WhatsApp Group Join Now
Telegram Group Join Now

ದ್ವಾದಶ ರಾಶಿಗಳಲ್ಲಿ ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ವಿಭಿನ್ನ ವ್ಯಕ್ತಿತ್ವ, ಭವಿಷ್ಯವನ್ನು ಹೊಂದಿರುತ್ತಾರೆ. ಆಯಾ ರಾಶಿಯ ಅಧಿಪತಿ ಪ್ರಭಾವದಿಂದ ವಿಶೇಷ ಅದೃಷ್ಟ ಸಿಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹದ ಪ್ರಭಾವದಿಂದ ಎರಡು ರಾಶಿಯವರಿಗೆ ಒಳ್ಳೆಯದಾಗಲಿದೆ. ಹಾಗಾದರೆ ಆ ಎರಡು ರಾಶಿ ಯಾವುದೆಂದು ಈ ಲೇಖನದಲ್ಲಿ ನೋಡೋಣ.

ಜ್ಯೋತಿಷ್ಯ ಶಾಸ್ತ್ರದಲ್ಲಿ 9 ಗ್ರಹಗಳ ಉಲ್ಲೇಖವಿದೆ ಅಲ್ಲದೆ ಈ ಎಲ್ಲಾ ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಬುಧ ಗ್ರಹವನ್ನು ಮಾತು, ಬುದ್ಧಿವಂತಿಕೆ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗುತ್ತದೆ. ಬುಧ ಗ್ರಹದ ಅನುಗ್ರಹದಿಂದ ವ್ಯಾಪಾರ ಮತ್ತು ವಾಣಿಗೆ ಸಂಬಂಧಿತ ಕೆಲಸಗಳು ಬಹಳಷ್ಟು ಯಶಸ್ಸನ್ನು ಪಡೆಯುತ್ತವೆ. ಎರಡು ರಾಶಿಚಕ್ರದ ಜನರು ಬುಧನ ವಿಶೇಷ ಅನುಗ್ರಹವನ್ನು ಪಡೆಯುತ್ತಾರೆ.

ಬುಧನ ವಿಶೇಷ ಅನುಗ್ರಹ ಪಡೆದ ರಾಶಿಗಳೆಂದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹವು ಮಿಥುನ ಮತ್ತು ಕನ್ಯಾ ರಾಶಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಏಕೆಂದರೆ ಈ ಎರಡು ರಾಶಿಗಳ ಅಧಿಪತಿ ಬುಧ. ಈ ಎರಡು ರಾಶಿಗಳ ಜನರು ಬುಧನ ವಿಶೇಷ ಅನುಗ್ರಹವನ್ನು ಹೊಂದುತ್ತಾರೆ ಅಲ್ಲದೆ ಬುಧನ ಅನುಗ್ರಹದಿಂದ ಈ ರಾಶಿಗಳಲ್ಲಿ ಜನಿಸಿದವರ ಭೌತಿಕ ಜೀವನವು ಸಂತೋಷದಿಂದ ಕಳೆಯುತ್ತದೆ. ಇವರಿಗೆ ಯಾವುದೆ ರೀತಿಯ ಆರ್ಥಿಕ ಕೊರತೆ ಎದುರಾಗುವುದಿಲ್ಲ. ಈ ರಾಶಿಚಕ್ರದ ಜನರು ಸ್ವತಂತ್ರ ಮತ್ತು ಬುದ್ಧಿವಂತರಾಗಿರುತ್ತಾರೆ. ಈ ರಾಶಿಯವರಲ್ಲಿ ಅನೇಕ ರೀತಿಯ ಪ್ರತಿಭೆಗಳು ಅಡಗಿರುತ್ತವೆ. ಅವರು ಪ್ರೀತಿಯ ಬದುಕಿನ ಸವಾಲುಗಳನ್ನು ಕೂಡ ದಿಟ್ಟತನದಿಂದ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದಲ್ಲದೆ ಬುಧ ಗ್ರಹದ ಪ್ರಭಾವದಿಂದಾಗಿ ಈ ರಾಶಿಯ ಜನರು ವ್ಯವಹಾರ ಮತ್ತು ಮಾತುಗಳಿಗೆ ಸಂಬಂಧಿತ ಕೆಲಸಗಳಲ್ಲಿ ಬಹಳಷ್ಟು ಯಶಸ್ಸನ್ನು ಪಡೆಯುತ್ತಾರೆ. 

ಈ ರಾಶಿಯ ಜನರು ಚಿಕ್ಕ-ಪುಟ್ಟ ವಿಷಯಗಳಿಗೆ ಕೋಪಿಸಿಕೊಳ್ಳುತ್ತಾರೆ ಆದರೆ ಹೃದಯದಲ್ಲಿ ಇವರು ಬಹಳ ಪರಿಶುದ್ಧರಾಗಿರುತ್ತಾರೆ, ಪ್ರಾಮಾಣಿಕರಾಗಿರುತ್ತಾರೆ. ಕನ್ಯಾ ರಾಶಿಯ ಜನರು ತಮ್ಮ ಮಾತುಗಳಿಂದ ಯಾರನ್ನಾದರೂ ಬೇಗನೆ ಆಕರ್ಷಿಸುತ್ತಾರೆ ಅವರು ಅಂತಹ ಕಲೆಯನ್ನು ಹೊಂದಿರುತ್ತಾರೆ. ಈ ರಾಶಿಯಲ್ಲಿ ಬುಧ ಗ್ರಹವು ಪ್ರಬಲವಾಗಿದ್ದಾನೆ ಇದರಿಂದ ಈ ರಾಶಿಯವರಿಗೆ ಜೀವನದಲ್ಲಿ ಎಲ್ಲ ಸೌಕರ್ಯಗಳು ಸಿಗುತ್ತವೆ. ಈ ರಾಶಿಯ ಜನರು ಜಾಣತನದಿಂದ ಹಣ ಗಳಿಸುತ್ತಾರೆ, ಎಲ್ಲಾ ವಿಷಯದಲ್ಲಿ ಇತರರಿಗಿಂತ ಮುಂದಿರುತ್ತಾರೆ. ಇದಲ್ಲದೆ ಈ ರಾಶಿಯ ಜನರು ಸಂತೋಷಕ್ಕಾಗಿ ಹಣವನ್ನು ಧಾರಾಳವಾಗಿ ಖರ್ಚು ಮಾಡುತ್ತಾರೆ. ಒಟ್ಟಾರೆಯಾಗಿ ಈ ಎರಡು ರಾಶಿಯವರ ಮೇಲೆ ಬುಧ ಗ್ರಹನ ಪ್ರಭಾವ ಇರುತ್ತದೆ. ನಿಮ್ಮ ರಾಶಿ ಯಾವುದು ಎಂಬುದನ್ನು ನೋಡಿಕೊಳ್ಳಿ, ನಿಮ್ಮ ರಾಶಿ ಕನ್ಯಾ ಅಥವಾ ಮಿಥುನ ಆಗಿದ್ದರೆ ಅದೃಷ್ಟ ನಿಮ್ಮದಾಗಲಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: