿ ಬರುತ್ತವೆ. ಈ ಕನಸುಗಳು ಕೆಲವೊಂದು ಮುನ್ಸೂಚನೆಯ ಸಂದೇಶ ಎಂಬುದನ್ನು ಸ್ವಪ್ನ ಶಾಸ್ತ್ರದಲ್ಲಿ ವಿವರಿಸಲಾಗಿದೆ. ನಾವು ಕಂಡ ಕನಸುಗಳು ಕೆಲವೊಮ್ಮೆ ನಮಗೆ ನೆನಪಿರುವುದಿಲ್ಲ ಕನಸಿನ ಸ್ಮರನೆಯೊಂದಿಗೆ ಬೆಳಿಗ್ಗೆ ಎದ್ದರೆ, ಅದನ್ನು ವಿಶ್ಲೇಷಿಸಬಹುದು. ಮೊದಲು ಈ ಕನಸು ಬಿದ್ದಿತ್ತೆ? ಅಥವಾ ಇದೆ ಮೊದಲ ಬಾರಿ ಈ ರೀತಿ ಕನಸೇ? ಎಂದು ತಿಳಿಯಬಹದು.

ಕೆಲವೊಮ್ಮೆ ಆಶ್ಚರ್ಯ ಎನ್ನುವ ರೀತಿಯಲ್ಲಿ ಸತ್ತ ವ್ಯಕ್ತಿಗಳು ನಮ್ಮ ಕನಸಿನಲ್ಲಿ ಬರುತ್ತಾರೆ ಹೀಗೆ ಭೂಮಿಯಲ್ಲಿ ಇರದ ವ್ಯಕ್ತಿಗಳು ನಮ್ಮ ಕನಸಿನಲ್ಲಿ ಬಂದರೆ ಅದು ನಮ್ಮ ಭವಿಷ್ಯದ ಕೆಲವು ಮಾಹಿತಿಗಳನ್ನು ನೀಡುತ್ತವೆ ಎನ್ನಲಾಗುತ್ತದೆ.ಅತಿಯಾಗಿ ಪ್ರೀತಿಸಿದ ವ್ಯಕ್ತಿಗಳು ನಮ್ಮಿಂದ ದೂರ ಆದಾಗ ಅವರ ನೆನಪುಗಳು ಮರೆಯುವುದು ಅಸಾಧ್ಯ, ದಿನಗಳೆದಂತೆ ಆ ನೋವು ಕಡಿಮೆಯಾದರು ಅವರ ನೆನಪುಗಳು ಮಾಸುವುದಿಲ್ಲ, ಇದೆ ಕಾರಣಕ್ಕೆ ಕೆಲವೊಮ್ಮೆ ನಾವು ಮರೆತಿದ್ದೇವೆ ಎಂಬ ವ್ಯಕ್ತಿಗಳು ಕೆಲವೊಮ್ಮೆ ಕನಸಿನಲ್ಲಿ ಬಂದು ಕಾಡುತ್ತಾರೆ, ಈ ರೀತಿ ಸತ್ತ ವ್ಯಕ್ತಿಗಳು ಪದೇ ಪದೇ ಕನಸಿನಲ್ಲಿ ಕಂಡರೆ ಒಳಿತಾ ಅಥವಾ ಕೆಡುಕ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುವುದು ಸಹಜ.

ಸತ್ತವರು ಕನಸು ಕಂಡರೆ, ಒಳ್ಳೆಯ ಸುದ್ಧಿ ಬರುತ್ತದೆ, ನೀವು ಹೆಚ್ಚು ಕಾಲ ಬದುಕುತ್ತಿರಿ, ಸತ್ತವರು ಕನಸಿನಲ್ಲಿ ಬಂದು ನಮ್ಮನ್ನು ಆಶೀರ್ವದಿಸಿದಂತೆ ಕನಸು ಕಾಣುವುದು ಎಂದರೆ ಎಲ್ಲಾ ರೀತಿಯ ಒಳ್ಳೆಯವುಗಳು ಸಂಭವಿಸುತ್ತವೆ. ಸತ್ತವರು ಕನಸಿನಲ್ಲಿ ಬಂದು ಅಳುವಂತೆ ಕನಸು ಕಾಣುವುದು ಒಳ್ಳೆಯದಲ್ಲ, ಈ ರೀತಿ ಕನಸು ಬಿದ್ದರೆ ದೇವಸ್ಥಾನದಲ್ಲಿ ಪೂಜೆ ಮಾಡುವುದು ಒಳ್ಳೆಯದು. ಸತ್ತವರೊಂದಿಗೆ ಮಾತನಾಡುವಂತೆ ಕನಸು ಕಂಡರೆ ಹೆಸರು ಮತ್ತು ಖ್ಯಾತಿಯನ್ನು ಪಡೆಯುತ್ತಿರಾ ಎಂದರ್ಥ.ಸತ್ತವರು ನಿಮ್ಮ ಮನೆಯಲ್ಲಿ ಮಲಗಿದ ರೀತಿ ನೀವು ಕನಸು ಕಂಡರೆ ನೀವು ದೊಡ್ಡ ಆಪತ್ತಿನಿಂದ ತಪ್ಪಿಸಿಕೊಳ್ಳುತ್ತಿರಿ ಎಂದರ್ಥ.ಸತ್ತವರು ನಿಮ್ಮೊಂದಿಗೆ ಊಟ ಮಾಡುತ್ತಿದ್ದರೆ ಎಂಬ ಕನಸು ಕಂಡರೆ ಅದೃಷ್ಟ ಮತ್ತು ಸಮೃದ್ಧಿ ನಿಮಗೆ ಒಳಿಯಲಿದೆ.

ಸತ್ತ ಸಂಬಂಧಿಕರು ಅಥವಾ ಬಾಲಕರು ಕನಸಿನಲ್ಲಿ ಕಂಡರೆ ತೊಂದರೆಗಳು ಮುಂದಿನ ದಿನಗಳಲ್ಲಿ ಎದುರಾಗುತ್ತವೆ ಎಂದು ಅರ್ಥ, ಇನ್ನೂ ಮೃತರಾದ ತಂದೆ ತಾಯಿಯೊಂದಿಗೆ ಮಾತನಾಡಿದ ಹಾಗೆ ಕನಸು ಕಂಡರೆ ಅದು ನಿಮ್ಮ ಆಂತರಿಕ ನೆಮ್ಮದಿ, ಶಾಂತಿಯನ್ನು ನೀಡುತ್ತದೆ, ಅದು ನಿಮ್ಮ ಕುಟುಂಬದ ವ್ಯವಹಾರದ ಏಳಿಗೆಯನ್ನು ಕೂಡ ನೀಡುತ್ತೆ ಅದು ಒಳ್ಳೆಯದಲ್ಲ, ಅವರ ಆತ್ಮಕ್ಕೆ ಮೋಕ್ಷ ಸಿಕ್ಕಿಲ್ಲ ಎನ್ನುವ ಸೂಚನೆ ನೀಡುತ್ತದೆ.

Leave A Reply

Your email address will not be published.

error: Content is protected !!