ನಿಮ್ಮ ಕೈ ನ ಮಣಿ ಕಟ್ಟಿನ ಈ ರೇಖೆ ಹೇಳುತ್ತದೆ ನಿಮ್ಮ ಆಯಸ್ಸು ಎಷ್ಟು ಎಂದು. ಹಸ್ತ ಸಾಮೂದ್ರಿಕಾ ಶಾಸ್ತ್ರದಲ್ಲಿ ಅಂಗೈಯಲ್ಲಿ ಇರುವ ರೇಖೆಗಳು ಮತ್ತು ಗುರುತುಗಳ ಮೂಲಕ ಮನುಷ್ಯನ ಭೂತ ವರ್ತ್ವ ಭವಿಷ್ಯವನ್ನು ಹೇಳಬಹುದು. ಒಬ್ಬ ವ್ಯಕ್ತಿ ಅದೃಷ್ಟ ಹೇಗಿದೆ ಎಂಬುದರಿಂದ ಹಿಡಿದು ಆತ ಎಷ್ಟು ವರ್ಷ ಬದುಕಬಲ್ಲ ಎಂಬುದನ್ನು ಅಂಗೈ ನೋಡಿ ಹೇಳಬಹುದು.
ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಮಣಿ ಕಟ್ಟಿನ ಬಳಿ ಇರುವ ರೇಖೆ ವ್ಯಕ್ತಿಯ ಆಯಸ್ಸು ಹೇಳುತ್ತದೆ. ಅಂಗೈ ಶುರುವಾಗುವ ಭಾಗವನ್ನು ಮಣಿ ಕಟ್ಟು ಎಂದು ಹೇಳಲಾಗುತ್ತದೆ. ಯಾವುದೇ ವ್ಯಕ್ತಿಯ ಕೈಯಲ್ಲಿ ಒಂದು ಮಣಿ ಕಟ್ಟಿನ ರೇಖೆ ಇದ್ದರೆ ಆತನ ಆಯಸ್ಸು ಇಪ್ಪತ್ತೈದು ವರ್ಷ ಮಾತ್ರ ಮಣಿ ಕಟ್ಟಿನ ಬಳಿ ಎರಡು ರೇಖೆ ಇದ್ದರೆ ಐವತ್ತು ವರ್ಷದವರೆಗೆ ಆತ ಬದುಕಬಲ್ಲ. ಮಣಿ ಕಟ್ಟಿನ ರೇಖೆ ಮೂರು ಇದ್ದರೆ ಆತನ ಆಯಸ್ಸು ಎಪ್ಪತ್ತೈದು ವರ್ಷ ಎಂದು ಹೇಳಲಾಗುತ್ತದೆ. ನಾಲ್ಕು ರೇಖೆಗಳು ಇದ್ದರೂ ಆತ ಶ್ರೀಮಂತ ದೀರ್ಘಾಯುಷಿ ಎಂದು ಪರಿಗಣಿಸಲಾಗುತ್ತದೆ.
ಮಣಿ ಕಟ್ಟಿನ ರೇಖೆಗಳು ಸ್ಪಷ್ಟವಾಗಿ ಇದ್ದರೂ ಆತ ಭಾಗ್ಯ ಶಾಲಿ ಎಂದು ಹೇಳಲಾಗುತ್ತದೆ,ಅಸ್ವಸ್ಥ ಆಗಿದ್ದರು ಆತ ಜೀವಂತವಾಗಿ ಸಾಕಷ್ಟು ಸಂಘರ್ಷ ಮಾಡಬೇಕಾಗುತ್ತದೆ. ಮಣಿ ಕಟ್ಟಿನ ಮೇಲ್ಭಾಗದಲ್ಲಿ ಸ್ವಸ್ತಿಕ್ ಅಂತಹ ಚಿನ್ಹೆ ಇದ್ದರೆ ಆತ ಸೌಭಾಗ್ಯ ಶಾಲಿ ಎಂದು ಅರ್ಥ. ಮಣಿ ಕಟ್ಟಿನಿಂದ ನೇರವಾಗಿ ಮಧ್ಯದ ಬೆರಳ್ಗೆ ರೇಖೆ ಇದ್ದರೆ ಆ ವ್ಯಕ್ತಿ ಬಹಳ ಪುಣ್ಯವಂತ ಎಂದು ಅರ್ಥ. ಈ ರೇಖೆಗಳು ವ್ಯಕ್ತಿಯ ಉನ್ನತಿ ಮತ್ತು ಆರೋಗ್ಯವನ್ನು ಖ್ಯಾತಿಯನ್ನು ಪ್ರತಿ ನಿಧಿಸುತ್ತದೆ.
ಈ ಮಾಹಿತಿಗಳು ಬಹಳ ವಿಭಿನ್ನವಾಗಿ ಇರುತ್ತದೆ. ಅಷ್ಟೇ ಅಲ್ಲದೇ ಈ ರೇಖೆಗಳು ವಿಶೇಷವಾಗಿ ಆಯಸ್ಸು ಹಾಗೂ ಮಹಿಳೆಯರ ಸಂತಾನ ಫಲದ ತೊಂದರೆಯ ವಿವರಗಳನ್ನು ನೀಡುತ್ತದೆ. ಮಣಿ ಕಟ್ಟಿನಲ್ಲಿ ಇರುವ ಗುರುತುಗಳು ಬಹಳ ಸ್ಪಷ್ಟವಾಗಿ ಇದ್ದರೆ ಅವರು ಬಹಳ ಅದೃಷ್ಟ ಶಾಲಿ ಎಂದು ಅರ್ಥ.