ಇಲ್ಲಿನ ಹುಡುಗಿಯರಿಗೆ ಮಕ್ಕಳು ಹೇರುವುದೇ ಒಂದು ಕಾಯಕ ಆಗಿದೆ ಎಲ್ಲಿ ಗೊತ್ತೆ..

0

ರಣ ಕ್ರೂ ರಿ ಚಂಗಿಸ್ ಖಾನನ ಆಡಳಿತಕ್ಕೆ ಸಾಕ್ಷಿಯಾದ ದೇಶ ಇದು ಜಗತ್ತಿಗೆ ಐಸ್ಕ್ರೀಮ್ ಅನ್ನ ತಿನ್ನುವುದನ್ನು ಕಲಿಸಿದ್ದು ಇದೆ ದೇಶ. ಈ ದೇಶದಲ್ಲಿ ಮನುಷ್ಯರಿಗಿಂತ ಪ್ರಾಣಿಗಳೆ ಹೆಚ್ಚಿವೆ. ಮರುಭೂಮಿ ಇಂದ ಹಿಮ ಮಳೆಯವರೆಗೆ ಎಲ್ಲಾ ರೀತಿಯ ವಾತಾವರಣ ಇಲ್ಲಿ ಇದೆ. ಆ ದೇಶ ಬೇರೆ ಯಾವುದು ಅಲ್ಲ ಅದು ಮಂಗೋಲಿಯಾ. ಮಂಗೋಲಿಯಾ ದೇಶಕ್ಕೆ ಸಂಬಂಧಿಸಿದ ಕೆಲವು ಕುತೂಹಲಕಾರಿ ವಿಷಯಗಳನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೆವೆ.

ಚಂಗೀಸ್ ಖಾನ್ ಎನ್ನುವ ಹೆಸರನ್ನು ನೀವೆಲ್ಲರೂ ಕೇಳಿರಬಹುದು ಈತ ನೋಡನೋಡುತ್ತಿದ್ದಂತೆ ಅರ್ಧ ಪ್ರಪಂಚವನ್ನು ವಶಕ್ಕೆ ತೆಗೆದುಕೊಂಡವನು. ಅಥವಾ ಒಂದು ಪ್ರದೇಶಕ್ಕೆ ದಂಡಯಾತ್ರೆ ಹೊರಟ ಎಂದರೆ ಅಲ್ಲಿ ಗೆಲುವು ಪಕ್ಕಾ ಎಂದು ಅರ್ಥ. ಈತ ಸಾಗಿದ ದಾರಿಯಲ್ಲಿ ಅದೆಶ್ಟೋ ವರ್ಷ ಹುಲ್ಲುಗಳೆ ಬೆಳೆಯುತ್ತಿರಲಿಲ್ಲ ಚಂಗಿಸ್ ಖಾನನ ಹೆಸರನ್ನು ಕೇಳಿದರೆ ಈಗಲೂ ಪ್ರಪಂಚ ಬಿಚ್ಚಿಬಿಳುತ್ತದೆ. ಅವನಂತಹ ಕ್ರೂರಿ ಪ್ರಪಂಚದಲ್ಲಿ ಮತ್ತೆ ಹುಟ್ಟಿಲ್ಲ. ಆತನಿಗೆ ಬರೋಬ್ಬರಿ ಐದುನೂರು ಹೆಂಡತಿಯರಿದ್ದರು ಒಂದು ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಈ ರಕ್ಕಸ ಹುಟ್ಟಿಸಿದ್ದ ಈತ ದೊಡ್ಡ ಸಾಮ್ರಾಜ್ಯದ ರಾಜ ಎನ್ನುವುದರಲ್ಲಿ ಎರಡು ಮಾತಿಲ್ಲ ಆದರೆ ಇವನೊಬ್ಬ ಭಯಾನಕ ಕಾಮಪಿಶಾಚಿ ನೋಡಿದ ಹೆಣ್ಣುಮಕ್ಕಳೆಲ್ಲ ಇವನಿಗೆ ಬೇಕಿತ್ತು

ಹದಿಹರಿಯದ ಹುಡುಗಿಯರನ್ನ ಮುಕ್ಕಿ ತಿನ್ನುತ್ತಿದ್ದ. ಮತ್ತೊಂದು ಕಡೆ ಮುಂಗೋಲಿಯ ಸಾಮ್ರಾಜ್ಯವನ್ನು ಕಟ್ಟಿದವನು ಇವನೇ. ಮಂಗೋಲಿಯಾ ಎಂದರೆ ಮಂಗೋಲರ ಭೂಮಿ ಎಂದು ಅರ್ಥ. ಮಂಗೋಲಿಯಾ ದೇಶದ ಒಟ್ಟು ಜನಸಂಖ್ಯೆ ಕೇವಲ ಮೂವತ್ಮೂರು ಲಕ್ಷ ಮಾತ್ರ. ಮಂಗೋಲಿಯ ಒಂದು ಲ್ಯಾಂಡ್ ಲಾಕ್ ಕಂಟ್ರಿ ಅಂದರೆ ಸುತ್ತಲೂ ಭೂ ಗಡಿಯನ್ನು ಹೊಂದಿದೆ. ಮಂಗೋಲಿಯಾದ ರಾಜಧಾನಿ ಉಲ್ಲಾನಬತಾರ್. ಇದೇ ಹೆಸರಿನಲ್ಲಿ ಮೊದಲ ಹೋಟೆಲ್ ಕೂಡ ನಿರ್ಮಾಣವಾಗಿತ್ತು ಈ ಒಂದು ಹೋಟೆಲ್ ನಲ್ಲಿ ಮಾತ್ರ ಬಿಸಿನೀರು ಮತ್ತು ತಂಪು ನೀರು ಸಿಗುತ್ತಿತ್ತು.

ಉಲ್ಲಾನಬತಾರ್ ಅನ್ನು ಜಗತ್ತಿನ ಕೊಲ್ಡೆಸ್ಟ್ ರಾಜಧಾನಿ ಎಂದು ಕರೆಯಲಾಗುತ್ತದೆ. ಈ ದೇಶವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ ಅದರಲ್ಲಿ ಒಂದು ಲ್ಯಾಂಡ್ ಆಫ್ ಬ್ಲೂ ಸ್ಕೈ. ತಾಪಮಾನ ತಂಪಾಗಿದ್ದರೂ ಅಲ್ಲಿನ ಆಕಾಶ ನೀಲಿಯಾಗಿ ಕಾಣುತ್ತದೆ ಇದೇ ಕಾರಣಕ್ಕೆ ಲ್ಯಾಂಡ್ ಆಫ್ ಬ್ಲೂ ಸ್ಕೈ ಎಂಬ ಹೆಸರು ಬಂದಿದೆ. ಇನ್ನು ಈ ದೇಶವನ್ನು ಲ್ಯಾಂಡ್ ಆಫ್ ದಿ ಅನಿಮಲ್ಸ್ ಎಂದು ಕರೆಯುತ್ತಾರೆ ಹೀಗೆ ಕರೆಯುವುದಕ್ಕೆ ಕಾರಣ ಈ ದೇಶದಲ್ಲಿ ಮನುಷ್ಯರಿಗಿಂತ ಪ್ರಾಣಿಗಳೇ ಹೆಚ್ಚಿವೆ. ಇಲ್ಲಿ ಒಂದು ಮನುಷ್ಯನ ಮುಂದೆ ನೂರಕ್ಕೂ ಹೆಚ್ಚು ಕುರಿಗಳಿವೆ ಒಬ್ಬ ಮನುಷ್ಯನ ಮುಂದೆ ಇಪ್ಪತ್ತಕ್ಕೂ ಹೆಚ್ಚು ಟಗರುಗಳಿವೆ ಅಂದರೆ ನೀವು ಕಲ್ಪನೆ ಮಾಡಿಕೊಳ್ಳಬಹುದು ಮಂಗೋಲಿಯಾದಲ್ಲಿ ಅದೆಷ್ಟು ಪ್ರಾಣಿಗಳಿಗೆ ಎಂದು. ಇಲ್ಲಿ ಶೇಕಡಾ ನಲವತ್ತರಷ್ಟು ಜನ ಪಾರಂಪರಿಕ ಜೀವನವನ್ನು ನಡೆಸುತ್ತಾರೆ. ಅವರದ್ದು ಅಲೆಮಾರಿ ಜೀವನ ಹೋದಕಡೆಗಳಲ್ಲಿ ಟೆಂಟ್ ಗಳ ತರಹ ಮನೆಯನ್ನು ಮಾಡಿಕೊಂಡು ಜೀವನವನ್ನು ನಡೆಸುತ್ತಾರೆ. ಅದನ್ನು ಪಾರಂಪರಿಕ ಮನೆ ಎಂದು ಕರೆಯಲಾಗುತ್ತದೆ. ಈ ಟೆಂಟ್ ಅನ್ನು ಎಲ್ಲಿ ಬೇಕಾದರೂ ಹಾಕಬಹುದು.ಮಂಗೋಲಿಯಾದಲ್ಲಿ ಅಲ್ಲಲ್ಲಿ ಈ ರೀತಿಯ ಟೆಂಟ್ ಗಳು ಕಾಣಸಿಗುತ್ತವೆ.

ಎರಡು ಸಾವಿರದ ಹನ್ನೊಂದರಲ್ಲಿ ಮಂಗೋಲಿಯಾದಲ್ಲಿ ನ್ಯಾಷನಲ್ ಸ್ಪೋರ್ಟ್ಸ್ ಕಾಂಪಿಟೇಶನ್ ನಡೆದಿತ್ತು ಈ ಸ್ಪರ್ಧೆಯಲ್ಲಿ ಒಂದು ವರ್ಲ್ಡ್ ರೆಕಾರ್ಡ್ ಕೂಡ ಆಗಿತ್ತು ಅದೇನೆಂದರೆ ಒಂದೇ ಸಲಕ್ಕೆ ಆರುಸಾವಿರಕ್ಕಿಂತ ಹೆಚ್ಚು ಕುಸ್ತಿಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಾವು ಈಗಾಗಲೇ ನಿಮಗೆ ಚಂಗಿಸ್ ಖಾನನ ಕ್ರೂರತೆಯ ಬಗ್ಗೆ ಹೇಳಿದ್ದೇವೆ. ಆದರೆ ಆತನಿಗೆ ಇನ್ನೊಂದು ಮುಖ ಕೂಡ ಇದೆ ಆತ ಅವಿದ್ಯಾವಂತ ಆದರೂ ಮಂಗೋಲಿಯಾದಲ್ಲಿ ಮೊದಲ ಬಾರಿಗೆ ಬರೆಯುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದ ಅಲ್ಲಿನ ಜನರಿಗೆ ಬರೆಯುವುದನ್ನು ಕಲಿಸುವ ಯೋಜನೆಯನ್ನು ಹಾಕಿಕೊಂಡಿದ್ದ. ಈತ ಕೇವಲ ಇಪ್ಪತ್ತನೇ ವಯಸ್ಸಿನಲ್ಲಿ ಮಂಗೋಲಿಯಾದ ರಾಜ ಪಟ್ಟಕ್ಕೆ ಎರಿದ್ದ. ತನ್ನ ಸಾವಿಗೂ ಮೊದಲು ಮಂಗೋಲಿಯಾ ಸಾಮ್ರಾಜ್ಯವನ್ನು ಪೂರ್ವದಿಂದ ಪಶ್ಚಿಮಕ್ಕೆ ದಕ್ಷಿಣದಿಂದ ಉತ್ತರಕ್ಕೆ ವಿಸ್ತರಿಸಿದ್ದ. ಪ್ರಪಂಚದ ಅರ್ಧ ಭೂಪಟದಲ್ಲಿ ಮಂಗೋಲಿಯಾ ಸಾಮ್ರಾಜ್ಯ ಇತ್ತು. ಇನ್ನು ಮಂಗೋಲಿಯಾದಲ್ಲಿ ಒಳ್ಳೆಯ ತಳಿಯ ಕುದುರೆಗಳು ಸಿಗುತ್ತವೆ ಅವು ಶಕ್ತಿಶಾಲಿ ಮತ್ತು ಆರೋಗ್ಯವಂತ ಕುದುರೆಗಳಾಗಿರುತ್ತವೆ. ಇಲ್ಲಿಂದ ಬೇರೆ ದೇಶಗಳಿಗೆ ಕುದುರೆಗಳನ್ನ ರಪ್ತು ಮಾಡಲಾಗುತ್ತದೆ.

ಮಂಗೋಲಿಯಾದಲ್ಲಿ ಒಂದು ವಿಶೇಷತೆಯಿದೆ ಮಹಿಳೆಯರು ಐದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮವನ್ನು ನೀಡಿದರೆ ಅವರಿಗೆ ಹೆಚ್ಚು ಗೌರವವನ್ನು ನೀಡಲಾಗುತ್ತದೆ ಅವರಿಗೆ ವಿಶೇಷವಾದ ಚಿಕಿತ್ಸೆ ಸಿಗುತ್ತದೆ ಸರ್ಕಾರದಿಂದ ಸೌಲಭ್ಯಗಳು ದೊರಕುತ್ತವೆ. ಮಂಗೋಲಿಯಾದಲ್ಲಿ ಹೆಚ್ಚು ಮಕ್ಕಳನ್ನು ಹುಟ್ಟಿಸಿದರೆ ಒಳ್ಳೆಯದಂತೆ ಅದಕ್ಕೆ ಕಾರಣ ಅಲ್ಲಿನ ಜನಸಂಖ್ಯೆ. ಇನ್ನು ಮಂಗೋಲಿಯ ಜನರು ಸಂಗೀತ ಪ್ರಿಯರು ಸಂಗೀತ ಅವರ ರಕ್ತದಲ್ಲಿಯೇ ಇದೆ ಆದರೆ ಅಲ್ಲಿನ ಹಾಡುಗಾರರು ಮೂಗಿನಲ್ಲೇ ಹಾಡುತ್ತಾರೆ. ಕುದುರೆ ಸವಾರಿಯನ್ನು ಮಾಡುತ್ತಾ ಹಾಡು ಹಾಡುವ ಜನರು ತುಂಬಾ ಜನ ಸಿಗುತ್ತಾರೆ. ಜಗತ್ತಿಗೆ ಐಸ್ಕ್ರೀಮ್ ಅನ್ನು ಪರಿಚಯ ಮಾಡಿದ್ದು ಇದೇ ದೇಶ. ಇತಿಹಾಸದ ಪ್ರಕಾರ ಮಂಗೋಲಿಯಾದ ಕುದುರೆ ಸವಾರರು ಐಸ್ಕ್ರೀಮ್ ಅನ್ನ ಕಂಡುಹಿಡಿದಿದ್ದರಂತೆ. ಈಗ ಐಸ್ಕ್ರೀಮ್ ಜನರ ಜೀವನದ ಒಂದು ಭಾಗವಾಗಿ ಬಿಟ್ಟಿದೆ.

ಸ್ನೇಹಿತರಿಗೆ ನೀವೆಲ್ಲರೂ ವಿಂಡೋಸ್ ಎಕ್ಸ್ ಪಿ ಯ ವಾಲ್ ಪೇಪರ್ ಅನ್ನು ನೋಡಿರಬಹುದು ಅಲ್ಲಿ ಕಾಣುವ ಫೋಟೋ ಮಂಗೋಲಿಯಾ ದೇಶದಲ್ಲಿ ತೆಗೆದಿದ್ದು. ಏಷ್ಯಾ ಖಂಡದ ಅತಿ ದೊಡ್ಡ ಮರುಭೂಮಿ ಕೂಡ ಇರುವುದು ಇದೇ ದೇಶದಲ್ಲಿ ಅದನ್ನು ಗೋಬಿ ಮರುಭೂಮಿ ಎಂದು ಕರೆಯುತ್ತಾರೆ. ಈ ಮರುಭೂಮಿಯಲ್ಲಿ ಡೈನೋಸರ್ ಗಳ ಪಳೆಯುಳಿಕೆಗಳು ಸಿಕ್ಕಿದೆ. ಇನ್ನು ಮಂಗೋಲಿಯಾದಲ್ಲಿ ಶೇಕಡ ಐವತ್ತಕ್ಕೂ ಹೆಚ್ಚು ಜನ ಬೌದ್ಧಧರ್ಮವನ್ನು ಪಾಲನೆ ಮಾಡುತ್ತಾರೆ.

ಇನ್ನು ಮಂಗೋಲಿಯಾದಲ್ಲಿ ಚಿಕ್ಕ ಮಕ್ಕಳಿರುವಾಗಲೇ ಕುದುರೆ ಸವಾರಿ ಮಾಡುವುದನ್ನು ಕಲಿಸುತ್ತಾರೆ ಮತ್ತು ಅದನ್ನು ಹೇಗೆ ಸಾಕುವುದು ಹೇಗೆ ಬೆಳೆಸುವುದು ಎಂಬುದನ್ನು ಕೂಡ ಕಲಿಸಲಾಗುತ್ತದೆ. ಅಷ್ಟೇ ಅಲ್ಲ ಕುದುರೆ ಸವಾರಿ ಮಾಡುವಾಗಲೇ ಹೇಗೆ ಬಿಲ್ಲನ್ನು ಹೊಡೆಯುವುದು ಎಂಬುದನ್ನ ಕಲಿಸಲಾಗುತ್ತದೆ. ಈ ದೇಶದಲ್ಲಿ ಬಡತನ ಕೂಡ ಇದೆ ಆದರೆ ಅಲ್ಲಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕೇಳಿದರೆ ನಿಮಗೆ ಅಚ್ಚರಿ ಆಗುತ್ತದೆ. ಮಂಗೋಲಿಯಾ ದೇಶದ ಸಾಕ್ಷರತಾ ಪ್ರಮಾಣ ಶೇಕಡ ತೊಂಬತ್ತೆಂಟು. ಇದು ಏಷ್ಯಾದ ದೇಶಗಳಿಗೆ ಹೋಲಿಸಿದರೆ ಅತಿ ಹೆಚ್ಚು.

ಹದ್ದನ್ನು ಈ ದೇಶದ ರಾಷ್ಟ್ರೀಯ ಪಕ್ಷಿ ಎಂದು ಕರೆಯಲಾಗುತ್ತದೆ ಕುದುರೆ ಮಂಗೋಲಿಯಾದ ರಾಷ್ಟ್ರೀಯ ಪ್ರಾಣಿ. ಮಂಗೋಲಿಯಾದ ಜನರು ಪ್ರವಾಸಿಗರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಅದೇ ಕಾರಣಕ್ಕೆ ಮಂಗೋಲಿಯ ಪ್ರವಾಸಕ್ಕೆ ಹೋದವರು ತುಂಬಾ ಖುಷಿಯಿಂದಿರುತ್ತಾರೆ. ಖುಷಿಯಿಂದಲೇ ದೇಶವನ್ನು ಸುತ್ತುತ್ತಾರೆ. ಮಂಗೋಲಿಯಾದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿರುವ ಆಟ ಎಂದರೆ ಕುದುರೆ ಸವಾರಿ ಅರ್ಚರಿ ಅಂದರೆ ಕುದುರೆ ಸವಾರಿ ಮಾಡುತ್ತಲೇ ಬಿಲ್ಲಿನಿಂದ ಗುರಿಯಿಡುವ ಸ್ಪರ್ಧೆ. ಇದಾದ ನಂತರ ಮಂಗೋಲಿಯನ್ ರಸ್ಲಿನ್ ಅನ್ನು ಹೆಚ್ಚಾಗಿ ಆಡುತ್ತಾರೆ.

ಮಂಗೋಲಿಯಾ ದೇಶಕ್ಕೆ ನೇರವಾಗಿ ವಿದೇಶಿಯರಿಗೆ ಪ್ರವೇಶವಿಲ್ಲ ಅಲ್ಲಿಗೆ ಹೋಗಬೇಕು ಎಂದರೆ ಒಂದು ಚೀನಾಕ್ಕೆ ಹೋಗಬೇಕು ಇಲ್ಲವೆಂದರೆ ರಷ್ಯಾಕ್ಕೆ ಹೋಗಬೇಕು ಅಲ್ಲಿಂದ ವೀಸಾವನ್ನು ತೆಗೆದುಕೊಂಡು ಮಂಗೋಲಿಯಾ ದೇಶಕ್ಕೆ ಹೋಗಬಹುದು. ಮಂಗೋಲಿಯ ದೇಶದಲ್ಲಿ ಜಗತ್ತಿನ ಅತ್ಯಂತ ಪುರಾತನ ಪಾರ್ಕ್ ಕೂಡ ಇದೆ. ಮಂಗೋಲಿಯಾದ ಕರೆನ್ಸಿಯ ಹೆಸರು ದುರೆಕ್. ಮಂಗೋಲಿಯಾದ ಜನರು ತುಂಬಾ ಆರೋಗ್ಯವಂತರಾಗಿರುತ್ತಾರೆ ಇದಕ್ಕೆ ಕಾರಣ ಅಲ್ಲಿನ ವಾತಾವರಣ ಮತ್ತು ಹಿಂದಿನ ಕಾಲದಿಂದಲೂ ಅಲ್ಲಿಯ ಜನರು ಫಿಟ್ನೆಸ್ ಗೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುತ್ತಾರೆ.

ಮೊದಲೇ ಹೇಳಿದ ಹಾಗೆ ಜಗತ್ತಿಗೆ ಐಸ್ಕ್ರೀಮ್ ಪರಿಚಯಿಸಿದವರು ಮಂಗೋಲಿಯನ್ನರು ಆದರೆ ಅಚ್ಚರಿಯ ವಿಷಯವೇನೆಂದರೆ ಐಸ್ ಕ್ರೀಮ್ ಅನ್ನು ಅಲ್ಲಿನ ಜನ ಚಳಿಗಾಲದಲ್ಲಿ ತುಂಬಾ ಹೆಚ್ಚಾಗಿ ತಿನ್ನುತ್ತಾರೆ ಚಳಿ ಹೆಚ್ಚಾದಂತೆ ಹೆಚ್ಚು ಐಸ್ ಕ್ರೀಮ್ ತಿನ್ನುತ್ತಾರೆ. ಮಂಗೋಲಿಯಾದಲ್ಲಿ ವಿಶೇಷವಾದ ಹಬ್ಬ ನಡೆಯುತ್ತದೆ ಎರಡು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಶಿಕಾರಿ ಮಾಡುವ ಸ್ಪರ್ಧೆ ಇರುತ್ತದೆ. ಭೇಟೆಗಾರರು ಕುದುರೆಯ ಮೇಲೆ ಕುಳಿತುಕೊಂಡು ಬೇಟೆಯಾಡಬೇಕು.

