ಎಷ್ಟೋ ಜನ ಪ್ರತೀ ದಿನ್ ಮೊಟ್ಟೆಯಿಂದ ರುಚಿ ರುಚಿಯಾಗಿ ಬಗೆಬಗೆಯ ಅಡುಗೆಗಳನ್ನು ಮಾಡಿಕೊಂಡು ತಿನ್ನುತ್ತಾರೆ. ಆದರೆ ದಿನಕ್ಕೊಂದು ಮೊಟ್ಟೆಯನ್ನು ತಿನ್ನುವುದರಿಂದ ಸಂಪೂರ್ಣ ದೇಹದ ಗುಣಮಟ್ಟವನ್ನು ಹೆಚ್ಚಿಸಿ ನಮ್ಮನ್ನು ಎಲ್ಲಾ ರೀತಿಯ ವೈದ್ಯರುಗಳಿಂದ ದೂರವಿಡುವ ಹಾಗೇ ಮಾಡಿಕೊಳ್ಳಬಹುದು ಎಂಬ ಸತ್ಯ ಬಹಳಷ್ಟು ಮಂದಿಗೆ ತಿಳಿದಿರುವುದಿಲ್ಲ. ಮೊಟ್ಟೆಯಲ್ಲಿ ಅಂತಹ ದೇಹಕ್ಕೆ ಸಹಕಾರಿಯಾದ ಮತ್ತು ದೇಹದ ಎಲ್ಲಾ ಅಂಗಗಳ ಆರೋಗ್ಯವನ್ನು ಒಂದೇ ರೀತಿಯಲ್ಲಿ ಉತ್ತಮಗೊಳಿಸುವ ಶಕ್ತಿ ಇದೆ.
ಬೇಕಾದರೆ ದಿನಕ್ಕೆ ಎರಡು ಮೊಟ್ಟೆ ಸೇವಿಸಿದರೂ ಪರವಾಗಿಲ್ಲ. ಮೊಟ್ಟೆಯಲ್ಲಿ ಇರುವ ಕೊಬ್ಬಿನ ಅಂಶ ಮತ್ತು ಕೊಲೆಸ್ಟರಾಲ್ ಅಂಶಗಳಿಂದ ನಮ್ಮ ಹೃದಯಕ್ಕೆ ಭವಿಷ್ಯದಲ್ಲಿ ಏನಾದರೂ ತೊಂದರೆ ಎದುರಾದೀತೇ ಎಂದು. ಇದು ಅರ್ಧ ಸತ್ಯ ಮತ್ತು ಅರ್ಧ ಮಿಥ್ಯ. ಏಕೆಂದರೆ ಕೊಲೆಸ್ಟರಾಲ್ ಅಂಶಗಳಿಗೆ ತೀರಾ ಸೆನ್ಸಿಟಿವ್ ಆಗಿರುವವರಿಗೆ ಮಾತ್ರ ಮೊಟ್ಟೆಯಲ್ಲಿನ ಕೊಬ್ಬಿನ ಅಂಶ ತೊಂದರೆ ಕೊಡುವುದು. ಅಂದರೆ ಯಾರು ಮೊದಲೇ ಹೃದಯದ ಕಾಯಿಲೆ ಮತ್ತು ಇನ್ನಿತರೇ ಹೃದಯದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೋ ಅಂತಹವರಿಗೆ ಮಾತ್ರ. ಆದರೆ ಎಲ್ಲರಿಗೂ ಹೃದಯದ ಸಮಸ್ಯೆ ಇರುವುದಿಲ್ಲವಲ್ಲ. ಅಂತಹವರು ದಿನ ನಿತ್ಯ ಮೊಟ್ಟೆಯನ್ನು ಮತ್ತು ಅದರಿಂದ ತಯಾರು ಮಾಡುವಂತಹ ಅನೇಕ ರೀತಿಯ ಖಾದ್ಯಗಳನ್ನು ಯಾವುದೇ ಅನುಮಾನವಿಲ್ಲದೆ ಸೇವಿಸಬಹುದು.
ಮೊಟ್ಟೆಯನ್ನು ಬೇಯಿಸಿದ ರೀತಿಯಲ್ಲಿ ಅಥವಾ ಆಮ್ಲೆಟ್ ಮಾಡಿಕೊಂಡು ತಿಂದರೂ ಸಹ ಅದರಲ್ಲಿರುವ ಪೋಷಕಾಂಶಗಳು ಮಾತ್ರ ಹಾಗೇ ಉಳಿಯಲಿವೆ. ಈ ಲೇಖನದಲ್ಲಿ ನಾವು ನಮ್ಮ ಆರೋಗ್ಯಕ್ಕೆ ಬಹಳಷ್ಟು ಉತ್ತಮ ಪೋಷಕಾಂಶಗಳನ್ನು ನೀಡುವ ಮೊಟ್ಟೆಯಿಂದ ರುಚಿಯಾದ ಮೊಟ್ಟೆ ಕರಿ ಮಾಡುವುದು ಹೇಗೆ ಎನ್ನುವುದನ್ನು ನೋಡೋಣ.
ಈ ಮೊಟ್ಟೆ ಕರಿ ಇದು ಅನ್ನ ಮತ್ತು ಚಪಾತಿ ಜೊತೆಗೆ ಬಹಳ ರುಚಿಯಾಗಿ ಇರುತ್ತದೆ. ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನ ಹೇಗೆ ಎಂದು ನೋಡೋಣ. ಮೊದಲಿಗೆ ಮೊಟ್ಟೆಯ ಕರಿ ಮಾಡಲು ಬೇಕಾದ ಸಾಮಗ್ರಿಗಳು ಈ ರೀತಿಯಾಗಿವೆ. ಈರುಳ್ಳಿ 2, ಟೊಮೆಟೊ 2 , ಮೊಟ್ಟೆ 7, ಜೀರಿಗೆ, ಎಣ್ಣೆ 4 ಚಮಚ, ಹಸಿಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಅರಿಶಿಣ, ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ 1 ಚಮಚ, ಗರಂ ಮಸಾಲ ಅರ್ಧ ಚಮಚ ಮತ್ತು ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ, ಮೊದಲು ಒಂದು ಅಗಲವಾದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಎಣ್ಣೆ ಬಿಸಿಯಾದ ಮೇಲೆ ಅದಕ್ಕೆ ಜೀರಿಗೆಯನ್ನು ಹಾಕಿ ನಂತರ ಉದ್ದಕೆ ಸೀಳಿದ 3 ಹಸಿಮೆಣಸಿನಕಾಯಿ , ಈರುಳ್ಳಿ ಹಾಕಿ ಒಂದೆರಡು ನಿಮಿಷ ಬಾಡಿಸಿ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ ಸಣ್ಣ ಉರಿಯಲ್ಲಿ ಬಾಡಿಸಿಕೊಂಡು ಹಸಿ ವಾಸನೆ ಹೋದ ನಂತರ ಕಾಲು ಟೀ ಚಮಚ ಅರಿಶಿಣ ಖಾರಕ್ಕೆ ತಕ್ಕಷ್ಟು ಮೆಣಸಿನ ಪುಡಿ ಮತ್ತು ಧನಿಯಾ ಪುಡಿ ಹಾಕಿ ಮಿಕ್ಸ್ ಮಾಡಿ ಒಮ್ಮೆ ಕೈಯ್ಯಾಡಿಸಿ ಸ್ವಲ್ಪ ನೀರನ್ನು ಸೇರಿಸಿ ಒಂದೆರಡು ನಿಮಿಷ ಬೇಯಿಸಿಕೊಳ್ಳಬೇಕು. ನಂತರ ಸಣ್ಣದಾಗಿ ಕಟ್ ಮಾಡಿರುವ ಟೊಮೆಟೊ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತು ಸ್ವಲ್ಪ ನೀರನ್ನು ಸೇರಿಸಿ ಮುಚ್ಚಳ ಮುಚ್ಚಿ ಟೊಮೆಟೊವನ್ನು ಬೇಯಿಸಬೇಕು.
ಒಂದು ಮಿಕ್ಸಿ ಜಾರಿಗೆ ಅರ್ಧ ಕಪ್ ತೆಂಗಿನಕಾಯಿ ತುರಿ ಹಾಕಿಕೊಂಡು ಕಾಯಿ ಹಾಲು ತೆಗೆದಿಟ್ಟುಕೊಳ್ಳಬೇಕು. ನಂತರ ಕಾಯಿ ಹಾಲನ್ನು ಸಹ ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ ಮತ್ತೆ ಎರಡರಿಂದ ಮೂರು ನಿಮಿಷ ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರ ಗರಂ ಮಸಾಲ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಬೇರೊಂದು ಪಾತ್ರೆಯಲ್ಲಿ ಮೊಟ್ಟೆಯನ್ನು ಒಡೆದು ಇಟ್ಟುಕೊಂಡು ಮೊಟ್ಟೆಯನ್ನು ಹಾಕುವ ಮೊದಲು ಉಪ್ಪು ಖಾರ ರುಚಿ ನೋಡಿಕೊಂಡು ಬೇಕಿದ್ದರೆ ಸೇರಿಸಿ ನಂತರ ಒಡೆದ ಮೊಟ್ಟೆಗಳನ್ನು ಹಾಗೆಯೇ ಹಾಕಿ ಕೈ ಆಡಿಸಿದೆ ಹಾಗೆ ಮೇಲಿನಿಂದ ಚಿಕ್ಕದಾಗಿ ಕಟ್ ಮಾಡಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಎರಡು ಮೂರು ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಹೀಗೇ ಮಾಡಿದರೆ ಅನ್ನ ಮತ್ತು ಚಪಾತಿ ಜೊತೆಗೆ ಸವಿಯಲು ರುಚಿಯಾದ ಮೊಟ್ಟೆ ಕರಿ ರೆಡಿ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430