WhatsApp Group Join Now
Telegram Group Join Now

ನಮ್ಮ ಸಮಾಜದಲ್ಲಿ ಜಾತಿವಾದಿಗಳು ಸಾಕಷ್ಟು ಜನರಿದ್ದು ಪ್ರೀತಿಸಿದ ತಮ್ಮ ಮಗಳು ಹಾಗೂ ಮಗನನ್ನು ಬೇರೆ ಬೇರೆ ಮಾಡಿ ಅವರ ಆಸೆಗಳನ್ನು ಬಲಿಕೊಡುತ್ತಾರೆ. ದೆಹಲಿಯಲ್ಲಿ ನಡೆದ ಜಾತೀಯತೆಗಾಗಿ ಸ್ವಂತ ಮಗಳನ್ನು ಕೊಲೆ ಮಾಡಿದ ಘಟನೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

2014 ನವೆಂಬರ್ 16 ಪಂಜಾಬ್ ಮೂಲದ ಅಭಿಷೇಕ್ ಸೇಠ್ ಎಂಬ 24 ವರ್ಷದ ಯುವಕ ದೆಹಲಿ ಪೊಲೀಸರ ಹತ್ತಿರ ಬಂದು ತನ್ನ ಪತ್ನಿ ಭಾವನಾ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದಾಳೆ, ಯಾವ ಕರೆಗೂ ಉತ್ತರ ಕೊಡುತ್ತಿಲ್ಲ ಹಾಗೂ ಆಕೆಯ ಪೋಷಕರು ಕೂಡ ಸರಿಯಾಗಿ ಉತ್ತರ ಕೊಡುತ್ತಿಲ್ಲ, ಪೋಷಕರು ಕಳುಹಿಸಿಕೊಡುತ್ತೇವೆ ಎಂದು ಅವಳನ್ನು ಕರೆದುಕೊಂಡು ಹೋದರು, ಆಕೆಯ ಸುರಕ್ಷತೆಯ ಬಗ್ಗೆ ನನಗೆ ಭಯವಿದೆ ಅವಳನ್ನು ಪತ್ತೆ ಹಚ್ಚಬೇಕು ಎಂದು ದೂರು ಕೊಡುತ್ತಾನೆ.

ಪೊಲೀಸರು ಅವನ ದೂರನ್ನು ಪರಿಗಣಿಸಿ ಪರಿಶೀಲನೆಗೆ ಮುಂದಾಗುತ್ತಾರೆ ಅವನಿಂದ ಅವನ ಪತ್ನಿ ಹಾಗೂ ಅವಳ ಪೋಷಕರ ನಂಬರ್ ಪಡೆದು ಸಂಪರ್ಕಿಸಲು ಮುಂದಾಗುತ್ತಾರೆ. ಪೊಲೀಸರಿಗೆ ಅವಳ ಪೋಷಕರು ಅವಳು ವಿಷದ ಹಾವಿನ ಕಡಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದು ಅವಳ ಅಂತ್ಯಸಂಸ್ಕಾರವನ್ನು ರಾಜಸ್ಥಾನದ ಹುಟ್ಟೂರಿನಲ್ಲಿ ನಡೆಯಿತು ಎಂದು ಹೇಳುತ್ತಾರೆ. ಆಗ ಅಭಿಷೇಕ್ ಮೊನ್ನೆವರೆಗೆ ಚೆನ್ನಾಗಿದ್ದು ತನ್ನ ಹೆಂಡತಿಗೆ ಊರಿಗೆ ಹೋದ ತಕ್ಷಣ ಹಾವು ಕಡಿಯಲು ಹೇಗೆ ಸಾಧ್ಯ ಒಂದು ವೇಳೆ ಹಾಗೆ ಆಗಿದ್ದರೂ ಪತಿಯಾದ ತನಗೆ ಏಕೆ ಹೇಳಲಿಲ್ಲ ಅಲ್ಲದೆ ಅವರಿಗೆ ನಮ್ಮ ಮದುವೆ ಇಷ್ಟವಿರಲಿಲ್ಲ ಎಂದು ಪೊಲೀಸರಿಗೆ ಹೇಳುತ್ತಾನೆ.

ಅಭಿಷೇಕ್ ನ ಅನುಮಾನ ನಿಜವೆನಿಸಿ ಪೊಲೀಸರು ಪರಿಶೀಲನೆ ಮಾಡಲು ತೊಡಗಿದಾಗ ಭಾವನಾ ಯಾದವ್ ಮೂಲತಃ ರಾಜಸ್ಥಾನದವಳು. ಜಗನಮೋಹನ್ ಹಾಗೂ ಸಾವಿತ್ರಿ ಯಾದವ್ ಎಂಬ ದಂಪತಿಗೆ 1993ರಲ್ಲಿ ಜನಿಸುತ್ತಾಳೆ. ಆಕೆಯ ತಂದೆ ಪ್ರಾಪರ್ಟಿ ಕನ್ಸಲ್ಟರ್, ತಾಯಿ ಗೃಹಿಣಿ. ಅವರು ದೆಹಲಿಯಲ್ಲಿ ವಾಸವಾಗಿದ್ದು ಹಬ್ಬದ ಸಂದರ್ಭಗಳಲ್ಲಿ ತಮ್ಮ ಊರಾದ ರಾಜಸ್ಥಾನ್ ಗೆ ಹೋಗುತ್ತಿದ್ದರು. ಅವರಿಗೆ ತಮ್ಮ ಯಾದವ ಸಮುದಾಯದ ಬಗ್ಗೆ ಹೆಮ್ಮೆಯಿತ್ತು ಅವರು ಬೇರೆಯವರೊಂದಿಗೆ ಸೇರುತ್ತಿರಲಿಲ್ಲ.

ಈ ಕಾರಣಕ್ಕೆ ಭಾವನಾ 6 ವರ್ಷದವಳಿದ್ದಾಗ ತಮ್ಮದೆ ಸಮುದಾಯದ ಕುಟುಂಬದವರ ಜೊತೆ ವೈವಾಹಿಕ ಸಂಬಂಧ ಬೆಳೆಸುವ ಬಗ್ಗೆ ಮಾತನಾಡಿದರು. ಮೊದಲಿನಿಂದಲೂ ಅವಳಿಗೆ ಶಿಸ್ತು ಬರಬೇಕೆಂದು ನಿಬಂಧನೆಗಳನ್ನು ಹೇರುತ್ತಾ ಬಂದರು. ಅವಳ ವಯಸ್ಸಿನವರು ತಮಗಿಷ್ಟ ಬಂದಂತೆ ಇರುವುದನ್ನು ನೋಡಿ ಅವರಂತೆ ತಾನು ಇರಬೇಕು ಎಂದು ಬಯಸುತ್ತಿದ್ದಳು. ಪೋಷಕರ ಬಳಿ ನನಗೆ ಈಗಲೆ ಮದುವೆ ಬೇಡ ನಾನು ಇನ್ನೂ ಹೆಚ್ಚು ಓದಬೇಕು ಎಂದು ಹೇಳುತ್ತಾಳೆ ಅದಕೊಪ್ಪಿದ ಪೋಷಕರು ಅವಳನ್ನು ದೆಹಲಿಯ ಫೇಮಸ್ ಕಾಲೇಜುಗಳಲ್ಲಿ ಒಂದಾದ ವೆಂಕಟೇಶ್ವರ ವಿದ್ಯಾಕೇಂದ್ರಕ್ಕೆ ಸೇರಿಸುತ್ತಾರೆ. ನಿಧಾನವಾಗಿ ಸ್ನೇಹಿತರ ಜೊತೆ ಸೇರಿ ಬಣ್ಣ ಬಣ್ಣದ ಬಟ್ಟೆ ತೊಡಲು, ಸ್ನೇಹಿತರ ಜೊತೆ ಔಟಿಂಗ್ ಪ್ರಾರಂಭಿಸಿದಳು.