ಈ ಬೇಟೆಯಲ್ಲಿ ಹದ್ದು ಕೂಡ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಹದ್ದುಗಳಿಗೆ ಯಾವ ರೀತಿಯಾಗಿ ತರಬೇತಿ ಕೊಡುತ್ತಾರೆ ಎಂದರೆ ಹದ್ದುಗಳೇ ಬೇಟೆ ಇರುವ ಜಾಗವನ್ನು ತೋರಿಸುತ್ತವೆ. ಮಂಗೋಲಿಯಾದಲ್ಲಿ ನ್ಯಾಷನಲ್ ಮ್ಯೂಸಿಯಂ ಇದೆ ಇದರಲ್ಲಿ ಮಂಗೋಲಿಯಾ ದೇಶದ ಇತಿಹಾಸವನ್ನು ತೋರಿಸಲಾಗಿದೆ. ಮಂಗೋಲಿಯಾದಲ್ಲಿ ಬಾಡಿಗೆಗೆ ಕುದುರೆಗಳನ್ನು ತೆಗೆದುಕೊಂಡು ಸವಾರಿ ಮಾಡಬಹುದು. ಇನ್ನು ಜಗತ್ತಿನಲ್ಲಿ ಅತಿ ಹೆಚ್ಚು ಸ್ನೋ ಲೆಪರ್ಡ್ ಗಳು ಇರುವುದು ಇದೇ ದೇಶದಲ್ಲಿ. ನಮ್ಮ ದೇಶದಲ್ಲಿ ಮುಂಬೈಯಲ್ಲಿ ಸ್ಟಾಕ್ ಎಕ್ಸ್ಚೇಂಜ್ ಇರುವಹಾಗೆ ಮಂಗೋಲಿಯಾದಲ್ಲಿಯೂ ಸ್ಟಾಕ್ ಎಕ್ಸ್ಚೇಂಜ್ ಇದೆ ಅದು ಇರುವುದು ಸಿನಿಮಾ ಥಿಯೇಟರ್ನಲ್ಲಿ.

ಈ ದೇಶದಲ್ಲಿ ಫಲವತ್ತಾದ ಭೂಮಿ ಕಡಿಮೆ ಇದೆ ಹಾಗಾಗಿ ತರಕಾರಿ ಬೆಳೆಯುವುದು ಕೂಡ ಕಡಿಮೆ ಇಲ್ಲಿ ಹೆಚ್ಚಾಗಿ ಗೋಧಿ ಮೆಕ್ಕೆಜೋಳ ಮತ್ತು ಆಲೂಗಡ್ಡೆಯನ್ನು ಬೆಳೆಯುತ್ತಾರೆ ಇಲ್ಲಿ ತರಕಾರಿ ಗಿಂತ ಮಾಂಸಕ್ಕೆ ಹೆಚ್ಚು ಪ್ರಾಧಾನ್ಯ. ಉಲ್ಲಾನಬತಾರ್ ನಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಉತ್ಸವ ನಡೆಯುತ್ತದೆ. ಇದು ಮಂಗೋಲಿಯದ ಸಂಭ್ರಮದ ಹಬ್ಬ ಅವರ ಪಾರಂಪರಿಕವಾದ ಕುದುರೆ ಸವಾರಿ ಅರ್ಚರಿ ಮಲ್ಲಯುದ್ಧದಂತಹ ಸ್ಪರ್ಧೆಗಳು ಇಲ್ಲಿ ನಡೆಯುತ್ತವೆ. ಇದನ್ನು ನೋಡಲು ಬಹಳಷ್ಟು ವಿದೇಶಿಗರು ಬರುತ್ತಾರೆ. ನೋಡಿದಿರಲ್ಲ ಸ್ನೇಹಿತರೇ ಇದಿಷ್ಟು ಮಂಗೋಲಿಯಾ ದೇಶಕ್ಕೆ ಸಂಬಂಧಿಸಿದ ಕುತೂಹಲಕಾರಿ ವಿಷಯಗಳು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಿ ಜೊತೆಗೆ ನಿಮ್ಮ ಪರಿಚಿತರಿಗೂ ಈ ಮಾಹಿತಿಯನ್ನು ತಿಳಿಸಿ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!