ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ವ್ಯಕ್ತಿಯು ಜೀವನದಲ್ಲಿ ಇಂತಹ ಅನೇಕ ತಪ್ಪುಗಳನ್ನು ಮಾಡುತ್ತಾನೆ. ತಪ್ಪು ಮಾಡಿ ಬಳಿಕ ವಿಷಾದಿಸುತ್ತಾನೆ. ಹಾಗಾಗಿ ಈ ಬಗ್ಗೆ ಮುಂಚಿತವಾಗಿ ಯೋಚಿಸುವುದು, ಚಿಂತಿಸಿ ಕಾರ್ಯೋನ್ಮುಖರಾಗುವುದು ಮುಖ್ಯ. ವ್ಯಕ್ತಿಯು ಎಲ್ಲರೊಂದಿಗೂ ಉತ್ತಮ ಸಂಬಂಧವನ್ನು ಹೊಂದಿರುವುದು ಅವಶ್ಯಕ. ಆದರೆ, ಒಬ್ಬ ವ್ಯಕ್ತಿಯು ಈ ನಾಲ್ಕು ಜನರೊಂದಿಗೆ ವಾದ, ವಿವಾದ ಮಾಡಿಕೊಳ್ಳಬಾರದು ಎಂದು ಚಾಣಕ್ಯ ಹೇಳಿದ್ದಾನೆ. ಆ ಬಗ್ಗೆ ತಿಳಿಯೋಣ ಬನ್ನಿ.
ಮೂರ್ಖ ವ್ಯಕ್ತಿ- ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ಮೂರ್ಖ ವ್ಯಕ್ತಿಯ ಜೊತೆಗೆ ನಾವು ಯಾವತ್ತೂ ವಾದ ಮಾಡಬಾರದು. ಇದರಿಂದ ಸಮಯ ವ್ಯರ್ಥವಾಗುತ್ತದೆ. ಮೂರ್ಖನು ಯಾರ ಮಾತನ್ನೂ ಕೇಳುವುದಿಲ್ಲ. ಅವನು ತನ್ನ ಮಾತನ್ನು ಮಾತ್ರ ಕೇಳುತ್ತಾನೆ. ಆದ್ದರಿಂದ ಅಂತಹ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳಬೇಕು. ಸ್ನೇಹಿತ- ಪ್ರತಿಯೊಬ್ಬರ ಜೀವನದಲ್ಲೂ ಒಬ್ಬ ಸ್ನೇಹಿತ ಇರುತ್ತಾನೆ. ಆತನಿಗೆ ನಾವು ನಮ್ಮ ಎಲ್ಲಾ ಸಂತೋಷ, ದುಃಖಗಳನ್ನು ಹಂಚಿಕೊಳ್ಳುತ್ತೇವೆ. ರಹಸ್ಯ, ನೋವು, ನಲಿವುಗಳನ್ನು ಹೇಳುತ್ತೇವೆ. ಅದೆಲ್ಲವನ್ನೂ ಅವರು ತಿಳಿದಿರುತ್ತಾರೆ.
ಅದಕ್ಕಾಗಿ ನೀವು ನಿಮ್ಮ ಮೆಚ್ಚಿನ ಸ್ನೇಹಿತನ ಜೊತೆಗೆ ಎಂದಿಗೂ ವಾದ ಮಾಡಬೇಡಿ. ಆತ ನಿಮ್ಮೊಂದಿಗೆ ರಹಸ್ಯಕರ ವಿಷಯಗಳನ್ನು ಅಸ್ತ್ರವಾಗಿ ಬಳಸುವ ಸಾಧ್ಯತೆ ಇರುತ್ತದೆ. ಗುರು- ಗುರುಗಳು ಯಾವತ್ತೂ ನಮಗೆ ಮಾರ್ಗದರ್ಶನ ನೀಡುತ್ತಾರೆ. ಗುರಿಯನ್ನು ಸಾಧಿಸಲು ಸ್ಫೂರ್ತಿ ನೀಡುತ್ತಾರೆ. ಗುರು ಇಲ್ಲದೆ ಜ್ಞಾನವನ್ನು ಸಂಪಾದಿಸಲೂ ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ಗುರುಗಳ ಜೊತೆಗೆ ವಾದ ಮಾಡದೆ ಇರುವುದು ಮುಖ್ಯ.
ಇದು ನಿಮ್ಮ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರೀತಿಪಾತ್ರರು- ಪ್ರೀತಿಪಾತ್ರರು ನಮ್ಮ ಜೀವನದಲ್ಲಿ ಅಗತ್ಯ ವ್ಯಕ್ತಿಗಳು. ಅವರು ನಾವು ಸೋತಾಗ, ಹತಾಶರಾದಾಗ ನಮ್ಮನ್ನು ಜೀವನದಲ್ಲಿ ಮತ್ತೆ ಉತ್ಸಾಹದಿಂದ ಮುಂದುವರಿಯಲು ಪ್ರೇರೇಪಣೆ ನೀಡುತ್ತಾರೆ. ಆದ್ದರಿಂದ ನಿಮ್ಮ ಪ್ರೀತಿಪಾತ್ರರ ಜೊತೆ ಎಂದಿಗೂ ಜಗಳ ಆಡಬೇಡಿ. ಅದು ನಿಮಗೆ ಹಾನಿ ಉಂಟು ಮಾಡಬಹುದು.