ಅವಳ ಬದಲಾದ ವರ್ತನೆಯಿಂದ ಪೋಷಕರು ಅವಳನ್ನು ನಿಂದಿಸಲು ಪ್ರಾರಂಭಿಸುತ್ತಾರೆ. 2012 ರಲ್ಲಿ ಅವಳ ಕಾಮನ್ ಸ್ನೇಹಿತನಿಂದ ಅಭಿಷೇಕ್ ಪರಿಚಯವಾಗುತ್ತಾನೆ. ಅಭಿಷೇಕ್ ಅದೇ ಕಾಲೇಜಿನ ಸೀನಿಯರ್. ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೀತಿಗೆ ತಿರುಗುತ್ತದೆ. ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಡುತ್ತಾರೆ. ಅಭಿಷೇಕ್ ಪಂಜಾಬ್ ಮೂಲದ ಅನಿಲ್ ಹಾಗೂ ಭಾರತಿ ಸೇಠ್ ದಂಪತಿಯ ಏಕೈಕ ಪುತ್ರನಾಗಿರುತ್ತಾನೆ. ಅಭಿಷೇಕ್ ಓದನ್ನು ಮುಗಿಸಿ ಸರ್ಕಾರಿ ಕೆಲಸವನ್ನು ಪಡೆಯುತ್ತಾನೆ. ಅಭಿಷೇಕ್ ಪೋಷಕರಿಗೆ ಅವರಿಬ್ಬರ ಪ್ರೀತಿಯ ಬಗ್ಗೆ ತಿಳಿದಾಗ ಅವರಿಂದ ಅಡ್ಡಿ ಇರಲಿಲ್ಲ.

2014 ಜುಲೈನಲ್ಲಿ ಅವರ ಪ್ರೀತಿಯ ಬಗ್ಗೆ ಭಾವನಾ ಪೋಷಕರಿಗೆ ತಿಳಿದಾಗ ಜಾತಿವಾದಿಗಳಾದ ಅವರಿಗೆ ಮಗಳು ಅನ್ಯ ಸಮುದಾಯದವನನ್ನು ಪ್ರೀತಿಸುತ್ತಿರುವ ವಿಷಯವನ್ನು ಸಹಿಸಲು ಆಗಲಿಲ್ಲ. ಅವರು ಅಭಿಷೇಕ್ ನನ್ನು ಸಂಪರ್ಕಿಸಿ ನೀನು ಅವಳನ್ನು ಬಿಡು ಎಂದು ವಾರ್ನಿಂಗ್ ಮಾಡುತ್ತಾರೆ. ಭಾವನಾಳಿಗೆ ತಿಳಿಯದಂತೆ ಅವಳನ್ನು ಮೊದಲೆ ಗೊತ್ತು ಮಾಡಿದ ಹುಡುಗನೊಂದಿಗೆ ಮದುವೆ ಮಾಡಲು ನಿರ್ಧಾರ ಮಾಡುತ್ತಾರೆ ಈ ವಿಷಯ ತಿಳಿದ ಭಾವನಾ ಅಭಿಷೇಕ್ ಬಳಿ ಬಂದು ನಾವು ಸುಮ್ಮನೆ ಇದ್ದರೆ ನನಗೆ ಬೇರೆಯವನೊಂದಿಗೆ ಮದುವೆ ಮಾಡಿ ನಮ್ಮನ್ನು ಬೇರೆ ಮಾಡುತ್ತಾರೆ ಎಂದು ದುಖಿಸುತ್ತಾಳೆ ಆಗ ಅವರಿಬ್ಬರು ಗಟ್ಟಿ ನಿರ್ಧಾರ ಮಾಡಿ ಒಂದು ದೇವಸ್ಥಾನದಲ್ಲಿ ಮದುವೆಯಾಗಿ ರಿಜಿಸ್ಟರ್ ಮಾಡಿಸುತ್ತಾರೆ.

ಮಗಳು ಕಾಣದೆ ಇದ್ದಾಗ ಪೋಷಕರು ಕರೆ ಮಾಡಿದಾಗ ಉತ್ತರ ಬರುವುದಿಲ್ಲ. ಮರುದಿನ ಭಾವನಾ ಅಭಿಷೇಕ್ ಮನೆಯಿಂದ ತನ್ನ ಪೋಷಕರಿಗೆ ಕರೆ ಮಾಡಿ ನಡೆದಿರುವ ವಿಚಾರವನ್ನು ತಿಳಿಸಿ ಆಶೀರ್ವಾದ ಮಾಡಿ ಇಲ್ಲವೆಂದರೆ ನಮ್ಮ ಪಾಡಿಗೆ ಬದುಕಲು ಬಿಡಿ ಎಂದು ಹೇಳುತ್ತಾಳೆ. ಮದುವೆ ರಿಜಿಸ್ಟರ್ ಆಗಿರುವುದರಿಂದ ಪೋಷಕರು ಏನು ಮಾಡಲು ಸಾಧ್ಯವಿಲ್ಲ ಮುಂದಿನ ದಿನಗಳಲ್ಲಿ ಒಪ್ಪುತ್ತಾರೆ ಎನ್ನುವುದು ಭಾವನಾ ಹಾಗೂ ಅಭಿಷೇಕ್ ನಂಬಿಕೆಯಾಗಿತ್ತು. ಅದೆ ದಿನ ಅಭಿಷೇಕ್ ಮನೆಗೆ ಬಂದ ಭಾವನಾ ಪೋಷಕರು ಆಗಿದ್ದು ಆಗಿ ಹೋಯಿತು ಎಲ್ಲರ ಮುಂದೆ ಸಂಪ್ರದಾಯದಂತೆ ಮದುವೆ ಮಾಡುತ್ತೇವೆ ಎಂದು ಬಣ್ಣ ಬಣ್ಣದ ಮಾತುಗಳನ್ನಾಡಿ ಭಾವನಾಳನ್ನು ಕರೆದುಕೊಂಡು ಹೋಗುತ್ತಾರೆ ಆದರೆ ಮನೆಗೆ ಹೋಗುತ್ತಿದ್ದಂತೆ ಅವರ ನಿಜರೂಪ ತಿಳಿಯುತ್ತದೆ.

ಭಾವನಾಳನ್ನು ಒಂದು ರೂಮ್ ನಲ್ಲಿ ಬಂಧಿಸಿ ಚಿತ್ರಹಿಂಸೆ ಕೊಟ್ಟು ನಾವು ತೋರಿಸಿದ ಹುಡುಗನನ್ನು ಮದುವೆಯಾಗಬೇಕು ಎಂದು ಹೇಳುತ್ತಾರೆ. ಭಾವನಾ ತಪ್ಪಿಸಿಕೊಂಡು ಓಡಿ ಹೋಗುತ್ತಿರುವಾಗ ಆಕೆಯ ಪೋಷಕರು ಕಂಡು ಅವಳ ಕೈ ಹಿಡಿದು ಕೋಪದಿಂದ ಕುತ್ತಿಗೆ ಹಿಸುಕಲು ಹೋಗುತ್ತಾರೆ ಕೆಲ ಸಮಯ ಒದ್ದಾಡಿ ಭಾವನಾ ತನ್ನ ತಂದೆ ತಾಯಿಯಿಂದ ಸಾಯುತ್ತಾಳೆ. ನಂತರ ಪೋಷಕರು ಭಾವನಾ ಹಾವು ಕಡಿದು ಸತ್ತಳು ಎಂದು ಎಲ್ಲರನ್ನು ನಂಬಿಸುತ್ತಾರೆ. ಪೊಲೀಸರು ಭಾವನಾಳ ತಂದೆ ತಾಯಿಯರನ್ನು ಪ್ರತ್ಯೇಕವಾಗಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದಾಗ ಇಬ್ಬರು ತಬ್ಬಿಬ್ಬಾಗಿ ನಿಜ ಹೇಳುತ್ತಾರೆ. ನಿಜ ತಿಳಿದ ಪೊಲೀಸರು ಶಾಕ್ ಆದರು. ಪೋಷಕರನ್ನು ಆರೋಪದ ಮೇಲೆ ಬಂಧಿಸುತ್ತಾರೆ. ಜಾತಿ ಜಾತಿ ಎಂಬ ಸ್ವಪ್ರತಿಷ್ಠೆಯ ನಡುವೆ ಯುವತಿ ಬಲಿಯಾದದ್ದು ವಿಷಾದದ ಸಂಗತಿಯಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: