ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿಪ್ಪತ್ತು ಹಾಗು ಸವಾಲಾಗಿ ಪರಿಣಮಿಸಿರುವ ಕೋವಿಡ್ 19 ಕೊರೋನ ವೈರಸ್ ನ ಪರಿಣಾಮ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ದೊಡ್ಡ ಪ್ರಮಾಣದ ಪರಿಣಾಮ ಬೀರಿದೆ. ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ಮತ್ತು ಸಮುದಾಯದ ಮಟ್ಟದಲ್ಲಿ ಈ ವೈರಸ್ ಹರಡದಂತೆ ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲವನ್ನು ಲಾಕ್ ಡೌನ್ ಮಾಡುವ ಮೂಲಕ ಶಾಲಾ ಮತ್ತು ಕಾಲೇಜುಗಳಿಗೆ ಶಿಕ್ಷಕರಿಗೆ ರಜೆ ನೀಡಿದೆ. ಎರಡು ವರ್ಷಗಳಿಂದ ಈ ಕೊರೋನ ರೋಗವು ಮಕ್ಕಳ ಶಿಕ್ಷಣದ ಭವಿಷ್ಯವನ್ನು ಹಾಳು ಮಾಡಿದೆ. ಆದ್ದರಿಂದ ನಾವಿಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಮುಂಜಾಗ್ರತೆ ದೃಷ್ಟಿಯಿಂದ ಮಕ್ಕಳ ಸುರಕ್ಷತೆಗಾಗಿ ಮಕ್ಕಳ ದೃಷ್ಟಿಕೋನ ಮತ್ತು ಅವರಿಗೆ ಅರ್ಥವಾಗುವ ಪರಿಭಾಷೆಯಲ್ಲಿ ಸಾಮೂಹಿಕ ಜಾಗೃತಿಮೂಡಿಸುವುದು ಮುಖ್ಯ.
ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆ ಹಾಗು ಮುಂದಿನ ವಿದ್ಯಾಭ್ಯಾಸದ ಪೂರ್ವ ಸಿದ್ಧತೆಗೆ ನಿರ್ಣಾಯಕ ಸಮಯವೆಂದೇ ಭಾವಿಸಿರುವ ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಈ ಪರಿಸ್ಥಿತಿ ಎದುರಾಗಿದ್ದು ಸ್ವಾಭಾವಿಕವಾಗಿ ಇಡೀ ಶೈಕ್ಷಣಿಕ ಸಮುದಾಯವನ್ನು ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಪಾಲಕರಲ್ಲಿ ಹಲವು ಬಗೆಯ ಆತಂಕ ಮತ್ತು ಅನಿಶ್ಚತೆಯನ್ನು ಉಂಟು ಮಾಡಿದೆ.
ಎಚ್ಚರಿಕೆಯಿಂದ ವೈದ್ಯಕೀಯ ಕಾರಣಗಳಿಗಾಗಿ ದೈಹಿಕ ಅಂತರ ಕಾಯ್ದುಕೊಳ್ಳುವ ಮೂಲಕ ವೈರಸ್ ಸೋಂಕು ಮಕ್ಕಳಿಗೆ, ಕುಟುಂಬಕ್ಕೆ ಶಿಕ್ಷಕರಿಗೆ ಹಾಗೂ ಸಮುದಾಯಕ್ಕೆ ಹರಡದಂತೆ ಮುನ್ನೆಚ್ಚರಿಕೆ ವಹಿಸಿದ್ದು ಸ್ವಾಗತಾರ್ಹ ಸಂಗತಿಯಾಗಿದೆ. ಇದು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಅನಿವಾರ್ಯತೆ ಕೂಡ ಆಗಿದೆ. ಆದರೆ ಎರಡು ವರ್ಷಗಳಿಂದ ಮಕ್ಕಳ ಶಿಕ್ಷಣದ ಭವಿಷ್ಯ ಹಾಳಾಗುತ್ತಿದೆ. ಹಿಂದಿನ ವರ್ಷದಂತೆ ಈ ವರ್ಷವೂ ಕೂಡ ಕೊರೊನಾ ಅಲೆಯಿಂದ ಶಾಲೆಗಳ ಬಾಗಿಲು ತೆರೆಯುವುದು ಅನುಮಾನಾಸ್ಪದವಾಗಿದೆ. ಆನ್ಲೈನ್ ಕ್ಲಾಸ್ ಗಳ ಮೂಲಕ ಶಿಕ್ಷಣ ನೀಡುತ್ತಿರುವುದು. ಆದರೂ ಅದು ಯಾವ ಮಕ್ಕಳನ್ನು ಸರಿಯಾಗಿ ತಲುಪಿಲ್ಲ.
ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್ಲೈನ್ ಶಿಕ್ಷಣ ನೀಡುವಲ್ಲಿ ಪೂರ್ವತಯಾರಿ ನಡೆಸಿಕೊಂಡಿದ್ದಾರೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಇದಕ್ಕಾಗಿ ಮಕ್ಕಳ ಅಡ್ಮಿಷನ್ ಆರಂಭ ಮಾಡಿದೆ. ಜೂನ್ 15 ರಿಂದ 2021 22 ನೆ ಸಾಲಿನ ಶೈಕ್ಷಣಿಕ ವರ್ಷವನ್ನು ಆರಂಭಿಸಬೇಕೆಂದು ನಿರ್ಧರಿಸಿದ್ದ ಶಿಕ್ಷಣ ಸಂಸ್ಥೆಗೆ ಕೊರೋನಾ ಮತ್ತೆ ದೊಡ್ಡ ಆಘಾತವನ್ನು ನೀಡಿದೆ. ಮಕ್ಕಳಿಗೆ ಶಾಲೆಗಳಿಗೆ ಹೋಗಿ ಪಾಠವನ್ನು ಕೇಳಿ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಬೇಕು ಎಂದುಕೊಂಡವರಿಗೆ ತುಂಬಾ ಶೋಚನೀಯ ಸಂಗತಿಯಾಗಿದೆ. ಶೈಕ್ಷಣಿಕ ವರ್ಷದ ಶಿಕ್ಷಣದ ಬಗ್ಗೆ ಶಿಕ್ಷಣ ಸಂಸ್ಥೆಯು ಯಾವುದೇ ನಿರ್ಧಾರವನ್ನು ನೀಡಿಲ್ಲ. ರಾಜ್ಯ ಸರ್ಕಾರವು ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು.